ಕೂದಲಿನ ಆರೈಕೆಗೆ ಸೀಗೆಕಾಯಿ, ಅನುಕೂಲ, ಅನಾನೂಕೂಲಗಳು.!

  • by

ತಮ್ಮ ಕೂದಲು ಉದ್ದವಾದ, ದಪ್ಪವಾಗಿ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಕೂದಲಿನ ಬೆಳವಣಿಗೆ ಉತ್ತಮವಾಗಿರಬೇಕು ಮತ್ತು ತಲೆಹೊಟ್ಟು ಇರಕೂಡದು, ಆದ್ರೆ ರಾಸಾಯನಿಕ ಉತ್ಪನ್ನಗಳನ್ನು ಬಳಸುವುದರಿಂ ಕೂದಲು ಉದರುವ ಸಮಸ್ಯೆ, ತಲೆಹೊಟ್ಟು ಮುಂತಾದ ಸಮಸ್ಯೆಗಳನ್ನು ಎದುರಿಸಬಹುದು. ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ದೊಡ್ಡ ಸಮಸ್ಯೆಯಾಗಿದೆ. ಅಂತಹ ಪರಿಸ್ಥಿತಿಯಲ್ ನೈಸರ್ಗಿಕ ಮನೆ ಮದ್ದುಗಳನ್ನು ಬಳಸಿ ಕೂದಲನ್ನು ಸಂರಕ್ಷಿಸಬಹುದು. ಮನೆ ಮದ್ದುಗಳಲ್ಲಿ ಸಿಗೇಕಾಯಿ ಕೂಡಾ ಒಂದು. ಸಿಗೇಕಾಯಿ ಭಾರತದಲ್ಲಿ ಹೇರಳವಾಗಿ ದೊರೆಯುತ್ತದೆ. ಪ್ರಾಚೀನ ಸಸ್ಯಗಳಲ್ಲಿ ಒಂದು. ಪ್ರಾಚೀನ ವೈದಿಕ ಹಾಗೂ ಆರ್ಯುವೇದ ಗ್ರಂಥಗಳಲ್ಲಿ ಇದರ ಪ್ರಯೋಜನಗಳ ಬಗ್ಗೆ ಹೇಳಲಾಗಿದೆ. 

ಕೂದಲಿನ ಆರೈಕೆಗಾಗಿ ರಾಸಾಯನಿಕ ಆಧಾರಿತ ಉತ್ಪನನ್ನಗಳನ್ನು ಆಶ್ರಯಿಸದೇ, ನೈಸರ್ಗಿಕ ಮನೆ ಮದ್ದುಗಳನ್ನು ಉಪಯೋಗಿಸಬಹುದು. 

ಸಿಗೇಕಾಯಿ ಅಂದ್ರೆ ಏನು?

ಸಿಗೇಕಾಯಿನ ವೈಜ್ಞಾನಿಕ ಹೆಸರು Acacia concinna ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇದು ಏಷ್ಯನ ಮೂಲದ ಸಸ್ಯವಾಗಿದ್ದು , ಮಧ್ಯ ಮತ್ತು ದಕ್ಷಿಣ ಭಾರತದ ಬಯಲು ಪ್ರದೇಶಗಳಲ್ಲಿ ಇದು ಹೇರಳವಾಗಿ ಕಂಡುಬರುತ್ತದೆ. ಸೀಗೆಕಾಯಿಯನ್ನು ಆಯುರ್ವೇದದಲ್ಲಿ ಶಾಂಪೂಗಳಂತೆ ಬಳಸಲಾಗುತ್ತದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಮಿಟಮಿನ್ ಕೆ ಮತ್ತು ವಿಟಮಿನ್ ಡಿ ಯಿಂದ ಕೂಡಿದ್ದು, ಇದರಲ್ಲಿ ರುವ ಜೀವಸತ್ವಗಳು ಕೂದಲನ್ನು ಪೋಷಿಸಲು ಮತ್ತು ಆರೋಗ್ಯಕರವಾಗಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸಿಗೇಕಾಯಿ ಪುಡಿ ಮಾರುಕಟ್ಟೆಯಲ್ಲಿ ಲಭ್ಯವಿದೆ. 

ಕೂದಲಿನ ಬೆಳವಣಿಗೆಗೆ ಸಿಗೇಕಾಯಿಯ ಪ್ರಯೋಜನಗಳು!

ಕೂದಲು ಬೆಳವಣಿಗೆಗೆ ಸಿಗೇಕಾಯಿ.!

ಸಿಗೇಕಾಯಿ ಕೂದಲು ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಗಮನಾರ್ಹ ಪ್ರಮಾಣದ ಆಂಟಿ ಸೆಪ್ಟಿಕ್ ಗುಣಗಳಿದ್ದು, ಇದು ಕೂದಲಿನ ಬುಡವನ್ನು ಗಟ್ಟಿಗೊಳಿಸುತ್ತದೆ. ಕಳೆದು ಹೋದ ಕೂದಲಿನ ಬೆಳವಣಿಗೆಯನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ. ಪಿಎಚ್ ಮಟ್ಟವನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. 

ತಲೆಹೊಟ್ಟು ನಿವಾರಣೆಗೆ ಸಿಗೇಕಾಯಿ!

ಸಿಗೇಕಾಯಿ ತಲೆಹೊಟ್ಟು ನಿವಾರಣೆಗೆ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಆ್ಯಂಟಿ ಫಂಗಲ್ ಗುಣಗಳು ಅಧಿಕವಾಗಿದ್ದು, ತಲೆಹೊಟ್ಟು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಡೆಡ್ ಕೋಶಗಳನ್ನು ತೆಗೆದು ಹಾಕಿ, ಕೂದಲು ಉದರುವ ಸಮಸ್ಯೆಯನ್ನು ನಿವಾರಿಸುತ್ತದೆ. ಕೂದಲಿನ ಬೆಳವಣಿಗೆಯನ್ನು ಉತ್ತಮವಾಗಿಡುವಲ್ಲಿ ಸಹಾಯ ಮಾಡುತ್ತದೆ. ಕೂದಲಿನ ಶುಷ್ಕತೆ ಮತ್ತು ತುರಿಕೆ ಇತರ ಸಮಸ್ಯೆಗಳನ್ನು ನಿವಾರಿಸುತ್ತದೆ. 

ನಿಮ್ಮ ಕೂದಲನ್ನು ಹೊಳೆಪು ಹೆಚ್ಚಿಸುತ್ತದೆ. 

ಕೂದಲನ್ನು ಹೊಳೆಯುವಂತೆ ಮಾಡಲು ಸಿಗೇಕಾಯಿ ನೆರವಾಗುತ್ತದೆ. ಅನೇಕ ಜನರು ಉದ್ದನೇಯ ಕೂದಲು ಹೊಂದಿರುತ್ತಾರೆ. ಅಂಥವರಿಗೆ ಕೂದಲು ಬಿಡಿಸುವುದು. ಬಿರುಕು ಮೂಡುವ ಸಮಸ್ಯೆ ಎದುರಿಸುತ್ತಾರೆ. ಅಂತವರು ಸಿಗೇಕಾಯಿಯನ್ನು ಬಳಸಬಹುದು. 

ಬಿಳಿ ಕೂದಲು ನಿವಾರಣೆಗೆ 

ನೈಸರ್ಗಿಕವಾಗಿ ಬಣ್ಣವನ್ನ ಹೆಚ್ಚಿಸುವಲ್ಲಿ ಸಿಗೇಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ವಯಸ್ಸಿಗೆ ಮುಂಚಿತವಾಗಿ ಬಿಳಿ ಕೂದಲು ಸಮಸ್ಯೆಯನ್ನು ಹಲವು ಜನರು ಎದುರಿಸುತ್ತಿರುತ್ತಾರೆ. ಕೂದಲನ್ನು ಸಿಗೇಕಾಯಿಯಿಂದ ತೊಳೆದರೆ, ಕೂದಲು ಬಣ್ಣವನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ. 

ಕೂದಲು ಉದರುವಿಕೆಯನ್ನು ತಡೆಗಟ್ಟುತ್ತದೆ.!

ಕೂದಲು ಉದರುವಿಕೆಯ ನಿವಾರಿಸುವಲ್ಲಿ ಸಿಗೇಕಾಯಿ ಸಹಾಯ ಮಾಡುತ್ತದೆ. ತಲೆಹೊಟ್ಟು ಹಾಗೂ ತುರಿಕೆ ಸಮಸ್ಯೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ  ಇದು ಹೆಚ್ಚು ಪರಿಣಾಮ ಬೀರಬಲ್ಲದ್ದು. 

ಸಿಗೇಕಾಯಿ ಪುಡಿಯ ಅನಾನೂಕೂಲಗಳು! 

ಸಿಗೇಕಾಯಿಯನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಅಸ್ತಮಾ ಕಾಡಬಹುದು. ಉಸಿರಾಟದ ಸಮಸ್ಯೆಯನ್ನು ಎದುರಿಸಬಹುದು. 

ನಿತ್ಯ ಬಳಕೆ ಮಾಡುವುದರಿಂದ ಕೂದಲು ಎಣ್ಣೆಯುಕ್ತವಾಗುತ್ತದೆ. 

ಕೂದಲು ತೊಳೆಯಲು ಸಾಮಾನ್ಯ ಶಾಂಪೂವಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. 

ಇದರ ಸುಗಂಧ ಅನೇಕ ಜನರಿಗೆ ಇಷ್ಟವಾಗುವುದಿಲ್ಲ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ