ಭುಜಂಗಾಸನವನ್ನು ಮಾಡುವುದು ಹೇಗೆ ? ಪ್ರಯೋಜನಗಳೇನು.!? ( How to do Bhujangasana And What are Its Benefits?)

  • by
yoga

ಸರ್ಪದ ರೀತಿಯಲ್ಲಿ ದೇಹದ ಭಂಗಿ ಇರುವುದರಿಂದ ಭುಜಂಗಾಸನ ಎಂದು ಕರೆಯಲಾಗುತ್ತದೆ. ಭುಜಂಗಾಸನ ಸೂರ್ಯ ನಮಸ್ಕಾರದ 12 ಆಸನದ ಭಂಗಿಗಳಲ್ಲಿ ಭುಜಂಗಾಸನ 8ನೇಯ ಆಸನವಾಗಿದೆ. ಅಭ್ಯಾಸದಿಂದ ಸೊಂಟ ಹಾಗೂ ತೊಡೆಗಳ ದುರ್ಬಲತೆ ದೂರವಾಗುತ್ತದೆ. ಉದರದ ಅನೇಕ ದೋಷಗಳು ನಿವಾರಣೆಯಾಗುತ್ತವೆ. ಶ್ವಾಸಕೋಶ ಹೆಚ್ಚು ಬಲಶಾಲಿಯಾಗಲು ಈ ಆಸನ ಮಾಡಲಾಗುತ್ತದೆ. ಈ ಆಸನ ಮಾಡುವುದಕ್ಕಿಂತಲೂ ಮೊದಲು ನಿಮ್ಮ ಹೊಟ್ಟೆ ಖಾಲಿಯಾಗಿರಬೇಕು. ಆಹಾರ ಸೇವಿಸಬಾರದು. ನೀವು ಆಸನ ಮಾಡುವ ಮೊದಲು ಕನಿಷ್ಠ ನಾಲ್ಕರಿಂದ ಆರು ಗಂಟೆಗಳ ಕಾಲ ನಿಮ್ಮ ಊಟದ ಮಧ್ಯೆ ಗ್ಯಾಪ್ ಇರಬೇಕು. ಬೆಳಿಗ್ಗೆ ಈ ಯೋಗವನ್ನು ಅಭ್ಯಾಸ ಮಾಡುವುದು ಉತ್ತಮ ಎಂದು ಹೇಳಲಾಗುತ್ತದೆ.

Bhujangasana, health Benefits, ಭುಜಂಗಾಸನ, ಆರೋಗ್ಯ ಪ್ರಯೋಜನ

ಭುಜಂಗಾಸನ

ಶೈಲಿ – ಅಷ್ಟಾಂಗ ಯೋಗ
ಅವಧಿ- 15 ರಿಂದ 30 ಸೆಕೆಂಡಗಳು
ಪುನರಾವರ್ತನೆ – ಇಲ್ಲ
ಹಿಗ್ಗಿಸಿ- ಹೊಟ್ಟೆ, ಭುಜ, ಪಕ್ಕೆಲುಬು, ಶ್ವಾಸಕೋಶ

ಭುಜಂಗಾಸನ ಮಾಡುವುದು ಹೇಗೆ…?

ಮೊದಲು ಬೋರಲಾಗಿ ಕೆಳಮುಖ ಮಾಡಿ ನೇರವಾಗಿ ಶಲಭಾಸನದ ಪ್ರಾರಂಭಗಂತೆ ಮಲಗಬೇಕು, ನಂತರ 2 ಕೈಗಳನ್ನು ಎದೆಯ ಪಕ್ಕದಲ್ಲಿ ಇಡಬೇಕು. ಅಂಗೈಗಳ ಮೇಲೆ ಹೊಕ್ಕಳಿನ ಮೇಲಿನ ಭಾಗದ ಶರೀರದ ಭಾರ, ಉಸಿರನ್ನು ನಿಧಾನವಾಗಿ ಒಳಗೆ ತೆಗೆದುಕೊಳ್ಳುತ್ತಾ ಚಿತ್ರದಲ್ಲಿ ತೋರಿಸಿರುವಂತೆ ಶರೀರವನ್ನು ನೆಲದಿಂದ ಮೆಲಕ್ಕೆ ಎತ್ತಬೇಕು. ಸೋಂಟದ ಕೆಳಗಿನ ಭಾಗ ನೆಲದ ಮೇಲೆ ಚಾಚಿರಬೇಕು. ತಲೆಯನ್ನು ಭೂಮಿಯಿಂದ ಮೇಲೆಕ್ಕಿತ್ತಿ, ಕತ್ತನ್ನು ಹಿಂದಕ್ಕೆ ಬಗ್ಗಿಸಬೇಕು. ಈ ಆಸನ ಮಾಡುವಾಗ ನಿಮ್ಮ ಭಂಗಿ ನಿಮ್ಮ ಎತ್ತರಕ್ಕೆ ಸರಿಹೊಂದುವಂತೆ ನೋಡಿಕೊಳ್ಳಿ. ಭುಜಂಗಾಸನದ ಮತ್ತೊಂದು ಭಂಗಿಯೂ ಇದೆ. ಇದನ್ನು ಭೆಕಾ ಭುಜಂಗಾಸನ ಎಂದು ಕರೆಯಲಾಗುತ್ತದೆ. ಈ ಮುದ್ರೆಯ ಅಭ್ಯಾಸದಿಂದ ಪರಿಣಿತ ತಜ್ಞರಿಂದಲೇ ಕಲಿಯಬೇಕಾಗುತ್ತದೆ.

ಈ ಕೆಳಗಿನ ಸಮಸ್ಯೆಗಳಿಂದ ನೀವು ಬಳಲುತ್ತಿದ್ದರೆ, ಈ ವ್ಯಾಯಾಮ ಮಾಡಬೇಡಿ..!

ಗರ್ಭಿಣಿಯರು, ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಂಥವರು ಈ ಯೋಗಾಸನ ಮಾಡಬೇಡಿ, ಬೆನ್ನಿನ ಭಾಗದಲ್ಲಿ ಗಾಯಗಳಿದ್ದರೆ, ಹಾಗೂ ಕಾರ್ಪಲ್ ಟನಲ್ ಸಿಂಡ್ರೋಮ್ ದಿಂದ ಬಳಲುತ್ತಿದ್ದರೆ, ತಲೆನೋವು, ಗರ್ಭಿಣಿಯರು ಈ ಯೋಗಾಸನವನ್ನು ಮಾಡಬಾರದು. ಇತ್ತೀಚಿನ ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆ ಮಾಡಿಕೊಂಡವರು ಈ ಯೋಗಾವನ್ನು ಅವೈಡ್ ಮಾಡಬೇಕು.

ಭುಜಂಗಾಸನದ ಪ್ರಯೋಜನಗಳು

ಭುಜಂಗಾಸನ ಆಳವಾದ ಬ್ಯಾಕ್ ಬೆಂಡ್ ಆಗಿದ್ದು, ಬೆನ್ನು ಮೂಳೆಯನ್ನು ಬಲವಾಗಿ ಮತ್ತು ಹೆಚ್ಚು ಸುಲಭವಾಗಿ ಸರಾಗಗೊಳಿಸುತ್ತದೆ.
ಹೊಟ್ಟೆಯ ಕೆಳಭಾಗದಲ್ಲಿರುವ ಅಂಗಾಂಗಳನ್ನು ಟೋನ್ ಮಾಡುತ್ತದೆ.
ಜೀರ್ಣಕ್ರಿಯೆ , ಸಂತೋನೋತ್ಪತ್ತಿ ಮತ್ತು ಮೂತ್ರದ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ
ತೂಕವನ್ನು ಸಮತೋಲನಗೊಳಿಸುತ್ತದೆ
ಶ್ವಾಸಕೋಶ, ಭುಜ, ಹಾಗೂ ಎದೆ ಮತ್ತು ಹೊಟ್ಟೆಯ ಆರೋಗ್ಯಕ್ಕೆ ಈ ಆಸನ ಒಳ್ಳೆಯದು
ಒತ್ತಡ ನಿವಾರಣೆಗೆ ಸಹಾಯ ಮಾಡುತ್ತದೆ
ಅಸ್ತಮಾ ಸಮಸ್ಯೆಯನ್ನು ನಿವಾರಿಸುತ್ತದೆ

ಭುಜಂಗಾಸನದ ಹಿಂದಿನ ವಿಜ್ಞಾನ

ಕೋಬ್ರಾ ಭಂಗಿ ನಿಮ್ಮ ಯೋಗಾಭ್ಯಾಸದಲ್ಲಿ ಕಡ್ಡಾಯವಾಗಿ ಬಹುಮುಖ ಯೋಗ ಭಂಗಿಗಳಲ್ಲಿ ಒಂದಾಗಿದೆ. ಏಕೆಂದರೆ ಇದು ಮಹತ್ವದ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ. ಮೊದಲೇ ಹೇಳಿದಂತೆ, ಈ ಯೋಗಾಸನ ಬೆನ್ನು ಮೂಳೆಯನ್ನು ಬಲಪಡಿಸುತ್ತದೆ

Bhujangasana, health Benefits, ಭುಜಂಗಾಸನ, ಆರೋಗ್ಯ ಪ್ರಯೋಜನ

ಭುಜಂಗಾಸನ ಮಾಡುವುದಕ್ಕಿಂತಲೂ ಮೊದಲು ಈ ಆಸನ ಮಾಡಿ!

ಬಾಲಾಸನ
ಗರುಡಾಸನ
ಮಾರ್ಜರಿ ಆಸನ

ಬಾಲಾಸನ ಕೈ ಮತ್ತು ದೇಹವನ್ನು ಮುಂದಕ್ಕೆ ನಮಸ್ಕರಿಸುತ್ತೇವೆ. ಈ ಆಸನ ಮಾಡುವುದು ತುಂಬಾ ಸುಲಭ. ಸೊಂಟ ಸ್ನಾಯುಗಳ ವಿಶ್ರಾಂತಿಗಾಗಿ ಈ ಆಸನವನ್ನು ಮಾಡಲಾಗುತ್ತದೆ. ಈ ಆಸನವು ಮಲಬದ್ದತೆಯನ್ನು ನಿವಾರಿಸುವುದಲ್ಲದೇ, ಮನಸ್ಸನ್ನು ಶಾಂತಗೊಳಿಸುತ್ತದೆ.

ಗರುಡಾನಸ

ಗರುಡಾಸನ ಒಂದು ರೀತಿಯ ಯೋಗಾಸನದ ಭಂಗಿ ಎಂದು ಹೇಳಬಹುದು. ಈ ಆಸನಕ್ಕೆ ಪುರಾಣಗಳಲ್ಲಿ ವಿವಿರಿಸಿದ ಪಕ್ಷಿಗಳ ರಾಜ ಗರುಡನ ಹೆಸರು ಇಡಲಾಗಿದೆ. ಈ ಯೋಗಾಸನವು ಮುಖ್ಯವಾಗಿ ಭುಜ, ಮಣಿಕಟ್ಟು ಮತ್ತು ತೋಳು, ಕಾಲು ಮೇಲೆ ಪರಿಣಾಮ ಬೀರುತ್ತದೆ. ಈ ಭಂಗಿ ಮಾಡಲು ಬಯಸುವವರು ದೇಹದ ಸಮತೋಲನವನ್ನು ಕಾಪಾಡಿಕೊಳ್ಳುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ.

ಮಾರ್ಜಾರಿ ಆಸನ

ಬೆಕ್ಕಿನ ಭಂಗಿಯನ್ನು ಮರ್ಜಾರಿ ಆಸನ ಎಂದು ಕರೆಯಲಾಗುತ್ತದೆ. ಈ ಆಸನ ಮಾಡುವುದರಿಂದ ಬೆನ್ನುಮೂಳೆಯ ಒತ್ತಡ ನಿವಾರಣೆಯಾಗುವುದಲ್ಲದೇ, ಬೆನ್ನುಮೂಳೆ ಮೃದುವಾಗಲು ಸಹಾಯ ಮಾಡುತ್ತದೆ. ಇದಲ್ಲದೇ ಈ ಆಸನವು ಬೆನ್ನು ಮೂಳೆಯನ್ನು ಹಿಗ್ಗಿಸಲು ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ. ಶ್ವಾಸಕೋಶದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ