ಮಲಗುವ ಮುನ್ನ ಈ ಡ್ರಿಕ್ಸ್ ಸೇವಿಸಿ..ಕೆಲವೇ ದಿನದಲ್ಲೇ ತೂಕ ಇಳಿಸಿ!

  • by

ಮಲಗುವುದಕ್ಕೂ ಮುನ್ನ ಲಘು ಆಹಾರವನ್ನು ಸೇವಿಸಬೇಕು ಎಂದು ಆಹಾರ ತಜ್ಞರು ಹೇಳುತ್ತಿರುತ್ತಾರೆ. ಮಲಗುವುದಕ್ಕೂ ಮುನ್ನ ನಾವು ಹೆಚ್ಚು ಆಹಾರ ಸೇವಿಸಿದರೆ, ಹೆಚ್ಚುವರಿ ಕ್ಯಾಲೋರಿಗಳ ಪ್ರಮಾಣ ಹೆಚ್ಚಾಗುತ್ತದೆ. ಇದು ತೂಕ ಹೆಚ್ಚಿಸುವುದರ ಜತೆಗೆ ಹೃದ್ರೋಗ ಮತ್ತು ಮಧುಮೇಹ ಅಪಾಯವನ್ನು ಹೆಚ್ಚಿಸಬಹುದು. 


bedtime, drinks , boost weight loss ,overnight, 
ಡ್ರಿಕ್ಸ್ ಸೇವಿಸಿ..  ತೂಕ ಇಳಿಸಿ,

ಮಲಗುವ ಮುನ್ನ, ಮೂರು ಗಂಟೆಗಳು ಮೊದಲು, ಊಟಕ್ಕಿಂತ ಮೊದಲು , ಏನನ್ನು ತಿನ್ನಬಾರದು ಎಂದು ತಿಳಿದಿರಬೇಕು. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ನಿದ್ರೆಗೂ ಮುನ್ನ ಕೆಲವು ಆಹಾರಗಳನ್ನು ಸೇವಿಸುವುದರಿಂದ ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಮಲಗುವುದಕ್ಕೂ ಮುನ್ನ ಫ್ರೂಟ್ ಸ್ಮೂಥಿಗಳನ್ನು ಸೇವಿಸುವುದು ಉತ್ತಮ. ಇದು ಉತ್ತಮ ನಿದ್ರೆಗೆ ಕಾರಣವಾಗುವುದಲ್ಲದೇ. ತೂಕವನ್ನು ಕಡಿಮೆ ಮಾಡುತ್ತದೆ. ಮಲಗುವ ಮೊದಲು ನೀವು ಕುಡಿಯಬಹುದಾದದ ೬ ಪಾನೀಯಗಳನ್ನು ಇಲ್ಲಿ ತಿಳಿಸಲಾಗಿದೆ. 

ಮೊಸರು ಪ್ರೋಟೀನ್ ಶೇಕ್ 

ಪ್ರೋಟೀನ್ ಶೇಕ್ ನಿಮ್ಮ ದೇಹಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತದೆ. ನೀವು ಸಂಜೆ ಜಿಮ್ ಗೆ ಹೋದರೆ, ರಾತ್ರಿ ಮಲಗುವ ಮುನ್ನ ಖಂಡಿತವಾಗಿಯೂ ಮೊಸರು ಪ್ರೋಟೀನ್ ಶೇಕ್ ಕುಡಿಯಿರಿ. ಇದು ಸ್ನಾಯುಗಳನ್ನು ಬಲಪಡಿಸುತ್ತದೆ. ಅಲ್ಲದೇ ಕ್ಯಾಲೋರಿಗಳನ್ನು ಸುಲಭವಾಗಿ ಕಡಿಮೆ ಮಾಡಬಹುದು. 

ಕ್ಯಾಮೊಮೈಲ್ ಚಹಾ ಕೂಡಾ ಆರೋಗ್ಯಕರ ಪಾನೀಯಾಗಳಲ್ಲಿ ಒಂದು. ಕ್ಯಾಮೊಮೈಲ್ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಕ್ಯಾಮೆಮೈಲ್ ಗ್ಲೂಕೋಸ್ ಅನ್ನು ನಿಯಂತ್ರಿಸುತ್ತದೆ. ಮತ್ತು ತೂಕವನ್ನು ಕಡಿಮೆ ಮಾಡುತ್ತದೆ. ಕ್ಯಾಮೊಮೈಲ್ ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆಯನ್ನು ಸುಲಭವಾಗಿ ಜೀರ್ಣಿಸುವ ಶಕ್ತಿ ಹೊಂದಿದೆ. 


bedtime, drinks , boost weight loss ,overnight, 
ಡ್ರಿಕ್ಸ್ ಸೇವಿಸಿ..  ತೂಕ ಇಳಿಸಿ,

ರೆಡ್ ವೈನ್ 

ವೈನ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲದಿದ್ದರೂ, ಕಡಿಮೆ ಪ್ರಮಾಣದಲ್ಲಿ ಕುಡಿಯುವುದರಿಂದ ಕೆಲವು ಪ್ರಯೋಜನಗಳಿವೆ. ರೆಡ್ ವೈನ್ ನಲ್ಲಿ ಕಂಡು ಬರುವ ಉತ್ಕರ್ಷಣ ನಿರೋಧಕವು ಕೊಬ್ಬನ್ನು ದೇಹಕ್ಕೆ ಹೆಚ್ಚುವರಿಯಾಗಿ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. 

ಸೋಯಾ ಆಧಾರಿತ ಪ್ರೋಟೀನ್ ಶೇಕ್. 

ನಿಮ್ಮ ದೇಹದಲ್ಲಿ ಪ್ರೋಟೀನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಮತ್ತು ತೂಕ ವನ್ನು ಕಡಿಮೆ ಮಾಡುತ್ತದೆ. ತೂಕ ನಷ್ಟದಲ್ಲಿ ಸೋಯಾ ಪ್ರೋಟೀನ್ ಶೇಕ್ ಇತರ ಪ್ರೋಟೀನ್ ಮೂಲಗಳಂತೆ ಪ್ರಯೋಜನಕಾರಿಯಾಗಿದೆ. ಸೋಯಾ ಸಾಕಷ್ಟು ಅಮೈನೋ ಆಮ್ಲಗಳನ್ನು ಒಳಗೊಂಡಿದ್ದು, ಇದು ಉತ್ತಮ ನಿದ್ರೆಗೆ ಸಹಾಯಕಾರಿಯಾಗಬಲ್ಲದ್ದು. 

ನೀರು 

ನೀರಿನಲ್ಲಿ ಕಡಿಮೆ ಕ್ಯಾಲೋರಿಗಳಿದ್ದು, ಸಾಕ್ಟು ನೀರು ಕುಡಿಯುವುದರಿಂದ ಅನೋಕ ಪ್ರಯೋಜನಗಳಿವೆ. ಇದು ಚಯಾಪಚಯ ಕ್ರಿಯೆಯನ್ನು ಉತ್ತಮವಾಗಿ ಕಾರ್ಯ ನಿರ್ವಹಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನೀರು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಚರ್ಮಕ್ಕೂ ಇದು ಉತ್ತಮವಾದದ್ದು. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ