ಬಾಯಿಗೆ ಕಹಿಯಾದ್ರೂ,ಆರೋಗ್ಯಕಾರಿ ಹಾಗಲಕಾಯಿ!

  • by

ಹಾಗಲಕಾಯಿ ಜೀವಸತ್ವ, ಖನಿಜ. ನಾರಿನಾಂಶವನ್ನು ಹೊಂದಿರುತ್ತದೆ.  ಗರ್ಭಿಣಿಯರು ಕರೇಲಾ ತಿನ್ನುವುದರಿಂದ ಬೆಳೆಯುತ್ತಿರುವ ಮಗುವಿಗೆ ಒಳ್ಳೆಯದು.  ಮಧುಮೇಹ ಕಾಯಿಲೆ ಇರುವವರು ಹಾಗಲಕಾಯಿ ತಿಂದರೆ ಟೈಪ್ -೨ ಮಧುಮೇಹವನ್ನು ತಡೆಗಟ್ಟಬಹುದು.  ಇದನ್ನು ವಿವಿಧ ಬಗೆಗಳಲ್ಲಿ ಸೇವಿಸಬಹುದು.  ಗರ್ಭಾವಸ್ಥೆಯಲ್ಲಿ ಹಾಗಲಕಾಯಿ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ?

Coconut Oil ,Side Effects. ಕೊಬ್ಬರಿ ಎಣ್ಣೆ, ಸೈಡ್ ಎಫೆಕ್ಟ್

ಹಾಗಲಕಾಯಿ ದೇಹಕ್ಕೆ ಉತ್ತಮವಾದದ್ದು, ಇದನ್ನು ನಿಯಮಿತವಾಗಿ ಸೇವಿಸುವುದರಿಂದ  ಯಕೃತದಲ್ಲಿ  ಸಂಗ್ರಹವಾಗಿದ್ದ  ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. 

ವಿಟಮಿನ್ ಬಿ ೯ ಅಂಶ ಇದರಲ್ಲಿ ಹೆಚ್ಚಾಗಿರುವುದರಿಂದ ದೈನಂದಿನ ಜೀವನದಲ್ಲಿ ಒಂದೆರೆಡು ಕಹಿ ಹಾಗಲಕಾಯಿಯನ್ನು ಅಳವಡಿಸಿಕೊಳ್ಳಬೇಕು. 

ಹಾಗಲಕಾಯಿ ಮಿಟಮಿನ್ ಗಳಿಂದ ಸಮೃದ್ಧವಾಗಿದೆ. ಹಾಗಲಕಾಯಿಗಳಲ್ಲಿ ಜೀವಸತ್ವಗಳನ್ನು ಕಾಣಬಹುದು.  ಖನಿಜ. ಮ್ಯಾಂಗನೀಸ್ , ಸತು. ಕಬ್ಬಿಣ ಮತ್ತು ಕ್ಯಾಲ್ಸಿಯಂ ಹೇರಳವಾಗಿ ದೊರೆಯುತ್ತದೆ. 

ಕ್ಯಾನ್ಸರ್ ರೋಗವನ್ನು ಹಾಗಲಕಾಯಿ ತಡೆಗಟ್ಟುತ್ತದೆ.  ಕ್ಯಾನ್ಸರ್ ಅಪಾಯಕಾರಿ ಜೀವಕೋಶಗಳನ್ನು ಬೆಳೆಯದಂತೆ ತಡೆಗಟ್ಟುತ್ತದೆ. ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ತಗ್ಗಿಸುತ್ತದೆ. ಬೆಳಿಗ್ಗೆ ಒಂದು ಲೋಟ ಹಾಗಲಕಾಯಿ ರಸವನ್ನು ಖಾಲಿಹೊಟ್ಟೆಯಲ್ಲಿ ಕುಡಿದರೆ ರಕ್ತದಲ್ಲಿ ಹೆಚ್ಚಾಗಿರುವ ಸಕ್ಕರೆ ಅಂಶ ಮೂರೇ ದಿನದಲ್ಲಿ ಕಂಟ್ರೋಲ್ ಗೆ ಬರುತ್ತದೆ.  ದೇಹದಲ್ಲಿ ಇನ್ಸುಲಿನ್ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ.

ಕಣ್ಣಿನ ದೃಷ್ಟಿಗೂ ಇದು ಉತ್ತಮವಾದದ್ದು. ವಿಟಮಿನ್ ಎ ಪೋಷಕಾಂಶ ಇದರಲ್ಲಿ ಹೇರಳವಾಗಿರುವುದರಿಂದ ಕಣ್ಣಿಗೆ ಅಗತ್ಯವಾದ ಪೋಷಕಾಂಶಗಳು ದೊರೆಯುವುದರಿಂದ ಕಣ್ಣಿನ ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ. ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್ ಗಳು ಕಣ್ಣಿನ ದೃಷ್ಟಿಯ ಸಮಸ್ಯೆಗಳಿಂದ ನಿಮ್ಮನ್ನು ಕಾಪಾಡುತ್ತದೆ. 

ಹಾಗಲಕಾಯಿ ರಕ್ತವನ್ನು ಶುದ್ಧಿಕರಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ತಿನ್ನುವುದರಿಂದ ರಕ್ತ ಶುದ್ಧಿಕರಿಸಿ ಚರ್ಮದ ವಿವಿಧ  ಸಮಸ್ಯೆಗಳು ನಿವಾರಣೆಯಾಗುತ್ತವೆ. 

ಮೊಡವೆಗಳ ನಿವಾರಣೆಗೆ ಹಾಗಲಕಾಯಿ ಸೇವನೆ ಮಾಡಬೇಕು. ಆಳವಾದ ಚರ್ಮದ ಸೋಂಕುಗಳಿಗೆ ಶಮನಕಾರಿಯಾಗಿದೆ. ಹಾಗಲಕಾಯಿಯ ರಸವನ್ನು ನಿಂಬೆಹಣ್ಣಿನ ರಸದ ಜತೆ  ಬೆರೆಸಿ, ಪ್ರತಿ ದಿನ ಖಾಲಿ ಹೊಟ್ಟೆಗೆ ೬ ತಿಂಗಳಗಳ ಕಾಲ ಸೇವಿಸಿರಿ. 

ತ್ವಚೆಯ ಅಂದಕ್ಕೆ ಹಾಗಲಕಾಯಿ ಬಳಕೆ

ಹಾಗಲಕಾಯಿ ಜ್ಯೂಸ್ ನ್ನು ಸೇವನೆ ಮಾಡೋದ್ರಿಂದ ಹುಳಿತೇಗು, ಹೊಟ್ಟೆಯ ಗ್ಯಾಸ್ಟ್ರಿಕ್ ಹೊಟ್ಟೆಯ ಹುಣ್ಣು ಸಮಸ್ಯೆಯನ್ನು ನಿವಾರಿಸಬಹುದಾಗಿದೆ.  ಹಾಗಲಕಾಯಿ ಜ್ಯೂಸ್ ಮಾಡಿಕೊಂಡು ಅದರಿಂದ ವಾರಕ್ಕೆ ಮೂರ್ನಾಲ್ಕು ಬಾರಿ ಮುಖ ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ. ಕೂದಲು ಕಪ್ಪಾಗಿಡಲು  ಕೂಡಾ ಇದು ಸಹಕಾರಿ. ಜೀರಿಗೆಯ ಜತೆ ಹಾಗಲಕಾಯಿ ತುಂಡುಗಳನ್ನು ಸೇರಿಸಿ ರುಬ್ಬಿ ವಾರಕ್ಕೆ ಎರಡು ಸಲ ತಲೆಗೆ ಹಚ್ಚಿ ಸ್ವಲ್ಪ ಹೊತ್ತು ಸ್ನಾನ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸಬಹುದು.

ಅರ್ಧ ಕಪ್ ಹಾಗಲಕಾಯಿಯನ್ನು ರುಬ್ಬಿ ಪೇಸ್ಟ್ ಮಾಡಿ. ಒಂದು ಚಮಚಾ ಜಾಯಿಕಾಯಿ ಪುಡಿ ಮತ್ತು ೧ ಚಮಚಾ ಮೊಸರನ್ನು ಇದಕ್ಕೆ ಮಿಶ್ರ ಮಾಡಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ, ಸ್ವಲ್ಪ ಸಮಯ ಬಿಟ್ಟು  ಮುಖವನ್ನು ತೊಳಯಿರಿ. ಇದರಿಂದ ಮೊಡವೆಗಳು ನಿವಾರಣೆಯಾಗುತ್ತದೆ. 

Coconut Oil ,Side Effects. ಕೊಬ್ಬರಿ ಎಣ್ಣೆ, ಸೈಡ್ ಎಫೆಕ್ಟ್

ಚರ್ಮದಲ್ಲಿ ಕೆರೆತ ಇದ್ದರೆ ಹಾಗಲಕಾಯಿಯನ್ನು ರುಬ್ಬಿ ದಪ್ಪದಾಗಿ ಪೇಸ್ಟ್ ತಯಾರಿಸಿಕೊಳ್ಳಬೇಕು.  ಸ್ವಲ್ಪ ಕರಿಬೇವಿನ ಎಲೆಯನ್ನು ಒಣಗಿಸಿ, ಇದನ್ನು ಪುಡಿ ಮಾಡಿ, ೨ ಚಮಚ ಪುಡಿಯನ್ನು  ಹಾಗಲಕಾಯಿ ಪೇಸ್ಟ್ ಗೆ ಹಾಕಿ , ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ. ಸ್ವಲ್ಪ ಸಮಯದ ಬಳಿಕ ಹಾಗೇ ಬಿಟ್ಟು ಬಳಿಕ ನೀರಿನಿಂದ ತೊಳೆಯಿರಿ ಇದ್ರಿಂದ ಕೆರೆತ ಕಡಿಮೆಯಾಗುವ ಸಾಧ್ಯತೆ ಹೆಚ್ಚು.  

ಹಾಗಲಕಾಯಿಯ ಜ್ಯೂಸ್ ಮಾಡಿ ಅದರಿಂದ ಮುಖ ತೊಳೆಯಿರಿ. ಆದು ನಿಮಿಷ ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ಮುಖ ತೊಳಯಿರಿ. ಪ್ರತಿ ಎರಡು ದಿನಕೊಮ್ಮೆ ಹೀಗೆ ಮಾಡಿದರೆ ಹೊಳೆಯುವ ಚರ್ಮ ನಿಮ್ಮದಾಗುತ್ತದೆ. 

ತೀವ್ರ ಉಸಿರಾಟದ ಸಮಸ್ಯೆಗಳಾದ ಅಸ್ತಮಾ ಮತ್ತು ಶ್ವಾಸನಾಳಗಳ ಒಳಪೊರೆಯ ಉರಿಯೂತಗಳನ್ನು ನಿಯಂತ್ರಣದಲ್ಲಿಡುತ್ತದೆ. 

ಹಾಗಲಕಾಯಿ ಸೇವನೆಯಿಂದ ತೂಕ ಇಳಿಕೆಯಾಗುತ್ತದೆ.  ಹಾಗಲಕಾಯಿಯನ್ನು ಫೈಬರ್ ಇದ್ದು, ನೀವು ಅತಿಯಾಗಿ ಆಹಾರ ಸೇವಿಸುತ್ತಿದ್ದರೆ, ಇದನ್ನು ತಡೆಯುತ್ತದೆ. ಬೊಜ್ಜು ನಿವಾರಣೆಯಾಗುತ್ತದೆ.  ಅನಾರೋಗ್ಯಕರ ತಿಂಡಿಗಳು, ಜಂಕ್ ಫುಡ್ ಗಳನ್ನು ಸೇವಿಸುವ ಬದಲು, ಹಾಗಲಕಾಯಿ ತಿನ್ನುವುದು ಸೂಕ್ತ. 

Coconut Oil ,Side Effects. ಕೊಬ್ಬರಿ ಎಣ್ಣೆ, ಸೈಡ್ ಎಫೆಕ್ಟ್

ಹಾಕಲಕಾಯಿ ಅಡ್ಡ ಪರಿಣಾಮಗಳು 

ಗರ್ಭಿಣಿಯರು ಕೆಲ ಅಪಾಯಗಳ್ನನು ಎದುರಿಸಬಹುದು. ಹಾಗಾಗಿ ಹಾಗಲಕಾಯಿ ಸೇವನೆಗೂ ಮುನ್ನ ಕೆಲ ಅಂಶಗಳನ್ನು ಗಮನದಲ್ಲಿಡಬೇಕಾಗುತ್ತದೆ. 

ನೀವು ಹಾಗಲಕಾಯಿಯನ್ನು ಫಸ್ಟ್ ಟೈಂ ಹಾಗೂ ಮೊದಲ ಬಾರಿಗೆ ತಿನ್ನುತ್ತಿದ್ದರೆ. ನೀವು ಇದಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತಿರಿ ಎಂದು ಗೊತ್ತಿರುವುದಿಲ್ಲ. ಹಾಗಾಗಿ ಹಾಗಲಕಾಯಿ ಸೇವನೆ ಮಾಡಬೇಡಿ.

ಹಾಗಲಕಾಯಿ ತಿನ್ನುವುದರಿಂದ ಹೊಟ್ಟೆಗೆ ಸಂಬಂಧಿತ ಸಮಸ್ಯೆಗಳು ಕಾಡಬಹುದು. ಅಜೀರ್ಣ ಸಮಸ್ಯೆ., ಹೊಟ್ಟೆ ನೋವು, ಅತಿಸಾರ ಮೊದಲಾದ ಸಮಸ್ಯೆಗಳನ್ನು ಎದುರಿಸಬಹುದು. 

ಗರ್ಭಾವಸ್ಥೆಯಲ್ಲಿ ಹೆಚ್ಚಾಗಿ ಹಾಗಲಕಾಯಿ ತಿಂದ್ರೆ ಅಪಾಯ ಹೆಚ್ಚುತ್ತದೆ. ಗರ್ಭವಸ್ಥೆಯಲ್ಲಿ ಹಾಗಲಕಾಯಿ ತಿನ್ನಬಹುದು. ಆದ್ರೆ ನಿಮ್ಮ ಆಹಾರ ಕ್ರಮದಲ್ಲಿ ಹಾಗಲಕಾಯಿ ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯಿರಿ. ಸ್ತ್ರಿರೋಗ ತಜ್ಞರನ್ನು ಸಂಪರ್ಕಿಸಿ ಖಚಿತಪಡಿಸಿಕೊಳ್ಳಿ. 

ಪ್ರಸವ ಪೂರ್ವ ಸಮಯದಲ್ಲಿ ಹಾಗಲಕಾಯಿ ತಿಂದರೆ ಹೆಚ್ಚು ಹೊಟ್ಟೆಯ ಸಮಸ್ಯೆಗಳು, ಅತಿಸಾರ ಕಾಡಬಹುದು. 

ಅಗತ್ಯ ಪೋಷಕಾಂಳಗಳು ಎಷ್ಟಿರುತ್ತದೆ

ಸೋಡಿಯಂ 7.5 ಮಿ.ಗ್ರಾಂ, ಪೋಟ್ಯಾಶಿಯಂ- 349. 2 ಮಿ.ಗ್ರಾಂ, ಕಾರ್ಬೋಹೈಡ್ರೇಟ್ 3.9 ಗ್ರಾಂ. ಫೈಬರ್, 1.1 ಗ್ರಾಂ , ಪ್ರೋಟೀನ್ 2.1 , ಸಕ್ಕರೆ 0.6 ಗ್ರಾಂ. ಕ್ಯಾಲ್ಸಿಯಂ  ಶೇ 2 , ಕಬ್ಬಿಣ ಶೇ 3, ಮೇಗ್ನೇಶಿಯಂ -ಶೇ 13, ವಿಟಮಿನ್ ಎ ಶೇ 28, ವಿಟಮಿನ್ ಸಿ, ಶೇ 53, ವಿಟಮಿನ್ ಬಿ , 6 ರಷ್ಟಿರುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ