ಕೂದಲನ್ನು ಬಿಸಿ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಲಾಭಗಳು..! – (benefits of hair spa at home with this hot oil treatment )

  • by

ಬಿಸಿ ಎಣ್ಣೆಯಿಂದ ಹೇರ್ ಮಸಾಜ್ ಮಾಡುವುದರಿಂದ ಲಾಭಗಳು ಒರಟು, ಶುಷ್ಕ ಮತ್ತು ನಿರ್ವಹಿಸಲಾಗದ ಕೂದಲಿನ ಸಮಸ್ಯೆ ಎದುರಿಸುತ್ತಿದ್ದಾರೆ…? ಹೌದು ಎಂದಾದರೆ ಚಿಂತೆ ಮಾಡಬೇಕಾಗಿಲ್ಲ. ಸ್ಪಾ ತರಹದ ಪ್ರಯೋಜನಗಳನ್ನು ಪಡೆಯಲು ಮನೆಯಲ್ಲೇ ಬಿಸಿ ಎಣ್ಣೆಯ ಚಿಕಿತ್ಸೆಯನ್ನು ಪ್ರಯತ್ನಿಸಿ. ನಯವಾದ ಮತ್ತು ಹೊಳೆಯುವ ಕೂದಲನ್ನು ಪಡೆಯಲು ನಾವೆಲ್ಲರೂ ಬಯಸುತ್ತೇವೆ. ಅಲ್ಲವೇ? ಸಾಮಾನ್ಯವಾಗಿ ಹೇರ್ ಬಗ್ಗೆ ಕಾಳಜಿ ವಹಿಸಿದರೆ ಸಾಕು.ಅನೇಕ ಮಹಿಳೆಯರು ಹಾಗೂ ಯುವತಿಯರು ಬಿಸಿ ಎಣ್ಣೆ ಚಿಕಿತ್ಸೆಯನ್ನ ಫಾಲೋ ಮಾಡುತ್ತಿದ್ದಾರೆ. ಇದರಿಂದ ಅನೇಕ ಗುಣಮಟ್ಟ ಮತ್ತು ಹೊಳಪು ಕೂದಲು ನಿಮ್ಮದಾಗುತ್ತದೆ.

benefits, hair spa, hot oil treatment ,ಆರೋಗ್ಯ ಪ್ರಯೋಜನ, ಬಿಸಿ ಎಣ್ಣೆ ಮಸಾಜ್ , ಕೂದಲು

ಬಿಸಿ ಎಣ್ಣೆಯಿಂದ ಕೂದಲನ್ನು ಮಸಾಜ್ ಮಾಡುವುದರಿಂದ ಬಲವಾದ ಹಾಗೂ ಹೊಳಪಾದ ಕೂದಲನ್ನು ಪಡೆಯುವಲ್ಲಿ ನೆರವಾಗುತ್ತದೆ. ನೀವು ಇಷ್ಟಪಡುವ ಯಾವುದೇ ನೈಸರ್ಗಿಕ ಎಣ್ಣೆಯನ್ನು ನೀವು ಸೆಲೆಕ್ಟ್ ಮಾಡಿಕೊಳ್ಳಬಹುದು. ಕೊಬ್ಬರಿ ಎಣ್ಣೆ, ಸಾಕಷ್ಟು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಸುಲಭ ಕೈಗೆಟುಕುವ ದರದಲ್ಲಿ ಲಭ್ಯವಿದೆ. ಆಲಿವ್ ಎಣ್ಣೆ, ಬಾದಾಮಿ ಎಣ್ಣೆ , ಜೊಜೊಬಾ ಎಣ್ಣೆ ಅಥವಾ ಕ್ಯಾಸ್ಟರ್ ಆಯಿಲ್ ನಿಂದ ಆಯ್ಕೆ ಮಾಡಬಹುದು.

ಬಿಸಿ ಎಣ್ಣೆಯ ಚಿಕಿತ್ಸೆಯಿಂದ ಪ್ರಯೋಜನಗಳು

ಸಲೂನ್ ಗಳಲ್ಲಿ ಬಿಸಿ ಎಣ್ಣೆಯ ಚಿಕಿತ್ಸೆಯನ್ನು ಪಡೆಯಬಹುದು. ಆದರೆ ನಿಮ್ಮ ಮನೆಯ ನೈಸರ್ಗಿಕ ವಸ್ತುಗಳಿಂದಲೂ ಸಹ ಹೇರ್ ಮಸಾಜ್ ಮಾಡಿಕೊಳ್ಳಬಹುದು. ನೀವು ಅದನ್ನು ಹೇಗೆ ನಿರ್ವಹಿಸುತ್ತೀರಿ ಎಂದು ಮುಖ್ಯವಾಗುತ್ತದೆ. ಮೊದಲು ನಿಮ್ಮ ಕೂದಲನ್ನು ಸ್ವಚ್ಛವಾಗಿ ತೊಳೆಯಿರಿ. ನಂತಪ ಮೈಕ್ರೋವೇವ್ ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ.

ಕೂದಲನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ, ನಿಮ್ಮ ನೆತ್ತಿಯ ಮೇಲೆ ಎಣ್ಣೆ.ನ್ನು ಚೆನ್ನಾಗಿ ಹಚ್ಚಿ, ನಿಧಾನವಾಗಿ ಮಸಾಜ್ ಮಾಡಿ.
ಎಣ್ಣೆ ತಲೆಗೆ ಹಚ್ಚುವ ಮೊದಲು ಎಣ್ಣೆ ಜಾಸ್ತಿ ಬಿಸಿಯಾಗಿದೆಯೇ ಎಂಬುದನ್ನು ಪರೀಕ್ಷಿಸಿ.

ನಂತರ ಶವರ್ ಕ್ಯಾಪ್ ಅಥವಾ ಟವೆಲ್ ನಿಂದ 30 ನಿಮಿಷಗಳ ಕಾಲ್ ಕವರ್ ಮಾಡಿ.3 ನಿಮಿಷಗಳ ನಂತರ ನಿಮ್ಮ ಕೂದಲನ್ನು ಶಾಂಪು ಅಥವಾ ಕಂಡೀಷನರ್ ಬಳಸಿ ತೊಳೆಯಿರಿ. ತುಂಬಾ ಒರಟಾದ ಕೂದಲನ್ನು ಹೊಂದಿದ್ದರೆ, ವಾರಕ್ಕೆ 2 ಬಾರಿ ಈ ಚಿಕಿತ್ಸೆಯನ್ನು ಪುನರಾವರ್ತಿಸಬಹುದು.

ಶವರ್ ಕ್ಯಾಪ್ ನಿಂದ ಕೂದಲನ್ನು ಕವರ್ ಮಾಡಿದಾಗ ತಲೆಗೆ ಹಚ್ಚಿದ ಎಣ್ಣೆ ಆಳವಾಗಿ ಹೋಗಲು ನೆರವಾಗುತ್ತದೆ. ಇದು ನಿಮ್ಮ ಕೂದಲನ್ನು ಪೋಷಿಸುವುದಲ್ಲದೇ,ನೆತ್ತಿಯನ್ನು ತೇವಗೊಳಿಸುತ್ತದೆ. ಕೂದಲಿನ ಶುಷ್ಕತೆಯನ್ನು ನಿವಾರಿಸುತ್ತದೆ. ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಕೂದಲು ಸರಿಯಾದ ಪೋಷಣೆಯೊಂದಿಗೆ , ಬಲಗೊಳ್ಳುತ್ತದೆ. ಮತ್ತು ಕೂದಲು ಉದರುವುದನ್ನು ತಡೆಗಟ್ಟಬಹುದು.
ಬಿಸಿ ಎಣ್ಣೆಯಿಂದ ಕೂದಲನ್ನು ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ. ಇದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಬಹುದು.

benefits, hair spa, hot oil treatment ,ಆರೋಗ್ಯ ಪ್ರಯೋಜನ, ಬಿಸಿ ಎಣ್ಣೆ ಮಸಾಜ್ , ಕೂದಲು

ಆದ್ದರಿಂದ ನಿಮ್ಮ ಕೂದಲಿಗೆ ಹೆಚ್ಚು ಅಗತ್ಯವಿರುವ ಬಿಸಿ ಎಣ್ಣೆಯ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು.ದೈನಂದಿನ ಬ್ಯೂಸಿ ಲೈಫ್ ನಲ್ಲೂ ಬಿಸಿ ಎಣ್ಣೆಯಿಂದ ಮಸಾಜ್ ಮಾಡುವ ಮೂಲಕ ಕೂದಲಿನ ತಲೆಹೊಟ್ಟು ಸಮಸ್ಯೆ , ಕೂದಲು ಶುಷ್ಕತೆ ಹಾಗೂ ಕೂದಲಿಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ. ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡುವುದು ಕಷ್ಟದ ಕೆಲಸವೇನಲ್ಲ. ಆದರೆ ಕೂದಲನ್ನು ಬಿಸಿ ಎಣ್ಣೆಯಿಂದ ಮಸಾಜ್ ಮಾಡಿದರೆ, ಕೂದಲಿನ ಹೊಳಪು ಹಾಗೂ ಬಲಗೊಳ್ಳಲು ನೆರವಾಗುತ್ತದೆ.

ಕೂದಲಿನ ಬೆಳವಣಿಗೆ ಮೇಲೆ ಅನೇಕ ಅಂಶಗಳು ಪರಿಣಾಮ ಬೀರುತ್ತವೆ. ಕೇವಲ ಆಹಾರ ಮಾತ್ರ ಕಾರಣವಲ್ಲ, ಅತಿಯಾದ ಒತ್ತಡದಿಂದಾಗಿಸ ಕೂದಲಿನ ಬೆಳವಣಿಗೆಯೂ ನಿಲ್ಲಬಹುದು. ಬಿಸಿ ಎಣ್ಣೆಯಿಂದ ಮಸಾಜ್ ಮಾಡಿದರೆ, ನಿಮ್ಮ ಒತ್ತಡವನ್ನು ನಿವಾರಿಸುತ್ತದೆ. ಕೂದಲು ಬೆಳವಣಿಗೆಗೆ ಸಹಾಯವಾಗುತ್ತದೆ. ಬೆಚ್ಚಗಿನ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಚೆನ್ನಾಗಿ ನಿದ್ರೆ ಮಾಡಲು ಸಹಯಾ ಮಾಡುತ್ತದೆ. ಆದ್ದರಿಂದ ಕ್ಯಾಸ್ಟರ್ ಆಯಿಲ್ ಅಥವಾ ಕೊಬ್ಬರಿ ಎಣ್ಣೆಯಿಂದ ಪ್ರತಿ ದಿನ ಮಸಾಜ್ ಮಾಡುವುದರಿಂದ ಅನೇಕ ಲಾಭಗಳನ್ನು ಕಾಣಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ