ಆರೋಗ್ಯಕ್ಕೆ ಹಾಲು-ಬೆಲ್ಲ ಹೇಳಿ ಮಾಡಿಸಿದ್ದು, ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ..!

  • by

ಸಾಮಾನ್ಯವಾಗಿ ಹಾಲು ಎಲ್ಲರೂ ಸೇವಿಸುತ್ತಾರೆ. ಇನ್ನು ಹಾಲಿನ ಜತೆ ಬೆಲ್ಲ ಸೇವನೆಯಿಂದ ರೋನ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ. ಹಾಲಿನ ರೋಗ ನಿರೋಧಕ ಶಕ್ತಿಯನ್ನು ಉತ್ತಮ ಪಡಿಸುವ ಶಕ್ತಿ ದ್ವಿಗುಣವಿದೆ. ಚಳಿಗಾಲದಲ್ಲಿ ಸಹಜವಾಗಿಯೇ ಆಕ್ರಮಣ ಮಾಡುವ ಕಾಯಿಲೆಗಳಿಂದ ಹಾಗೂ ಬ್ಯಾಕ್ಟೇರಿಯಗಳ ವಿರುದ್ಧ ಹೋರಾಡುವಂತಹ ಶಕ್ತಿಯನ್ನು ಮನುಷ್ಯನ ದೇಹಕ್ಕೆ ನೀಡುತ್ತದೆ .

Benefits ,drinking milk ,Jaggery, 
ಆರೋಗ್ಯ, ಹಾಲು-ಬೆಲ್ಲ, ಪ್ರಯೋಜನಗಳು,

ಬೆಲ್ಲ ಮಿಶ್ರಿತ ಹಾಲಿನ ಆರೋಗ್ಯ ಪ್ರಯೋಜನಗಳು..!

ಇತ್ತೀಚಿನ ದಿನಗಳಲ್ಲಿ ಹಲವರು ಜಂಕ್ ಫುಡ್ ಹೆಚ್ಚಾಗಿ ಸೇವಿಸುತ್ತಿದ್ದಾರೆ. ಜಂಕ್ ಫುಡ್ ಸೇವನೆಯಿಂದ ಯಾವುದೇ ಸಮಯದಲ್ಲಾದರೂ ಅಜೀರ್ಣತೆ ಸಮಸ್ಯೆ ಕಾಡಬಹುದು. ಹಾಗಾಗಿ ಇಂತಹ ಸಂದರ್ಭದಲ್ಲಿ ಮಲಬದ್ಧತೆ ಹಾಗೂ ಇನ್ನಿತರ ಸಮಸ್ಯೆಗಳು ಎದುರಾಗಬಹುದು. ಈ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಲು ಬೆಲ್ಲ ಹಾಗೂ ಹಾಲು ಅಧ್ಬುತ ಅಂತಲೇ ಹೇಳಬಹುದು. ದಿನನಿತ್ಯದ ಆಹಾರ ಪದ್ಥತಿಯಲ್ಲಿ ಅಳವಡಿಸಿಕೊಳ್ಳುವುದರಿಂದ ನಿಮ್ಮ ದೇಹದ ಜೀರ್ಣಕ್ರಿಯೆ ಉತ್ತಮಗೊಂಡು ಪಚನ ಕ್ರಿಯೆ ಸಹ ಉತ್ತಮವಾಗಿ ಆಗುತ್ತದೆ.

Benefits ,drinking milk ,Jaggery, 
ಆರೋಗ್ಯ, ಹಾಲು-ಬೆಲ್ಲ, ಪ್ರಯೋಜನಗಳು,

ಕೀಲು ನೋವು ನಿವಾರಣೆ..!

ಬೆಲ್ಲ ಮಿಶ್ರಿತ ಹಾಲು ಸೇವನೆ ಮಾಡೋದ್ರಿಂದ ಕೀಲು ನೋವು ಸಮಸ್ಯೆಗಳು ನಿವಾರಣೆಯಾಗುತ್ತವೆ. ಹಾಲು ಕುಡಿದರೆ ವ್ಯಕ್ತಿಯ ಮೂಳೆಗಳು ಗಟ್ಟಿಯಾಗುತ್ತವೆ ಎಂಬ ಮಾತಿದೆ.ಹಾಲಿನಲ್ಲಿರುವ ಕ್ಯಾಲ್ಸಿಯಂ ಅಂಶ ನಮ್ಮ ದೇಹದ ಮೂಳೆಗಳನ್ನು ಬಲ ಪಡಿಸಿ, ಕೀಲು ನೋವಿಗೆ ಉತ್ತಮ ಪರಿಹಾರ ಒದಗಿಸುತ್ತವೆ. ಪ್ರತಿ ದಿನ ಒಂದು ಲೋಟ ಹಾಲು ಕುಡಿಯುವವರು ಇದ್ದಾರೆ. ಆದ್ರೆ ಕೀಲು ನೋವು ಸಮಸ್ಯೆ ಉಂಟಾದರೆ ಹಾಲಿಗೆ ಬೆಲ್ಲಾ ಮಿಶ್ರಣ ಮಾಡಿ ಸೇವನೆ ಮಾಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ.

ಅನಿಮೀಯಾ ಸಮಸ್ಯೆ ನಿವಾರಣೆ..!

ಗರ್ಭಾವಸ್ಥೆಯಲ್ಲಿ ತಾಯಿ ಹಾಗೂ ಮಗುವಿನ ಆರೋಗ್ಯ ತುಂಬಾ ಮುಖ್ಯವಾದದ್ದು. ಸಾಮಾನ್ಯವಾಗಿ ಸ್ತ್ರೀಯರು ಗರ್ಭಾವಸ್ಥೆಯ ವೇಳೆಯಲ್ಲಿ ಎದುರಿಸುವ ಸಮಸ್ಯೆ ಎಂದರೆ ಅನಿಮಿಯಾ. ದೇಹದಲ್ಲಿ ಕಬ್ಬಿಣ ಅಂಶದ ಕೊರತೆ ಇರುವುದು. ಈ ಸಮಯದಲ್ಲಿ ಗರ್ಭಿಣಿಯರು ಹಾಲಿನಲ್ಲಿ ಬೆಲ್ಲವನ್ನು ಮಿಕ್ಸ್ ಮಾಡಿ ಕುಡಿದರೆ ತುಂಬಾ ಒಳ್ಳೆಯದು.

Benefits ,drinking milk ,Jaggery, 
ಆರೋಗ್ಯ, ಹಾಲು-ಬೆಲ್ಲ, ಪ್ರಯೋಜನಗಳು,

ದೇಹದ ತೂಕ ನಿಯಂತ್ರಣ..!

ನಿಮ್ಮ ದೇಹದ ತೂಕವನ್ನು ನಿಯಂತ್ರಣಕ್ಕೆ ತರಲು ಬೆಲ್ಲಾ ಹಾಗೂ ಹಾಲು ತುಂಬಾ ಸಹಾಯ ಮಾಡುತ್ತದೆ. ಪ್ರತಿ ದಿನ ಹಾಲು ಮಿಶ್ರಿತ ಬೆಲ್ಲ ಸೇವನೆಯಿಂದ ತೂಕ ಇಳಿಕೆಯಾಗುತ್ತದೆ. ಪ್ರತಿ ದಿನ ಕುಡಿದರೆ ದೇಹದಲ್ಲಿ ಬದಲಾವಣೆ ಕಾಣಬಹುದು. ನೀವು ಕುಡಿಯುವ ಹಾಲಿಗೆ ಸಕ್ಕರೆ ಹಾಗೂ ಬೆಲ್ಲವನ್ನು ಮಿಶ್ರಣ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

ಚರ್ಮದ ಆರೋಗ್ಯಕ್ಕೆ ಒಳ್ಳೆಯದು!

ಪ್ರತಿಯೊಬ್ಬರಿಗೂ ಚರ್ಮದ ಕಾಳಜಿ ಇದ್ದೇ ಇರುತ್ತದೆ. ಹಿಮ್ಮಡಿ ಒಡೆಯುವುದು, ತುಟಿ ಒಡೆಯುವುದು ಸಾಮಾನ್ಯವಾಗಿರುತ್ತದೆ. ಅಂಥ ಸಂದರ್ಭದಲ್ಲಿ ಎಷ್ಟೇ ಕ್ರೀಮ ಬಳಸಿದರೂ ಉಪಯೋಗವಾಗಲ್ಲ. ಚಳಿಗಾಲದಲ್ಲಿ ದಿನ ನಿತ್ಯ. ಹಾಲಿಗೆ ಬೆಲ್ಲವನ್ನು ಮಿಶ್ರಣ ಮಾಡಿ, ಕುಡಿದರೆ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು.

ಹಾಲು ಹಾಗೂ ಬೆಲ್ಲ ನಿಯಮಿತವಾಗಿ ಸೇವಿಸುವುದರಿಂದ ಪ್ರೋಟೀನ್, ಕ್ಯಾಲ್ಸಿಯಂ , ಲ್ಯಾಕ್ಟಿಕ್ ಆಮ್ಲ, ಕಬ್ಬಣ ಮತ್ತು ಅನೇಕ ರೀತಿಯ ದೇಹಕ್ಕೆ ಅವಶ್ಯವಿರುವ ಖನಿಜಾಂಶಗಳನ್ನು ಒಳಗೊಂಡಿರುತ್ತದೆ. ಇವು ನಿಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಮತ್ತು ದೇಹವನ್ನು ಬಲಪಡಿಸುತ್ತದೆ. 

ಅಲ್ಲದೇ, ಹಾಲು ಮತ್ತು ಬೆಲ್ಲ ಒಟ್ಟಿಗೆ ಸೇವಿಸುವುದರಿಂದ ನಿಮ್ಮ ದೇಹದ ತೂಕ ಇಳಿಸಿಕೊಳ್ಳಲು ಆಯ್ದುಕೊಳ್ಳುವ ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಹಾಲು ಮತ್ತು ಬೆಲ್ಲದ ಮಿಶ್ರಣವು ಪೊಟ್ಯಾಶಿಯಂ ಅಂಶವನ್ನು ಹೊಂದಿರುತ್ತದೆ. ಇದು ದೇಹದ ನಿತ್ಯ ಕರ್ಮವಾದ ಚಯಾಪಚಯವನ್ನು ಸುಧಾರಿಸುತ್ತದೆ. 

Benefits ,drinking milk ,Jaggery, 
ಆರೋಗ್ಯ, ಹಾಲು-ಬೆಲ್ಲ, ಪ್ರಯೋಜನಗಳು,

ಇನ್ನು ಹಾಲು ಹಾಗೂ ಬೆಲ್ಲವನ್ನು ಸೇವಿಸುವುದರಿಂದ ಮಾನಸಿಕ ಒತ್ತಡಕ್ಕೂ ಉತ್ತಮ ಎಂದು ಹೇಳಲಾಗುತ್ತದೆ. ಹಾಲು ಹಾಗೂ ಬೆಲ್ಲ ಒಟ್ಟಾಗಿ ನಿಮ್ಮ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ದೇಹದ ಸ್ನಾಯು ಸೆಳೆತಗಳಿಗೆ ಒಳ್ಳೆಯ ಔಷಧೀಯ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದ್ರಿಂದ ಯಾವುದೇ ಸಮಯದಲ್ಲಿ ನಿದ್ರಾ ಹೀನತೆಯಿಂದ ಬಳಲುತ್ತಿರುವವರು ಎಂಟು ಗಂಟೆಗಳ ಉತ್ತಮ ನಿದ್ರೆ ಪಡೆಯಬಹುದಾಗಿದೆ. 

ಜೀ

ಜೀರ್ಣಕ್ರಿಯೆಗೆ ಬೆಲ್ಲ!

ಹಾಲು ಹಾಗೂ ಬೆಲ್ಲವನ್ನು ದಿನ ನಿತ್ಯ ಕುಡಿದರೆ ಅಜೀರ್ಣ ಸಮಸ್ಯೆ ಶಮನವಾಗುತ್ತದೆ. ಅಜೀರ್ಣ ಸಮಸ್ಯೆಗೆ ಔಷಧಿಗಳ ಮೊರೆ ಹೋಗುವ ಬದಲು, ಹಾಲು ಹಾಗೂ ಬೆಲ್ಲದ ಉಪಯೋಗ ಅಭ್ಯಾಸ ಮಾಡಿಕೊಂಡರೆ, ನೈಸರ್ಗಿಕವಾಗಿ ಹಾಲು ಹಾಗೂ ಬೆಲ್ಲ ಉಪಯೋಗ ಮಾಡಿಕೊಂಡರೆ , ಈ ಸಮಸ್ಯೆಯಿಂದ ಹೊರಬರಬಹುದು. ಈ ಮಿಶ್ರಣದ ಸತ್ವಗಳು ಸಂಬಂಧಿಸಿದ ಸಮಸ್ಯೆಯನ್ನು ಕಡಿಮೆ ಮಾಡುತ್ತವೆ. 

ಮನುಷ್ಯನ ದೇಹದಲ್ಲಿ ಇರುವ ಅನೇಕ ಅಂಗಾಂಗಳ ಪ್ರಾಮುಖ್ಯತೆ ಮುಖ್ಯವಾಗುತ್ತದೆ. ನಮ್ಮ ದೇಹದ ಪ್ರತಿಯೊಂದು ಅಂಗಾಂಗ ಜೀವವಿಲ್ಲದ ದೇಹ ಎರಡೂ ಒಂದೇ. ನಾವು ದೇಹಕ್ಕೆ ಸೇವಿಸುವ ಉತ್ತಮ ಆಹಾರಗಳಿಂದಲೇ ಶುದ್ಧವಾದ ರಕ್ತ ತಲಪಲು ಸಹಾಯ ಮಾಡುತ್ತದೆ. ಅಂತಹ ರಕ್ತದಲ್ಲಿ ಶುದ್ಧತೆಯನ್ನು ಕಾಪಾಡಲು ಬೆಲ್ಲ ಹಾಗೂ ಹಾಲು ಒಟ್ಟಿಗೆ ಸೇವಿಸುವುದರಿಂದ ಕಬ್ಬಿಣದ ಮೂಲ ದೊರೆಯುತ್ತದೆ. ದೇಹದ ಹಿಮೋಗ್ಲೋಬಿನ್ ಸಮರ್ಪಕ ಮಟ್ಟದಲ್ಲಿ  ಇರುವಂತೆ ಕಾರ್ಯನಿರ್ವಹಿಸುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ