ವಯಸ್ಸು 30 ದಾಟಿದವರಿಗೆ ಬ್ಯೂಟಿ ಟಿಪ್ಸ್

  • by

ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸುಂದರವಾಗಿ ಕಾಣಿಸಬೇಕೆಂದು ಬಯಸುವುದು ಸಹಜ. ತ್ವಚೆಯೂ ವೈಟ್ ಬಣ್ಣದಾಗಿರಬೇಕು ಎಂಬ ವ್ಯಾಮೋಹ ಮಹಿಳೆಯರಲ್ಲಿ ಮಾತ್ರವಲ್ಲದೇ ಪುರುಷರಲ್ಲೂ ಕಂಡು ಬರುತ್ತದೆ. ಸ್ಕಿನ್ ಮೇಲೆ ಕಪ್ಪು ಕಲೆ , ಮುಖದ ಕಪ್ಪು ಬಣ್ಣ ದಿಂದ ನಮ್ಮ ಸೌಂದರ್ಯವನ್ನು ಅಡ್ಡಿ ಪಡಿಸುತ್ತದೆ ಎಂದು ಎಲ್ಲರೂ ಭಾವಿಸುತ್ತಾರೆ. ಆದ್ರೆ ಧೂಳು, ಹಾಗೂ ಮಾಲಿನ್ಯದಿಂದ ತ್ವಚೆ ಹಾಳಾಗುತ್ತದೆ.

ತ್ವಚೆಯನ್ನು ಸುಂದರವಾಗಿಸಲು ಜನರು ದುಬಾರಿ ತ್ವಚೆಯ ಉತ್ಪನ್ನಗಳನ್ನು ಬಳಸುತ್ತಾರೆ. ಇದು ಸೂಕ್ಷ್ಮ ಚರ್ಮಕ್ಕೆ ಹಾನಿಕಾರಕವಾಗಿದೆ. ಮುಖದ ಮೇಲೆ ಮ್ಯಾಜಿಕ್ ನಂತೆ ಕೆಲಸ ಮಾಡುವ ನೈಸರ್ಗಿಕ ಪ್ಯಾಕ್ ಗಳನ್ನು ಬಳಸಿ ,ಸೌಂದರ್ಯ ಹೆಚ್ಚಿಸಿಕೊಳ್ಳಬಹುದು.

ಇನ್ನು ಯುವಕ ಯುವತಿಯರು 30 ಪ್ಲಸ್ ಆದ್ರೆ ಅಕಾಲಿಕ ವಯಸ್ಸಾಗುವಿಕೆ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಕಾಡುತ್ತಿದೆ. ಮಾಲಿನ್ಯ, ಕೆಟ್ಟ ಅಭ್ಯಾಸಗಳಿಂದಾಗಿ ಚರ್ಮದ ಮೇಲೆ ಪರಿಣಾಮ ಬೀರಬಹುದು. ಪ್ರತಿಯೊಬ್ಬರು ಸುಂದರವಾಗಿ ಯುವಕರಂತೆ ಕಾಣಬೇಕೆಂದು ಬಯಸುತ್ತಾರೆ. ವಿಶೇಷವಾಗಿ ಮಹಿಳೆಯರ ವಿಷಯಕ್ಕೆ ಬಂದಾಗ, ತಾವು ಯಾವಾಗಲೂ ಯಂಗ್ ಆಗಿ ಕಾಣಬೇಕೆಂದು ಬಯಸುತ್ತಾರೆ. ಚರ್ಮ ವಯಸ್ಸಾಗುವಿಕೆಯನ್ನು ತಡೆಗಟ್ಟುಕ ಅನೇಕ ಬ್ಯೂಟಿ ಪ್ರೊಡೆಕ್ಟ್ ಗಳನ್ನು ತಂದು ಬಳಸುತ್ತಾರೆ. ಆದ್ರೆ ಈ ಪ್ರೊಡೆಕ್ಟ್ ಗಳು ಶಾಶ್ವತ ಪರಿಣಾಮ ಬೀರುವುದಿಲ್ಲ. ಆದರೆ ಮನೆಯಲ್ಲಿ ನೈಸರ್ಗಿಕ ಸೌಂದರ್ಯ ವರ್ಧಕ ಮನೆ ಮದ್ದುಗಳನ್ನು ಬಳಸಿ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಈ ಬಗ್ಗೆ ಇಲ್ಲಿದೆ ಮಾಹಿತಿ.

beauty tips,ಬ್ಯೂಟಿ ಟಿಪ್ಸ್

ಚರ್ಮದ ಮೇಲೆ ಗೋಚರಿಸುವ ವೃದ್ಧಾಪ್ಯದ ಸುಕ್ಕುಗಳನ್ನು ತಡೆಗಟ್ಟುವುದು ಕಷ್ಟಕರವೇನಲ್ಲ. ನಿಮ್ಮ ಚರ್ಮ ಯೌವ್ವನದಂತೆ ನೈಸರ್ಗಿಕ ಕಾಣಬೇಕಾದರೆ. ಈ ಟಿಪ್ಸ್ ಅನುಸರಿಸಬಹುದು.

ಆ್ಯಂಟಿ ಏಜಿಂಗ್ ಫೇಸ್ ಮಾಯಿಶ್ಚರೈಸರ್
1/4 ಕಪ್ ಬಾದಾಮಿ ಎಣ್ಣೆ
2 ಚಮಚ ತೆಂಗಿನ ಎಣ್ಣೆ
2 ಚಮಚ ಬೈವಾಕ್ಸ್
1/2 ಟೀ ಸ್ಪೂನ್ ಶಿಯಾ ಎಣ್ಣೆ
2-3 ಹನಿಗಳು ಸಾರಭೂತ ತೈಲ

ಮೊದಲನೆಯದಾಗಿ ಬಾದಾಮಿ ಎಣ್ಣೆ, ತೆಂಗಿನ ಎಣ್ಣೆ ಹಾಗೂ ವಿಟಮಿನ್ ಇ ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಎಣ್ಣೆಯನ್ನು ಬೇವಾಕ್ಸ್ ನಲ್ಲಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎಣ್ಣೆಯಲ್ಲಿ ಮೇಣ ಚೆನ್ನಾಗಿ ಬೆರೆತಿದ್ದೇಯಾ ಎಂಬುದನ್ನು ಪರೀಕ್ಷಿಸಿ. ನಂತರ ಈ ಎಣ್ಣೆಯನ್ನು ಶಿಯಾ ಬಟರ್ ನಲ್ಲಿ ಸುರಿದು, ಇದರ ಮಿಶ್ರಣದ ಜತೆ ಸಾರಭೂತ ತೈಲವನ್ನು ಸೇರಿಸಿ. ಹಚ್ಚಿಕೊಳ್ಳಬಹುದು. ಈ ಪೇಸ್ಟ್ ಮುಖಕ್ಕೆ ಹಚ್ಚಿಕೊಳ್ಳವುದಕ್ಕಿಂತ ಮುನ್ನ ಮುಖವನ್ನು ಚೆನ್ನಾಗಿ ಕ್ಲಿನ್ ಮಾಡಿ.


ನಿಯಮಿತವಾಗಿ ನೀರು ಕುಡಿಯುವುದರಿಂದ ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಗಟ್ಟಬಹುದು. ನೀವು ದಿನವಿಡೀ ಕಿತ್ತಳೆ ಹಣ್ಣಿನ ಜ್ಯೂಸ್ ಸೇವಿಸಬಹುದು. ಕಿತ್ತಳೆ ಸಿಪ್ಪೆಯನ್ನು ಚೂರು ಚೂರಾಗಿ ಕತ್ತರಿಸಿ ನೀರಿನಲ್ಲಿ ಹಾಕಬೇಕು. ಇದರ ನೀರನ್ನು ದಿನವಿಡೀ ಸೇವಿಸಬಹುದು.

ಬೇಸಿಗೆ ಕಾಲದಲ್ಲಿ ಸೌತೆಕಾಯಿ, ರಾಸ್ಬರಿ, ಸ್ಟ್ರಾಬೆರಿಗಳು ಮಾರುಕಟ್ಟೆಯಲ್ಲಿಸುಲಭವಾಗಿ ಲಭ್ಯವಿರುತ್ತವೆ. ಈ ಮೂರನ್ನು ನೀರಿನಲ್ಲಿ ಸ್ವಚ್ಛಗೊಳಿಸಿ, ಕತ್ತರಿಸಿ ಈ ನೀರು ನಿಮ್ಮ ಚರ್ಮವನ್ನು ಹೈಡ್ರೀಕರಿಸುತ್ತದೆ. ಮತ್ತು ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ.

beauty tips,ಬ್ಯೂಟಿ ಟಿಪ್ಸ್

ಅನಾನಸ್ ಚೂರುಗಳು ಮತ್ತು ಪುದೀನಾ ಎಲೆಗಳನ್ನು ನೀರಿಗೆ ಸೇರಿಸಿ, ಸೇವಿಸಬಹುದು. ಈ ನೀರಿನಲ್ಲಿ ಬೀಟಾ ಕ್ಯಾರೋಟಿನ್ ಅಂಶವಿದ್ದು, ಇದು ಚರ್ಮದ ಉರಿಯೂತವನ್ನು ನಿವಾರಿಸುತ್ತದೆ.ವಯಸ್ಸಾಗುವಿಕೆಯನ್ನು ತಡೆಗಟ್ಟಲು ಆಹಾರ ಕ್ರಮ ತುಂಬಾ ಮುಖ್ಯವಾಗುತ್ತದೆ. ಚರ್ಮದ ಸುಕ್ಕು ಗಳಿಗೆ ಕಾರಣವಾಗುವ ಪದಾರ್ಥಗಳ ಸೇವನೆಯನ್ನು ಅವೈಡ್ ಮಾಡಬೇಕು.

ಕೋಸುಗಡ್ಡೆ ದೊಡ್ಡ ಪ್ರಮಾಣದ ಜೀವಸತ್ವಗಳು, ನಾರು ಹಾಗೂ ಖನಿಜಗಳು ಇರುವುದರಿಂದ ಇದು ಚರ್ಮವು ಬೇಗನೆ ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ.ಸಿಹಿಆಲುಗಡ್ಡೆಯಲ್ಲಿ ವಿಟಮಿನ್ ಎ ಸಾಕಷ್ಟು ಇರುವುದರಿಂದ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಬಹುದು.
ಇನ್ನು ಪಾಲಕ ಸೊಪ್ಪಿನಲ್ಲಿ ಬೀಟಾ ಕ್ಯಾರೋಟಿನ್ ಮತ್ತು ಲುಟೀನ್ ಅಂಶವಿರುವುದರಿಂದ ಪಾಲಕ್ ಸೊಪ್ಪು ಚರ್ಮದ ಬಿಗಿತವನ್ನು ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರವಹಿಸುತ್ತದೆ.
ಯಾವ ಆಹಾರವನ್ನು ಸೇವಿಸಬಾರದು
ಕರಿದ ಪದಾರ್ಥಗಳನ್ನು ಆದಷ್ಟು ಬೇಗ ತ್ಯಜಿಸುವುದು
ಸಂಸ್ಕರಿಸಿದ ಹಿಟ್ಟು ಸೇವಿಸುವುದನ್ನು ನಿಲ್ಲಿಸಿ
ಸಾಧ್ಯವಾದಷ್ಟು ಕಡಿಮೆ ಸಕ್ಕರೆ ತೆಗೆದುಕೊಳ್ಳಿ
ಕನಿಷ್ಠ ಪ್ರಮಾಣದ ಕೆಫೀನ್ ಸೇವಿಸಿ
ರಾತ್ರಿಯಲ್ಲಿ ಹುಳಿಇರುವ ಪದಾರ್ಥಗಳನ್ನು ಸೇವಿಸುವುದನ್ನು ನಿಲ್ಲಿಸಿ
ರಾತ್ರಿ ವೇಳೆ ರೈಸ್ ಹಾಗೂ ಆಲುಗಡ್ಡೆ ಸೇವಿಸಬೇಡಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ