ದೊಡ್ಡಪತ್ರೆಯ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು..!

  • by

ಭಾರತದ ಮಲಬಾರ ತೀರ ಸೇರಿದಂತೆ ಕರ್ನಾಟಕದ ಹೆಚ್ಚಿನ ಕಡೆ ದೊಡ್ಡಪತ್ರೆಯನ್ನು ಚೆನ್ನಾಗಿ ಬೆಳೆಯುತ್ತಾರೆ. ದೊಡ್ಡ ಪತ್ರೆ ಮನೆಯ ಹಿತ್ತಲಿನಲ್ಲಿ ನೆಟ್ಟು ಬೆಳೆಸುವುದರಿಂದ ಉಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮನೆ ಗಳಲ್ಲಿ ದೊಡ್ಡ ಪತ್ರೆ ಕಂಡು ಬರುತ್ತದೆ. ಇದನ್ನು ಸಾಂಬಾರ ಬಳ್ಳಿ. ಕರ್ಪೂರವಳ್ಳಿ ಎಂದು ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ. ದೊಡ್ಡ ಪತ್ರೆಯ ಗಿಡ, ಹಾಗೂ ಎಲೆಗಳು ಮನುಷ್ಯನ ನಾನಾ ಸಮಸ್ಯೆಗಳನ್ನು ನಿವಾರಿಸಬಲ್ಲದ್ದು. ಹಾಗೂ ಔಷಧೀಯ ಗುಣಗಳನ್ನು ಒದಗಿಸುತ್ತದೆ.  ದೊಡ್ಡ ಪತ್ರೆ ಹೆಚ್ಚು ನೀರಿನಂಶದಿಂದ ಕೂಡಿದ್ದು, ಔಷಧೀಯ ಗುಣಗಳಿಂದ ಕೂಡಿದೆ. 

ದೊಡ್ಡ ಪತ್ರೆ ಹಲವು ಆರೋಗ್ಯಕಾರಿ ಪ್ರಯೋಜನಗಳನ್ನು ಒಳಗೊಂಡಿದೆ. 

benefits , Mexican mint, 
ದೊಡ್ಡಪತ್ರೆಯ, ಆರೋಗ್ಯ ಪ್ರಯೋಜನ,

ಕಫ ಸಮಸ್ಯೆ ನಿವಾರಿಸಲು..!

ಕಷಾಯ ಮಾಡಿ ಕುಡಿದರೆ ಕೆಮ್ಮು , ಕಫ ನಿವಾರಣೆ. ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡು ಬರುವ ಕಫ, ಉಬ್ಬಸ, ನಿವಾರಣೆಗೆ ಇದನ್ನು ಬಳಸಲಾಗುತ್ತದೆ. ಗಿಡದಿಂದ ಎಲೆಗಳನ್ನು ತೆಗೆದು ಚೆನ್ನಾಗಿ ತೊಳೆದು ಬೆಂಕಿಯಲ್ಲಿ ಬಾಡಿಸಿಕೊಂಡು ಮಕ್ಕಳ ಎದೆಗೆ ಶಾಖ ಕೊಡಬೇಕು. 

ಮಕ್ಕಳಿಗೆ ಜ್ವರ ಬಂದಾಗ ಎಲೆಯನ್ನು ಬಾಡಿಸಿ ನೆತ್ತಿಯ ಮೇಲೆ ಇಡುತ್ತಾರೆ. 

ತುಳಸಿ ಎಲೆಯನ್ನು  ಅರೆದು ಅದರ ರಸ ತೆಗೆದು ಜೇನುತುಪ್ಪದೊಂದಿಗೆ ಬೆರೆಸಿ ಕುಡಿದರೆ ನೆಗಡಿ ನಿವಾರಣೆಯಾಗುತ್ತದೆ. 

ಜೀರ್ಣಶಕ್ತಿಗೆ ಸಹಕಾರಿ

ದೊಡ್ಡಪತ್ರೆಯ ಎಲೆಯನ್ನು ತಿಂದರೆ ಜೀರ್ಣಶಕ್ತಿ ಹೆಚ್ಚಾಗುತ್ತದೆ. ಇದರ ಎಲೆಯನ್ನು ಜಜ್ಜಿ ವಾಸನೆ ಸೇವಿಸಿದರೆ ಕಟ್ಟಿದ ಮೂಗು ನಿವಾರಣೆಯಾಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಇದನ್ನು ಸೇವಿಸಬಹುದು. ಅಲ್ಲದೇ ದೊಡ್ಡಪತ್ರೆ ದೇಹದ ವಿಷವನ್ನು ಹೊರ ಹಾಕಲು ಸಹಾಯ ಮಾಡುತ್ತದೆ. 

benefits , Mexican mint, 
ದೊಡ್ಡಪತ್ರೆಯ, ಆರೋಗ್ಯ ಪ್ರಯೋಜನ,

ಇದ್ರಿಂದ ಹಲವು ಜನರು ಚಟ್ನಿ , ತಂಬುಳಿ ಮಾಡಿಕೊಂಡು ಸೇವಿಸುತ್ತಾರೆ. ಇದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. 

ಇದು ಸ್ನಾಯುಗಳ ನೋವಿಗೆ ಪ್ರಮುಖ ಪಾತ್ರವಹಿಸುತ್ತದೆ. ಗರ್ಭಾಶಯದ ಸ್ನಾಯುಗಳು ಮತ್ತು ಕರುಳುಗಳನ್ನು ತೀಕ್ಷ್ಣಗೊಳಿಸುತ್ತದೆ. ತಾಜಾ ಎಲೆಗಳ ಜ್ಯೂಸ್ ಅಲರ್ಜಿ ಸಮಸ್ಯೆಗಳನ್ನು ನಿವಾರಿಸುತ್ತದೆ. 

ಇದು ದೇಹದ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಪ್ರೇರಿಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. 

ದೊಡ್ಡ ಪತ್ರೆಯ ತಂಬುಳಿ ಮಾಡುವ ವಿಧಾನ..

ದೊಡ್ಡ ಪತ್ರೆಯನ್ನು ಚೂರು ಚೂರಾಗಿ ಹೆಚ್ಚಿ,. ಬಾಣಲೆಯಲ್ಲಿ ಹುರಿಯಬೇಕು. ನಂತರ ೧ ಚಮಚ ತುಪ್ಪ, ಅರ್ಧ ಚಿಟಿಕೆ ಜೀರಿಕೆ ಹುಡಿ. ಅರ್ಧ ಚಮಚ ಮೆಣಸಿನ ಪುಡಿ ಹಾಕಿ ಹುರಿಯಬೇಕು. ಹುರಿದ ದೊಡ್ಡಪತ್ರೆ ಎಲೆ,. ಜೀರಿಗೆನ್ನು ಮಿಕ್ಸಿಯಲ್ಲಿ ಹಾಕಿ ತಿರುಗಿಸಬೇಕು. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕಡೆದ ಮಜ್ಜಿಗೆ ಯನ್ನು ಸೇರಿಸಿ , ಒಣ ಮೆಣಸಿನ ಒಗ್ಗರಣೆಯನ್ನು ಹಾಕಿದಾಗ ತಂಬುಳಿ ಸವಿಯಲು ಸಿಧ್ಧ. 

ಉಸಿರಾಟದ ತೊಂದರೆಗೆ 

ನೀವು ಶೀತ, ಗಂಟಲು ನೋವು , ಉಸಿರುಗಟ್ಟುವಿಕೆ ಬಳಲುತ್ತಿದ್ದರೆ, ಇದರ ಎಲೆಗಳಿಂದ ಚಹಾವನ್ನು ತಯಾರಿಸಬಹುದು. ಸೈನಸ್ ಸಮಸ್ಯೆಗಳನ್ನು ನಿವಾರಿಸಲು ಇದು ಸಹಕಾರಿಯಾಗಿದೆ. ಅಲ್ಲದೇ ಬ್ಯಾಕ್ಟೇರಿಯಾ, ಇತರ ರೋಗಕಾರಕ ಗಳನ್ನು ತೊಡೆದುಹಾಕಲು ಇದನ್ನು ಬಳಸಲಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 

ಎಸ್ಟಿಮಾ, ಸೋರಿಯಾಸಿಸ್ , ಉರಿಯೂತ ಮುಂತಾದ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ತುರಿಕೆ ಸಮಸ್ಯೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

ಒಮೆಗಾ – ೬ ಸಾರಭೂತ ತೈಲದ ರೂಪದಲ್ಲಿ ದೊಡ್ಡಪತ್ರೆಯನ್ನು ಬಳಸಲಾಗುತ್ತದೆ. ಸಂಧಿವಾತವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.  ಕ್ರೀಡಾ ಪಟುಗಳಿಗೆ ಕೀಲು ನೋವು ಮತ್ತು ಮೊಳೆಗಳ ನೋವನ್ನು ನಿವಾರಿಸುತ್ತದೆ. ಇಲ್ಲದೇ ಒತ್ತಡ ನಿವಾರಣೆಗೆ ಪ್ರಮುಖ ಪಾತ್ರ ವಹಿಸುತ್ತದೆ. 

ವಿಟಮಿನ್ ಸಿ ಮತ್ತು ಎ 

ದೊಡ್ಡ ಪತ್ರೆಯಲ್ಲಿ ವಿಟಮಿನ್ ಸಿ ಮತ್ತು ಎ ಅಂಶ ಅಧಿಕವಾಗಿದ್ದು, ಇದು ದೃಷ್ಟಿ ದೋಷವನ್ನು ನಿವಾರಿಸುತ್ತದೆ. ಮೂತ್ರಪಿಂಡದ ಆರೋಗ್ಯಕ್ಕೂ ಇದು ಉತ್ತಮವಾದದ್ದು, ದೇಹದಲ್ಲಿ ಹೆಚ್ಚುವರಿ ಉಪ್ಪಿನ ಅಂಶ ಹಾಗೂ ಕೊಬ್ಬನ್ನು ನಿಯಂತ್ರಿಸುತ್ತದೆ. 

ದೊಡ್ಡಪತ್ರೆ ಆತಂಕ ಹಾಗೂ ಒತ್ತಡವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಗಿಡದ ಮೂಲಿಕೆಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದನ್ನು ವಿಶೇಷವಾಗಿ ಚಹಾದ ರೂಪದಲ್ಲಿ ಸೇವಿಸಲಾಗುತ್ತದೆ. ಮನಸ್ಸಿಗೆ ಶಾಂತಿ, ನೆಮ್ಮದಿ ಪ್ರಚೋದಿಸಲು ಸಹಕಾರಿಯಾಗಿದೆ. ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸ್ತನ ಕ್ಯಾನ್ಸರ್ ಗೆ ಚಿಕಿತ್ಸೆಯಾಗಿ ಇದನ್ನು ಬಳಸಲಾಗುತ್ತದೆ. 

ಚರ್ಮದ ಸೋಂಕು ನಿವಾರಣೆಗೆ ದೊಡ್ಡಪತ್ರೆ ಪ್ರಮುಖ ಪಾತ್ರ ವಹಿಸುತ್ತದೆ. ಉರಿ , ಬಾವು ಹಾಗೂ ತುರಿಕೆ ಸಮಸ್ಯೆಇರುವವರು ಇದನ್ನು ನಿವಾರಿಸಬಹುದು. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ