ಕಪ್ಪು ಒಣದ್ರಾಕ್ಷಿಯಲ್ಲಿದೆ ಆರೋಗ್ಯದ ರಹಸ್ಯ..!

  • by

ಒಣ ಹಣ್ಣುಗಳು ದೇಹಕ್ಕೆ ಆರೋಗ್ಯಕಾರಿ ಎಂದು ಹೇಳಲಾಗುತ್ತದೆ. ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶವನ್ನು ಒಣ ಹಣ್ಣುಗಳಿಂದ ಪಡೆದುಕೊಳ್ಳಬಹುದು. ಒಣ ಹಣ್ಣುಗಳಲ್ಲಿ ವಿಶೇಷವಾಗಿ, ಕಪ್ಪು ಒಣದ್ರಾಕ್ಷಿ ಹೆಚ್ಚು ಪೋಷಕಾಂಶ ಭರಿತವಾದದ್ದು. ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಇದರಲ್ಲಿ ಅನೇಕ ಪೋಷಕಾಂಶಗಳು ಇರುವುದರಿಂದ ದೇಹಕ್ಕೆ ಮೆಡಿಸೀನ್ ರೀತಿ ಕಾರ್ಯನಿರ್ವಹಿಸುತ್ತದೆ.


Black Raisins Benefits, Side Effect,ಕಪ್ಪು ಒಣದ್ರಾಕ್ಷಿ, ಆರೋಗ್ಯ ಪ್ರಯೋಜನಗಳು

ಕಪ್ಪು ಒಣದ್ರಾಕ್ಷಿ ಸೇವಿಸುವುದರಿಂದ ಆರೋಗ್ಯ ಪ್ರಯೋಜನಗಳು!

ಸಹಜವಾಗಿ ಕಪ್ಪು ಒಣದ್ರಾಕ್ಷಿ ಪ್ರಯೋಜನಗಳು ಸಾಕಷ್ಟಿವೆ. ಇದು ರಕ್ತದೋತ್ತಡವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಕಪ್ಪು ಒಣದ್ರಾಕ್ಷಿ ಪೋಟ್ಯಾಶಿಯಂನ ಉತ್ತಮ ಮೂಲವಾಗಿದೆ. ಇದು ರಕ್ತದೋತ್ತಡವನ್ನು ಕಡಿಮೆ ಮಾಡುತ್ತದೆ

ರಕ್ತಹೀನತೆ

ರಕ್ತಹೀನತೆಯಿಂದ ಬಳಲುತ್ತಿರುವವರು ಕಪ್ಪು ಒಣದ್ರಾಕ್ಷಿಯನ್ನು ಸೇವಿಸಬೇಕು, ದೇಹದಲ್ಲಿ ಕೆಂಪು ರಕ್ತ ಕಣಗಳ ಕೊರತೆ ಎದುರಾದಾಗ, ರಕ್ತಹೀನತೆ ಸಮಸ್ಯೆ ಉಂಟಾಗುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. ದೇಹದಲ್ಲಿ ಕಬ್ಬಿಣದ ಕೊರತೆ, ಕಬ್ಬಿಣ ಪೂರೈಕೆಗಾಗಿ ಒಣದ್ರಾಕ್ಷಿಗಳು ಸಹಕಾರಿಯಾಗಬಲ್ಲವು.

ಕೊಲೆಸ್ಟ್ರಾಲ್ ಗೆ ಪರಿಹಾರ

ಕಪ್ಪು ಒಣದ್ರಾಕ್ಷಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದಕ್ಕೆ ಸಂಬಂಧಿಸಿದ ಅಧ್ಯಯನವೊಂದು ಸಾಬೀತು ಪಡಿಸಿದೆ. ಹಾನಿಕಾರಕ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.


Black Raisins Benefits, Side Effect,ಕಪ್ಪು ಒಣದ್ರಾಕ್ಷಿ, ಆರೋಗ್ಯ ಪ್ರಯೋಜನಗಳು

ಎಲಬುಗಳ ಸಮಸ್ಯೆ!

ಎಲುಬುಗಳು ತೆಳ್ಳಗೆ ಹಾಗೂ ದುರ್ಬಲವಾಗಲು ಅನೇಕ ಕಾರಣಗಳಿವೆ. ಮೆಗ್ನೇಶಿಯಂ ಸಮೃದ್ಧವಾಗಿರುವ ಆಹಾರಗಳಲ್ಲಿ ಕಪ್ಪು ಒಣದ್ರಾಕ್ಷಿ ಕೂಡಾ ಒಂದು. ಅಸ್ಚಿಯೊಪೊರೋಸಿಸ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಚರ್ಮಕ್ಕೆ ಉಪಯುಕ್ತ !

ಒಣದ್ರಾಕ್ಷಿಯಲ್ಲಿ ಚರ್ಮಕ್ಕೆ ಸಂಬಂಧಿಸಿದ ಅನೇಕ ಬ್ಯಾಕ್ಟೇರಿಯಾಗಳನ್ನು ,ಹಾಗೂ ಸೋಂಕನ್ನು ತಡೆಯಲು ಮತ್ತು ನಿವಾರಿಸಲು ಸಹಾಯ ಮಾಡುತ್ತದೆ. ಬ್ಯಾಕ್ಟೇರಿಯಾ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಕೂದಲಿಗೆ

ವಿಟಮಿನ್ ಸಿ, ಕಬ್ಬಿಣದ ಕೊರತೆಯಿಂದಾಗಿ ಕೂದಲು ಉದರುವ ಸಮಸ್ಯೆ ಹೆಚ್ಚಾಗಬಹುದು. ಹಾಗಾಗಿ ಕಬ್ಬಿಣ , ವಿಟಮಿನ್ ಸಿ ಕಪ್ಪುಒಣದ್ರಾಕ್ಷಿಯಲ್ಲಿ ಸಮೃದ್ದವಾಗಿದೆ. ಕೂದಲಿನ ಅನೇಕ ಸಮಸ್ಯಗಳಿಗೆ ಇದು ಪರಿಹಾರ ನೀಡುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಇದನ್ನು ಸೇವಿಸಬಹುದು.


Black Raisins Benefits, Side Effect,ಕಪ್ಪು ಒಣದ್ರಾಕ್ಷಿ, ಆರೋಗ್ಯ ಪ್ರಯೋಜನಗಳು

ಒಣದ್ರಾಕ್ಷಿಯಲ್ಲಿ ಪೌಷ್ಟಿಕಾಂಶ ಎಷ್ಟಿರುತ್ತೆ?

ಶಕ್ತಿ 300 ಕೆ.ಸಿ.ಎಲ್
ಪೌಷ್ಟಿಕಾಂಶ – 100 ಗ್ರಾಂ
ಪ್ರೋಟೀನ್ – 3.57 ಗ್ರಾಂ
ಕಾರ್ಬೋಹೈಡ್ರೇಟ್ – 78.57 ಗ್ರಾಂ
ಫೈಬರ್ – 3.6 ಗ್ರಾಂ
ಸಕ್ಕರೆ – 60.71 ಗ್ರಾಂ
ಕ್ಯಾಲ್ಸಿಯಂ- ಸಿಎ 36 ಮಿ.ಗ್ರಾಂ
ಕಬ್ಬಿಣ- 1.93 ಮಿ.ಗ್ರಾಂ
ವಿಟಮಿನ್ ಸಿ- 2.1 ಮಿ.ಗ್ರಾಂ

ಕಪ್ಪು ಒಣದ್ರಾಕ್ಷಿಯನ್ನು ಹೇಗೆ ಬಳಸಬೇಕು…?

ಕಪ್ಪುಒಣದ್ರಾಕ್ಷಿಗಳನ್ನು ಹಲವು ವಿಧದಲ್ಲಿ ಬಳಸಬಹುದು. ಸೇವಿಸುವ ಉತ್ತಮ ವಿಧಾನಗಳೆಂದರೆ

ಕುಕ್ಕಿಗಳಲ್ಲಿ ಬಳಸಬಹುದು
ಕೇಕ್ ತಯಾರಿಸಲು ಕಪ್ಪು ಒಣ ದ್ರಾಕ್ಷಿ ಬಳಸಬಹುದು
ಇತರ ಒಣ ಹಣ್ಣುಗಳ ಜತೆ ಬೆರೆಸಿ ಸೇವಿಸಬಹುದು.
ರಾತ್ರಿ ನೀರಿನಲ್ಲಿ ನೆನೆಯಿಸಿ, ಬೆಳಿಗ್ಗೆ ಇವುಗಳನ್ನು ಸೇವಿಸಬಹುದು.
ರುಚಿ ಹೆಚ್ಚಿಸಲು ಸಿಹಿ ಭಕ್ಷಗಳಲ್ಲಿ ಬಳಸಬಹುದು.


Black Raisins Benefits, Side Effect,ಕಪ್ಪು ಒಣದ್ರಾಕ್ಷಿ, ಆರೋಗ್ಯ ಪ್ರಯೋಜನಗಳು

ಯಾವಾಗ ಸೇವಿಸಬೇಕು..?

ಕಪ್ಪು ಒಣದ್ರಾಕ್ಷಿಯನ್ನು ನೇರವಾಗಿ ಅಥವಾ ಇತರ ಹಣ್ಣುಗಳ ಬೆಳಿಗ್ಗೆ ಅಥವಾ ಸಂಜೆ ತಿನ್ನಬಹುದು. ಕಪ್ಪು ಒಣದ್ರಾಕ್ಷಿಯನ್ನು ಮಧ್ಯಾಹ್ನ ಊಟದ ನಂತರ ಸೇವಿಸಬಹುದು. ರಾತ್ರಿಯಲ್ಲಿ ಮಲಗುವ ಮೊದಲು ಕಪ್ಪು ಒಣದ್ರಾಕ್ಷಿಯನ್ನು ಹಾಲಿನೊಂದಿಗೆ ತೆಗೆದುಕೊಳ್ಳಬಹುದು.

ಎಷ್ಟು ತಿನ್ನಬೇಕು?

10 ರಿಂದ 12 ಕಪ್ಪು ಒಣದ್ರಾಕ್ಷಿಗಳನ್ನು ಸೇವಿಸಬೇಕು. ಇತರ ಒಣಹಣ್ಣುಗಳನ್ನು ರಾತ್ರಿಯಿಡಿ ನೆನೆಯಿಸಿ,, ಪ್ರತಿ ದಿನ ಬೆಳಿಗ್ಗೆ ಸೇವಿಸಬಹುದು.

ಒಣದ್ರಾಕ್ಷಿಯ ಅಡ್ಡ ಪರಿಣಾಮಗಳು!

ಕಪ್ಪು ದ್ರಾಕ್ಷಿ ಪ್ರಯೋಜನಗಳನ್ನು ಪಡೆದರೂ, ಇದು ಅಡ್ಡಪರಿಣಾಮಗಳನ್ನು ಒಳಗೊಂಡಿದೆ. ಒಣದ್ರಾಕ್ಷಿ ಅತಿಯಾಗಿ ಸೇವಿಸುವುದರಿಂದ ಕೆಳಗಿನ ಸಮಸ್ಯೆಗಳು ಉಂಟಾಗಬಹುದು. ಒಣದ್ರಾಕ್ಷಿ ಹೆಚ್ಚಿನ ಗ್ಲೈಸೆಮಿಕ್ ಸಮೃದ್ದ ಆಹಾರವಾಗಿದ್ದು, ಇದನ್ನು ಅತಿಯಾಗಿ ಸೇವನೆ ಮಾಡುವುದರಿಂದ ಮಧುಮೇಹಕ್ಕೆ ಕಾರಣವಾಗಬಹುದು. ಕಪ್ಪು ಒಣದ್ರಾಕ್ಷಿಯಲ್ಲಿ ಕ್ಯಾಲೋರಿ ಅಧಿಕವಾಗಿದ್ದು, ದೇಹದ ತೂಕ ವನ್ನು ಹೆಚ್ಚಿಸಬಹುದು. ಕೆಲ ಜನರಿಗೆ ಅಲರ್ಜಿ ಸಹ ಉಂಟಾಗಬಹುದು.

ಒಟ್ಟಾರೆಯಾಗಿ ಒಣದ್ರಾಕ್ಷಿ ಬಳಕೆ ಹೇಗೆ ಮಾಡಬೇಕು, ಎಷ್ಟು ಪ್ರಮಾಣದಲ್ಲಿ ಮಾಡಬೇಕು ಎಂಬುದರ ಬಗ್ಗೆ ತಿಳಿದಿರಬೇಕು, ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಇಲ್ಲದಿದ್ದರೆ ಅನೇಕ ಸಮಸ್ಯೆಗಳು ಉಂಟಾಗಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ