ಬೀಟ್ ರೂಟ್ ಯಾಕೆ ಅವೈಡ್ ಮಾಡಬಾರದು!

  • by

ಬೀಟ್ ರೂಟ್ ಉಪಯೋಗಿಸಿದ್ದರೆ ಏನಾಗುತ್ತೆ.. ಇಷ್ಟವಿರಲಿ ಅಥವಾ ಇಲ್ಲದಿರಲಿ ನಿಮ್ಮ ಆಹಾರ ಕ್ರಮದಲ್ಲಿ ಇದನ್ನು ಅಳವಡಿಸಿಕೊಳ್ಳಿ.

ಬೀಟ್ ರೂಟ್ ನಲ್ಲಿ ಅಗತ್ಯ ಪೋಷಕಾಂಶಗಳು ಹೇರಳವಾಗಿ ದೊರೆಯುತ್ತವೆ. ವಿಟಮಿನ್ ಬಿ, ಪೋಟ್ಯಾಶಿಯಂ, ಕಬ್ಬಿಣ ಅಂಶ, ವಿಟಮಿನ್ ಸಿ ಹೊಂದಿರುವುದರಿಂದ, ಬೀಟ್ ರೂಟ್ ದೇಹದ ರಕ್ತವನ್ನು ಹೆಚ್ಚಿಸುತ್ತವೆ. ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಮತ್ತು ರಕ್ತದೋತ್ತಡ ಮಟ್ಟವನ್ನು ನಿಯಂತ್ರಿಸುವಲ್ಲಿ ಬೀಟ್ ರೂಟ್ ಸಹಾಯ ಮಾಡುತ್ತದೆ.

1. ಗ್ಲಾಸ್ ಬೀಟ್ ರೂಟ್ ಜ್ಯೂಸ್ , ಹೃದಯಾಘಾತದ ಅಪಾಯವನ್ನು ತಗ್ಗಿಸುತ್ತದೆ.

2. ಬೀಟ್ ರೂಟ್ ಹೆಚ್ಚಿನ ಫೈಬರ್ , ಕಡಿಮೆ ಕ್ಯಾಲೋರಿ ಮತ್ತು ಉರಿಯೂತದ ಗುಣಲಕ್ಷಣಗಳಿಂದಾಗಿ ಆಹಾರದಲ್ಲಿ ಸೇವಿಸಬೇಕು. ಹಸಿ ಬೀಟ್ ರೂಟ್ ಹಾಗೂ ಜ್ಯೂಸ್ ಉತ್ತಮ ಪಾನೀಯಾ ಅಂತಲೇ ಹೇಳಬಹುದು.

3. ಪ್ರತಿನಿತ್ಯ ಬೀಟ್ ರೂಟ್ ಸೇವನೆಯಿಂದ ರಕ್ತಹೀನತೆಯ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಾಣಬಹುದು. ಇದರಲ್ಲಿ ವಿಟಮಿನ್ ಸಿ ಅಂಶ ಇದ್ದು, ಚರ್ಮದ ಕಾಂತಿಗೆ ಉತ್ತಮವಾದದ್ದು. ಆದ್ದರಿಂದ ಬೀಟ್ ರೂಟ್ ಅಥವಾ ಜ್ಯೂಸ್ ನ್ನು ಸೇವನೆ ಮಾಡಿ.

4. ಮೆದುಳಿನ ಆರೋಗ್ಯ ಹೆಚ್ಚಿಸುತ್ತದೆ, ಬೀಟ್ ರೂಟ್ ಸೇವನೆಯಿಂದ ಮೆದುಳಿನ ಸಮಸ್ಯೆಗಳಿಂದ ದೂರ ಇರಬಹುದು. ಇದು ಮೆದುಳಿನ ಆರೋಗ್ಯ ಹೆಚ್ಚಿಸುತ್ತದೆ.

5. ಡಿ ಹೈಡ್ರೇಷನ್ ಸಮಸ್ಯೆಯಿಂದ ಬಳಲುತ್ತಿದ್ದರೆ ಬೀಟ್ ರೂಟ್ ತಿನ್ನುವುದು ಉತ್ತಮ. ಜ್ಯೂಸ್ ಮಾಡಿ ಕುಡಿದರೂ ಸಮಸ್ಯೆಗೆ ಪರಿಹಾರ ಕಾಣಬಹುದು. ಇದರಲ್ಲಿ ಫೈಬರ್ ಅಂಶವು ಹೇರಳವಾಗಿದ್ದು, ಜೀರ್ಣಕ್ರಿಯೆಗೂ ಒಳ್ಳೆಯದು. ಅಲ್ಲದೇ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.

6. ಬೀಟ್ ರೂಟ್ ಸೇವನೆಯಿಂದ ದೇಹಕ್ಕೆ ಆಕ್ಸಿಜನ್ ಪೂರೈಕೆ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ. ಗರ್ಭಿಣಿಯರ ಆರೋಗ್ಯಕ್ಕೂ ಬೇಕಾದ ಫೋಲಿಕ್ ಆಮ್ಲವನ್ನು ಬೀಟ್ ರೂಟ್ ಜ್ಯೂಸ್ ಕುಡಿಯುವುದರಿಂದ ಪಡೆಯಬಹುದು.

7. ಬೀಟ್ ರೂಟ್ ಸೇವನೆಯನ್ನು ಕೊಲೆಸ್ಟ್ರಾಲ್ ಅನ್ನು ಹೋಗಲಾಡಿಸಬಹುದು. ಬೀಟ್ ರೂಟ್ ಇಷ್ಟವಿರಲಿ ಅಥವಾ ಇಲ್ಲದಿರಲಿ ನಿಮ್ಮ ಆಹಾರ ಕ್ರಮದಲ್ಲಿ ಇದನ್ನು ಅಳವಡಿಸಿಕೊಳ್ಳಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ