ಮಕ್ಕಳ ಚರ್ಮದ ಆರೈಕೆ ಹೀಗಿರಲಿ..!

  • by

ಮಕ್ಕಳ ಚರ್ಮ ಕೋಮಲವಾಗಿರುತ್ತದೆ. ಚಳಿಗಾಲದಲ್ಲಿ ಅಥವಾ ಯಾವುದೇ ಸಮಯದಲ್ಲಿ ಎಷ್ಟೇ ಕೇರ್ ವಹಿಸಿದ್ರು ಸಾಕಾಗಲ್ಲ.  ಮಕ್ಕಳ ಚರ್ಮ ಅತ್ಯಂತ ಸೂಕ್ಷ್ಮವಾಗಿರುವುದರಿಂದ ಪೋಷಕರು ಸಾಕಷ್ಟು ಗಮನ ಹರಿಸಬೇಕು. ಮಕ್ಕಳ ಚರ್ಮದ ಆರೈಕೆ ಹೇಗಿರಬೇಕು.., ಚರ್ಮದ ಗೌರವರ್ಣ ಹೆಚ್ಚಿಸಲು ಕೆಲ ಮನೆ ಮದ್ದುಗಳನ್ನು ಇಲ್ಲಿ ಹೇಳಲಾಗಿದೆ. 

ಉಗುರು ಬೆಚ್ಚಗಿನ ಎಣ್ಣೆಯಿಂದ ಮಕ್ಕಳನ್ನು ಮಸಾಜ್ ಮಾಡಬೇಕು. ಮಗುವಿಗೆ  ನಯವಾಗಿ ಮಸಾಜ್ ಮಾಡುವುದು ಉತ್ತಮ. ಮಗು ಸಾಮಾನ್ಯವಾಗಿ ಮಲಗುವ ಸಮಯಕ್ಕೆ ಸುಮಾರು ೧ ಗಂಟೆಯ ಮೊದಲು ಎಣ್ಣೆಯಿಂದ ಮಸಾಜ್ ಮಾಡಿ. ನೀರಿನಲ್ಲಿ ಸ್ನಾನ ಮಾಡಿಸಿ, ಮಲಗಿಸುವುದರಿಂದ ಚರ್ಮ ಕಾಂತಿಯುಕ್ತವಾಗುತ್ತದೆ. ಈ ವಿಧಾನವನ್ನು ವಾರಕ್ಕೊಮ್ಮೆ ಹಾಗ ಎರಡು ಬಾರಿ ಮಾಡಬೇಕು. 

Baby skin care, tips, health
ಮಗುನಿವ ಚರ್ಮದ ಆರೈಕೆ, ಆರೋಗ್ಯ

ಮಕ್ಕಳಿಗೆ ಅರಶಿಣ ಚೆಂದದ ಲೇಪನ ಹಚ್ಚುವುದು ಮುಖ್ಯ. ಅರ್ಧ ಚಮಚ ಅರಶಿಣದ ಪುಡಿ.. ಹಲವು ಹನಿ ಹಾಲು ಸೇರಿಸಿ ನಯವಾದ ಲೇಪನ ತಯಾರಿಸಿ. ಮಗುವಿನ ಸೂಕ್ಷ್ಮಾಂಗಗಳನ್ನು ಹೊರೆತು ಪಡಿಸಿ, ಇಡೀ ಶರೀರಕ್ಕೆ ಹಚ್ಚಿ, ಇದ್ರಿಂದ ಕೊಂಚ ಉರಿ ಮಾಯವಾಗುತ್ತದೆ. ಕೆಲವು ಮಕ್ಕಳು ಅಳುತ್ತವೆ. ಆಗ ಫ್ಯಾನ್ ಜೋರಾಗಿ ಹಾಕಿ ತಣಿಸಿ. ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡಿಸಿ. 

ಸೋಪಿನ ಬದಲು ಗುಲಾಬಿ ನೀರು ಉಪಯೋಗಿಸಿ

ಮಕ್ಕಳ ಮೈಸ್ನಾನ ಮಾಡಿಸಲು ಸೋಪು ಉಪಯೋಗಿಸಿ. ಈಗ ಮಾರುಕಟ್ಟೆಯಲ್ಲಿ ಸೌಮ್ಯ ಸಾಬೂನುಗಳು ಲಭ್ಯವಿದೆ. ನಿಮ್ಮ ಮಗುವಿನ ಚರ್ಮಕ್ಕೆ ಯಾವ ಸೋಪು ಉತ್ತಮ ಎಂಬುದನ್ನು ಮಕ್ಕಳ ವೈದ್ಯರ ಸಲಹೆ ಪಡೆದು ಉಪಯೋಗಿಸಿ. 

ಸೇಬು, ಕಿತ್ತಳೆ, ದ್ರಾಕ್ಷಿ ರಸಗಳನ್ನು ಮಕ್ಕಳಿಗೆ ಕುಡಿಸುವುದು ಉತ್ತಮ. ಆಹಾರದಲ್ಲಿ ಕಿತ್ತಳೆ ರಸ, ಸೇಬಿನ ರಸ, ದ್ರಾಕ್ಷಿಹಣ್ಣಿನ ರಸಗಳನ್ನು ಸೇರಿಸಿ, ಆಗಾಗ ತಿನ್ನಿಸುತ್ತಿರಿ. ಇವು ಮಗುವಿನ ಚರ್ಮದ ಕಾಂತಿ ಹಾಗೂ ಗೌರವರ್ಣವನ್ನು ಹೆಚ್ಚಿಸುತ್ತವೆ. 

ಮಗುವಿನಲ್ಲಿ ಚರ್ಮದ ಸಮಸ್ಯೆಗಳು ಕಾಡಬಹುದು. ಕತ್ತಿನ ಮೇಲಿನ ತ್ವಚೆ, ಮುಖ ಕೆಪಗಾಗಿ ಮುಳ್ಳಿನಂತಹ ರಚನೆ ಕಾಣಿಸಿಕೊಳ್ಳುತ್ತವೆ. ಇದು ತ್ವಚೆಯ ಸತ್ತ ಜೀವಕೋಶದಲ್ಲಿ ಎಣ್ಣೆ ಸೇರಿಕೊಂಡರೆ ಉಂಟಾಗುವ ಸಮಸ್ಯೆ. ಹೀಗಾಗಿ ಮಗುವಿಗೆ ಸ್ನಾನ ಮಾಡಿಸಿದ ನಂತರ ಮೃದುವಾದ ಬ್ರಷ್ ನಿಂದ ಮೆತ್ತಗೆ ಅದನ್ನು ತೆಗೆದು ಹಾಕಬಹುದು. 

ಮಗುವಿಗೆ ಪದೇ ಪದೇ ಸ್ನಾನ ಮಾಡಿದರೆ ಮಗುವಿನ ತ್ವಚೆಯ ಕಾಂತಿ ಕಳೆದುಕೊಳ್ಳುತ್ತದೆ. ಇದು ಇಸುಬಿ ಸಮಸ್ಯೆಗೆ ಕಾರಣವಾಗಬಹುದು. 

ಮಕ್ಕಳ ತ್ವಚೆ ಮೇಲೆ ಇದ್ದಕ್ಕಿದ್ದ ಹಾಗೇ ಕೆಂಪು ಗುಳ್ಳೆಗಳು, , ದದ್ದು, ಎದ್ದರೆ, ಇದಕ್ಕೆ ಕೆಲವು ಉತ್ಪನ್ನಗಳಲ್ಲಿರುವ ಬಣ್ಣ, ಸುವಾಸನೆ ಕಾರಣವಿರಬಹುದು. ಡಯಾಪರ್ ನಿಂದಲೂ ಇಂತಹ ಸಮಸ್ಯೆ ಏಳಬಹುದು. ಹೀಗಾಗಿ ಮಕ್ಕಳನ್ನು ಹೊರಗೆ ಆಟವಾಡಲು ಹಾಗೂ ಬೆವರು ಹೀರಿಕೊಳ್ಳುವ ಪೌಡರ್ ಬಳಸಿ. 

ಬೊಕ್ಕೆ, ಕುರುಗಳು ಇದ್ದರೆ ಅದನ್ನು ಒತ್ತುವುದು ಬೇಡ. ಆ್ಯಂಟಿ ಬಯೋಟಿಕ್ ಕ್ರೀಂ ಬಳಸಿ. ಇವುಗಳು ಅಧಿಕ

ಸಂಖ್ಯೆಯಲ್ಲಿ ಎದ್ದು ಜ್ವರ ಬಂದರೆ ಕಡೆಗಣಿಸಬೇಡಿ. 

ಕಣ್ಣಿಗೆ ಅಪಾಯ ಒಡ್ಡದ , ಕಣ್ಣಲ್ಲಿ ನೀರು ಹರಿಸದ ಸೂಚನೆಗಳು ಉತ್ಪನ್ನಗಳು ಮೇಲಿರಬೇಕು. 

ಜೋಳದ ಪಿಷ್ಟದ ಅಥವಾ ಪೆಟ್ರೋಲಿಯಂ ಅಂಶವಿರುವ ಬೇಬಿ ದದ್ದು ನಿವಾರಕ ಕ್ರೀಮ್ ಬಳಸಬಹುದು. ಖನಿಜಾಂಶದಿಂದ ಕೂಡಿದ ಮಸಾಜ್ ಎಣ್ಣೆ ಸೂಕ್ತ.. ಸುವಾಸನೆಯಿಲ್ಲದ ಬೇಬಿ ವೈಪ್ಸ್. ಡಯಾಪರ್ ನಿಂದಾಗುವ ದದ್ದುಗಳನ್ನು ನಿವಾರಿಸುತ್ತದೆ. 

Baby skin care, tips, health
ಮಗುನಿವ ಚರ್ಮದ ಆರೈಕೆ, ಆರೋಗ್ಯ

ಮೊದಲಿಗೆ ಚಳಿಗಾಲದಲ್ಲಿ ಸಾಧ್ಯವಾದಷ್ಟು ತುಂಬಾ ತೋಳಿನ ಉಡುಪು ಧರಿಸಿ. ನಿಮ್ಮ ಚರ್ಮಕ್ಕೆ ಸೂಕ್ತವಾಗುವ ವಾಯಿಶ್ಚರೈಸಿಂಗ್ ಕ್ರೀಮ್ ಅನ್ನು ಸ್ನಾನದ ನಂತರ ಬಳಸುವುದು ಉತ್ತಮ. ಮೊಣಕಾಲು ಮತ್ತು ಮೊಣಕೈಗಳು ಜಾಸ್ತಿ ಒರಟಾಗುವುದರಿಂದ ಬದಾಮಿ ಎಣ್ಣೆಯಿಂದ ಆ ಭಾಗಕ್ಕೆ ಮಸಜಾ ಮಾಡಿ. ಅಥವಾ ಬಾದಾಮಿಯನ್ನು ಹಾಲಿನಲ್ಲಿ ತೇದು ಮೊಣ ಕಾಲು ಮೊಣ ಕೈಗೆ ಹಚ್ಚಿ ೧೦ ನಿಮಿಷ  ಬಿಟ್ಟು ತೊಳೆಯಿರಿ. 

ವಿಟಮಿನ್ ಇ , ಇರುವ ಕ್ರೀಮ್ ಗಳು ಮಗುವಿನ ಚರ್ಮಕ್ಕೆ ಸೂಕ್ತವಾಗಿರುತ್ತದೆ. ಯಾವುದೇ ಲೋಷನ್ ಹಚ್ಚಿದ ನಂತರ ಮಗುವಿನ ಚರ್ಮ ಒಣಗುತ್ತಿವೆ ಎನಿಸಿದರೆ. ಕೂಡಲೇ ಅಂತಹ ಲೋಷನ್ ಗಳನ್ನು ಬಳಸದಿರಿ. 

ವಾರಕ್ಕೊಮ್ಮೆಯಾದರೂ ಅರಶಿಣ ಹಾಗೂ ಹಾಲು ಪೇಸ್ಟ್ ಮಾಡಿ, ಆಗಾಗ ಮಗುವಿನ ಚರ್ಮಕ್ಕೆ ಹಚ್ಚಿದ ನಂತರ ಮಗುವಿನ ಚರ್ಮ ಒಣಗುತ್ತದೆ. ಅಂತಹ ಲೋಷನ್ ಗಳನ್ನು ಬಳಸದಿರಿ. 

ಚಳಿಗಾಲದಲ್ಲಿ ಮಕ್ಕಳಿಗೆ ಶೀತ ನೆಗಡಿ, ಸಾಮಾನ್ಯ ವಿವಿಧ ಸೋಂಕುಗಳಿಗೆ ಮಗು ತುತ್ತಾಗಬಹುದು. ಮಗುವಿನ ಚರ್ಮ ಎಳೆಯದಾಗಿದ್ದು, ವಿಪರೀತವಾಗಿ ಬಿಸಿ ನೀರಿನಲ್ಲಿ ಸ್ನಾನ ಮಾಡಿಸದಿರಿ. ತೇವಾಂಶವುಳ್ಳ ಡೈಪರ್ ಗಳು ಮಗುವಿನ ಬದಲಾಯಿಸುತ್ತೀರಿ. 

ಚಳಿಗಾಲದಲ್ಲಿ ಮಗುವಿಗೆ ಸ್ನಾನ ಮಾಡಿಸುವುದು ಉತ್ತಮ. ಚಳಿಗಾಲದಲ್ಲಿ ಮಗುವಿಗೆ ಸ್ನಾನ ಮಾಡಿಸುವುದರಿಂದ ಮೈಲ್ಡ್ ಸೋಪ್ ಗಳನ್ನು ಬಳಕೆ ಮಾಡಬೇಕು. ಮಕ್ಕಳ ಚರ್ಮ ಉತ್ತಮವಾಗಿರಬೇಕಾದರೆ,. ಬಾದಾಮಿ ಎಣ್ಣೆ, ಆಲಿವ್ ಎಣ್ಣೆ ಗಳಿಂದ ಮಸಾಜ್ ಮಾಡಿ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ