ಆಲಿವ್ ಎಣ್ಣೆ- ಉದ್ದನೆಯ ಕೂದಲಿಗಾಗಿ..!

  • by

ಉದ್ದನೆಯ ಕೂದಲಿಗಾಗಿ ಆಲೀವ್ ಆಯಿಲ್
ಉದ್ದನೆಯ ಸುಂದರ ಕೂದಲು ಸೌಂದರ್ಯದ ಸಂಕೇತವಾಗಿದೆ. ನಿಮ್ಮ ಕೂದಲು ಆರೋಗ್ಯಕರವಾಗಿ
ಸುಂದರವಾಗಿದ್ದರೆ ಅದು ಎಲ್ಲರ ಕಣ್ಣನ್ನು ಆಕರ್ಷಿಸುತ್ತದೆ. ಆಲಿವ್ ತೈಲವು ಕೂದಲಿಗೆ ಹಲವಾರು
ಲಾಭಗಳನ್ನು ನೀಡುತ್ತದೆ. ಆಲಿವ್ ತೈಲವು ಕೂದಲಿಗೆ ಕಾಂತಿ, ಮೃಧುತ್ವ, ಕೂದಲಿನ ಪ್ರಮಾಣವನ್ನು
ಹೆಚ್ಚಿಸುವುದು. ಈ ಎಣ್ಣೆಯಲ್ಲಿ ಇರುವಂತಹ ಕೆಲವೊಂದು ಅಂಶಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು.
ಇದರಲ್ಲಿ ಮುಖ್ಯವಾಗಿ ಒಲೀಕ್ ಆಮ್ಲ, ಪಾಲ್ಮಿಟಿಕ್ ಆಮ್ಲ, ಸ್ಕ್ವಾಲೀನ್ ಇದೆ. ಕೂದಲಿನ
ಆರೋಗ್ಯವನ್ನು ಇದು ಸುಂದರಗೊಳಿಸುತ್ತದೆ. ಕೂದಲನ್ನು ನಯವಾಗಿಸುವ ಮತ್ತು ಮೊಶ್ಚಿರೈಸ್
ಮಾಡುವ ಗುಣ ಹೊಂದಿವೆ. ಆಲಿವ್ ತೈಲವು ಕೂದಲನ್ನು ಬಲಗೊಳಿಸಿ ಮೊಶ್ಚಿರೈಸ್ ಕಾಪಾಡುವುದು.
ಕೂದಲಿಗೆ ಆಲಿವ್ ತೈಲವನ್ನು ಹಚ್ಚಿಕೊಂಡ ಬಳಿಕ ಬರುವಂತಹ ಕಾಂತಿಯು ಕೂದಲಿನ ಹೊರಭಾಗವನ್ನು
ನಯಗೊಳಿಸುವ ಕಾರಣದಿಂದಾಗಿ ಬರುವುದು. ಇದನ್ನು ದಿನನಿತ್ಯವು ಬಳಕೆ ಮಾಡಿಕೊಳ್ಳಬೇಕು ಮತ್ತು
ನಿಮ್ಮ ಕೂದಲಿನ ಆರೈಕೆಯಲ್ಲಿ ಬಳಸಿಕೊಳ್ಳಬೇಕು.

ತಲೆಬುರುಡೆಯು ಒಣಗಿದ್ದರೆ ಮತ್ತು ಚರ್ಮವು ಸೀಳುಬಿಟ್ಟಿದ್ದರೆ ಆಗ ತಲೆಹೊಟ್ಟು ಸಮಸ್ಯೆಯು
ಬರುವುದು. ಲಿಂಬೆಯು ತಲೆಹೊಟ್ಟನ್ನು ಸಡಿಲಗೊಳಿಸಿದರೆ, ಆಲಿವ್ ತೈಲವು ಚರ್ಮದ ಹೊಸ ಮತ್ತು
ಕಿತ್ತುಹಾಕಿದ ಬಳಿಕದ ಚರ್ಮವನ್ನು ಮೊಶ್ಚಿರೈಸ್ ಮಾಡುವುದು. ನೀವು ಲಿಂಬೆರಸ, ಆಲಿವ್ ತೈಲ ಮತ್ತು
ನೀರನ್ನು ಸಮಾನ ಪ್ರಮಾಣದಲ್ಲಿ ಹಾಕಿಕೊಂಡು ಬಳಕೆ ಮಾಡಿ. ಇದನ್ನು ತಲೆಬುರುಡೆಗೆ ಸುಮಾರು 20
ನಿಮಿಷ ಕಾಲ ಮಸಾಜ್ ಮಾಡಿ. ಇದರ ಬಳಿಕ ಶಾಂಪೂ ಹಾಕಿಕೊಂಡು ತೊಳೆಯಿರಿ. ಎರಡು ವಾರಕ್ಕೊಮ್ಮೆ
ನೀವು ಈ ತಲೆಹೊಟ್ಟು ನಿವಾರಣೆ ಮಾಡುವ ವಿಧಾನವನ್ನು ಬಳಸಿಕೊಳ್ಳಬಹುದು.

ಚಳಿಗಾಲದಲ್ಲಿ ಕೂದಲು ತುಂಡಾಗುವುದು, ಸೀಳುವುದು ಮತ್ತು ಒರಟಾಗುವುದು ಸಾಮಾನ್ಯ
ಸಂಗತಿಯಾಗಿದೆ. ಈ ವೇಳೆ ನೀವು ಕೂದಲಿಗೆ ಆಲಿವ್ ತೈಲವನ್ನು ಬಳಸಿಕೊಂಡರೆ ಆಗ ಕೂದಲು ತುಂಬಾ
ನಯ, ತೂಕ ಮತ್ತು ಮೊಶ್ಚಿರೈಸ್ ಪಡೆದುಕೊಂಡು ಸಮಸ್ಯೆ ರಹಿತವಾಗುವುದು. ನೀವು ಕೂದಲು
ಬಾಚಿಕೊಂಡ ಬಳಿಕ ಆಲಿವ್ ತೈಲವನ್ನು ಕೈಬೆರಳಿಗೆ ಹಾಕಿಕೊಂಡು ಅದನ್ನು ಕೂದಲಿಗೆ ಸರಿಯಾಗಿ
ಹಚ್ಚಿಕೊಳ್ಳಿ. ಆಲಿವ್ ತೈಲವು ಕೂದಲಿಗೆ ಮೊಶ್ಚಿರೈಸರ್ ನ್ನು ಉಂಟು ಮಾಡುವುದು ಮತ್ತು
ಕಾಂತಿಯುತವಾಗಿ ಹೊಳೆಯುವಂತೆ ಮಾಡುವುದು. ಇದು ರಾಸಾಯನಿಕ ಮುಕ್ತವಾಗಿದ್ದು, ವಿಟಮಿನ್ ಎ, ಇ
ಮತ್ತು ಆಂಟಿಆಕ್ಸಿಡೆಂಟ್ ಗಳನ್ನು ಹೊಂದಿದೆ. ಇದು ಕೂದಲಿನಲ್ಲಿ ಕೆರಟಿನ್ ನ್ನು ಕಾಪಾಡುವುದು ಮತ್ತು
ಮೊಶ್ಚಿರೈಸ್ ನ್ನು ಉಳಿಸುವುದು. ಕೂದಲಿನ ಬೆಳವಣಿಗೆಗೆ ಅಡ್ಡಿಯಾಗುವಂತಹ ಮೇಧೋಗ್ರಂಥಿ ಸ್ರಾವದ
ಜಮೆಯಾಗಿರುವುದನ್ನು ಇದು ತೆಗೆಯುವುದು ಮತ್ತು ಕೂದಲು ಬೆಳವಣಿಗೆಯಾಗಲು ನೆರವಾಗುವುದು.

ಕೆಲವೊಂದು ಸಲ ಕೂದಲು ತುಂಬಾ ನಿಸ್ತೇಜವಾಗಿ ಕಾಣಿಸುವುದು. ಇದು ಗುಂಗುರು ಕೂಡ ಆಗಿರಲ್ಲ.
ಆದರೆ ಇದನ್ನು ಬೇಕಾದಂತೆ ಬಾಚಿಕೊಳ್ಳುವುದು ತುಂಬಾ ಕಷ್ಟ. ಇದಕ್ಕೆ ಮುಖ್ಯ ಕಾರಣ ಸರಿಯಾದ
ಪೋಷಣೆಯು ಕೂದಲಿಗೆ ಸಿಗದೆ ಇರುವುದು. ಬಿಸಿ ಎಣ್ಣೆಯ ಚಿಕಿತ್ಸೆಯನ್ನು ಕೂದಲಿಗೆ ಬಳಸಿಕೊಳ್ಳಿ.
ಅದರಲ್ಲೂ ಆಲಿವ್ ತೈಲವನ್ನು ಬಳಸಿಕೊಂಡು ಕೂದಲಿನ ಆರೈಕೆ ಮಾಡಿದರೆ ಅದರ ನಿರ್ವಹಣೆ
ಸಾಧ್ಯವಾಗುವುದು. ಅರ್ಧ ಕಪ್ ಆಲಿವ್ ತೈಲವನ್ನು ಕೂದಲಿಗೆ ಹಚ್ಚಿಕೊಳ್ಳಿ. ಹಾಗೆ 30 ನಿಮಿಷ ಬಿಡಿ.
ಇದರ ಬಳಿಕ ಶಾಂಪೂ ಹಚ್ಚಿಕೊಂಡರೆ ಆಗ ನಿಮ್ಮ ಕೂದಲಿಗೆ ಒಳ್ಳೆಯ ಮೊಶ್ಚಿರೈಸರ್ ಸಿಗುವುದು. ಆಲಿವ್
ತೈಲವು ಕೂದಲಿನ ಬೆಳವಣಿಗೆಗೆ ನೆರವಾಗುವುದು ಮಾತ್ರವಲ್ಲದೆ, ಇದು ತಲೆಬುರುಡೆಯ ಆರೋಗ್ಯ,
ಶಿಲೀಂಧ್ರ ವಿರುದ್ಧ ಹೋರಾಟ ಮತ್ತು ಬ್ಯಾಕ್ಟೀರಿಯಾ ನಾಶ ಮಾಡಿ ರಕ್ತ ಸಂಚಾರವನ್ನು
ಸುಗಮಗೊಳಿಸುವುದು. ರಕ್ತಸಂಚಾರವು ಉತ್ತಮವಾದರೆ ಆಗ ಕಿರುಚೀಲಗಳು ಉತ್ತೇಜಿಸಲ್ಪಡುವುದು
ಮತ್ತು ಇದರಿಂದ ಕೂದಲು ತುಂಬಾ ದಪ್ಪ ಮತ್ತು ಆರೋಗ್ಯವಾಗುವುದು. ನಿಯಮಿತವಾಗಿ ಆಲಿವ್
ತೈಲವನ್ನು ಬಳಸಿಕೊಂಡರೆ ಅದರಿಂದ ಕೂದಲಿನ ಕಾಂತಿಯನ್ನು ಮರಳಿ ಪಡೆಯಬಹುದು. ಕೂದಲಿಗೆ
ಆಲಿವ್ ತೈಲವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವುದು ಕೂಡ ಅಷ್ಟೇ ಅಗತ್ಯವಾಗಿರುವುದು.

ಆಲಿವ್ ತೈಲವು ಕೂದಲು ಉದುರುವಿಕೆ ತಡೆಯುವುದು ಮತ್ತು ಪರಿಹರಿಸುವುದು. ಆಲಿವ್ ತೈಲದಿಂದ
ಸಂಪೂರ್ಣ ತಲೆಬುರುಡೆಗೆ ನೆರವಾಗುವುದು. ಸೀಳು ಮತ್ತು ಒಣ ತಲೆಬುರುಡೆಗೆ ಆಲಿವ್ ತೈಲವು
ನೆರವಾಗುವುದು. ಕೂದಲನ್ನು ಇದು ನಯ ಹಾಗೂ ಕಾಂತಿಯುತವಾಗಿಸುವುದು. ಆಲಿವ್ ತೈಲದ ಮಸಾಜ್
ನಿಂದ ತಲೆಬುರುಡೆಯಲ್ಲಿ ರಕ್ತಸಂಚಾರವನ್ನು ಸುಗಮಗೊಳಿಸುವುದು. ಕೂದಲನ್ನು ನಯವಾಗಿಸಲು
ಆಲಿವ್ ತೈಲ ಬಳಸಿ. ಇದು ನೈಸರ್ಗಿಕವಾಗಿ ಕಂಡೀಷನಿಂಗ್ ಮಾಡುವುದು. ಸಿಲಿಕಾನ್ ಇರುವಂತಹ
ಕಂಡೀಷನರ್ ಬಳಸುವ ಬದಲು ಪ್ರತೀ ವಾರ ಆಲಿವ್ ತೈಲ ಬಳಸಿದರೆ ಆಗ ಕೂದಲು ಕೆಲವೇ ವಾರಗಳಲ್ಲಿ
ನಯವಾಗುವುದು. ಕೂದಲು ಉದುರುವಿಕೆಗೆ ಮುಖ್ಯ ಕಾರಣವೆಂದರೆ ಡೈಹೈಡ್ರೊಟೆಸ್ಟೊಸ್ಟೆರಾನ್
ಉತ್ಪಾದನೆ. ಈ ಹಾರ್ಮೋನ್ ಕೂದಲು ಕೋಶಕದ ಮೇಲೆ ಆಕ್ರಮಿಸಿ ದುರ್ಬಲಗೊಳಿಸುತ್ತದೆ. ಆಗ
ಕೂದಲು ಉದುರಲು ಶುರುವಾಗುತ್ತದೆ. ಆಲಿವ್ ಎಣ್ಣೆಯನ್ನು ನಿಯಮಿತವಾಗಿ ಬಳಸುವುದರಿಂದ
ಡಿಎಚ್‌ಟಿ ಉತ್ಪಾದನೆ ನಿರ್ಬಂಧಿಸಲು ಸಹಾಯ ಮಾಡುತ್ತದೆ. ಕೂದಲು ಉದುರುವುದು
ಕಡಿಮೆಯಾಗುತ್ತದೆ. ಆಲಿವ್ ಎಣ್ಣೆಯಲ್ಲಿ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿದ್ದು, ಅದು ನೆತ್ತಿ
ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಹಾಗೆಯೇ ಹಾನಿಯಾಗದಂತೆ
ತಡೆಯುತ್ತದೆ. ಆಲಿವ್ ಎಣ್ಣೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಕಿರುಚೀಲಗಳಿಗೆ ಬೇಕಾದ ಅಗತ್ಯ
ಪೋಷಕಾಂಶಗಳನ್ನು ಒದಗಿಸುತ್ತದೆ. ತೇವಾಂಶವಿರುವಂತೆ ಕಾಪಾಡಿ, ಶುಷ್ಕತೆಯನ್ನು ತಡೆಯುತ್ತದೆ.

ಆಲಿವ್ ಎಣ್ಣೆ ಶುಷ್ಕತೆಯನ್ನು ತಡೆಯುವುದರಿಂದ ಕವಲೊಡೆಯುವಿಕೆ ಕಡಿಮೆ ಮಾಡುವ ಮೂಲಕ ನಿಮ್ಮ
ಕೂದಲು ದಪ್ಪವಾಗಿ ಮತ್ತು ಉದ್ದವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಒಮೆಗಾ -6
ಕೊಬ್ಬಿನಾಮ್ಲಗಳು ಇದರಲ್ಲಿ ಸಮೃದ್ಧವಾಗಿರುವುದರಿಂದ ಕೂದಲು ಉದುರದಂತೆ ನೋಡಿ ಕೊಳ್ಳುತ್ತದೆ.

ಆಲಿವ್ ಎಣ್ಣೆಯಲ್ಲಿ ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇದು ತುರಿಕೆ,
ತಲೆಹೊಟ್ಟು, ಮುಚ್ಚಿಹೋಗಿರುವ ಕಿರುಚೀಲಗಳಂತಹ ಸಮಸ್ಯೆಗಳನ್ನು ಎದುರಿಸಿ, ಉಲ್ಬಣಗೊಂಡ
ಸಮಸ್ಯೆಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ತಲೆಹೊಟ್ಟು ಮತ್ತು ಮುಚ್ಚಿಹೋಗಿರುವ
ಕಿರುಚೀಲಗಳು ಕೂದಲು ಉದುರುವಿಕೆಗೆ ಪ್ರಮುಖ ಕಾರಣ ಎಂಬುದನ್ನು ನೆನಪಿನಲ್ಲಿಡಿ. ಆಲಿವ್ ಎಣ್ಣೆ
ಬಳಸುವುದು ಹೇಗೆ? ಹೀಗೆ ಸಾಧ್ಯವಾದಷ್ಟು ಆಲೀವ್ ಎಣ್ಣೆಯನ್ನು ಇತರ ಎಣ್ಣೆಯೊಂದಿಗೆ ಮಿಶ್ರ ಮಾಡಿ
ಬಳಸಿದರೆ ಖಂಡಿತ ಪ್ರಯೋಜನ ದೊರೆಯುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ