ಬ್ಯಾಲೆನ್ಸ್ ಡಯೆಟ್ ಎಂದರೇನು.. ಪ್ರಯೋಜನಗಳೇನು..?

  • by

ದಿನ ನಿತ್ಯ ಜೀವನದಲ್ಲಿ ವ್ಯಾಯಾಮ , ನಿದ್ರೆ ಹಾಗೂ ವಿಶ್ರಾಂತಿ ಎಷ್ಟು ಅಗತ್ಯವಿದೆಯೋ, ಸಮತೋಲಿತ ಆಹಾರವನ್ನು ಸೇವಿಸುವುದು ಸಹ ಮುಖ್ಯವಾಗಿದೆ. ಆಹಾರವನ್ನು ಸೇವಿಸುವುದು ಅತಿಯಾಗಿ ತಿನ್ನುವುದು ಎಂದಲ್ಲ. ಸಹಜವಾಗಿ. ಸ್ವಲ್ಪ ಹೆಚ್ಚಾಗಿ ತಿಂದರೂ, ಅದ್ರಿಂದ ಅನಾರೋಗ್ಯ ಸಮಸ್ಯೆ ಕಾಡಬಹುದು.ಬ್ಯಾಲೆನ್ಸ್ ಡಯೆಟ್ ನಲ್ಲಿ ಪೌಷ್ಠಿಕ ಆಹಾರವನ್ನು ಮಾತ್ರ ಸೇವಿಸಬೇಕಾಗುತ್ತದೆ. ಇದು ನಿಮ್ಮನ್ನು ರೋಗಗಳಿಂದ ದೂರವಿಡುವುದಲ್ಲದೇ, ದೈಹಿಕ ಬೆಳವಣಿಗೆಗೂ ಹೆಚ್ಚು ಉಪಯುಕ್ತವಾದದ್ದು ಎಂದು ಹೇಳಲಾಗುತ್ತದೆ. ಸಮತೋಲನ ಆಹಾರ ಎಂದರೇನು..? ಹೇಗೆ ಸೇವಿಸಬೇಕು..? ನೀವು ಸೇವಿಸುವ ಆಹಾರಗಳ ಪಟ್ಟಿ ಇಲ್ಲಿದೆ..!


Balance Diet, Benefits, Components, ,ಸಮತೋಲಿತ ಆಹಾರ , ಆರೋಗ್ಯ ಪ್ರಯೋಜನಗಳು

ಸಮತೋಲಿತ ಆಹಾರ ಎಂದರೇನು..?

ಸಮತೋಲಿತ ಆಹಾರ ಯಾವುದು ಎಂದು ಮೊದಲು ತಿಳಿಯುವುದು ಮುಖ್ಯ.. ಸರಿಯಾದ ಮತ್ತು ಸಮತೋಲಿತ ಆಹಾರಗಳೆಂದರೆ ಹಸಿರು ತರಕಾರಿಗಳು, ಹಣ್ಣುಗಳು, ಕೊಬ್ಬು ರಹಿತ ಅಥವಾ ಕಡಿಮೆ ಡೈರಿ ಉತ್ಪನ್ನಗಳು, ಕೋಳಿ, ಮೀನು, ಬೀನ್ಸ್ , ಮೊಟ್ಟೆ, ಧಾನ್ಯಗಳು ಸಮತೋಲಿತ ಆಹಾರದಲ್ಲಿ ಸೇರುತ್ತವೆ. ಇನ್ನು ಸೋಡಿಯಂ ಹೆಚ್ಚಾಗಿರುವ , ಸ್ಯಾಚುರೇಟೆಡ್ , ಟ್ರಾನ್ಸ್ ಫ್ಯಾಟ್, ಸಕ್ಕರೆ ಹೆಚ್ಚಿರುವ ಪದಾರ್ಥಗಳನ್ನು ನಿಯಂತ್ರಿಸಬೇಕಾಗುತ್ತದೆ. ಕ್ಯಾಲೋರಿಗಳು ವ್ಯಕ್ತಿಯ ವಯಸ್ಸು ಹಾಗೂ ದೈಹಿಕ ಸ್ಥಿತಿಗೆ ಅನುಗುಣವಾಗಿ ಬದಲಾಗುತ್ತದೆ.

ಸಮತೋಲಿತ ಆಹಾರ ಏಕೆ ಮುಖ್ಯ…?

ಯಾವುದೇ ವ್ಯಕ್ತಿಗೆ ಸಮತೋಲಿತ ಆಹಾರ ಮುಖ್ಯವಾಗುತ್ತದೆ. ಏಕೆಂದರೆ ದೇಹವು ಸರಿಯಾಗಿ ಸಮತೋಲಿತ ಹಾಗೂ ಪೋಷಕಾಂಶಗಳನ್ನು ಪಡೆಯದೇ ಇದ್ದರೆ, ದುರ್ಬಲವಾಗುತ್ತದೆ. ರೋಗಗಳ ನೆಲಯಾಗುತ್ತದೆ.


Balance Diet, Benefits, Components, ,ಸಮತೋಲಿತ ಆಹಾರ , ಆರೋಗ್ಯ ಪ್ರಯೋಜನಗಳು

ಬ್ಯಾಲೆನ್ಸ್ ಡಯೆಟ್ ಪ್ರಯೋಜನಗಳು…!

ಇತ್ತೀಚಿನ ದಿನಗಳಲ್ಲಿ ಬೆಚ್ಚು ಬಾಹ್ಯ ಮತ್ತು ಎಣ್ಣೆಯುಕ್ತ ಆಹಾರವನ್ನು ತಿನ್ನುವುದರಿಂದ ಬಹುತೇಕ ಎಲ್ಲರೂ ತೂಕ ಹೆಚ್ಚಳ ಮತ್ತು ಬೊಜ್ಜಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ವೇಳೆ ನೀವು ವ್ಯಾಯಾಮದ ಜತೆಗೆ ಸಮತೋಲಿತ ಆಹಾರ ಸೇವಿಸಿದರೆ, ತೂಕ ನಿಯಂತ್ರಣ ಮಾಡಬಹುದು.

ರೋಗಗಳ ಅಪಾಯ ಕಡಿಮೆ!

ಸರಿಯಾದ ಆಹಾರ ಕ್ರಮ ವಿವಿಧ ರೋಗಗಳ ಅಪಾಯ ತಪ್ಪಿಸಬಹುದು. ಸರಿಯಾದ ಹಾಗೂ ಸಮತೋಲಿತ ಆಹಾರವನ್ನು ನಿಯಮಿತವಾಗಿ ತೆಗೆದುಕೊಂಡರೆ, ಬೊಜ್ಜು, ಹೃದ್ರೋಗ, ಮಧುಮೇಹ, ಮತ್ತು ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ.

ಶಕ್ತಿ ಹೆಚ್ಚುತ್ತದೆ.. !

ಕೆಲವೊಮ್ಮೆ ಸರಿಯಾದ ಪೋಷಕಾಂಶಗಳ ಕೊರತೆಯಿಂದ ದೇಹವು ದುರ್ಬಲವಾಗುತ್ತದೆ. ಆದ್ರೆ ಸರಿಯಾದ ಸಮಯದಲ್ಲಿ ಬ್ಯಾಲೆನ್ಸ್ ಡಯೆಟ್ ಫಾಲೋ ಮಾಡಿದರೆ ದೇಹವು ಶಕ್ತಿಯನ್ನು ಪಡೆಯುತ್ತದೆ. ಈ ಮೂಲಕ ವ್ಯಕ್ತಿ ಆರೋಗ್ಯವಾಗಿರಲು ಸಹಾಯವಾಗುತ್ತದೆ.

ಮಾನಸಿಕ ಆರೋಗ್ಯ

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಒತ್ತಡ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಆಗಾಗ್ಗೆ ಕೆಲವು ಜನರು ಮನಸ್ಥಿತಿ ಬದಲಾವಣೆಯಿಂದಾಗಿ ನರಳುತ್ತಾರೆ. ಇದಕ್ಕೆ ಕಾರಣ ಅಸಮತೋಲಿತ ಆಹಾರ ಕ್ರಮ. ಹೀಗಾಗಿ ಸಮತೋಲಿತ ಆಹಾರ ಪಡೆದರೆ, ಸ್ವಲ್ಪ ಮಟ್ಟಿಗೆ ಈ ಸಮಸ್ಯೆಗಳನ್ನು ಹತೋಟಿಗೆ ತರಬಹುದು. ಆಹಾರ ಸೇವನೆ ಕೂಡ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಸಾಕಷ್ಟು ನಿದ್ರೆ ..

ಕೆಲಮೊಮ್ಮೆ ಸರಿಯಾದ ಆಹಾರ ಸೇವಿಸದಿದ್ದರೆ. ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಕಾಡಬಹುದು, ಅನೇಕ ಜನರು ರಾತ್ರಿ ವೇಳೆ ಹೊಟ್ಟೆ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಾರೆ. ಇದು ನಿದ್ರೆಯ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಸಮತೋಲಿತ ಆಹಾರ ಸೇವಿಸಿದರೆ, ಜೀರ್ಣಾಂಗ ಕ್ರಿಯೆ ಸರಿಯಾಗಿರುತ್ತದೆ. ಮತ್ತು ನಿದ್ರೆ ಕೂಡಾ ಉತ್ತಮವಾಗಿರುತ್ತದೆ.


Balance Diet, Benefits, Components, ,ಸಮತೋಲಿತ ಆಹಾರ , ಆರೋಗ್ಯ ಪ್ರಯೋಜನಗಳು

ಪ್ರೋಟೀನ್ ..!

ದೇಹದ ಪ್ರಮುಖ ಪೋಷಕಾಂಶಗಳಲ್ಲಿ ಪ್ರೋಟೀನ್ ಕೂಡಾ ಒಂದು. ವ್ಯಕ್ತಿಯ ಒಟ್ಟಾರೆ ಆರೋಗ್ಯಕ್ಕೆ ಇದು ಅವಶ್ಯಕ. ಇದು ಸ್ನಾಯುಗಳನ್ನು ಬಲಪಡಿಸುತ್ತದೆ. ಮತ್ತು ಪ್ರತಿರಕ್ಷಣಾ ಶಕ್ತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಪ್ರೋಟೀನ್ ಪಡೆಯಲು ಚೀಸ್, ಮೊಟ್ಟೆ , ಹಾಲು, ಬಟಾಣಿಯಂತಹ ಆಹಾರಗಳನ್ನು ಸೇವಿಸಬೇಕಾಗುತ್ತದೆ.

ಕಾರ್ಬೋಹೈಡ್ರೇಟ್ ಗಳು!

ಕಾರ್ಬೋಹೈಡ್ರೈಟ್ ಗಳು ದೇಹಕ್ಕೆ ಸರಿಯಾದ ಶಕ್ತಿ ಒದಗಿಸುತ್ತವೆ. ಸರಿಯಾದ ಪ್ರಮಾಣದಲ್ಲಿ ತೆಗೆದುಕೊಂಡರೆ ಇದು ಅನೇಕ ರೋಗಗಳನ್ನು ತಡೆಗಟ್ಟುತ್ತದೆ. ಒಳ್ಳೆಯ ರೀತಿ ಹಾಗೂ ಕೆಟ್ಟ ರೀತಿ ಎರಡು ರೀತಿಯ ಕಾರ್ಬೋಹೈಡ್ರೇಟ್ ಗಳಿವೆ. ಸರಿಯಾದ ಕಾರ್ಬೋಹೈಡ್ರೇಟ್ ತೆಗೆದುಕೊಂಡರೆ ಆರೋಗ್ಯಕ್ಕೆ ಒಳ್ಳೆಯದು. ಕಂದು ಬಣ್ಣದ ಅಕ್ಕಿ, ಕಡಿಮೆ ಕೊಬ್ಬಿನ ಹಾಲು, ಆಲುಗಡ್ಡೆ, ಬಾಳೆಹಣ್ಣು ಸೇವಿಸಬಹುದು. ಅದೇ ರೀತಿ ಎಣ್ಣೆಯುಕ್ತ ಆಹಾರಗಳಾದ ಫ್ರೆಂತ್ ಫ್ರೈಸ್, ಸಿಹಿ ಆಹಾರಗಳಾದ ಚಾಕಲೇಟ್, ಐಸ್ ಕ್ರೀಮ್, ಕುಕೀಸ್, ಅಥವಾ ಬಿಳಿ ಬ್ರೆಡ್ ಹಾನಿಕಾರಕ ಕಾರ್ಬೋಹೈಡ್ರೇಟ್ ಗಳನ್ನು ಒಳಗೊಂಡಿರುತ್ತದೆ. ಹಾಗಾಗಿ ಇವುಗಳಿಂದ ದೂರವಿರಿ.

ಖನಿಜಗಳು…!

ಆಯೋಡಿನ್ , ಕಬ್ಬಿಣ , ಕ್ಯಾಲ್ಸಿಯಂ ಮತ್ತು ಪೋಟ್ಯಾಶಿಯಂ ಪ್ರಮುಖ ಖನಿಜಗಳಾಗಿವೆ. ದೇಹದಲ್ಲಿನ ರಕ್ತದ ನಷ್ಟವನ್ನು ತಡೆಯಲು ಹಲ್ಲುಗಳನ್ನು ಹಾಗೂ ಮೂಳೆಗಳನ್ನು ಬಲವಾಗಿರಸಲು ಖನಿಜಗಳು ಅಗತ್ಯ ಎಂದು ಹೇಳಬಹುದು.

ಹಸಿರು ತರಕಾರಿಗಳು

ನಿಮ್ಮ ದೈನಂದಿನ ಊಟದಲ್ಲಿ ಸಮತೋಲಿತ ಆಹಾರದಲ್ಲಿ ಪಾಲಕ, ಕೊತ್ತಂಬರಿ, ಸೌತೆಕಾಯಿ, ಹಸಿರು ಸೊಪ್ಪಿನ ತರಕಾರಿಗಳು, ಬೀನ್ಸ್, ಸೌತೆಕಾಯಿ ಯನ್ನು ಸೇವಿಸಬಹುದು. ತರಕಾರಿ ಸೇವಿಸಲು ಇಷ್ಟವಿಲ್ಲದಿದ್ದರೂ, ಸೂಪ್ ರೀತಿಯೂ ಸೇವಿಸಬಹುದಾಗಿದೆ.

ಹಣ್ಣುಗಳು

ತರಕಾರಿಗಳಂತೆ ಹಣ್ಣುಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಿ. ಇವುಗಳಲ್ಲಿ ಅಗತ್ಯವಾದ ಪೋಷಕಾಂಶ ಮಾತ್ರವಲ್ಲ, ಬೇಗನೆ ಜೀರ್ಣವಾಗುವಂತಹ ಅಂಶಗಳಿವೆ. ನಿಮ್ಮ ಹಸಿವನ್ನು ಬ್ಯಾಲೆನ್ಸ್ ಮಾಡಲು ಹಣ್ಣುಗಳನ್ನು ಸೇವಿಸಬಹುದು. ಅಥವಾ ಜ್ಯೂಸ್ ಸೇವಿಸಬಹುದು.

ಹಾಗೇ ನೀರು ಸರಿಯಾದ ಪ್ರಮಾಣದಲ್ಲಿ ಕುಡಿಯಬೇಕಾಗುತ್ತದೆ. ಕಡಿಮೆ ನೀರು ಕುಡಿಯುವುದರಿಂದ ಅನೇಕ ಸಮಸ್ಯೆಗಳು ಎದುರಾಗಬಹುದು. ಹಾಗಾಗಿ ನಿಮ್ಮನ್ನು ನೀವು ಹೈಡ್ರೇಟ್ ಆಗಿ ಇರಿಸಲು ಹೆಚ್ಚಾಗಿ ನೀರು ಕುಡಿಯಬೇಕು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ