ಕಪ್ಪು ದಾರ ಧರಿಸುವುದರಿಂದ ಆಗುವ ಪ್ರಯೋಜನಗಳು!

  • by

ಹಿಂದಿನಿಂದಲೂ ತಂತ್ರ ಶಾಸ್ತ್ರದಲ್ಲಿ ಕಪ್ಪು ದಾರಕ್ಕೆ ವಿಶೇಷ ಮಹತ್ವವಿದೆ. ಕಪ್ಪು ದಾರವು ನಿಮ್ಮನ್ನು ಕೆಟ್ಟ ಕಣ್ಣುಗಳಿಂದ ಹಾಗೂ ನಕಾರಾತ್ಮಕ ಶಕ್ತಿಯಿಂದ ರಕ್ಷಿಸುತ್ತದೆ. ನಿಮ್ಮ ಅದೃಷ್ಟವನ್ನು ಸಹ ಬದಲಾಯಿಸುತ್ತದೆ. ಕಪ್ಪು ದಾರದ ಅದ್ಭುತ ಪ್ರಯೋಜನಗಳು ಇಲ್ಲಿವೆ. 

ಕಪ್ಪು ದಾರ ಎಂದರೆ ನಂಬಿಕೆ ಹೆಚ್ಚು…!

ಭಾರತದಲ್ಲಿ ಕಪ್ಪು ಬಣ್ಣವನ್ನು ನಕಾರಾತ್ಮಕ ಶಕ್ತಿ ಬೀಳದಂತೆ ಉಪಯೋಗಿಸಲಾಗುತ್ತದೆ.  ಪವಿತ್ರ ಸಮಾರಂಭದಲ್ಲಿ ಅಥವಾ ಯಾವುದೇ ಧಾರ್ಮಿಕ ಕಾರ್ಯಗಳಲ್ಲಿ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಿದ ಜನರನ್ನು ನೀವು ತುಂಬಾ ಕಡಿಮೆ ಕಾಣಬಹುದು. ಕಪ್ಪುದಾರ ಧರಿಸುವುದರಿಂದ ವೈಜ್ಞಾನಿಕವಾಗಿ ಆರೋಗ್ಯಕ್ಕೆ  ಸಾಕಷ್ಟು ಲಾಭಗಳಿವೆ. ಅಲ್ಲದೇ ಸಾಂಪ್ರದಾಯಿಕವಾಗಿಯೂ ಕೆಲವು ನಂಬಿಕೆಗಳು ಬೇರೂರಿವೆ. 

Benefits ,black Thread, ಕಪ್ಪು ದಾರ, ಆರೋಗ್ಯಪ್ರಯೋಜನಗಳು

ಕಪ್ಪು ದಾರ ಧರಿಸುವುದರಿಂದ ಏನಾಗುತ್ತದೆ.. ? 

ಕಪ್ಪು ದಾರವು ನಿಮ್ಮನ್ನು ರಕ್ಷಣೆ ಮಾಡುವುದಲ್ಲದೇ, ಅದು ನಿಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ. ಹಾಗೂ ಶನಿವಾರ ಹಾಗೂ ಮಂಗಳವಾರ ಸಂಜೆ ಹತ್ತಿರದ ಹನುಮಾನ ದೇವಸ್ಥಾನಕ್ಕೆ ಭೇಟಿ ನೀಡಿ, ಕಪ್ಪು ದಾರದ ಮೇಲೆ ಹನುಮಾನ ವಿಗ್ರಹದಿಂದ ಕುಂಕುಮ ಕಪ್ಪು ಹಾರಕ್ಕೆ ಹಚ್ಚಬೇಕು. ಅದರ ಮೇಲೆ ಈ ದಾರವನ್ನು ಮನೆಯ ಮುಖ್ಯ ದ್ವಾರಕ್ಕೆ ಕಟ್ಟಿಕೊಳ್ಳಿ.  ಇದನ್ನು ಮಾಡುವುದರಿಂದ ದುಷ್ಟ ಶಕ್ತಿಗಳು ನಿಮ್ಮ ಮನೆಯಿಂದ ದೂರವಿರುತ್ತವೆ.  

ಈ ಕಪ್ಪು ದಾರವನ್ನು ನೇರವಾಗಿ ನಿಮ್ಮ ಕೈಯಲ್ಲಿ, ಕುತ್ತಿಗೆಯಲ್ಲಿ ಕಟ್ಟುವ ಮೂಲಕ , ನಿಮ್ಮ ಕೆಲಸದಲ್ಲಿನ ಸಮಸ್ಯೆಗಳು ದೂರವಾಗಲು ಪ್ರಾರಂಭವಾಗುತ್ತವೆ. ಹಾಗೇ ಯಶಸ್ಸು ನಿಮ್ಮದಾಗುತ್ತದೆ.  ಇನ್ನು ಕಪ್ಪು ದಾರವನ್ನು ಮಕ್ಕಳಿಗೆ ಕಟ್ಟುವ ಮೂಲಕ , ಅವರನ್ನು ದುಷ್ಟಶಕ್ತಿಗಳಿಂದ ರಕ್ಷಿಸಬಹುದು. ಇದ್ರಿಂದ ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ. ಅಲ್ಲದೇ, ಹನುಮಾನ ದೇವರ ಪಾದಗಳ ಕುಂಕುಮ ಹಚ್ಚಿದ ದಾರವನ್ನು ಕಟ್ಟುವುದರಿಂದ ರೋಗಗಳನ್ನು ತಡೆಗಟ್ಟಬಹುದು. 

ಕಪ್ಪು ದಾರವನ್ನು ಕಟ್ಟುವ ಹಿಂದಿನ ವೈಜ್ಞಾನಿಕ ಕಾರಣ!

ಕಪ್ಪು ದಾರವನ್ನು ಕಟ್ಟುವುದರ ಹಿಂದೆ ವೈಜ್ಞಾನಿಕ ಕಾರಣಗಳಿವೆ. ನಮ್ಮ ದೇಹವು ಐದು ಅಂಶಗಳಿಂದ ಕೂಡಿದೆ. ಭೂಮಿ, ಗಾಳಿ, ಬೆಂಕಿ ಹಾಗೂ ನೀರು ಮತ್ತು ಆಕಾಶ, ಅವುಗಳಿಂದ ಬರುವ ಶಕ್ತಿ ನಮ್ಮ ದೇಹಕ್ಕೆ ಉಪಯುಕ್ತವಾದದ್ದು, ಬೇರೆಯವರ ದುಷ್ಟ ಕಣ್ಣು ನಮ್ಮ  ಮೇಲೆ ಬಿದ್ದಾಗ ಸಕಾರಾತ್ಮಕ ಶಕ್ತಿ ನಮ್ಮನ್ನು ತಲುಪುವುದಿಲ್ಲ. ಅದಕ್ಕಾಗಿಯೇ ಕಪ್ಪು ದಾರ ಕಟ್ಟಲಾಗುತ್ತದೆ. 

ಅಜೀರ್ಣ ಸಮಸ್ಯೆ ನಿವಾರಣೆ..!

ಕಪ್ಪು ದಾರ ಧರಿಸುವುದರಿಂದ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ,  ತೂಕ ಹಾಗೂ ಸೊಂಟದ ಗಾತ್ರವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಗೂ ಈ ದಾರ ಉಪಯೋಗವಾಗುತ್ತದೆ ಎಂದು ಹೇಳಬಹುದು. ಸೋಂಟದಲ್ಲಿ ಈ ದಾರವನ್ನು ಕಟ್ಟಲಾಗುತ್ತದೆ. ಇದು ಸಡಿಲವಾದರೆ ನಾವು ತೂಕ ಕಳೆದುಕೊಂಡಿದ್ದೇವೆ ಎಂಬ ಅರ್ಥ ಕೊಡುತ್ತದೆಯಂತೆ. 

Benefits ,black Thread, ಕಪ್ಪು ದಾರ, ಆರೋಗ್ಯಪ್ರಯೋಜನಗಳು

ಮೂಳೆಗಳಿಗೆ ಹೆಚ್ಚು ಬಲ!

ಕಪ್ಪು ದಾರ ಸೊಂಟದ ಮೂಳೆಗೆ ಬಲ ನೀಡುತ್ತದೆ. ಬೆನ್ನು ಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ. ಕಪ್ಪು ದಾರ ಬೆನ್ನು ಮೂಳೆಯ 

ದ್ರವವನ್ನು ಉಳಿಸಿಕೊಳ್ಳುವ ಮೂಲಕ ಕಡಿಮೆ ಬೆನ್ನು ಮೂಳೆ ತೊಂದರೆಗಳು , ಸ್ಲಿಪ್ ಡಿಸ್ಕ್ ಮುಂತಾದ ಸಮಸ್ಯೆಗಳು ತಡೆಯುತ್ತದೆ. 

ಸಂತಾನೋತ್ಪತ್ತಿಗೆ ಸಹಾಯ!

ಸೊಂಟದ ಮೇಲೆ ಕಪ್ಪು ದಾರ ಕಟ್ಟುವುದರಿಂದ ಫಲವತ್ತತ್ತೆಯನ್ನು ಸುದಾರಿಸಲು ಸಹಾಯ ಮಾಡುತ್ತದೆ. ಇದು ಸೊಂಟದ ಹತ್ತಿರ ಮತ್ತು ಸಂತಾನೋತ್ಪತ್ತಿ ಅಂಗಗಳನ್ನು ತಂಪಾಗಿರಿಸಲು ಸಹ ಸಹಕಾರಿಯಾಗಿದೆ. 

ಇನ್ನು ದೇಹದ ಯಾವುದೇ ಭಾಗದಲ್ಲಾದರೂ ಕಪ್ಪು ದಾರವನ್ನು ಕಟ್ಟುವುದರಿಂದ ನಿಮ್ಮ ಚಯಾಪಚಯ ಕ್ರಿಯೆ ಚೆನ್ನಾಗಿ ಆಗುತ್ತದೆ. . ಅಲ್ಲದೇ ರಕ್ತದೋತ್ತಡ ಉಂಟಾಗದಂತೆ ಸಹ ತಡೆಯುತ್ತದೆ.  

ಶನಿಯ ಜತೆ ಕಪ್ಪು ದಾರದ ಸಂಬಂಧ..

ಕಪ್ಪು ಬಣ್ಣ ನ್ಯಾಯ ಮತ್ತು ಶಿಕ್ಷೆಯ ದೇವರಾದ ಶನಿಯ ಜತೆ ಸಂಬಂಧ ಹೊಂದಿದೆ. ಶನಿ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ನಿವಾರಿಸುತ್ತಾರೆ. ಪಾದದ ಸುತ್ತಲೂ , ಕುತ್ತಿಗೆ ಸೊಂಟ ಅಥವಾ ತೋಳುಗಳಲ್ಲಿ ಕಪ್ಪುದಾರವನ್ನು ಧರಿಸುವವವರು ನಕಾರಾತ್ಮಕ ಮತ್ತು ದುಷ್ಟ ಶಕ್ತಿಯಿಂದ ದೂರವಿರಿಸುತ್ತದೆ. ಇನ್ನೂ ಕೆಲವರು ಮಾಟ ಮಂತ್ರದ ಕೆಟ್ಟ ಉದ್ದೇಶವನ್ನು ಹೊಂದಿರುವ ಜನರಿಂದ ತಮ್ಮನ್ನು ತಾವು ಸುರಕ್ಷಿತವಾಗಿರಿಸಿಕೊಳ್ಳಲು ಧರಿಸಲಾಗುತ್ತದೆ. 

ಕಪ್ಪು ದಾರ ಹೇಗೆ ಧರಿಸಬೇಕು.? 

ಕಪ್ಪು ದಾರವನ್ನು 9 ಗಂಟುಗಳನ್ನು ಕಟ್ಟಿದ ನಂತರ ಕಟ್ಟಬೇಕು. 

ಕಪ್ಪು ದಾರವನ್ನು ಧರಿಸುವ ಮೊದಲು, ಅದನ್ನು ಶನಿ ಮತ್ತು ಹನುಮನಿಗೆ ಅರ್ಪಿಸಬೇಕು. ಅದನ್ನು ಅನುಸರಿಸಿದರೆ ಅದು  ಪವಿತ್ರವಾಗುತ್ತದೆ. ಸಕಾರಾತ್ಮಕ ಶಕ್ತಿ ಹೆಚ್ಚು ಕಾಣ ಸೀಗುತ್ತದೆ. ಈಗಾಗಲೇ ಮಣಿಕಟ್ಟಿನ ಮೇಲೆ ಹಳದಿ, ಕೆಂಪು ಹಾಗೂ ಕೇಸರಿ ಬಣ್ಣದ ದಾರವನ್ನು ಧರಿಸಿರುವವರು, ಕೈಯಲ್ಲಿ ಕಪ್ಪು ದಾರವನ್ನು ಕಟ್ಟಬಾರದು. ಕಪ್ಪು ದಾರ ಶನಿಯನ್ನು ಸಂಕೇತಿಸುವುದರಿಂದ ಗ್ರಹಗಳ ಚಲನೆ ಮತ್ತು ದಶಾ ವಿಶ್ಲೇಷಿಸಿದ ನಂತರವೇ ಅದನ್ನು ಧರಿಸಬೇಕು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ