ಇಲ್ಲಿದೆ ಟಾಪ್ – 5 ನೈಟ್ ಕ್ರೀಂ ಗಳು

  • by

ಒಣ ತ್ವಚೆಗಾಗಿ ಟಾಪ್ ನೈಟ್ ಕ್ರೀಮ್
ಅತ್ಯುತ್ತಮ ನೈಟ್ ಕ್ರೀಮ್‌ಗಳು ನಿಮ್ಮ ತ್ವಚೆಯನ್ನು ಮೃದುವಾಗಿಸಿ ಕಾಂತಿಯನ್ನು ನೀಡುವಲ್ಲಿ
ಸಹಕಾರಿಯಾಗಿದೆ. ಚಳಿಗಾಲದಲ್ಲಿ ಉತ್ತಮ ನೈಟ್ ಕ್ರೀಮ್‌ಗಳಿಂದ ನಿಮ್ಮ ತ್ವಚೆಯ ಕಾಂತಿಯನ್ನು ಮರಳಿ
ಪಡೆಯಬಹುದಾಗಿದೆ. ಅದಕ್ಕಾಗಿಯೇ ಮಾರುಕಟ್ಟೆಯಲ್ಲಿ ಹೆಚ್ಚಿನ ನೈಟ್ ಕ್ರೀಮ್‌ಗಳು ಬಂದಿದ್ದು
ಅವುಗಳು ಬಜೆಟ್ ಬೆಲೆಯಲ್ಲಿ ಲಭ್ಯವಿದ್ದು ನಿಮ್ಮ ತ್ವಚೆಯ ಮೃದುತ್ವವನ್ನು ಕಾಪಾಡುತ್ತದೆ.

ಲ್ಯಾಕ್ಮಿ ಫ್ರುಟ್ ಮಾಯಿಶ್ಚರೈಸರ್ ಸ್ಟ್ರಾಬೆರಿ ಕಿವಿ ನೈಟ್ ಕ್ರೀಮ್
ಈ ಹಣ್ಣುಗಳಿಂದ ಕೂಡಿದ ನೈಟ್ ಕ್ರೀಮ್ ಆಳವಾದ ಪೋಷಣೆಯನ್ನು ನಿಮ್ಮ ತ್ವಚೆಗಳಿಗೆ ನೀಡುತ್ತದೆ.
ರಾತ್ರಿ ಇದನ್ನು ಹಚ್ಚಿ ಮಲಗಿದರೆ ಸಾಕು ಬೆಳಗ್ಗೆ ಎದ್ದು ಫ್ರೆಶ್ ಅನುಭೂತಿಯನ್ನು ನೀವು ಪಡೆಯುತ್ತೀರಿ.
ಎಲ್ಲಾ ಕಾಲದಲ್ಲಿಯೂ ಈ ಕ್ರೀಮ್ ಸಹಕಾರಿಯಾಗಿದೆ.

ಪಾಂಡ್ಸ್ ವೈಟ್ ಬ್ರೈಟನಿಂಗ್ ನೈಟ್ ಟ್ರೀಟ್‌ಮೆಂಟ್
ಜಿಡ್ಡಿನ ತ್ವಚೆ ಉಳ್ಳವರಿಗೆ ಈ ಕ್ರೀಮ್ ಹೇಳಿ ಮಾಡಿಸಿರುವಥದ್ದು. ಇದು ಕೂಡಲೇ ತ್ವಚೆಯಲ್ಲಿ
ಹೀರಿಕೊಳ್ಳುತ್ತದೆ ಮತ್ತು ಮರುದಿನ ಉತ್ತಮ ಕಾಂತಿಯನ್ನು ನೀಡುತ್ತದೆ. ದೀರ್ಘ ಕಾಲದ ತುರಿಕೆ ಮತ್ತು
ಇನ್ನಿತರ ಚರ್ಮ ಸಮಸ್ಯೆಗಳನ್ನು ನೀವು ಎದುರಿಸುತ್ತಿದ್ದರೆ ಈ ನೈಟ್ ಕ್ರೀಮ್ ನಿಮಗೆ ಸಹಕಾರಿಯಾಗಿದೆ.

ಬಾಡಿ ಶಾಪ್ ವಿಟಮಿನ್ ಇ ನರಿಶಿಂಗ್ ನೈಟ್ ಕ್ರೀಮ್
ಬಾಡಿ ಶಾಪ್ ಪ್ರಾಡಕ್ಟ್‌ಗಳು ಮಾರುಕಟ್ಟೆಯಲ್ಲಿ ಹಿಂದಿನಿಂದಲೂ ಉತ್ತಮ ಹೆಸರನ್ನು ಪಡೆದುಕೊಂಡು
ಬಂದಿವೆ. ಇದು ನೀವು ನಿದ್ದೆಮಾಡುತ್ತಿರುವಾಗ ನಿಮ್ಮ ತ್ವಚೆಯ ಆಳಕ್ಕೆ ಇಳಿದು ಅಗತ್ಯ ಪೋಷಣೆಗಳನ್ನು
ಒದಗಿಸುತ್ತದೆ. ಇದರಿಂದ ಬೆಳಗ್ಗೆ ಎದ್ದಾಗ ತ್ವಚೆಯಲ್ಲಿ ಹೊಸ ಕಳೆಯನ್ನು ನೀವು ಕಂಡುಕೊಳ್ಳಬಹುದು.
ಬಾಡಿ ಶಾಪ್ ವಿಟಮಿನ್ ಇ ಕ್ರೀಮ್ ನಿಮ್ಮ ತ್ವಚೆಯನ್ನು ಒಣಗಿಸುವುದಿಲ್ಲ. ಇದನ್ನು ನಿಮ್ಮ ಮುಖಕ್ಕೆ
ಕೂಡ ಯಾವುದೇ ಭೀತಿಯಿಲ್ಲದೆ ಹಚ್ಚಬಹುದು.

ವಿಎಲ್‌ಸಿಸಿ ಸ್ಕಿನ್ ಟೈಟನಿಂಗ್ ವೀಟ್ ನೈಟ್ ಕ್ರೀಮ್
ಒಣ ತ್ವಚೆಗೆ ಈ ಕ್ರೀಮ್ ಹೇಳಿಮಾಡಿಸಿರುವಂಥದ್ದು. ಇದು ಮುಖಕ್ಕೆ ಕೂಡ ಉತ್ತಮವಾಗಿದೆ. ಹರ್ಬಲ್
ಸುವಾಸನೆಯನ್ನು ಈ ಕ್ರೀಮ್‌ನಲ್ಲಿ ನಾವು ಕಾಣಬಹುದಾಗಿದ್ದು ಇದರಿಂದ ನೀವು ಉತ್ತಮ ನಿದ್ದೆಯನ್ನು
ಹೊಂದಬಹುದು.

ಹಿಮಾಲಯ ನೈಟ್ ಕ್ರೀಮ್
ಇದು ಡ್ರೈ ಸ್ಕಿನ್‌ಗೆ ಅತ್ಯುತ್ತಮವಾಗಿದೆ. ನಿಮ್ಮ ಸಂಪೂರ್ಣ ದೇಹಕ್ಕೆ ಇದು ಉತ್ತಮವಾಗಿದೆ. ಇದು
ಶ್ರೀಮಂತ ರಚನೆಯನ್ನು ಹೊಂದಿದ್ದು ಇದು ಸುವಾಸನಯೊಂದಿಗೆ ರಾತ್ರಿ ಪೂರ್ತಿ ನಿಮ್ಮ ತ್ವಚೆಯ
ಸಂರಕ್ಷಣೆಯನ್ನು ಮಾಡುತ್ತದೆ. ರಾತ್ರಿ ಇದನ್ನು ಹಚ್ಚಿಕೊಂಡು ಮಲಗಿದರೆ ಬೆಳಗ್ಗೆ ಎದ್ದಾಗ
ಉಲ್ಲಾಸಭರಿತ ದಿನ ನಿಮ್ಮದಾಗುತ್ತದೆ.

ಓಲೆ ನ್ಯಾಚುರಲ್ ವೈಟ್ ಹೆಲ್ದಿ ಫೇರ್‌ನೆಸ್ ನೈಟ್ ಕ್ರೀಮ್
ಓಲೆಯ ಈ ಪ್ರಾಡಕ್ಟ್ ಚಳಿಗಾಲಕ್ಕೆ ಪರ್ಫೆಕ್ಟ್ ಎಂದೆನಿಸಿದೆ. ಇದು ಕ್ರೀನ್ ಫಾರ್ಮ್‌ನಲ್ಲಿದ್ದು ಟಬ್
ಆಕಾರದ ಬಾಟಲಿಯಲ್ಲಿ ಬಂದಿದೆ. ಇದು ನಿಮ್ಮ ತ್ವಚೆಗೆ ಮಾಯಿಶ್ಚರೈಸ್ ಅನ್ನು ಒದಗಿಸುತ್ತದೆ ಮತ್ತು
ಮರುದಿನ ಬೆಳಗ್ಗೆ ಪೋಷಕಾಂಶವುಳ್ಳ ಫ್ರೆಶ್ ತ್ವಚೆಯನ್ನು ನೀವು ಪಡೆಯುತ್ತೀರಿ.

ಇನ್ನು ಚಳಿಗಾಲದಲ್ಲಿ ನಿಮ್ಮ ತ್ವಚೆಯ ಕಾಳಜಿಗಾಗಿ ಕೆಲವೊಂದು ಟಿಪ್ಸ್‌ಗಳನ್ನು
ಅನುಸರಿಸಬೇಕಾಗುತ್ತದೆ. ಯಾವುದೇ ಕಾಲದಲ್ಲಿಯೇ ಆಗಲಿ ಮುಖದ ಮೇಕಪ್ ನಿವಾರಿಸಿಕೊಂಡೇ ನೀವು
ಕ್ರೀಮ್ ಅನ್ನು ಹಚ್ಚಬೇಕು. ಕಣ್ಣಿನ ಕಾಡಿಗೆ, ತುಟಿಗಳ ಲಿಪ್‌ಸ್ಟಿಕ್, ಹೀಗೆ ಸಣ್ಣ ಸಣ್ಣ ಮೇಕಪ್
ಇದ್ದರೂ ಅದನ್ನು ವಾಶ್ ಮಾಡಿಕೊಳ್ಳಿ.

ನಿಮ್ಮ ಮುಖವನ್ನು ಕ್ಲೆನ್ಸರ್ ಮೂಲಕ ತೊಳೆದುಕೊಳ್ಳಿ. ಇದು ಮುಖದಲ್ಲಿರುವ ಎಲ್ಲಾ ಕೊಳಕನ್ನು
ನಿವಾರಿಸುತ್ತದೆ. ಆದಷ್ಟು ಕಡಲೆ ಹಿಟ್ಟು, ಮೊಸರು, ಲಿಂಬೆ, ಹಾಲಿನಂತಹ ನೈಸರ್ಗಿಕ ಫೇಸ್ ಪ್ಯಾಕ್‌ನಿಂದ
ಮುಖವನ್ನು ಸುರಕ್ಷಿತವಾಗಿಟ್ಟುಕೊಳ್ಳಿ. ನಿಮ್ಮ ದಣಿದ ಕಣ್ಣುಗಳಿಗೆ ನೀವು ವಿಶ್ರಾಂತಿ ನೀಡುವ
ಸಮಯದಲ್ಲಿ ಅಂದರೆ ನೀವು ರಾತ್ರಿಯ ಹೊತ್ತು ಮಲಗಿ ನಿದ್ದೆ ಮಾಡುವ ಸಮಯದಲ್ಲಿ , ನಿಮ್ಮ ದಣಿದ
ಚರ್ಮವನ್ನು ಯಾವುದೇ ಹಾನಿಯಿಂದ ಪುನಃಸ್ಥಾಪಿಸಲು ನೈಟ್ ಕ್ರೀಮ್‌ಗಳು ಶ್ರಮಿಸುತ್ತವೆ. ಅವುಗಳು
ತಮ್ಮ ಅದ್ಭುತ ಶಕ್ತಿಯೊಂದಿಗೆ ವಿಭಿನ್ನ ಜೀವ ಸತ್ವಗಳು, ತೈಲಗಳು, ಸಾರಭೂತ ತೈಲಗಳು, ಅಲೋ
ವೆರಾ, ಎ ಎಚ್‌ ಎ ಗಳು, ಉತ್ಕರ್ಷಣ ನಿರೋಧಕಗಳು ಮತ್ತು ಹಲವಾರು ಬಗೆಯ ಇತರ
ಪದಾರ್ಥಗಳೊಂದಿಗೆ ಚರ್ಮದ ಮೇಲಿನ ಗೆರೆಗಳು ಮತ್ತು ಸುಕ್ಕುಗಳನ್ನು ಹೋಗಲಾಡಿಸುತ್ತವೆ.

ಮುಖದ ಸೌಂದರ್ಯದಲ್ಲಿ ಕಣ್ಣುಗಳ ಪಾತ್ರ ಬಹಳ ಮುಖ್ಯ. ಸುಂದರ ಕಣ್ಣುಗಳು ಮುಖದ ಅಂದವನ್ನು
ಹೆಚ್ಚು ಮಾಡುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಮೇಕ್ ಅಪ್ ನ ಸಮಯದಲ್ಲಿ ಕಣ್ಣಿನ

ಅಂದವನ್ನು ಹೆಚ್ಚಿಸಲು ಕಾಡಿಗೆಯಂತಹ ಸೌಂದರ್ಯ ವರ್ಧಕಗಳನ್ನು ಹಚ್ಚಿರುತ್ತೀರಿ. ಮನೆಗೆ ಬಂದ ಮೇಲೆ
ರಾತ್ರಿಯ ಸಮಯದಲ್ಲಿ ಕಣ್ಣಿನ ಪ್ರದೇಶದ ಸುತ್ತಲೂ ಐ ಕ್ರೀಮ್ ಹಚ್ಚಿ ಮಲಗಿ. ಇದು ಕಣ್ಣುಗಳ
ಸುತ್ತಲಿನ ಚರ್ಮವನ್ನು ಪುನಃ ಚೇತನ ಗೊಳಿಸುತ್ತದೆ, ಕಣ್ಣಿನ ಸುತ್ತಲಿನ ಕಪ್ಪು ವೃತ್ತಗಳನ್ನು ಅಂದರೆ
ಡಾರ್ಕ್ ಸರ್ಕಲ್ ಗಳನ್ನು ಮತ್ತು ಪಫಿನೆಸ್ ಅನ್ನು ಸಹ ಕಡಿಮೆ ಮಾಡುತ್ತದೆ ಮತ್ತು ದಣಿದ ಕಣ್ಣುಗಳಿಗೆ
ತಂಪನ್ನೂ ನೀಡಿ ಕಣ್ಣುಗಳ ಉರಿಯನ್ನು ಸಹ ಶಮನ ಗೊಳಿಸುತ್ತದೆ. ನಯವಾದ ಮತ್ತು ಸೌಂದರ್ಯ
ಪೂರಕವಾದ ತುಟಿಗಳನ್ನು ಹೊಂದಲು ರಾತ್ರಿ ಮಲಗುವ ಸಮಯದಲ್ಲಿ ಕೆಲವು ದಪ್ಪ ತರನಾದ ಆರ್ಧ್ರಕ
ಕ್ರೀಮ್ ಅಥವಾ ಮುಲಾಮು ಅಥವಾ ಚಾಪ್ ಸ್ಟಿಕ್ ಹಚ್ಚಿ ಮಲಗಿಕೊಳ್ಳಿ

ರಾತ್ರಿ ಅಂಗಾಲಿಗೆ ಬೇಬಿ ಆಯಿಲ್ ಹಚ್ಚಿ ಸಾಕ್ಸ್ ಧರಿಸಿ ಮಲಗಿ ಇದರಿಂದ ಒಡೆದ ಹಿಮ್ಮಡಿ ಸಮಸ್ಯೆ
ಕಡಿಮೆಯಾಗುತ್ತದೆ. ತುಂಬ ತೋಳಿನ ಬಟ್ಟೆ ಧರಿಸಿ ನಿಮ್ಮ ತ್ವಚೆಗೆ ಸೂಕ್ತವಾಗುವ ಕ್ರೀಮ್ ಅನ್ನು ಬಳಸಿ.
ಒಣ ತ್ವಚೆಯುಳ್ಳವರು ಕೊಬ್ಬರಿ ಎಣ್ಣೆಯನ್ನು ಬಳಸಿ. ಸಾಬೂನಿಗಿಂತ ಕಡಲೆ ಹಿಟ್ಟಿನ ಬಳಕೆ ಮಾಡಿ.
ಶೇಂಗಾ, ಒಣಕೊಬ್ಬರಿ ಸೇವಿಸಿ. ಮುಖಕ್ಕೆ ಪ್ಯಾಕ್ ಹಾಕಿಕೊಳ್ಳುವವರು ಚಿಟಿಕೆ ಅರಶಿನ, ಹಾಲು ಮುಖಕ್ಕೆ
ಲೇಪಿಸಿಕೊಂಡು ಒಣಗಿದ ನಂತರ ಮುಖವನ್ನು ತೊಳೆದುಕೊಳ್ಳಿ. ಹೆಚ್ಚು ಹೆಚ್ಚು ನೀರು ಕುಡಿಯಿರಿ.
ವಾರದಲ್ಲಿ ಮೂರು ದಿನವಾದರೂ ತಾಜಾ ಹಣ್ಣುಗಳ ಸೇವನೆ ಮಾಡಿ ನೀರು ಮಜ್ಜಿಗೆ ಕುಡಿಯಿರಿ.
ಇದರಿಂದ ದೇಹಕ್ಕೆ ತಾಜಾತನ ದೊರೆಯುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ