ಡಾಬರ್ ಆಮ್ಲಾ- ನಿಮಗೆಷ್ಟು ಗೊತ್ತು..?

  • by

ಡಾಬರ್ ಆಮ್ಲ ಆಯಿಲ್ ಹೇರ್ ಆಯಿಲ್
ಡಾಬರ್ ಆಮ್ಲ ಹೇರ್ ಆಯಿಲ್ ನಿಮ್ಮ ಕೂದಲಿಗೆ ಪೋಷಣೆಯನ್ನು ನೀಡುವುದರ ಜೊತೆಗೆ
ಇದು ಕೂದಲಿನ ಬುಡಗಳನ್ನು ಗಟ್ಟಿಗೊಳಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಅಧಿಕವಾಗಿದೆ.
ಇದು ಕೂದಲನ್ನು ಸ್ವಚ್ಛಗೊಳಿಸುವುದರ ಜೊತೆಗೆ ಕೂದಲು ಉದ್ದ ಮತ್ತು ದಪ್ಪನಾಗಿ
ಬೆಳೆಯಲು ಸಹಕಾರಿಯಾಗಿದೆ. ಇನ್ನು ಕೂದಲು ಉದುರುವುದು, ತಲೆಹೊಟ್ಟು, ಸೀಳು
ಕೂದಲು, ಕೂದಲಿನ ನಿಸ್ತೇಜ ಕಳೆ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಇದು ನಿವಾರಿಸಲಿದೆ.
ವಾತಾವರಣದಿಂದ ನಿಮ್ಮ ಕೂದಲು ಕಳೆಗುಂದುತ್ತಿದೆ ಎಂಬ ಚಿಂತೆ ನಿಮ್ಮನ್ನು ಕಾಡಿದಲ್ಲಿ ಈ
ಎಣ್ಣೆ ದಿ ಬೆಸ್ಟ್ ಎಂದೆನಿಸಿದೆ.

ಈ ಎಣ್ಣೆಯಲ್ಲಿ ಪ್ರಧಾನವಾಗಿ ಬಳಸಿರುವ ಅಂಶಗಳೆಂದರೆ ಮಿನರಲ್ ಆಯಲ್, ವೆಜಿಟೇಬಲ್
ಅಯಿಲ್, ಆಮ್ಲ, ಹಳದಿ ಬಣ್ಣ, ಹಸಿರು, ಕೆಂಪು ಬಣ್ಣ, ಪರ್ಫ್ಯೂಮ್, ಟಿಬಿಎಚ್‌ಕ್ಯು.
ಆಮ್ಲದಲ್ಲಿ (ನೆಲ್ಲಿಕಾಯಿ) ವಿಟಮಿನ್ ಸಿ ಹೇರಳವಾಗಿದ್ದು ಇದು ನಿಮ್ಮನ್ನು ಸ್ವಚ್ಛಗೊಳಿಸಿ
ಆರೋಗ್ಯವನ್ನು ನೀಡುತ್ತದೆ. ಇದು ಕೂದಲಿನ ಬುಡವನ್ನು ಪೋಷಣೆ ಮಾಡುತ್ತದೆ ಮತ್ತು
ಸದೃಢವಾಗಿ ಬೆಳೆಯುವಂತೆ ಮಾಡುತ್ತದೆ. ಮಿನರಲ್ ಆಯಿಲ್ ನಿಮ್ಮ ಕೂದಲನ್ನು
ಹೈಡ್ರೇಟ್ ಆಗಿ ಇರಿಸುತ್ತದೆ. ಇದು ಕೂದಲಿಗೆ ಹೊಳಪನ್ನು ನೀಡುತ್ತದೆ. ವೆಜಿಟೇಬಲ್
ಆಯಿಲ್ ಅಂದರೆ ಕ್ಯಾನೊಲಾ ಆಯಿಲ್ ಇದರಲ್ಲಿದ್ದು ಇದರಲ್ಲಿರುವ ತೆಂಗಿನೆಣ್ಣೆ ಕೂದಲಿನ
ಉದುರುವಿಕೆ, ಡ್ಯಾಂಡ್ರಫ್ ನಿವಾರಕವಾಗಿದೆ. ಇದು ಹಾನಿಗೊಳಗಾದ ಕೂದಲನ್ನು
ಮಾಯಿಶ್ಚರೈಸ್ ಮಾಡಿ ಕೂದಲಿನ ಬುಡವನ್ನು ಬಲಗೊಳಿಸುತ್ತದೆ. ಇದು ಕೂದಲು ಬೇಗನೇ
ಬೆಳೆಯುವಂತೆ ಕೂಡ ಮಾಡುತ್ತದೆ.

ಎಣ್ಣೆಯನ್ನು ಕೂದಲಿಗೆ ಹಚ್ಚುವುದು ಹೇಗೆಂದರೆ ವೃತ್ತಾಕಾರವಾಗಿ ಎಣ್ಣೆಯನ್ನು ಕೂದಲಿಗೆ
ಮಸಾಜ್ ಮಾಡಿ. ನಿಮ್ಮ ಬೆರಳುಗಳ ಸಹಾಯದಿಂದ ನಿಧಾನವಾಗಿ ಕೂದಲಿನ ಎಳೆ ಎಳೆಯನ್ನು
ನವುರಾಗಿ ಸವರಿ. ರಾತ್ರಿಪೂರ್ತಿ ಎಣ್ಣೆಯನ್ನು ಹಾಗೆಯೇ ಬಿಡಿ ಮರುದಿನ ಕೂದಲನ್ನು
ತೊಳೆದುಕೊಳ್ಳಿ. ಕೂದಲಿನ ನರೆತ ಮತ್ತು ಕೂದಲು ಒರಟಾಗಿದ್ದರೆ ಈ ಎಣ್ಣೆ ಸೂಕ್ತವಾಗಿದೆ.
ಡಾಬರ್ ಆಮ್ಲ ಹಿಂದಿನಿಂದಲೂ ಮಾರ್ಕೆಟ್‌ನಲ್ಲಿ ಹೆಚ್ಚು ಮಾರಾಟವಾಗುತ್ತಿರುವ

ಬ್ರ್ಯಾಂಡ್ ಎಂದೆನಿಸಿದ್ದು ಮಹಿಳೆಯರು ಮತ್ತು ಪುರುಷರು ಈ ಆಯಿಲ್ ಅನ್ನು
ಬಳಸುತ್ತಿದ್ದಾರೆ.

ಈ ಎಣ್ಣೆಯೊಂದಿಗೆ ಕೂದಲಿನ ಪೋಷಣೆಯನ್ನು ಮಾಡಲು ನೀವು ಆದಷ್ಟು ಕೂದಲು
ಪೋಷಿಸಲು ಬೇಕಾದ ಇತರ ಸಲಹೆಗಳನ್ನು ಪಾಲಿಸಲೇಬೇಕು. ಕೂದಲಿಗೆ ಎಣ್ಣೆ ಹಚ್ಚು
ಮುನ್ನ ಅದನ್ನು ಕೊಂಚ ಬಿಸಿ ಮಾಡಿ ನಂತರ ಕೂದಲಿಗೆ ಹಚ್ಚಿ. ವಾರಕ್ಕೆ ಎರಡು ಬಾರಿ ಎಣ್ಣೆ
ಹಚ್ಚವುದನ್ನು ಮರೆಯದಿರಿ. ರಾತ್ರಿ ಪೂರ್ತಿ ಎಣ್ಣೆ ಕೂದಲಿನಲ್ಲಿರಲಿ. ಶವರ್ ಕ್ಯಾಪ್ ಹಾಕಿ
ರಾತ್ರಿ ಮಲಗಿಕೊಳ್ಳಿ. ಮರುದಿನ ಬೆಳಗ್ಗೆ ಮೃದುವಾದ ಶ್ಯಾಂಪೂ ಬಳಸಿ ಕೂದಲನ್ನು
ತೊಳೆದುಕೊಳ್ಳಿ. ಎಣ್ಣೆ ಹಚ್ಚುವ ಮುನ್ನ ಕೂದಲಿನ ಸಿಕ್ಕುಗಳನ್ನು ಆದಷ್ಟು ಬೆರಳುಗಳ
ಸಹಾಯದಿಂದ ಬಿಡಿಸಿಕೊಳ್ಳಿ. ಕೂದಲಿನ ಬುಡಕ್ಕೆ ಎಣ್ಣೆಯನ್ನು ಹಚ್ಚಿ. ಕೂದಲನ್ನು ಅಡಿ
ಮೇಲು ಮಾಡಿಕೊಂಡು ಎಣ್ಣೆ ಹಚ್ಚಿ ಇದರಿಂದ ಬುಡಕ್ಕೆ ರಕ್ತಪ್ರಸಾರವುಂಟಾಗುತ್ತದೆ. ಎಣ್ಣೆ
ತೆಗೆಯಲು ಮೈಲ್ಡ್ ಶ್ಯಾಂಪೂ ಇಲ್ಲವೇ ಹರ್ಬಲ್ ಶ್ಯಾಂಪೂವಿನ ಬಳಕೆಯನ್ನು ಮಾಡಿ.

ವಾರಕ್ಕೊಮ್ಮೆ ಹೇರ್ ಪ್ಯಾಕ್‌ಗಳನ್ನು ಹಚ್ಚಿಕೊಳ್ಳಿ. ಮೊಟ್ಟೆ ಮತ್ತು ಆಲೀವ್ ಆಯಿಲ್
ಹೇರ್ ಪ್ಯಾಕ್, ಮೆಂತ್ಯ ಹೇರ್ ಪ್ಯಾಕ್, ಮೊಸರು, ನೆಲ್ಲಿಕಾಯಿ ಆರ್‌ಪ್ಯಾಕ್ ಹೀಗೆ ಬೇರೆ
ಬೇರೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಹೇರ್ ಪ್ಯಾಕ್‌ಗಳಿದ್ದು ಇದು ನಿಮ್ಮ ಕೂದಲಿಗೆ
ಅಗತ್ಯ ಪೋಷಕಾಂಶಗಳನ್ನು ಕೂಡ ಒದಗಿಸುತ್ತದೆ. ಮೆಂತ್ಯ ಮತ್ತು ಮೊಸರು
ಕೂದಲಿನಲ್ಲಿರುವ ಡ್ಯಾಂಡ್ರಫ್, ತಲೆಹೊಟ್ಟು ಮೊದಲಾದ ಸಮಸ್ಯೆಗಳನ್ನು ನಿವಾರಿಸಿ
ಕೂದಲನ್ನು ಮೃದುವಾಗಿಸುತ್ತದೆ.ತಲೆ ತುರಿಕೆಯ ಸಮಸ್ಯೆಗೂ ಇದು ಸೂಕ್ತ ಮದ್ದಾಗಿದೆ.
ಮೊಟ್ಟೆಯ ಬಿಳಿ ಭಾಗ ಮತ್ತು ಆಲೀವ್ ಎಣ್ಣೆಯನ್ನು ಮಿಶ್ರ ಮಾಡಿ ಕೂದಲಿಗೆ
ಹಚ್ಚುವುದರಿಂದ ಕೂದಲು ಹೊಳಪು ಪಡೆದುಕೊಂಡು ರೇಷ್ಮೆಂತೆ ನುಣುಪಾಗುತ್ತದೆ.
ಇದಲ್ಲದೆ ಮನೆಯಲ್ಲೇ ನೈಸರ್ಗಿಕ ಹೇರ್ ಆಯಿಲ್‌ಗಳನ್ನು ನೀವು ತಯಾರಿಸಬಹುದು.
ದಾಸವಾಳದ ಹೂವು, ತಿಮರ್, ಗರಿಕೆ, ದಾಸವಾಳದ ಎಲೆ, ತುಳಸಿ ಮೊದಲಾದ
ಆಯುರ್ವೇದೀಯ ಅಂಶಗಳುಳ್ಳ ವಸ್ತುಗಳನ್ನು ಜಜ್ಜಿ ಇಲ್ಲವೇ ಪೇಸ್ಟ್ ರೂಪದಲ್ಲಿ
ಮಾಡಿಕೊಳ್ಳಿ. ಸುಮಾರು ಒಂದು ಕಪ್‌ನಷ್ಟು ನೀವು ಕೂದಲಿಗೆ ಹಚ್ಚುವ ಎಣ್ಣೆಯಲ್ಲಿ ಈ
ಮಿಶ್ರಣಗಳನ್ನು ಬೆರೆಸಿ. ಎಣ್ಣೆ ಚೆನ್ನಾಗಿ ಕಾಯಲಿ. ಎಣ್ಣೆ ತಣ್ಣಗಾದ ನಂತರ ಇದನ್ನು ನಿಮ್ಮ

ಕೂದಲಿಗೆ ಹಚ್ಚಿಕೊಳ್ಳಿ. ಈ ಎಣ್ಣೆಯನ್ನು ನೀವು ಸ್ಟೋರ್ ಕೂಡ ಮಾಡಿಡಬಹುದು.
ಎಣ್ಣೆಗೆ ಸುವಾಸನೆ ಬರಲು ನೀವು ಪಚ್ಚೆ ಕರ್ಪೂರವನ್ನು ಬಳಸಬಹುದು.

ಇದಲ್ಲದೆ ಕೂದಲಿನ ಪೋಷಣೆಗೆ ಆದಷ್ಟು ಆಯುರ್ವೇದೀಯ ನೈಸರ್ಗಿಕ ಅಂಶವುಳ್ಳ
ಶ್ಯಾಂಪೂವಿನ ಬಳಕೆಯನ್ನು ಮಾಡಿ. ಮನೆಯಲ್ಲೇ ದಾಸವಾಳದ ಗಿಡ ಇತ್ತೆಂದರೆ ಅದರ
ಎಲೆಯನ್ನು ಜಜ್ಜಿ ಅದರ ಲೋಳೆಯಿಂದ ಕೂದಲಿಗೆ ಕಂಡೀಷನರ್ ತಯಾರಿಸಿಕೊಳ್ಳಬಹುದು.
ಇನ್ನು ಲೋಳೆಸರ ಅಲೊವೇರಾವನ್ನು ಕೂಡ ಕೂದಲಿಗೆ ಕಂಡೀಷನರ್ ರೀತಿಯಲ್ಲಿ
ಬಳಸಿಕೊಳ್ಳಬಹುದಾಗಿದೆ. ಆದಷ್ಟು ನೈಸರ್ಗಿಕ ರೀತಿಯಲ್ಲಿ ಕೂದಲಿನ ಪೋಷಣೆಯನ್ನು
ಮಾಡುವುದರಿಂದ ಕೂದಲಿಗೆ ಯಾವುದೇ ಹಾನಿಯುಂಟಾಗುವುದಿಲ್ಲ. ಇನ್ನು ಕೂದಲಿನ
ಸ್ವಾಸ್ಥ್ಯಕ್ಕೆ ನೀವು ಹೆಚ್ಚು ಹೆಚ್ಚು ನೀರು ಕುಡಿಯಬೇಕು. ಇದರಿಂದ ಕೂದಲಿಗೆ ಹೆಚ್ಚಿನ
ಪೋಷಣೆ ದೊರೆಯುತ್ತದೆ. ಇನ್ನು ನೀವು ಸೇವಿಸುವ ಆಹಾರದಲ್ಲಿ ಪ್ರೊಟೀನ್, ವಿಟಮಿನ್,
ಅಂಶ ಇರುವುದನ್ನು ಖಚಿತಪಡಿಸಿಕೊಳ್ಳಿ. ಹೆಚ್ಚು ಹೆಚ್ಚು ಸೊಪ್ಪು, ತರಕಾರಿಗಳ
ಸೇವನೆಯನ್ನು ಮಾಡಿ. ಇದರಿಂದ ನಿಮ್ಮ ಕೂದಲು ಸೊಂಪಾಗಿ ಬೆಳೆಯುತ್ತದೆ.
ಕೂದಲಿನಲ್ಲಿರುವ ಯಾವುದೇ ಸಮಸ್ಯೆಗಳನ್ನು ಸೊಪ್ಪು ತರಕಾರಿಗಳಲ್ಲಿರುವ ಅಂಶಗಳು
ಕೂಡಲೇ ಸರಿಪಡಿಸಿ ಕೂದಲಿಗೆ ಬೇಕಾದ ಪೋಷಣೆಯನ್ನು ಒದಗಿಸುತ್ತದೆ. ಕೂದಲಿಗೆ ಎಣ್ಣೆ
ಹಚ್ಚುವ ಮುನ್ನ ಸೂಕ್ತ ವಿಧಾನಗಳನ್ನು ಅನುಸರಿಸಿ. ಕೂದಲಿಗೆ ಬೇಕಾದ ನ್ಯೂಟ್ರಿನ್
ಪ್ರೊಟೀನ್ ಅಂಶಗಳನ್ನು ಒದಗಿಸಲು ನೀವು ಸೂಕ್ತ ಆಹಾರಗಳನ್ನು ತೆಗೆದುಕೊಳ್ಳಬೇಕು.

ಕೂದಲಿಗೆ ಬೇಕಾದ ನೈಸರ್ಗಿಕ ಅಂಶಗಳನ್ನು ಒದಗಿಸಲು ಇವು ಸಹಕಾರಿಯಾಗಿದೆ. ಇದರಿಂದ
ಕೂದಲಿಗೆ ಬೇಕಾದ ಪೋಷಣೆ ದೊರೆಯುತ್ತದೆ ಮತ್ತು ಇದರಿಂದ ಕೂದಲು ಉದ್ದವಾಗಿ
ಆಕರ್ಷಕವಾಗಿ ಬೆಳೆಯುತ್ತದೆ. ಹಣ್ಣು ತರಕಾರಿಗಳಲ್ಲಿರುವ ಪೋಷಕ ಅಂಶಗಳು ಕೂದಲಿಗೆ
ಬೇಕಾದ ಪೋಷಣೆಯನ್ನು ಒದಗಿಸುತ್ತದೆ. ಆದಷ್ಟು ಹೆಚ್ಚು ಹೆಚ್ಚು ನೀರು ಕುಡಿದು
ಕೂದಲಿನ ಸಂರಕ್ಷಣೆ ಮಾಡಬೇಕು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ