ಹೊಟ್ಟೆಯ ಬೊಜ್ಜು ಕರಗಿಸಲು ಈ ಟೀಗಳನ್ನು ಸೇವಿಸಿ..!

  • by

ದೇಹದ ಕೊಬ್ಬು ಇಳಿಸುವುದು ಅಷ್ಟು ಸುಲಭವಾದುದ್ದಲ್ಲ. ಇನ್ನು ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸುವುದು ಅತ್ಯಂತ ಕಷ್ಟ.. ಪ್ರತಿ ಬಾರಿ ಹೊಟ್ಟೆಯ ಸುತ್ತಲಿನ ಕೊಬ್ಬು ಕಿರಿ ಕಿರಿಯನ್ನುಂಟು ಮಾಡುತ್ತದೆ. ವ್ಯಾಯಾಮ , ಡಯಟ್ ನಾನಾ ಕ್ರಮಗಳನ್ನು ಅನುಸರಿಸಿದರು. ಹೊಟ್ಟೆಯ ಕೊಬ್ಬು ಕರಗಿಸಲು ಸಾಧ್ಯವಾಗುವುದಿಲ್ಲ. ಹೀಗಿರುವಾಗಿ ನೈಸರ್ಗಿಕವಾಗಿ ಸೀಗುವ ಮನೆಯಲ್ಲೇ ತಯಾರಿಸಬಹಾದದ ನಾಲ್ಕು ಟೀಗಳನ್ನು ಟ್ರೈ ಮಾಡಬಹುದು. ಈ ಚಹಾಗಳ ಸಹಾಯದಿಂದ ನಿಮ್ಮ ಹೊಟ್ಟೆಯ ಕೊಬ್ಬನ್ನು ವೇಗವಾಗಿ ಕಡಿಮೆ ಮಾಡಬಹುದು. ಈ ಚಹಾಗಳನ್ನು ಟ್ರೈ ಮಾಡಬಹುದು. 

ಹೆಚ್ಚಿನ ಮಹಿಳೆಯರು ಹೆಚ್ಚುತ್ತಿರುವ ತೂಕದಿಂದ ತೊಂದರೆಗೊಳಗಾಗುತ್ತಾರೆ. ವಿಷೇಷವಾಗಿ ಹೊಟ್ಟೆಯ ಸುತ್ತಲಿನ ಕೊಬ್ಬು ಮತ್ತು ಅದನ್ನು ಕಡಿಮೆ ಮಾಡಲು ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳಲು ಯತ್ನಿಸುತ್ತಾರೆ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವ ವಿಧಾನದ ಬಗ್ಗೆ ಯೋಚನೆ ಮಾಡಬೇಕಿಲ್ಲ. ವಿಶೇಷವಾಗಿ ಹೊ್ಟಟೆಯ ಸುತ್ತಲಿನ ಕೊಬ್ಬು, ಮತ್ತು ಅದನ್ನು ಕಡಿಮೆ ಮಾಡುವ ವಿಧಾನಗಳನ್ನು ಅನುಸರಿಸಿದರೆ ಫಿಟ್ ಆ್ಯಂಡ್ ಫೈನ್ ಆಗಿರಬಹುದು. 

ಶುಂಠಿ ಚಹಾ 

ಶುಂಠಿ ಚಹಾ ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸುತ್ತದೆ. ಇದು ಜೀರ್ಣಕ್ರಿಯೆ ಮತ್ತು ತೂಕವನ್ನು ನಿಯಂತ್ರಣದಲ್ಲಿ ಇಡುತ್ತದೆ. ಈ ಚಹಾದಲ್ಲಿ  ಶುಂಠಿಯನ್ನು ಸೇರಿಸಿಕೊಳ್ಳುವುದರಿಂದ ಅದು ಜೀರ್ಣಕ್ರಿಯೆಗೆ ನೆರವಾಗುತ್ತದೆ. ತಾಜಾ ಶುಂಠಿ ಹೊಟ್ಟೆಯಲ್ಲಿನ ಉಬ್ಬರ ಮತ್ತು ಸೆಳೆತವನ್ನು ಕಡಿಮೆ ಮಾಡುತ್ತದೆ. ಕೊಬ್ಬು ಕರಗಿಸುವ ಅದ್ಧುತ ಚಹಾವನ್ನು ಹೇಗೆ ತಯಾರಿಸುವುದು.,.ದಾಲ್ಚಿನಿ , ಚಕ್ಕೆ ಹಾಗೂ ತಾಜಾ ಶುಂಠಿಯನ್ನು ಸ್ವಲ್ಪ ನೀರಿನಲ್ಲಿ ಸುಮಾರು ೨೦ ನಿಮಿಷ ಕಾಲ ಕುದಿಸಿ. ಈ ವೇಳೆ ಸುವಾಸನೆ ಮತ್ತು ಎಲ್ಲಾ ಲಾಭಗಳು ಅದರಲ್ಲಿರುವುದು. 

ತೂಕ ನಷ್ಟಕ್ಕೆ ದಾಲ್ಚಿನಿ ಚಹಾ 

ತಂಪು ಪಾನೀಯವಾಗಿರು ಈ ಚಹಾ ಶಕೆ ಸಮಯದಲ್ಲಿ ಇದನ್ನು ಸೇವಿಸಬಹುದು. ಬಾಯಾರಿಕೆ ತಗ್ಗಿಸುವ ಜತೆಗೆ ಇದು ತಬಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. 

ಹೊಟ್ಟೆಯ ಸುತ್ತ ಕೊಬ್ಬು ಹೆಚ್ಚಲು ಅನೇಕ ಕಾರಣಗಳಿವೆ. ವ್ಯಾಯಾಮದ ಕೊರತೆ , ಸರಿಯಾದ ಡಯಟ್ ಇಲ್ಲದಿರುವುಗು, ಇಡೀ ದಿನ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವುದು. ತೂಕ ಹೆಚ್ಚಿಸಲು ಹಾಗೂ ಕಳೆದುಕೊಳ್ಳಲು ನಿಮಗೆ ಸಹಾಯ ಮಾಡುವ ಹಲವು ಪರಿಹಾರಗಳಿವೆ. ಪ್ರತಿ ದಿನ ಈ ಚಹಾವನ್ನು ೧ ಕಪ್ ಸೇವನೆ ಮಾಡುವುದರಿಂದ ಅನೇಕ ತೊಂದರೆಗಳನ್ನು ನಿವಾರಿಸಬಹುದು. 

ತುಳಸಿಯಲ್ಲಿ ಕ್ಯಾಲೋರಿಗಳು ಇಲ್ಲ. ಹೀಗಾಗಿ ಹಾಲಿನ ಟೀ ಬದಲು, ತುಳಸಿ ಟೀ ಕುಡಿಯುವುದು ಜಾಣತನದ ಕ್ರಮವಾಗಿದೆ. ಅಲ್ಲದೇ ತುಳಸಿಯನ್ನು ಟೀ ಕಾಫಿ ಬದಲಿಗೆ ಸೇವಿಸುವ ಪೇಯವಾಗಿದೆ.

ಅತಿ ಸುಲಭ ವಿಧಾನವೆಂದರೆ ಒಂದು ಲೋಟ ನೀರಿನಲ್ಲಿ ರಾತ್ರಿ ಮಲಗುವಾಗ ಕೆಲವು ತುಳಸಿ ಎಲೆಗಳನ್ನು ಹಾಕಿಟ್ಟು ಮುಂಜಾನೆ ಈ ಎಲೆಗಳ ಸಹಿತ ನೀರನ್ನು ಪ್ರಥಮ ಆಹಾರವಾಗಿ ಕುಡಿಯಬೇಕು. ನಿಂಬೆ ರಸ ಸೇರಿಸಿಯೂ ಇದನ್ನು ಸೇವಿಸಬಹುದು. ತುಳಸಿ ಟೀ ಕುಡಿಯುವುದರಿಂದ 

ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ. ಆಹಾರದ ಪೋಷಕಾಂಶಗಳು ಉತ್ತಮವಾಗಿ ಹೀರಲ್ಪಡಲು ಸಾಧ್ಯವಾಗುತ್ತದೆ. ಅಲ್ಲದೇ ಜೀರ್ಣಾಂಗಗಳಲ್ಲಿರುವ ಆರೋಗ್ಯ ಸ್ನೇಹಿ ಬ್ಯಾಕ್ಟೇರಿಯಾಗಳಿಗೂ ತುಳಸಿ ಉತ್ತಮವಾದದ್ದು, 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ