ಡಯಾಬಿಟಿಸ್ ಇರುವವರು ಯಾವ ಡ್ರೈ ಫ್ರೂಟ್ಸ್ ಸೇವಿಸಬೇಕು? – (What are the best Dry Fruits for diabetes!)


ಮಧುಮೇಹ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಕಂಡು ಬರುತ್ತಿದೆ. ಮಧುಮೇಹ ರೋಗಿಗಳ ಆಹಾರ ಕ್ರಮ ಸಮತೋಲಿತವಾಗಿರಬೇಕು. ಇತರ ಆಹಾರಗಳಂತೆ ಡ್ರೈ ಫ್ರೂಟ್ಸ್ ಗಮನಾರ್ಹ ಪರಿಣಾಮ ಬೀರುತ್ತದೆ. ಡ್ರೈ ಫ್ರೂಟ್ಸ್ ಪೌಷ್ಠಿಕಾಂಶದ ಉತ್ತಮ ಮೂಲವೆಂದೇ ಹೇಳಬಹುದು. ಡ್ರೈ ಫ್ರೂಟ್ಸ್ ನಿಂದ ಮಧುಮೇಹ ರೋಗಿಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಪ್ರತಿ ವರ್ಷ ಭಾರತದ್ಲಿ 10 ದಶಲಕ್ಷಕ್ಕೂ ಹೆಚ್ಚು ವಯಸ್ಕರು ಮಧುಮೇಹದಿಂದ ಬಳಲುತ್ತಿದ್ದಾರೆ. ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಪ್ರಯೋಜನಕಾರಿಯಾದ ಅನೇಕ ಆಹಾರಗಳಲ್ಲಿ ಡ್ರೈ ಫ್ರೂಟ್ಸ್ ಕೂಡಾ ಒಂದು. ಮಧುಮೇಹಕ್ಕೆ ಡ್ರೈ ಫ್ರೂಟ್ಸ್ ಹೇಗೆ ಉಪಯುಕ್ತವಾಗಿದೆ ಈ ಬಗ್ಗೆ ಮಾಹಿತಿ ಇಲ್ಲಿದೆ.

ಡ್ರೈ ಫ್ರೂಟ್ಸ್ ಪ್ರೋಟೀನ್ ನಿಂದ ಸಮೃದ್ಧವಾಗಿದ್ದು,ಅಗತ್ಯವಾದ ಪೋಷಕಾಂಶಗಳಿಂದ ಕೂಡಿದೆ. ದೈಹಿಕ ಆರೋಗ್ಯಕ್ಕೆ ಮುಖ್ಯವಾದ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ.ಫೈಬರ್ , ವಿಟಮಿನ್ , ಫೋಲೆಟ್, ಖನಿಜಗಳಾದ , ಮೆಗ್ನೇಶಿಯಂ ಮತ್ತು ಪೊಟ್ಯಾಶಿಯಂ, ಕ್ಯಾರೊಟಿನಾಯ್ಡ್ ಮುಂತಾದವುಗಳನ್ನು ಒಳಗೊಂಡಿದೆ. ಎಲ್ಲಾ ಡ್ರೈ ಫ್ರೂಟ್ಸ್ ಗಳು ಮಧುಮೇಹ ಇರುವವರಿಗೆ ಉಪಯುಕ್ತವಲ್ಲ.

ಬಾದಾಮಿ

ಮಧುಮೇಹ ಇರುವವರಿಗೆ ಬಾದಾಮಿ ಉಪಯುಕ್ತ ಎಂದು ಹೇಳಬಹುದು. ಬಾದಾಮಿ ತಿಂದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವು ತಕ್ಷಣವೇ ಹೆಚ್ಚಾಗುತ್ತದೆ.ಟೈಪ್ – 2 ಡಯಾಬಿಟಿಸ್ ಇರುವವರು ಆಹಾರದಲ್ಲಿ ಬಾದಾಮಿಯನ್ನು 12 ವಾರಗಳರೆಗೆ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಬಹುದು. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
ಮತ್ತೊಂದು ಇತ್ತೀಚಿನ 2017 ರ ಅಧ್ಯಯನ ಪ್ರಕಾರ, ,ಟೈಪ್ 2 ಡಯಾಬಿಟಿಸ್ ಇರುವವರು ದಿನಕ್ಕೆ ಬಾದಾಮಿ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಹಾಗೂ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹೇಗೆ ಸೇವಿಸಬೇಕು?

ಬಾದಾಮಿಯನ್ನು ಕಚ್ಚಾ ಹಾಗೂ ಉಪ್ಪು ಸೇರಿಸದೇ ಸೇವಿಸಬೇಕಾಗುತ್ತದೆ. ಬಾದಾಮಿಯನ್ನು ಎಣ್ಣೆಯಲ್ಲಿ ಫ್ರೈ ಮಾಡಬೇಡಿ. ಓಟ್ ಮೀಲ್ , ಬ್ರೇಕ್ ಫಾಸ್ಟ್ , ಸಲಾಡ್. ಮೊಸರಿನೊಂದಿಗೆ ಸೇವಿಸಬಹುದು.

ವಾಲ್ನಟ್

ಮಧುಮೇಹ ಅಪಾಯವನ್ನು ಕಡಿಮೆ ಮಾಡಲು ವಾಲ್ನಟ್ ಪ್ರಮುಖ ಪಾತ್ರವಹಿಸುತ್ತದೆ. ಟೈಪ್ -2 ಡಯಾಬಿಟಿಸ್ ರೋಗಿಗಳಿಗೆ ಇದು ಒಳ್ಳೆಯದು ಎಂದು ಹೇಳಬಹುದು.

ಗೋಡಂಬಿ

ಸಕ್ಕರೆ ಕಾಯಿಲೆ ಇರುವವರಿಗೆ ಗೋಡಂಬಿ ಅತ್ಯುತ್ತಮ ಡ್ರೈ ಫ್ರೂಟ್ಸ್ ಎಂದು ಹೇಳಬಹುದು. ಅಧ್ಯಯನದ ಪ್ರಕಾರ, ಟೈಪ್ 2 ಡಯಾಬಿಟಿಸ್ ಇರುವವರಿಗೆ ಗೋಡಂಬಿ ಪುಷ್ಠಿಕರಿಸಿದ ಆಹಾರ ನೀಡಲಾಯ್ತು. ನಂತರ 12 ವಾರಗಳ ನಂತರ ಕಡಿಮೆ ರಕ್ತದೋತ್ತಡ ಮತ್ತು ಹೆಚ್ಚಿನ ಮಟ್ಟದ ಎಚ್ ಡಿಎಲ್ ಕೊಲೆಸ್ಟ್ರಾಲ್ ಹಾಗೂ ಗೋಡಂಬಿ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಯಾವುದೇ ನೆಗೆಟಿವ್ ಪರಿಣಾಮ ಬೀರಲಿಲ್ಲ.

ಮಧುಮೇಹಕ್ಕೆ ಪಿಸ್ತಾ

ಪಿಸ್ತಾ ಹೆಚ್ಚಿನ ಶಕ್ತಿಯನ್ನು ಹೊಂದಿರುತ್ತದೆ. ಆರೋಗ್ಯಕರ ಪ್ರಮಾಣದ ಫೈಬರ್ ಮತ್ತು ಪ್ರಯೋಜನಕಾರಿ ಕೊಬ್ಬುಗಳನ್ನು ಹೊಂದಿರುತ್ತದೆ. ಮಧುಮೇಹ ರೋಗಿಗಳಿಗೆ ರಕ್ತದಲ್ಲಿನ ಸಕ್ಕರೆಯನ್ನು ಕಾಪಾಡಿಕೊಳ್ಳಲು ಪಿಸ್ತಾ ಸಹಾಯ ಮಾಡುತ್ತದೆ ಎಂದು ಅನೇಕ ಸಂಶೋಧನೆಗಳಿಂದ ಕಂಡು ಬಂದಿದೆ.

ಪಿಸ್ತಾ ಹೇಗೆ ಸೇವಿಸಬೇಕು?

ಮೊದಲು ಪಿಸ್ತಾ ಮೇಲಿರುವ ಸಿಪ್ಪೆಯನ್ನು ತೆಗೆದು ನಂತರ ಸೇವಿಸಬಹುದು. ಸಕ್ಕರೆ ಹಾಗೂ ಉಪ್ಪು ಮಿಶ್ರಿತ ತಯಾರಿಸಿದ ಪಿಸ್ತಾ ಖರೀದಿಸಬೇಡಿ. ಪಿಸ್ತಾವನ್ನು ಸಲಾಡ್ ಹಾಗೂ ಹಣ್ಣುಗಳ ಜತೆಗೆ ಬೆರಿಸಿ ಸೇವಿಸಬಹುದಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ