ಕೂದಲು, ಚರ್ಮದ ಹೊಳಪು ಹೆಚ್ಚಾಗಬೇಕೇ? ಆಲುಗಡ್ಡೆ ಜ್ಯೂಸ್ ಉಪಯೋಗಿಸಿ!

  • by

ನಿಮ್ಮ ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿಸಲು ನೀವು ಬಯಸಿದ್ದೀರಾ.. ಹೌದು ಎಂದಾದರೆ, ಇದಕ್ಕಾಗಿ ನೀವು ಹೆಚ್ಚು ಕಷ್ಟ ಪಡುವ ಅಗತ್ಯವಿಲ್ಲ. ಯಾಕಂದ್ರೆ ಆಲುಗಡ್ಡೆ ಜ್ಯೂಸ್  ರಾಮಬಾಣವಾಗಬಲ್ಲದ್ದು. ನಿಮ್ಮ ಚರ್ಮ ಹಾಗೂ ಕೂದಲಿನ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಆಲುಗಡ್ಡೆ ಜ್ಯೂಸ್ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಆಲುಗಡ್ಡೆ ರಸವನ್ನು ಹೇರ್ ಹಾಗೂ ಸ್ಕಿನ್ ಗೆ ಹೇಗೆ ಉಪಯೋಗಿಸಬೇಕು ಎಂಬ ಬಗ್ಗೆ ಡಿಟೇಲ್ಸ್ ಇಲ್ಲಿದೆ. 


benefits, potatoes juice, skin, hair , 
ಚರ್ಮದ ಸಮಸ್ಯೆ,  ಆಲುಗಡ್ಡೆ ಜ್ಯೂಸ್ , ಪ್ರಯೋಜನಗಳು
38887484 – fresh organic raw potatoes with rosemary and garlic on a wooden rustic table

ನಿಮ್ಮ ಚರ್ಮದ ಮೇಲೆ ಮೊಡವೆ ಹಾಗೂ ಗುಳ್ಳೆಗಳು ಆಗಿದ್ದರೆ. ಅವುಗಳಿಂದ ಕಲೆಗಳು ಉಂಟಾಗಿದ್ದರೆ ನಿಮ್ಮ ಚರ್ಮಕ್ಕೆ ಆಲುಗಡ್ಡೆ ರಸವನ್ನು ಹಚ್ಚಬೇಕು. 

ಆಲುಗಡ್ಡೆಯ ಪೇಸ್ಟ್ ಹೇಗೆ ತಯಾರಿಸುವುದು?

1 ಬೌಲ್ ತೆಗೆದುಕೊಂಡು ಇದಕ್ಕೆ 1 ಟೀ ಸ್ಪೂನ್ ಆಲುಗಡ್ಡೆ ಜ್ಯೂಸ್, ಮತ್ತು 2 ಟೀ ಸ್ಪೂನ್ ನಿಂಬೆ ರಸ ಸೇರಿಸಿ. ನಂತರ ಇದಕ್ಕೆ ಸ್ವಲ್ಪ ಮುಲ್ತಾನಿ ಮಿಟ್ಟಿಯನ್ನು ಸೇರಿಸಿ , ಪೇಸ್ಟ್ ತಯಾರಿಸಿಕೊಳ್ಳಿ. 

ಉಪಯೋಗಿಸುವ ವಿಧಾನ!

ಮೊದಲು ಗುಲಾಬಿ ನೀರಿನಿಂದ ಮುಖವನ್ನು ಕ್ಲಿನ್ ಮಾಡಿಕೊಳ್ಳಬೇಕು. ನಂತರ ಮುಖವನ್ನು ನೀರಿನಿಂದ ತೊಳೆಯಬೇಕು. ಈ ಪೇಸ್ಟ್ ನ್ನು ಕಲೆಗಳಿಗಳಿರುವ ಚರ್ಮದ ಮೇಲೆ ಹಚ್ಚಿಕೊಳ್ಳಬೇಕು. ಅದು ಒಣಗುವವರೆಗೂ ಕುಳಿತುಕೊಳ್ಳಿ. ಸಾಧ್ಯವಾದರೆ, ಈ ಸಯಮದಲ್ಲಿ ಯಾರೊಟ್ಟಿಗೂ ಮಾತನಾಡಬೇಡಿ. ೧೫ ಹಾಗೂ 20 ನಿಮಿಷಗಳ ನಂತರ ನೀವು ನಿಮ್ಮ ಕೈಗಳನ್ನು ತೇವಗೊಳಿಸಿ ಮುಖದ ಸುತ್ತ ಕೈಯಾಡಿಸಬೇಕು. ನಂತರ ತಣ್ಣನೇಯ ನೀಪಿನಿಂದ ಉಜ್ಜಿಕೊಳ್ಳಿ. ನೀವು ಇದನ್ನು ಪ್ರತಿ ದಿನ ಅಥವಾ ವಾರಕ್ಕೆ 3-4 ಬಾರಿ ಉಪಯೋಗಿಸಬಹುದು. 


benefits, potatoes juice, skin, hair , 
ಚರ್ಮದ ಸಮಸ್ಯೆ,  ಆಲುಗಡ್ಡೆ ಜ್ಯೂಸ್ , ಪ್ರಯೋಜನಗಳು

ಆಲುಗಡ್ಡೆ ರಸವನ್ನು ಡಾರ್ಕ್ ಸರ್ಕಲ್ ಗೆ ಹೇಗೆ ಹಚ್ಚಿಕೊಳ್ಳಬೇಕು?

ಕೆಲಮೊಮ್ಮೆ ಡಾರ್ಕ್ ಸರ್ಕಲ್ ಗಳು ನಿಮ್ಮ ಮುಖದ ಸೌಂದರ್ಯವನ್ನು ಹಾಳು ಮಾಡುತ್ತವೆ. ನಿಮ್ಮ ಡಾರ್ಕ್ ಸರ್ಕಲ್ ನಿವಾರಿಸಲು ನೀವು ಬಯಸುವಿರಾದರೆ, ಇದಕ್ಕೆ ಆಲುಗಡ್ಡೆ ರಸ ಆರಾಮ ನೀಡುತ್ತದೆ. ಹಾಗೂ ಆಲುಗಡ್ಡೆ ರಸ ಕಣ್ಣಿನ ಸುತ್ತ ವಿರುವ ಡಾರ್ಕ್ ಸರ್ಕಲ್ ಗಳನ್ನು ನಿವಾರಿಸುವುದಲ್ಲದೇ. ಚರ್ಮದ ಸುಕ್ಕನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. 

ಹೇಗೆ ಉಪಯೋಗಿಸುವುದು? 

ಆಲುಗಡ್ಡೆ ರಸವನ್ನು ತೆಗೆದುಕೊಂಡು ಅದನ್ನು ಹತ್ತಿಯಲ್ಲಿ ಮುಳುಗಿಸಿ ೧೦-೧೫ ನಿಮಿಷಗಳ ಕಾಲ ನಿಮ್ಮ ಕಣ್ಣುಗಳ ಮೇಲೆ ಇರಿಸಿ , ಇಲ್ಲದಿದ್ದರೆ ಆಲುಗಡ್ಡೆಯನ್ನು ಕತ್ತರಿಸಿ ಕಣ್ಣಿನ ಮೇಲೆ ಇಟ್ಟುಕೊಳ್ಳಬಹುದು. 

ಅಲ್ಲದೇ, ಆಲುಗಡ್ಡೆ ರಸವನ್ನು ನಿಮ್ಮ ಕಣ್ಣಿಗೆ ಹಚ್ಚಿ ಸ್ವಲ್ಪ ಸಮಯ ನಿದ್ದೆ ಮಾಡಿ. ಇದು ನಿಮ್ಮ ಕಣ್ಣುಗಳನ್ನು ಸಡಿಲಗೊಳಿಸುತ್ತದೆ. ಮತ್ತು ನಿಮ್ಮ ಮನಸ್ಸಿಗೆ ರಿಲ್ಯಾಕ್ಸ್ ದೊರೆಯುತ್ತದೆ. ಇದನ್ನು ನೀವು ಮನೆ ಮದ್ದಾಗಿ ಬಳಸಬಹುದು. ಆದರೆ ನಿಮ್ಮ ಆಯಾಸವನ್ನು ಅಥವಾ ಪಾರ್ಟಿಗೆ ಹೋಗುವ ಮೊದಲು , ನೀವು ಇದನ್ನು ಉಪಯೋಗಿಸಿದರೆ ನ್ಯೂ ಲುಕ್ ನಿಮ್ಮದಾಗುತ್ತದೆ. 


benefits, potatoes juice, skin, hair , 
ಚರ್ಮದ ಸಮಸ್ಯೆ,  ಆಲುಗಡ್ಡೆ ಜ್ಯೂಸ್ ,

ಕೂದಲಿನ ಹೊಳಪು ಹೆಚ್ಚಿಸುತ್ತೆ ಆಲುಗಡ್ಡೆ ಜ್ಯೂಸ್!

ಪ್ರತಿಯೊಬ್ಬ ಮಹಿಳೆ ತನ್ನ ಕೂದಲು ಹೊಳೆಪಾಗಿ , ಉದ್ದನೇಯ, ಕಪ್ಪು ಬಣ್ಣದಾಗಿರಬೇಕು ಎಂದು ಬಯಸುತ್ತಾಳೆ. ಇನ್ನು ಮಾಲಿನ್ಯ ಒತ್ತಡ ಹಾಗೂ ಖಿನ್ನತೆಯಿಂದಾಗಿ ತಲೆಹೊಟ್ಟು ಸಮಸ್ಯೆಯಿಂದ ತಲೆ ಕೂದಲು ಉದರುವ ಸಮಸ್ಯೆ ಎಲ್ಲರಲ್ಲೂ ಕಂಡು ಬರುತ್ತದೆ.  ಈ ಸಮಯದಲ್ಲಿ ಆಲುಗಡ್ಡೆ ರಸ ಹಚ್ಚಿಕೊಳ್ಳುವುದರಿಂದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು!

ಹೇಗೆ ತಯಾರಿಸುವುದು..? 

ಕೆಲವು ಚಮಚ ಆಲುಗಡ್ಡೆ ರಸ , ಅಲೋವೆರಾ ಮತ್ತು ಟೀ ಸ್ಪೂನ್ ಜೇನುತುಪ್ಪವನ್ನು ಬೆರೆಸಿ, ಮನೆಯಲ್ಲೇ ಹೇರ್ ಮಾಸ್ಕ್ ತಯಾರಿಸಿಕೊಳ್ಳಿ. 

ಉಪಯೋಗಿಸುವುದು ಹೇಗೆ..?

ಕೂದಲಿನ ಬುಡಕ್ಕೆ ಈ ಹೇರ್ ಮಾಸ್ಕ್ ನ್ನು ಹಚ್ಚಿಕೊಳ್ಳಿ.. ನಿಮ್ಮ ಕೂದಲಿಗೆ ಸುಮಾರು 1 ಗಂಟೆ ಮಸಾಜ್ ಮಾಡಿ. ನಂತರ ಅದನ್ನು ಹಚ್ಚಿ, 2-3 ಗಂಟೆಗಳವರೆಗೂ ಬಿಡಿ. ನಂತರ ನೀರಿನಿಂದ ತೊಳೆದುಕೊಳ್ಳಿ.  ಮರುದಿನ ನೀವು ಶಾಂಪು ಬಳಸಿ, ತಲೆ ತೊಳೆದುಕೊಳ್ಳಬಹುದು. ಇದ್ರಿಂದ ಹೆಚ್ಚಿನ ಉಪಯೋಗ ಪಡೆದುಕೊಳ್ಳಬಹುದು. 

ಸ್ಕಿನ್ ಕ್ಲೀನಿಂಗ್ ಗೆ ಆಲುಗಡ್ಡೆ ಜ್ಯೂಸ್!

ಪ್ರತಿಯೊಬ್ಬ ಮಹಿಳೆ ಸ್ಕಿನ್ ಹೊಳಪು ಹೆಚ್ಚಿಸಲು ಎಷ್ಟೆಲ್ಲಾ ಪ್ರಯತ್ನ ಪಡುತ್ತಾರೆ. ಪಾರ್ಲರ್ ಗೆ ಹೋಗಿ ಫೇಶಿಯಲ್ ಹಾಗೂ ಮಸಾಜ್ ಹೋಗುತ್ತಾರೆ. ಕೆಲವರಿಗೆ ಪ್ರತಿ ಸಲ ಪಾರ್ಲರ್ ಗೆ ಹೋಗಲು ಆಗುವುದಿಲ್ಲ. ಅಂಥವರು ಮನೆಯಲ್ಲೇ ಆಲುಗಡ್ಡೆ ಜ್ಯೂಸ್ ಉಪಯೋಗಿಸಿ, ತ್ವಚೆಯ ಹೊಳೆಪು ಹೆಚ್ಚಿಸಿಕೊಳ್ಳಬಹುದು. 

ಆಲುಗಡ್ಡೆ ರಸವನ್ನು ಹೊರ ತೆಗೆದು, ಇದಕ್ಕೆ 2 ಟೀ ಸ್ಪೂನ್ ಚಮಚ ಹಸಿ ಹಾಲನ್ನು ಬೆರೆಸಿ ಚೆನ್ನಾಗಿ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. 

ಹೇಗೆ ಉಪಯೋಗಿಸುವುದು?

ಹತ್ತಿಯ ಸಹಾಯದಿಂದ ನಿಮ್ಮ ಮುಖ ಹಾಗೂ ಕುತ್ತಿಗೆಗೆ ಇದನ್ನು ಹಚ್ಚಿಕೊಳ್ಳಬೇಕು. 20 ನಿಮಿಷಗಳ ನಂತರ ತೊಳೆಯಬೇಕು. ವಾರದಲ್ಲಿ 3 ಬಾರಿ ಇದನ್ನು ಹಚ್ಚಿಕೊಂಡರೆ ಮುಖದ ಮೇಲೆ ವ್ಯತ್ಯಾಸ ಕಂಡು ಬರುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ