ಮೆಕ್ಕೆಜೋಳದ ಆರೋಗ್ಯ ಲಾಭಗಳ ಬಗ್ಗೆ ತಿಳ್ಕೊಬೇಕಾ!

  • by

ಮೆಕ್ಕೆ ಜೋಳ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ…ಬೇಬಿ ಕಾರ್ನ್ ಎಲ್ಲರೂ ಇಷ್ಟಪಟ್ಟು ಸೇವಿಸುತ್ತಾರೆ. ಬೇಬಿ ಕಾರ್ನ್ ನಲ್ಲಿ ಪೋಷಕಾಂಶಗಳು ಅಧಿಕವಾಗಿದ್ದು, ಅಗತ್ಯವಾದ ನಾರು ಮತ್ತು ಪ್ರೋಟೀನ್ ಗಳು ಜತೆಗೆ ಬೇಬಿ ಕಾರ್ನ್ ಗಳಲ್ಲಿ ಪ್ರಮುಖ ನಿರೋಧಕಗಳಿಂದ ಕೂಡಿವೆ. ಬೇಬಿ ಕಾರ್ನ್ ನಲ್ಲಿ ಕ್ಯಾಲೋರಿ ಕಮ್ಮಿ ಇದ್ದು, ಫೈಬರ್ ನಿಂದ ಕೂಡಿದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಆರೋಗ್ಯಕರ ದೃಷ್ಟಿಯಿಂದ ಇದು ಒಳ್ಳೆಯದು. ಫೋಲೇಟ್ ಇದರಲ್ಲಿ ಸಮೃದ್ಧವಾಗಿದೆ.  ಮೆಕ್ಕೆಜೋಳದಲ್ಲಿ ಪ್ರೋಟೀನ್ ಗಳು ಹೆಚ್ಚಾಗಿರುವುದರಿಂದ ಇದು ಗರ್ಭಿಣಿ ಮತ್ತು ಗರ್ಭಿಣಿ , ಮಕ್ಕಳ ಆರೋಗ್ಯಕ್ಕೆ ತುಂಬಾ ಉತ್ತಮವಾದದ್ದು. 

ಮೆಕ್ಕೆಜೋಳ, ಆರೋಗ್ಯ ಲಾಭ,  Popcorn, Health benefits,

ಮೂಳೆಗಳನ್ನು ಬಲಪಡಿಸಲು ಇದು ಉತ್ತಮ. ಬಿಸಿ ಬಿಸಿಯಾದ ಮೆಕ್ಕೆಜೋಳ ತಿನ್ನುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ, ವಿಟಮಿನ್ ಎ , ವಿಟಮಿನ್ ಇ ಮತ್ತು ಫೋಲಿಕ್ ಆಮ್ಲಗಳು ಹೆಚ್ಚಾಗಿರುವುದರಿಂದ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಬೇಯಿಸಿದ ಮೆಕ್ಕೆ ಜೋಳದ ಕಾಳನ್ನು ಸೇವಿಸುವುದರಿಂದ  ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಕಮ್ಮಿ. 

ಮೆಕ್ಕೆ ಜೋಳ ತಿನ್ನುವುದರಿಂದ ನರಗಳು ಸಧೃಡವಾಗುತ್ತವೆ. ರಕ್ತ ವೃದ್ಧಿಯಾಗುತ್ತದೆ. ಮೆಕ್ಕಜೇಳ ಸೇವನೆಯಿಂದ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಆಂಟಿ ಆ್ಯಕ್ಸಿಡೆಂಟ್ ಗಳು ಹೃದಯದ ಸಮಸ್ಯೆಗಳನ್ನು ನಿವಾರಿಸುತ್ತದೆ. ಬೇಬಿ ಕಾರ್ನ್ ನ ನೀವು ನಂಬಲಾಗದ ಆರೋಗ್ಯ ಪ್ರಯೋಜನಗಳು ಇಲ್ಲಿವೆ.

ಇವತ್ತಿನ ದಿನ ಗಳಲ್ಲಿ ವಿಶ್ವದಾಂದ್ಯತ ಬೇಬಿ ಕಾರ್ನ್ ಬಳಸಲಾಗುತ್ತದೆ. ಬೇಬಿ ಕಾರ್ನ್ ನನ್ನು ಏಷ್ಯನ್ ಅಡುಗೆಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಸಲಾಡ್ ಗಳಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.  ವಾಸ್ತವದಲ್ಲಿ ತೂಕ ಇಳಿಸುವವರಿಗೆ ಹೆಚ್ಚು ಉಪಯುಕ್ತವಾಗಿದೆ. 

ಮೆಕ್ಕೆಜೋಳ, ಆರೋಗ್ಯ ಲಾಭ,  Popcorn, Health benefits,

ಇದರಲ್ಲಿ ಕ್ಯಾಲೋರಿ ಕಡಿಮೆ ಇರುವುದರಿಂದ 100 ಗ್ರಾಂ ಬೇಬಿ ಕಾರ್ನ್ ಕೇವಲ 26 ಕ್ಯಾಲೋರಿಗಳನ್ನು ಹೊಂದಿರುತ್ತದೆ. ನಿಮ್ಮ ತೂಕವನ್ನು ಕಡಿಮೆ ಮಾಡುವಲ್ಲಿ ತ್ವರಿತ ವಾಗಿ ಸುಲಭವಾಗಿ ತೂಕವನ್ನು ನಿಯಂತ್ರಿಸುತ್ತದೆ.

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. 

ಬೇಬಿ ಕಾರ್ನ್ ಕರಗ ಬಲ್ಲ ಮತ್ತು ಕರಗದ ನಾರುಗಳಿಂದ ತುಂಬಿರುತ್ತದೆ. ಫೈಬರ್ ಗಳು ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯು ತೂಕ ನಷ್ಟ ಮಾಡಲು ಸಹಾಯ ಮಾಡುತ್ತದೆ. ಹಳದಿ ಬೇಬಿ ಕಾರ್ನ್ ಪ್ರಬುದ್ಧ ಜೋಳದಂತೆಯೇ ಯೋಗ್ಯ ಪ್ರಮಾಣದ ಕ್ಯಾರೋಟಿನಾಯ್ಡ್ ಗಳನ್ನು ಹೊಂದಿದ್ದು, ಕಣ್ಣಿನ ಆರೋಗ್ಯಕ್ಕೂ ಉತ್ತಮ ಎಂದು ಹೇಳಬಹುದು. 

ರಕ್ತಹೀನತೆ ನಿವಾರಣೆ

ಜೋಳದಲ್ಲಿ ವಿಟಮಿನ್ ಬಿ ಮತ್ತು ಫಾಲಿಕ್ ಆಸಿಡ್ ಅಂಶವಿರುವುದರಿಂದ ದೇಹದಲ್ಲಿ ರಕ್ತ ಹೆಚ್ಚಾಗಲು ಸಹಕಾರಿಯಾಗಿದೆ. ಇದರಿಂದ ರಕ್ತ ಹೀನತೆ ಸಮಸ್ಯೆ ಉಂಟಾಗುವುದಿಲ್ಲ. ಇದರ ಸೇವನೆಯಿಂದ ರಕ್ತದಲ್ಲಿ ಕೊ್ಬಬಿನಂಶ ಸೇರಿಕೊಳ್ಳುವುದನ್ನು ಇದು ತಡೆಯುತ್ತದೆ. 

ಕೊಲೆಸ್ಟ್ರಾಲ್ ನಿವಾರಣೆ 

ದೇಹದಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಕೊಲೆಸ್ಚ್ರಾಲ್ ನಲ್ಲಿ ಎರಡು ವಿಧ. ಇದು ಒಳ್ಳೆಯ ಕೊಲೆಸ್ಚ್ರಾಲ್ ಹಾಗೂ ಕೆಟ್ಟ ಕೊಲೆಸ್ಟ್ರಾಲ್ . ಕೊಲೆಸ್ಟ್ರಾಲ್ ಹೆಚ್ಚಾದರೆ ದೇಹದ ತೂಕ ಹೆಚ್ಚುತ್ತದೆ. ಒಬಿಸಿಟಿ ಸಮಸ್ಯೆ ಪ್ರಾರಂಭವಾಗುತ್ತದೆ. ಜೋಳದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಇದ್ದು, ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ. 

ಇನ್ನು ಮಧುಮೇಹ ಮತ್ತು ಅಧಿಕವಾದ ಒತ್ತಡವನ್ನು ಮೆಕ್ಕೆಜೋಳ ಸೇವನೆಯಿಂದ ಕಡಿಮೆಗೊಳಿಸಬಹುದು. ಇದು ಕರುಳಿನ ದೂರವಿರುಸುವುದಲ್ಲದೇ, ದೇಹದ ಆರೋಗ್ಯವನ್ನು ಹೆಚ್ಚು ಮಾಡುತ್ತದೆ. 

ಮಲಬದ್ಧತೆ ಸಮಸ್ಯೆ 

ಮಲಬದ್ಧತೆಯನ್ನು ನಿವಾರಿಸಲು ಬೇಬಿ ಕಾರ್ನ್ ಸಹಾಯ ಮಾಡುತ್ತದೆ. ವಿಟಮಿನ್ ಬಿ ಜೋಳದಲ್ಲಿ ಹೆಚ್ಚಿರುವ ಕಾರಣ ಇದು ನರಮಂಡಲವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. 

ಮೆಕ್ಕೆಜೋಳ,ಆರೋಗ್ಯ ಲಾಭ,  Popcorn, Health benefits,

ಕಣ್ಣು, ತ್ವಚೆ, ಹಾಗೂ ಗರ್ಭಿಣಿಯರಿಗೆ ಒಳ್ಳೆಯದು.!

ಕಣ್ಣುಗಳ ತೀಕ್ಷ್ಣತೆ ಹೆಚ್ಚಿಸಿಕೊಳ್ಳಬೇಕಾದರೆ ಮೆಕ್ಕೆಜೋಳ ಸೇವಿಸಿ. ಮೃದುವಾದ ತ್ವಚೆ ಹೊಂದಲು ಇದು ಸಹಾಯ ಮಾಡುತ್ತದೆ. ಉತ್ತಮ ತ್ವಚೆಗೆ ಪೌಷ್ಟಿಕ ಆಹಾರ ಬೇಕಿರುತ್ತದೆ. ಬೇಬಿ ಕಾರ್ನ್ ಸೇವನೆ ಮಾತ್ರವಲ್ಲದೇ, ಇದರ ಎಣ್ಣೆಯನ್ನು ಸಹ ಬಳಸಲಾಗುತ್ತದೆ.  ಗರ್ಭಿಣಿಯರು ಆರೋಗ್ಯಕ್ಕೆ ಸ್ವೀಟ್ ಕಾರ್ನ್ ಒಳ್ಳೆಯದು. ಇದನ್ನು ಸೇವಿಸುವುದರಿಂದ ವಿಟಮಿನ್ ಎ ಇದರಲ್ಲಿ ಹೆಚ್ಚಿರುತ್ತದೆ. 

ಮೆಕ್ಕೆಜೋಳ ಸೇವನೆಯಿಂದ ಅಧಿಕ ರಕ್ತದೋತ್ತಡವನ್ನು ಕಡಿಮೆಗೊಳಿಸಬಹುದು. ಇದು ಕರುಳಿನ ಕ್ಯಾನ್ಸರ್ ನ್ನು ದೂರವಿರಿಸುತ್ತದೆ. ಇದು ರಕ್ತದಲ್ಲಿರುವ ಸಕ್ಕರೆ ಅಂಶ ಕಡಿಮೆಗೊಳ್ಸುವ ಮೂಲಕ ಮಧುಮೇಹಿಗಳಿಗೆ ಸಹಾಯ ಮಾಡುತ್ತದೆ. ಇನ್ನು ಬೇಬಿ ಕಾರ್ನ್ ನಲ್ಲಿ ಪೋಷಕಾಂಶಗಳು ಅಧಿಕವಾಗಿವೆ.  

ರಕ್ತಹೀನತೆ ಸಮಸ್ಯೆ ನಿವಾರಣೆ..!

ರಕ್ತಹೀನತೆ ಸಮಸ್ಯೆಯಿಂದ ದೂರವಿರುಸುತ್ತದೆ. ಇದರಲ್ಲಿ ಐರನ್ , ಫಾಲಿಕ್ ಆ್ಯಸಿಡ್ ಹಾಗೂ ವಿಟಮನ್ ಬಿ ಹೆಚ್ಚಾಗಿರುವುದರಿಂದ ಇದನ್ನು ಸೇವಿಸುವುದರಿದಂ ಅನಿಮಿಯಾ ಸಮಸ್ಯೆ ಉಂಟಾಗುವುದಿಲ್ಲ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ