ಹೊಳೆಯುವ ತ್ವಚೆಗಾಗಿ ಕುಚಲಕ್ಕಿಯ (ಬ್ರೌನ್ ರೈಸ್) ಫೇಸ್ ಪ್ಯಾಕ್

  • by

ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಚರ್ಮದ ಸಮಸ್ಯೆಗಳು ಬಹಳಷ್ಟು ಜನರನ್ನು ಕಾಡುತ್ತಿದೆ. ಇಂದಿನ ದಿನಗಳಲ್ಲಿ ಮುಖದ ಮೊಡವೆಗಳಿಂದ ಹಾಗೂ ಕಲೆಗಳಿಂದ ಮುಖವನ್ನು ರಕ್ಷಿಸುವುದು ಬಹಳ ಕಷ್ಟಕರವಾಗಿದೆ. ಆದ್ರೆ ಅಂತಹ ಪರಿಸ್ಥಿತಿಯಲ್ಲಿಯೂ ನೀವು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ನೈಸರ್ಗಿಕವಾಗಿ ಮನೆಯಲ್ಲೇ ತಯಾರಿಸಬಹುದಾಗಿದೆ. 

brown-rice, benefits ಕಂದು ಅಕ್ಕಿ ,  ಪ್ರಯೋಜನಗಳು

ಕಂದು ಬಣ್ಣದ ಅಕ್ಕಿಯಲ್ಲಿ 2  ಗುಟ್ಟು ಅಡಗಿದೆ. ಮಾರುಕಟ್ಟೆಯಲ್ಲಿ ಎರಡು ಪ್ರಕಾರದ ಅಕ್ಕಿಗಳು ಪ್ರಮುಖ ಪಾತ್ರವಹಿಸುತ್ತವೆ.ಒಂದು ಬಿಳಿ ಅಕ್ಕಿ. ಮತ್ತೊಂದು ಕಂದು ಬಣ್ಣದ ಅಕ್ಕಿ… ಆರೋಗ್ಯವನ್ನು ಹೆಚ್ಚಿಸಲು ಕಂದು ಬಣ್ಣದ ಅಕ್ಕಿ ಹತ್ತು ಪಟ್ಟು ಹೆಚ್ಚು ಫೈಬರ್ ಹೊಂದಿದೆ. ಹೀಗಾಗಿ ಕಂದು ಬಣ್ಣದ ಅಕ್ಕಿಯಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಲ್ಲದೇ, ಸೌಂದರ್ಯಕ್ಕೂ ಹೆಚ್ಚು ಬಳಸಬಹುದು. 

ಕಂದು ಬಣ್ಣದ ಅಕ್ಕಿ ಆ್ಯಂಟಿ ಆಕ್ಯಿಡೆಂಟ್ ಇರುವುದರಿಂದ ಪೋಷಕಾಂಶಗಳನ್ನು ಒದಗಿಸುತ್ತದೆ . ದೇಹದ ಒಟ್ಟಾರೆ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ. 

ಸೌಂದರ್ಯಕ್ಕೆ ಬ್ರೌನ್ ಅಕ್ಕಿಯ ಲಾಭಗಳು

ಮುಖದ ಮೇಲಿನ, ಗುಳ್ಳೆಗಳು ಹಾಗೂ ಕಲೆಗಳಿಂದ ಮುಖವನ್ನು ರಕ್ಷಿಸುವುದು ಕಷ್ಟಕರವಾಗಿದೆ. ಅಂತಹ ಪರಿಸ್ಥಿಯಲ್ಲೂ ನೀವು ಆತಂಕಪಡಬೇಕಾಗಿಲ್ಲ. ಎಲ್ಲಾ ನೈಸರ್ಗಿಕ ಸಮಸ್ಯೆಗಳಿಗೆ ಪರಿಹಾರ ಕೊಂಡುಕೊಳ್ಳಬಹುದು.

brown-rice, benefits ಕಂದು ಅಕ್ಕಿ ,  ಪ್ರಯೋಜನಗಳು

1 ಚರ್ಮದ ಕಲೆಗಳಿಗೆ ಪರಿಹಾರ 

ಕಂದು ಅಕ್ಕಿಯಲ್ಲಿ ಫೈಬರ್ ಹಾಗೂ ಖನಿಜಗಳು ಚರ್ಮದ ಕಲೆಗಳನ್ನು ತೊಡೆದುಹಾಕಲು ಇದು ಸಹಾಯಕಾರಿಯಾಗಿದೆ. ಚರ್ಮದಲ್ಲಿ ಪ್ರೋಟಿನ್ ಸಮಸ್ಯೆಯಿಂದಾಗಿ ಚರ್ಮವು ಕಾಂತಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಕುಚಲಕ್ಕಿ ಚರ್ಮದ ಕಲೆಗಳನ್ನು ನಿವಾರಿಸುತ್ತದೆ. ರಕ್ತ ಪರಿಚಲನೆಯನ್ನು ಸುಗಮಗೊಳಿಸುತ್ತದೆ. ಮತ್ತು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. 

2.ಸುಕ್ಕುಗಳನ್ನು ತೊಡೆದುಹಾಕುತ್ತದೆ ಬ್ರೌನ್ ರೈಸ್

ಚರ್ಮದ ವಯಸ್ಸಾಗುವಿಕೆಯನ್ನು ಬ್ರೌನ್ ರೈಸ್ ನಿವಾರಿ,ುತ್ತದೆ. ನಿಮ್ಮ ಚರ್ಮ ಹಾನಿಗೊಳಗಾಗಿದ್ದರೆ ಬ್ರೌನ್ ರೈಸ್ ಉಪಯುಕ್ತ. ಮುಖದ ನೇರಿಗೆ. ಸುಕ್ಕುಗಳನ್ನು ಇದು ನಿವಾರಣೆ ಮಾಡುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಿರುವುದರಿಂದ ಒತ್ತಡ ಹೆಚ್ಚಾಗುವುವ ಸಾಧ್ಯತೆ ಇರುತ್ತದೆ. ಈ ಒತ್ತಡದಿಂದಾಗಿ ವಯಸ್ಸಾಗುವಿಕೆಯ ಸಮಸ್ಯೆ  ಚರ್ಮದಲ್ಲಿ ಕಂಡು ಬರುತ್ತದೆ. ಆದ್ರೆ ಕಂದು ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಗಳು ಹೆಚ್ಚಾಗಿದೆ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಸರಿಯಾಗುವುದಲ್ಲದೇ, ಮತ್ತು ಚರ್ಮಕ್ಕೆ ಯಾವುದೇ ಹಾನಿಯಾವುದಿಲ್ಲ. 

3 ಚರ್ಮದ ದದ್ದುಗಳಿಂದ ಮುಕ್ತಿ 

ಚರ್ಮದ ವಯಸ್ಸಾಗುವಿಕೆಯನ್ನು ತಡೆಗಟ್ಟಲು ಪ್ರೋಟೀನ್ ಭರಿತ ಕಂದು ಅಕ್ಕಿಯ ಸಹಾಯ ಪಡೆದುಕೊಳ್ಳಬೇಕು. ದದ್ದುಗಳು ಮತ್ತು ಬಿಸಿಲಿನ ಉರಿಯೂತ ಮತ್ತು ತಂಪಾಗಿಸುವ ಗುಣಲಕ್ಷಣಗಳಿಂದಾಗಿ ಕಂದು ಅಕ್ಕಿ ಬಿಸಿಲು ಹಾಗೂ ದದ್ದುಗಳಿಗೆ ಪರಿಹಾರ ನೀಡುತ್ತದೆ. ಕಂದು ಅಕ್ಕಿಯ ಗುಣಗಳಿಂದಾಗಿ ಸುಟ್ಟ ಚರ್ಮವು ಬೇಗನೆ ಗುಣವಾಗುತ್ತದೆ. ಯಾವುದೇ ಗುರುತುಗಳು ನಿಮಗೆ ಕಂಡು ಬರುವುದಿಲ್ಲ. ಸುಟ್ಟ ಚರ್ಮದ ಮೇಲೆ ದಿನಕ್ಕೆ ಒಮ್ಮೆಯಾದರೂ ಕಂದು ಅಕ್ಕಿಯ ನೀರನ್ನು ಹಚ್ಚುವುದು ನೀವು ಮಾಡಬೇಕಾಗುತ್ತದೆ. 

brown-rice, benefits ಕಂದು ಅಕ್ಕಿ ,  ಪ್ರಯೋಜನಗಳು

4 ಕೂದಲು ಹೊಳಪಿಗಾಗಿ

ಕೂದಲು ಹೊಳೆಯಲು ಮತ್ತು ಆರೋಗ್ಯಕರವಾಗಿಸಲು ಹಾನಿಗೊಳಗಾದ ಕೂದಲಿಗೆ ಪರಿಹಾರ ಒದಗಿಸುತ್ತದೆ. ಅನೇಕ ರೀತಿಯ ಖನಿಜಗಳು ಮತ್ತು ಪೋಷಕಾಂಶಗಳು ಬೇಕಾಗುತ್ತದೆ. ಅಂತಹ ಪರಿಸ್ಥಿತಿ ಯಲ್ಲಿ ಬ್ರೌನ್ ರೈಸ್ ಸಹಾಯ ಮಾಡಬಲ್ಲದ್ದು.  ಇದರ ಬಳಕೆಯಿಂದ ಕೂದಲಿನ ಬೇರುಗಳು ಬಲಗೊಳ್ಳುತ್ತನೆ. ಕೂದಲು ಸೀಳುವಿಗೆ ಸಮಸ್ಯೆಯನ್ನು ಇದು ತಡೆಗಟ್ಟುತ್ತದೆ. ಅಷ್ಟೇ ಅಲ್ಲದೇ, ಅನೇಕ ಪ್ರೋಟೀನ್ ಗಳು ಕಂದು ಬಣ್ಣದ ಅಕ್ಕಿಯಲ್ಲಿ ಕಂಡು ಬರುವುದರಿಂದ ಇದು, ರಕ್ತದ ಪೂರೈಕೆಯನ್ನು ನಿರ್ಹಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

brown-rice, benefits ಕಂದು ಅಕ್ಕಿ ,  ಪ್ರಯೋಜನಗಳು

5. ತಲೆಹೊಟ್ಟು ಸಮಸ್ಯೆ ನಿವಾರಣೆ

ಕಂದು ಅಕ್ಕಿ ಬಳಕೆ ಮಾಡುವುದರಿಂದ ತಲೆಹೊಟ್ಟು ಸಮಸ್ಯೆ ಕಂಡು ಬರುವುದಿಲ್ಲ. ತಲೆಹೊಟ್ಟು ಪದೇ ಪದೇ ಬಂದು ಹೋಗುತ್ತಿರುತ್ತದೆ. ಅಂತಹ ವೇಳೆಯಲ್ಲಿ ಸೆಲೆನಿಯಮ್ ಭರಿತ ಕಂದು ಅಕ್ಕಿಯನ್ನು ಉಪಯೋಗಿಸಿದರೆ ಅನೇಕ ಲಾಭಗಳಿವೆ. ಕಂದು ಅಕ್ಕಿಯನ್ನು ನಿರಂತರವಾಗಿ ಬಳಸುವುದರಿಂದ ನಿಮ್ಮ ಕೂದಲಿನ ಬೆಳವಣಿಗೆ ಉತ್ತಮವಾಗಿ ಆಗುತ್ತದೆ. ಕೂದಲನ್ನು ಬಲಪಡಿಸಲು ವಾರಕ್ಕೆ ಎರಡು ಬಾರಿ ಅಕ್ಕಿ ನೀರಿನಿಂದ ಮಸಾಜ್ ಮಾಡಬೇಕು. ಇದ್ರಿಂದ ರಕ್ತ ಪರಿಚಲನೆ ಸರಿಯಾಗುವುದಲದ್ದೇ, ಕೂದಲಿನ ಬೇರುಗಳನ್ನು ಗಟ್ಟಿ ಗೊಳಿಸುತ್ತದೆ. 

ಬ್ರೌನ್ ರೈಸ್ ನ ಇತರ ಪ್ರಯೋಜನಗಳು 

1.ಕ್ಯಾಲ್ಸಿಯಂ ನಿಮ್ಮ ಮೂಳೆಗಳ ಆರೋಗ್ಯವನ್ನು ಕಾಪಾಡಿ, 

2 ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.

3 ಕರುಳು ಸಂಬಂಧಿತ ಕಾಯಿಲೆ ದೂರ. 

.4ಮೆದುಳಿಗೆ ಹೆಚ್ಚು ಉಪಯುಕ್ತ

5. ವಯಸ್ಸನ್ನು ತಡೆಗಟ್ಟುತ್ತದೆ. 

6. ಖಿನ್ನತೆಯನ್ನು ಹೊಗಲಾಡಿಸುತ್ತದೆ.

7. ಕರುಳಿನ ಸಮಸ್ಯೆಯನ್ನು ದೂರ ಮಾಡುತ್ತದೆ

8 ಸೆಲೆನಿಯಮ್ ಅಂಶವು ಸಮೃದ್ಧವಾಗಿದೆ. 

9. ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, 

10.ಊರಿಯೂತದ ಸಮಸ್ಯೆಗಳು ಸಂಧಿವಾತ ಸಮಸ್ಯೆಗಳನ್ನು ಹೊಗಲಾಡಿಸುತ್ತದೆ.

11. ತೂಕ ಇಳಿಸಲು ಕುಚಲಕ್ಕಿ ಸಹಾಯಕಾರಿಯಾಗಿದೆ. 

ನಮ್ಮ ದೇಹದಲ್ಲಿನ ಕೊಬ್ಬಿನ ಅಂಶವನ್ನು ಇದು ನಿವಾರಣೆ ಮಾಡುತ್ತದೆ. ಇದನ್ನು ಸೇವಿಸಿದರೆ ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ. ಇದ್ರಿಂದ ಹೊಟ್ಟೆ ಹಸಿವಾಗುವ ಅನುಭವವಾಗುವುದು ತಡವಾಗುತ್ತದೆ. ರಕ್ತನಾಳಗಳನ್ನು ಸಧೃಢಗೊಳಿಸುವ ಮೂಲಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹೃದ್ರೋಗವನನ್ನು ತಡೆಗಟ್ಟುತ್ತದೆ. 

ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಾಗಿ ಬ್ಲ್ಯೂ ಬೇರ್ರಿಗಳು, ಸ್ರ್ಟಾಬೆರಿಗಳು ಮತ್ತು ಇತರೆ ಹಣ್ಣು, ಮತ್ತು ತರಕಾರಿಗಳಲ್ಲಿ ಇವೆ. ಕುಚ್ಚಲಕ್ಕಿಯನ್ನು ಹೆಚ್ಚಾಗಿ ಬಳಸುವುದರಿಂದ ನಾರಿನಾಂಶ ಅಧಿಕವಾಗಿ ದೊರಕುತ್ತದೆ. ಇದರಲ್ಲಿರುವ ಹಲವು ಅಂಶಗಳು ಜೀರ್ಣಕ್ರಿಯೆಗೆ ಸಹಾಯ ಮಾಡಿ. ಮಲಬದ್ಧತೆ ಆಗದಿರುವಂತೆ ನೋಡಿಕೊಳ್ಳುತ್ತವೆ. ಹಾಗೂ ಮೆಗ್ನೇಶಿಯಂ ಅಧಿಕ ಪ್ರಮಾಣದಲ್ಲಿ ಇರುತ್ತದೆ. ದೇಹದಲ್ಲಿ ಗ್ಲೂಕೋಸ್ ಮತ್ತು ಇನ್ಸುಲಿನ್ ಸ್ರವಿಕೆಯಲ್ಲಿ ಪಾಲ್ಗೊಳ್ಳುವ ಸುಮಾರು 300 ಕಿಣ್ವಗಳನ್ನು ಉತ್ಪತ್ತಿ ಮಾಡಲು ಸಹಕಾರಿಯಾಗುತ್ತದೆ. ಬ್ರೌನ್ ರೈಸ್ ನಲ್ಲಿ ಕಾರ್ಬೋಹೈಡ್ರೇಡ್ ಗಳು ಸಮೃದ್ಧವಾಗಿದೆ. ಮೇಗ್ನೇಶಿಯಂ , ನಮ್ಮ ದೇಹದಲ್ಲಿನ ಮೂರನೇಯ ಎರಡು ಭಾಗದಷ್ಟು ಮೆಗ್ನೇಶಿಯಂ ಮೊಳೆಗಳಲ್ಲಿ ಅಡಕವಾಗಿರುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ