ಹೇರ್, ಕೈಗಷ್ಟೇ ಅಲ್ಲ.. ಚರ್ಮದ ಸಮಸ್ಯೆ ನಿವಾರಿಸುತ್ತೆ ಮೆಹಂದಿ!

  • by

ಗೋರಂಟಿ ಲಿತ್ರೇಸೀ ಕುಟುಂಬಕ್ಕೆ ಸೋರಿದ ಸಸ್ಯ. ಈ ಸಸ್ಯ ಆಫ್ರೀಕಾ ಮತ್ತು ನೈರುತ್ಯ ಏಷ್ಯದ ಮೂಲವಾಸಿ. ಇದನ್ನು ಅಲಂಕಾರಕ್ಕಾಗಿಯೂ ಬಳಸುವವರು. ಬಣ್ಣಕ್ಕಾಗಿ ಹೆಣ್ಣು ಮಕ್ಕಳು ಇದರ ಎಲೆಗಳನ್ನು ನೀರಿನಲ್ಲಿ ಅರೆದು ಕೈ ಕಾಲುಗಳಿಗೆ ಚಿತ್ರಕಾರವಾಗಿ ಹಚ್ಚುವರು. ಆದ್ರೆ ಕೈಗಳು, ಹಾಗೂ ಕೂದಲನ್ನು ಸುಂದರವಾಗಿಸುವುದಷ್ಟೇ ಅಲ್ಲ, ಹಲವು ಪ್ರಯೋಜನಗಳನ್ನು ಮೆಹಂದಿ ಪಡೆದುಕೊಂಡಿದೆ. ಅನೇಕ ಚರ್ಮ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. 

health benefits , Henna , hair , skin , 
 ಚರ್ಮದ ಸಮಸ್ಯೆ, ಟಿಪ್ಸ್,  ಮೆಹಂದಿ,

ತಲೆಹೊಟ್ಟಿಗೆ ವಿದಾಯ!

ತಲೆಹೊಟ್ಟು ಸಮಸ್ಯೆ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುತ್ತದೆ. ಇದು ನೆತ್ತಿಯಲ್ಲಿ ಉಂಟಾಗುವ ತುರಿಕೆ ಸಮಸ್ಯೆಯನ್ನು ನಿವಾರಿಸುತ್ತದೆ. ಗೋರಂಟಿ , ನಿಂಬೆ ಮತ್ತು ಮೊಸರು ಬೆರೆಸಿ ಹಚ್ಚಿ, ಎರಡಲ್ಲಿ ವಿಷಯಗಳಲ್ಲಿ ಆಮ್ಲೀಯವಾಗಿದ್ದು, ತುರಿಕೆ, ತಲೆಹೊಟ್ಟು ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ. ವಾರಕ್ಕೊಮ್ಮೆ ಕೂದಲಿಗೆ ಗೋರಂಟಿ ಹಚ್ಚಿ…ಇದು ತುರಿಕೆ. ತಲೆಹೊಟ್ಟು ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ. ವಾರಕ್ಕೊಮ್ಮೆ ಕೂದಲಿಗೆ ಗೋರಂಟಿ ಹಚ್ಚಿ

ಮೂತ್ರಪಿಂಡದ ಕಲ್ಲುಗಳನ್ನು ನಿವಾರಿಸಲು!

ಬದಲಾದ ಜೀವನಶೈಲಿಯಿಂದ ಕಾಯಿಲೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಹೊಟ್ಟೆಯಲ್ಲೂ ಕಲ್ಲಿನ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತದೆ. ಇದಕ್ಕೆ ಸಂಜೀವಿನಿಯಂತೆ ಪಾತ್ರವಹಿಸುತ್ತದೆ. ಮೆಹಂದಿ ಆಮ್ಲ ಹೆಚ್ಚಾಗಿರುವುದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳನ್ನು ಬೆಳೆಯಲು ಇದು ಬೀಡುವುದಿಲ್ಲ. 50 ಗ್ರಾಂ ಗೋರಂಟಿ ಎಲೆಗಳನ್ನು ಪುಡಿ ಮಾಡಿ, ಅರ್ಧ ಲೀಟರ್ ನೀರಿನಲ್ಲಿ ಪುಡಿ ಮಾಡಿ ಮಿಶ್ರಣ ಮಾಡಿ. ಬಳಿಕ ಕುದಿಸಿ. ಜರಡಿ ಹಿಡಿದು ಮತ್ತು ಕುಡಿಯಿರಿ. ಇದನ್ನು ಕುಡಿಯುವುದರಿಂದ ಮಾಡುವುದರಿಂದ ಮೂತ್ರಪಿಂಡದ ಕಾಯಿಲೆಗಳು ಗುಣವಾಗುತ್ತದೆ. ಈ ಕಲ್ಲಿನ ಸಮಸ್ಯೆ ಇರುವುದಿಲ್ಲ. ಈ ಕಷಾಯವನ್ನು ಒಂದು ತಿಂಗಳ ಕಾಲ ಕುಡಿಯುವುದರಿಂದ ಪ್ರಯೋಜನವಾಗುತ್ತದೆ. 

health benefits , Henna , hair , skin , ಚರ್ಮದ ಸಮಸ್ಯೆ, ಟಿಪ್ಸ್,  ಮೆಹಂದಿ,

ನೋವಿಗೆ ಮುಲಾಮು ಒದಗಿಸುತ್ತದೆ!

ಚರ್ಮ ಉಬ್ಬಿದ್ದರೆ ಉರಿಯೂತ ಉಂಟಾಗಿದ್ದರೆ, ಅದರ ಮೇಲೆ ಹಚ್ಚುವುದರಿಂದ ಪರಿಹಾರ ಒದಗುತ್ತದೆ. ಅದರ ಎಲೆಗಳನ್ನುಪುಡಿ ಮಾಡಿ, ನೋವಿರುವ ಜಾಗಕ್ಕೆ ಹಚ್ಚುವುದರಿಂದ ನೋವಿಗೆ ಪರಿಹಾರ ಸೀಗುತ್ತದೆ.  

ಹೊಟ್ಟೆ ಕಾಯಿಲೆಗಳನ್ನು ದೂರ ಮಾಡುತ್ತದೆ!

ಕಾಮಾಲೆ ರೋಗಯನ್ನು ಗುಣಪಡಿಸುವಲ್ಲಿ ಗೋರಂಟಿ ಬೀಜಗಳನ್ನು ಪುಡಿ ಮಾಡಿ ಬಳಸಲಾಗುತ್ತದೆ. ಇದ್ರಿಂದ ದೇಹದಲ್ಲಿ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಆಮಶಂಕೆಯಿಂದ ಬಳಲುತ್ತಿರುವವರಿಗೆ ಇದು ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತದೆ. ಮೆಹಂದಿ ಬೀಜಗಳನ್ನು ಪುಡಿ ಮಾಡಿ ತುಪ್ಪದೊಂದಿಗೆ ಬೆರೆಸಿ ಸಣ್ಣ ಉಂಡೆ ಮಾಡಿಕೊಂಡು, ನೀರಿನೊಂದಿಗೆ ಸೇವಿಸಬೇಕು. ಅಲ್ಲದೇ, ಹೊಟ್ಟೆಗೆ ಸಂಬಂಧಿತ ಕಾಯಿಲೆಗಳನ್ನು ಇದು ನಿವಾರಿಸುತ್ತದೆ. 

ಲಿವರ್ ತೊಂದರೆಯಿಂದ ಬಳಲುತ್ತಿರುವವವರು ಮೆಹಂದಿ ಗಿಡದ ಬೇರಿನ ತುಂಡನ್ನು ನೀರಿನಲ್ಲಿ ಬೇಯಿಸಿ, ಡಿಕಾಕ್ಷನ್ ತಯಾರಿಸಿ, ದಿನಕ್ಕೆ ಎರಡು ಬಾರಿ ಸೇವಿಸಿದರೆ ಪರಿಣಾಮಕಾರಿಯಾಗಿದೆ. 

ಇನ್ನು ಮೆಹಂದಿಯ ಹೂವನ್ನು ವಿನಿಗರ್ ನೊಂದಿಗೆ ಬೆರೆಸಿ ಮುಲಾಮು ತಯಾರಿಸಿಕೊಂಡು, ಹಣೆಗೆ ಹಚ್ಚಿದರೆ ಅತಿಯಾಗಿ ಕಾಡುವ ತಲೆ ನೋವು ಮಾಯವಾಗುತ್ತದೆ.  ಗಂಟಲು ಬೇನೆ ಹೊಂದಿದ್ದರೆ ಡಿಕಾಕ್ಷನ್ ಸೇವಿಸುವುದು ಉತ್ತಮ, ಡಿಕಾಕ್ಷನ್ ನ್ನು ಗಂಟಲಿಗೆ ಹಾಕಿಕೊಂಡು ಮುಕ್ಕಳಿಸಿದರೆ ಆದಷ್ಟು ಬೇಗ ಗುಣ ಮುಖವಾಗುತ್ತದೆ. ಮೆಹಂದಿ ಎಲೆಗಳನ್ನು ಕಜ್ಜಿ, ಹುಣ್ಣು ಮತ್ತು ಸುಟ್ಟ ಗಾಯಗಳಿಗೆ ಗುಣಪಡಿಸಲು ಉಪಯೋಗಿಸುತ್ತಾರೆ. 

ಮೆಹಂದಿ ಹೂವನ್ನು ವಿನಿಗರ್ ನೊಂದಿಗೆ ಬೆರೆಸಿ ಮುಲಾಮು ತಯಾರಿಸಿಕೊಂಡು ಹಣೆಗೆ ಹಚ್ಚಿದರೆ ಅತಿಯಾಗಿ ಕಾಡುವ ತಲೆನೋವು ಕಡಿಮೆ ಯಾಗುತ್ತದೆ. ನಿಮ್ಮ ಮನೆಯ ಮುಂದೆಯೇ , ಹಿಂಭಾಗದಲ್ಲೋ ಸ್ವಲ್ಪ ಜಾಗ ಇದ್ದರೆ ಸಾಕು, ಅಲ್ಲಿ ಮೆಹಂದಿ ಗಿಡವನ್ನು ನೆಡಿ. ಬಹುಪಯೋಗಿ ಮೆಹಂದಿ ಯಾವ ಕಾಲಕ್ಕೆ ಬೇಕಾದ್ರು ಸಹಾಯಕ್ಕೆ ಬರುತ್ತದೆ. ಸೂರ್ಯನ ಶಾಖದಿಂದ ಉಂಟಾಗುವ ತಲೆ ನೋವನ್ನು ಗುಣಪಡಿಸುತ್ತದೆ. ವಿನಿಗರ್ ನಲ್ಲಿ ನೆನೆಯಿಸಿದ ಮೆಹಂದಿ ಹೂವುಗಳಿಂದ ಮಾಡಿದ ಪ್ಲಾಸ್ಟರ್ ಅನ್ನು ಹಣೆಗೆ ಹಚ್ಚಿಕೊಳ್ಳುವುದರಿಂದ ತಲೆ ನೋವು ನಿವಾರಣೆಯಾಗುತ್ತದೆ.

health benefits , Henna , hair , skin , ಚರ್ಮದ ಸಮಸ್ಯೆ, ಟಿಪ್ಸ್,  ಮೆಹಂದಿ,

ಸಂಧಿವಾತ ನಿವಾರಿಸುತ್ತದೆ!

ಗೋರಂಟಿ ಕೇವಲ ಕೈಗಳಿಗೆ ಮಾತ್ರವಲ್ಲ, ನರಗಳನ್ನು ತಂಪಾಗಿಸುತ್ತದೆ. ದೇಹ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಹೀಗಾಗಿ ಸಂಧಿವಾತದ ಲಕ್ಷಣಗಳಿಂದ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡುತ್ತದೆ. 

ಆರೋಗ್ಯಕರ ಒಸಡುಗಳಿಗೆ ಮೆಹಂದಿ ಸಹಾಯ ಮಾಡುತ್ತದೆ. ಇದರ ಎಲೆಗಳನ್ನು ಅಗಿಯುವುದರಿಂದ ಒಸಡು ಕಾಯಿಲೆಗಳ ಅಪಾಯವನ್ನು ತಗ್ಗಿಸುತ್ತದೆ. ಬಾಯಿ ಹುಣ್ಣಿಗೆ ಚಿಕಿತ್ಸೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಜ್ವರವನ್ನು ನಿವಾರಿಸುತ್ತದೆ…!

ಮೆಹಂದಿ ಎಲೆಗಳನ್ನು ಬಳಸುವುದರಿಂದ ಜ್ವರ ನಿವಾರಿಸಬಹುದು. ಎಲೆಗಳನ್ನು ನೀರಿನ ಜತೆಗೆ ಉಂಡೆ ಮಾಡಿ, ಕೈಯಲ್ಲಿ ಹಿಡಿಯುವುದರಿಂದ ಜ್ವರ ಕಡಿಮೆಯಾಗುತ್ತದೆ. 

ತಲೆಯಲ್ಲಿ ಹೇನು ಹಾಗೂ ಸೀರುಗಳಿದ್ದರೆ, ಗೋರಂಟಿ ಸೋಪ್ಪನ್ನು ಹಚ್ಚುವುದರಿಂದ ಕಡಿಮೆಯಾಗುತ್ತದೆ. ಹಸಿ ಹಾಗೂ ಒಣಗಿದ 1 ಹಿಡಿ ಗೋರಂಟಿ ಸೊಪ್ಪನ್ನು ತೆಗೆದುಕೊಂಡು ಸ್ವಲ್ಪ ನೀರು ಬೆರೆಸಿ, ನುಣ್ಣಗೆ ಅರೆದು 2 ಗ್ರಾಂ ಆರತಿ ಕರ್ಪೂರವನ್ನು ಸೇರಿಸಿ,ಚೆನ್ನಾಗಿ ಮಿಶ್ರ ಮಾಡಿ ತಲೆಗೆ ಹಚ್ಚಬೇಕು. ಹಸಿ ಅಥವಾ ಒಣಗಿದ 1 ಹಿಡಿ ಗೋರಂಟಿ ಸೊಪ್ಪನ್ನು ನುಣ್ಣಗೆ ಅರೆದು ಸ್ವಲ್ಪ ಕರ್ಪೂರ ಮತ್ತು ಆಲಿವ್ ಎಣ್ಣೆಯನ್ನು ಬೆರೆಸಿ ತಲೆ ಕೂದಲಿಗೆ ಹಚ್ಚಬೇಕು ಇದ್ರಿಂದ ಹೇನು, ಸೀರುಗಳು ನಾಶವಾಗುತ್ತವೆ. 

ಬಿಳಿ ತೊನ್ನು ಮತ್ತಿತರ ಚರ್ಮ ವ್ಯಾಧಿಗೆ

ಗೋರಂಟಿ ಸಸ್ಯದ ಮೂಲಿಕೆಯಲ್ಲಿ ರಕ್ತ ಶುದ್ಧಿ ಮಾಡುವ ಗುಣವಿದೆ. 10 ಗ್ರಾಂ ಗೋರಂಟಿ ಬೀಜಗಳನ್ನು ನಯವಾಗಿ ಅರೆದು ಚೂರ್ಣ ಮಾಡಬೇಕು. ಅರ್ಧ ಟೀ ಚಮಚ ಚೂರ್ಣಕ್ಕೆ ಅರ್ಧ ಸಕ್ಕರೆ ಪುಡಿ ಸೇರಿಸಿ ಸೇವಿಸುವುದು. ಹೀಗೆ ನಲವತ್ತು ದಿವಸ,ಒಂದು ಟೀ ಚಮಚ ಗೋರಂಟಿ ಬೀಜಗಳನ್ನು ನಿಂಬೆ ರಸದಲ್ಲಿ ಅರೆದು, ಹೊರಗೆ ಲೇಪಿಸುವುದು. ಸ್ವಲ್ಪ ಶ್ರೀಗಂಧವನ್ನು ನೀರಿನಲ್ಲಿ ತೇದು ನೀರಿನಲ್ಲಿ ಕದಡಿ ಸೇವಿಸುವುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ