ಸೌಂದರ್ಯ ಹಾಳಾಗದೇ ಇರಲು ಈ ಅಭ್ಯಾಸ ಬಿಟ್ಟು ಬಿಡಿ..!

  • by

ಇತ್ತೀಚಿನ ದಿನಗಳಲ್ಲಿ ಒತ್ತಡ ರಹಿತ ಜೀವನದಿಂದಾಗಿ ನಾವು ಯಾವಾಗಲು ತಪ್ಪನ್ನೇ ಮಾಡುತ್ತಿರುತ್ತೇವೆ. ಆದ್ರೆ ಇದು ಆರೋಗ್ಯದ ಮೇಲೆ ತೀರ್ವ ಪರಿಣಾಮ ಬೀರಲು ಸಾಧ್ಯವಾಗುತ್ತದೆ. ಈ ತಪ್ಪುಗಳಿಂದಾಗಿ ಹಾರ್ಟ್ ಅಟ್ಯಾಕ್, ಕ್ಯಾನ್ಸರ್, ಹೈ ಬಿಪಿ, ಕಿಡ್ನಿ ಸಮಸ್ಯೆಗಳು ಕಾಡುವುದುಂಟು. ಹೀಗಾಗಿ ದಿನ ನಿತ್ಯ ಕೆಲವು ಅಭ್ಯಾಸಗಳು ಅರಿವಿಲ್ಲದೇ ಸೌಂದರ್ಯ ಹಾಳಾಗಲು ಕಾರಣವಾಗುತ್ತವೆ. ತ್ವಚೆ ರಕ್ಷಣೆಗೆ ಹಾಗೂ ಆರೋಗ್ಯದಿಂದ ಇರಲು ಹೀಗೆ ಮಾಡಿ. 

ಸನ್ ಸ್ಕ್ರೀನ್ ಲೋಷನ್ ಬಳಸಬೇಡಿ

ಪದೇ ಪದೇ ಸನ್ ಸ್ಕ್ರೀನ್ ಲೋಷನ್ ಬಳಸುತ್ತಿದ್ದರೆ ನಿಮ್ಮ ಸೌಂದರ್ಯ ಹಾಳಾಗಲು ಕಾರಣ. ಪದೇ ಪದೇ  ಸನ್ ಸ್ಕ್ರೀನ್ ಲೋಷನ್ ಬಳಸುವುದು ಒಳ್ಳೆಯದಲ್ಲ. ಹೆಚ್ಚಾಗಿ ಬಳಸುವುದರಿಂದ ಸ್ಕಿನ್ ಡ್ಯಾಮೇಜ್ ಆಗುವ ಲಕ್ಷಣಗಳು ಕಂಡು ಬರುತ್ತದೆ. ಸ್ಕಿನ್ ಸಮಸ್ಯೆಗಳು ಎದುರಾಗಬಹುದು

ನಿದ್ರಾ ಹೀನತೆ ಅಥವಾ ಕಡಿಮೆ ನಿದ್ರೆ ತ್ವಜೆಯ ಆರೋಗ್ಯಕ್ಕೆ ಉತ್ತಮವಲ್ಲ. ದಿನವೆಲ್ಲ ಬಳಲಿದ್ದ ತ್ವಜೆ ನಿದ್ದೆಯಲ್ಲಿ ತನ್ನನ್ನು ಸರಿ ಮಾಡಿಕೊಳ್ಳುತ್ತದೆ. ದಣಿವನ್ನು ನಿವಾರಿಸಿಕೊಳ್ಳುತ್ತದೆ. ನೀವು ಸರಿಯಾಗಿ ನಿದ್ದೆ ಮಾಡದಿರುವುದು ಕೋಮಲ ತ್ವಜೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ತಡ ರಾತ್ರಿಯವರೆಗೂ ನಿದ್ರೆ ಮಾಡದೇ ಇರುವುದರಿಂದ ಡಿಪ್ರೆಷನ್, ಸ್ಟ್ರೆಸ್, ಬೊಜ್ಜು, ಆ್ಯಸಿಡಿಟಿ ಸೇರಿದಂತೆ ಅಜೀರ್ಣ ಹೀಗೆ ನಾನಾ ರೀತಿಯ ಸಮಸ್ಯೆಗಳು ಎದುರಾಬಹುದು. ಇದ್ರಿಂದ ನಿಮ್ಮ ಅಕಾಲಿಕ ವಯಸ್ಸಾಗುವಿಕೆ ಹೆಚ್ಚಾಗಬಹುದು. 

ಸಾಕಷ್ಟು ಉಪ್ಪು ಸೇವಿಸುವುದರಿಂದ ಬಿಪಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದ್ರಿಂದ ಕಿಡ್ನಿ ಡ್ಯಾಮೇಜ್ ಹಾಗೂ ಹಾರ್ಟ್ ಅಟ್ಯಾಕ್ ಅಪಾಯ ಹೆಚ್ಚಾಗುವ ಸಾಧ್ಯತೆ ಇರುತ್ತದೆ. 

ಅತಿಯಾಗಿ ಡಯಟ್ ಮಾಡುವುದರಿಂದ ಬೊಜ್ಜು ಹೆಚ್ಚಾಗಬಹುದು. ತೂಕ ಹೆಚ್ಚಳವಾಗುವು ಸಾಧ್ಯತೆ ಇರುತ್ತದೆ. ಇದ್ರಿಂದ ಹೆಚ್ಚು ಬಿಪಿ ಹಾಗೂ ಹಾರ್ಟ್ ಸಮಸ್ಯೆಗಳು ಹೆಚ್ಚಾಗುತ್ತದೆ.  8 ಹಾಗೂ 10 ಗ್ಲಾಸ್ ಕ್ಕಿಂತಲೂ ಕಡಿಮೆ ನೀರು ಕುಡಿಯುವುದರಿಂದ ದೇಹದ ವಿಷಕಾರಿ ಅಂಶಗಳನ್ನು ಹೊರ ಹಾಕಲಾಗುವುದಿಲ್ಲ. ಹೀಗಾಗಿ ಹೆಚ್ಚು ನೀರು ಕುಡಿಯಬೇಕು. 

ಮಾತ್ರೆಗಳ ಅಧಿಕ ಸೇವನೆಯೂ ಸಹ ಆರೋಗ್ಯ ಹಾಗೂ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ. ಸಣ್ಣ ಪುಟ್ಟ ವಿಷಯಕ್ಕೆ ಪೇನ್ ಕಿಲ್ಲರ್ಸ್  ಮಾತ್ರೆ  ಸೇವಿಸುವುದು ಇದು ಕಿಡ್ನಿ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹೆಚ್ಚಾಗಿ ಮಾತ್ರೆಗಳನ್ನು ಸೇವನೆ ಮಾಡುವುದು ಬೇಡ. 

ಅಧಿಕವಾಗಿ ಮಧ್ಯಪಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾರ್ಟ್ ಫೆಲ್ಯೂರ್ ನಂತಹ ಹಲವು ಸಮಸ್ಯೆಗಳಿಗೆ ಇದು ಕಾರಣವಾಗುತ್ತದೆ. ಇದ್ರಿಂದ ಸೀಗುವ ಕ್ಯಾಲೋರಿ ದೇಹದ ತೂಕ ಹೆಚ್ಚಾಗಲು ಕಾರಣವಾಗುತ್ತದೆ. 

ಹೆಚ್ಚಾಗಿ ಕೋಲ್ ಡ್ರಿಂಕ್ಸ್ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇತ್ತೀಚಿನ ದಿನಗಳಲ್ಲಿ ಜನರು ಕೋಲ್ ಡ್ರಿಂಕ್ಸ್ ಗೆ ಮಾರು ಹೋಗಿರುತ್ತಾರೆ.  ಅತಿಯಾದ ಕೋಲ್ ಡ್ರಿಂಕ್ಸ್ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡಬಲ್ಲದ್ದು. 

ಬಿಸಿ ನೀರಿನ ಸ್ನಾನ ಪ್ರತಿಯೊಬ್ಬರಿಗೂ ಇಷ್ಟ. ಇದು ಆರಾಮದಾಯಕ ಅನುಭವ ನೀಡುವುದಂತೂ ಸತ್ಯ. ಆದರೆ

ಸೂಕ್ಷ್ಮ ತ್ವಜೆಗೆ ಇದು ಅಡ್ಡ ಪರಿಣಾಮವನ್ನು ಬೀರುತ್ತದೆ. ಬಿಸಿ ನೀರಿನಿಂದ ತ್ವಜೆಯ ಸೂಕ್ಷ್ಮಗೃಂಥಿಗಳು ದುರ್ಬಲಗೊಂಡು ತ್ವಜೆ ಕೆಂಪು ಬಣ್ಣಕ್ಕೆ ತಿರುಗುತ್ತದೆ ಅಥವಾ ಡ್ರೈ ಆಗಬಹುದು.

ನಿಮ್ಮ ಮೇಕಪ್ ಬ್ರಷ್‌ನ್ನು ಶುಚಿಗೊಳಿಸದೇ ಬಳಸುವುದು ನಿಜಕ್ಕೂ ಅಪಾಯಕಾರಿ. ಅದರಲ್ಲಿ ಬ್ಯಾಕ್ಟಿರಿಯಾಗಳು ಬೆಳೆದು ತ್ವಜೆಯ ಮೇಲೆ ಅಡ್ಡ ಪರಿಣಾಮ ಬೀರಬಹುದು. ಜತೆಗೆ ಮೊಡವೆಗಳಿಗೂ ಆಹ್ವಾನ ನೀಡಬಹುದು. ಹೀಗಾಗಿ ವಾರಕ್ಕೊಮ್ಮೆ ಅದನ್ನು ಶಾಂಪು ನೀರಿನಿಂದ ತೊಳೆದು ಒಣಗಿಸಿ.

ಚೂಪಾದ ತುದಿಯನ್ನು ಹಿಡಿದು ಮೊಡವೆಯನ್ನು ಕೀಳುವುದು ಪ್ರಚೋದನಾಕಾರಿಯಾಗುತ್ತದೆ. ಆದರೆ ಹೀಗೆ ಮಾಡುವುದರಿಂದ ಬ್ಯಾಕ್ಟಿರಿಯಾಗಳು ಮತ್ತಷ್ಟು ಆಳಕ್ಕೆ ಮೊಡವೆಗಳು ಹೆಚ್ಚಬಹುದು.

ಫೋನ್ ನಲ್ಲಿ ಹೆಚ್ಚು ಕಾಲ ಮಾತನಾಡುವುದು ಸಹ ತ್ವಜೆಗೆ ಒಳ್ಳೆಯದಲ್ಲ. ಮೊಬೈಲ್ ಎಷ್ಟರ ಮಟ್ಟಿಗೆ ಶುಚಿಯಾಗಿರುತ್ತದೆ. ಎಷ್ಟರ ಮಟ್ಟಿಗೆ ಬ್ಯಾಕ್ಟಿರಿಯಾ ಮುಕ್ತವಾಗಿರುತ್ತದೆ ಎಂಬುದು ನಮಗರಿವಿರುವುದಿಲ್ಲ.  ಮಾತನಾಡುವಾಗ ಮೊಬೈಲ್‌ನ್ನು ತ್ವಜೆಗೆ ಒತ್ತಿ ಹಿಡಿಯುವುದರಿಂದ ತ್ವಜೆಗೆ ಹಾನಿಯಾಗುತ್ತದೆ. 

ದಿನಕ್ಕೆ ಎರಡು ಬಾರಿ ಫೇಸ್ ವಾಸ್ ಬಳಸಿ ತೊಳೆಯುವುದು ತ್ವಜೆಗೆ ಉತ್ತಮ, ಜತೆಗೆ ಆರೋಗ್ಯಕರ ಆಹಾರ ಕ್ರಮ ಇರಲಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ