ಮಕ್ಕಳಲ್ಲಿ ಹಾಲು ಹಲ್ಲು ಮೂಡುವಾಗ ಇರಲಿ.. ಎಚ್ಚರ!

  • by

ನಿಮ್ಮ ಮಗುವಿನ ಮೊದಲ ಹಲ್ಲು ಮೂಡಿದಾಗ, ಬಾಯಲ್ಲಿ ರತ್ನದಂತೆ ಹೊಳೆಯುವ ಹಲ್ಲು ಕಂಡು ಅಪ್ಪ, ಅಮ್ಮಂದಿರಿಗೂ ಖುಷಿ ಉಂಟಾಗುತ್ತದೆ. ನಿಮ್ಮ ಪುಟ್ಟ ಕಂದ ನಾಲ್ಕು ಹಾಗೂ ಆರು ತಿಂಗಳ ನಡುವೆ ಹಲ್ಲುಜ್ಜಲು ಪ್ರಾರಂಭಿಸುತ್ತಾನೆ. ಪೋಷಕರ ಪಾಲಿಗೆ ಇದು ಅತ್ಯಾಕರ್ಷಕ ಮೈಲಿಗಲ್ಲೇ ಎನ್ನಬಹುದು. ಆದ್ರೆ ಕೆಲವೊಮ್ಮೆ ನಿಮ್ಮ ಸಂತಸ ಬೇಸರ ಉಂಟು ಮಾಡುವ ಸಾಧ್ಯತೆ ಹೆಚ್ಚು. ಮಗುವಿಗೆ ಮೊದಲ ಹಲ್ಲು ಬರುತ್ತಿದ್ದಂತೆ ಎಲ್ಲಾ ಪೋಷಕರಿಗೆ ಆತಂಕ ಭಯ ಎದುರಾಗುತ್ತದೆ.ಮಕ್ಕಳಲ್ಲಿ ಹಲ್ಲು ಬರುವುದಕ್ಕೆ ಮೊದಲೇ ಕೆಲ ಲಕ್ಷಣಗಳು ಕಂಡು ಬರುತ್ತವೆ ಎಂಬುದನ್ನು ಪೋಷಕರು ಗಮನದಲ್ಲಿಟ್ಟುಕೊಳ್ಳಬೇಕು.

ಹಾಲು ಹಲ್ಲು ಯಾವಾಗ ಕಾಣಿಸಿಕೊಳ್ಳುತ್ತವೆ..?

ಮಕ್ಕಳಿಗೆ ಹಲ್ಲು ಬರುವಾಗ ಜೊಲ್ಲು ಸೋರುತ್ತದೆ. ಇದನ್ನು ಒರೆಸಲು ಮೆತ್ತನೆ ಕಾಟನ್ ಬಟ್ಟೆ ಇಲ್ಲವಾದಲ್ಲಿ ಹತ್ತಿ. ಉಂಡೆಗಳನ್ನು ಬಳಸಿ. ಮಗುವಿನ ಸೂಕ್ಷ್ಮ ಚರ್ಮಕ್ಕೆ ಹಾನಿಯಾಗದಂತೆ ಕಾಳಜಿ ವಹಿಸಿ.

2. ಹಸಿವಿಲ್ಲದಿರುವುದು

ಹಲ್ಲು ಬರುವಾಗ ಆಗುವ ಕಿರಿಕಿರಿಯಿಂದ ಮಕ್ಕಳು ಹಾಲು ಕುಡಿಯುವುದನ್ನೇ ನಿರಾಕರಿಸಬಹುದು. ಮಗುವಿನ ಹಸುವಿನಲ್ಲಿ ಸ್ವಲ್ಪ ಏರು ಪೇರಾಗಬಹುದು. ಪದೇ ಪದೇ ವಸುಡಿನ ಕೆರೆತದಿಂದ ಎದೆ ಹಾಲು ಕುಡಿಯಲು ಮುಂದಾಗಬಹುದು. ಹೀಗಾಗಿ ನಿಮ್ಮ ಮಗು ಗಟ್ಟಿಯಾದ ಪದಾರ್ಥ ಸೇವಿಸುತ್ತಿದ್ದರೆ ವಸಡಿಗೆ ಆರಾಮದಾಯಕ ಆಹಾರ ನೀಡುವುದು ಉತ್ತಮ.

3 ವಿಪರೀತವಾಗಿ ಅಳುವುದು

ಹಾಲು ಹಲ್ಲು ಮೂಡುವಾಗ ಸಾಮಾನ್ಯವಾಗಿ ಮಕ್ಕಳು ಅಳುತ್ತವೆ. ಕಿರಿ ಕಿರಿ ಅನುಭವಿಸುತ್ತವೆ. ಈ ಹಂತದಲ್ಲಿ ಪೋಷಕರು ಸಹನೆಯನ್ನು ಕಳೆದುಕೊಳ್ಳಗೇ ಮಗುವನ್ನು ಸಮಾಧಾನ ಮಾಡುವುದಕ್ಕೆ ಆದ್ಯತೆ ನೀಡಬೇಕು. ಸ್ವಲ್ಪ ಹೊತ್ತು ಹೊರಗಡೆ ತಿರುಗಾಡಿಸುವುದು, ಇಲ್ಲವೇ ಮಗುವಿನ ಜತೆ ಆಟ ಆಡಿ ಗಮನವನ್ನು ಬೇರೆ ಕಡೆಗೆ ಸೆಳೆಯುವಲ್ಲಿ ಗಮನ ಹರಿಸಬೇಕು, 

4 ಕಿವಿ ಮತ್ತು ಕೆನ್ನೆಯನ್ನು ಉಜ್ಜಿಕೊಳ್ಳುವುದು

ಹಲ್ಲು, ವಸಡು, ದವಡೆ ಹಾಗೂ ಕಿವಿಯ ನರ ಒಂದಕ್ಕೊಂದು ಲಿಂಕ್ ಇರುತ್ತದೆ. ಹಾಲು ಹಲ್ಲು ಬರುವಾಗ ಮಗು ಕಿವಿ ಮತ್ತು ಕೆನ್ನೆಯನ್ನು ಉಜ್ಜಿ ಕೊಳ್ಳುವುದನ್ನು ಗಮನಿಸಬಹುದು. ಆದರೆ ಕೆಲವೊಮ್ಮೆ ಕಿವಿಯ ಸೋಂಕಿನ ಕಾರಣದಿಂದ ಮಗು ಕಿವಿ ಎಳೆಯಬಹುದು. 

5. ಜ್ವರ , ಭೇದಿ ಕಾಡುವ ಸಾಧ್ಯತೆ

ಮಕ್ಕಳಿಗೆ ಹಲ್ಲು ಬರುವಾಗ ಸ್ವಲ್ಪ ಮೈ ಬೆಚ್ಚಗಾಗಬಹುದು…ಆದರೆ 101 ಕ್ಕಿಂತ ಹೆಚ್ಚು ಜ್ವರ ಕಂಡು ಬಂದರೆ ಅದಕ್ಕೆ ಕಾರಣ ಬೇರೆ ಕಾಯಿಲೆ ಯ ಲಕ್ಷಣವಿರಬಹುದು. ಹಲ್ಲು ಬರುವಾಗ ಮಕ್ಕಳ ಬೆಳವಣಿಗೆ ಬಹಳ ಮುಖ್ಯ. ಮುಂದೊದು ದಿನ ಮಗುವಿನ ಸುಂದರ ನಗು ಕಾಣಲು, ಇಂದಿನಿಂದಲೇ ಪೋಷಕರು ಸಹನೆ , ಪ್ರೀತಿಯಿಂದ ಈ ಹಂತವನ್ನು ಎದುರಿಸಬೇಕಾಗುತ್ತದೆ. 

ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡು ಬರುವ ಪ್ರಾಥಮಿಕ ಹಲ್ಲುಗಳನ್ನು ಹಾಲು ಹಲ್ಲು ಎಂದು ಕರೆಯಲಾಗುತ್ತದೆ. 

ಹಾಲು ಹಲ್ಲು ಶಾಶ್ವತ ಹಲ್ಲುಗಳಾಗಿ ಬದಲಾಗುವ ಪ್ರಕ್ರಿಯೆಯಲ್ಲಿ  ಊರಿಯೂತ ಕಾಣಿಸಿಕೊಳ್ಳಬಹುದು. ಇದು ಮಗುವಿನ 6ನೇ ವರ್ಷದಿಂದ ಪ್ರಾರಂಭವಾಗುತ್ತದೆ. ಮತ್ತು ಎಲ್ಲಾ ಹಾಲಿನ ಹಲ್ಲುಗಳು ವಯಸ್ಕ ಹಲ್ಲುಗಳಾಗಿ ಬದಲಾಗಲು ಸುಮಾರು 12-13 ವರ್ಷವಾಗುವ ತನಕ ಮುಂದುವರಿಯುತ್ತದೆ. ಈ ಹಲ್ಲುಗಳು ಅಂತಿಮವಾಗಿದ್ದು, ಮನುಷ್ಯನ ಜೀವಿತಾವಧಿಯವರಗ ಇರುತ್ತದೆ. ಈ ಸಂದರ್ಭದಲ್ಲಿ ಹೆಚ್ಚಾಗಿ ಮೌಖಿಕ ನೈರ್ಮಲ್ಯ ಕಾಪಾಡುವುದು ಅಗತ್ಯವಿರುತ್ತದೆ. 

ಶಿಶುಗಳಲ್ಲಿ ಹಲ್ಲು ಹುಟ್ಟುವ ಸಮಯದಲ್ಲಿ ಮನೆಯಲ್ಲೇ ಮಾಡಬಹುದಾದ ಅತ್ಯಂತ ಪ್ರಮುಖ ಮತ್ತು ಪರಿಣಾಮಕಾರಿ ಸಿಂಪಲ್ ಟಿಪ್ಸ್ ಇಲ್ಲಿವೆ..

1. ಐಸ್ ಕ್ಯಾಂಡಿ, ಐಸ್ ಕ್ರೀಮ್

ಶಿಶುಗಳಲ್ಲಿ ಹಲ್ಲು ಹುಟ್ಟುವ ಸಮಯದಲ್ಲಿ ತಣ್ಣಗಿರುವ ಪಟ್ಟಿಗಳು ಅತ್ಯಂತ ಶ್ರೇಷ್ಠ ಎಂದು ಹೇಳಲಾಗುತ್ತದೆ. ಶಿಶುಗಳು ತಣ್ಣಗಿರುವ ಐಸ್ ಕ್ಯಾಂಡಿ ಮತ್ತು ಐಸ್ ಕ್ರೀಮ್ ತಿನ್ನಿಸಿದರೆ, ವಸಡಿನ ನೋವು ಕಡಿಮೆಯಾಗುತ್ತದೆ.

2. ಜೇನುತುಪ್ಪ

ವಸಡುಗಳನ್ನು ಜೇನುತುಪ್ಪದಿಂದ ಮೆಲ್ಲಗೆ ಮಸಾಜ್ ಮಾಡಿದ್ರೆ ನೋವು ನಿವಾರಿಸಬಹುದಾಗಿದೆ ಜೇನುತುಪ್ಪದಲ್ಲಿ ಜೈವಿಕ ಆಂಟಿ ಬೈಯೋಟಿಕ್ ಗುಣಗಳು ಇರುವುದರಿಂದ ಹಲ್ಲುಗಳು ಬರುವ ಸಮಯದಲ್ಲಿ ಸೋಂಕು ಬರುವುದನ್ನು ತಡೆಗಟ್ಟಬಹುದು, 

3. ತಂಪಾಗಿರುವ ಆಹಾರ ನೀಡಿ

ಮಗುವಿಗೆ ಹಲ್ಲು ಹುಟ್ಟುವಾಗ ಪೋಷಕರು ತಂಪಾದ ಆಹಾರ ನೀಡಬೇಕು. ಇದು ನೋವನ್ನು ದೂರ ಮಾಡಲು ಸಹಾಯಕಾರಿಯಾಗಿದೆ. ಮಗುವಿಗೆ ತಂಪಾದ ಆಹಾರ ನೀಡಿದರೆ ಅವರಿಗೆ ಸಾಕಷ್ಟು ಆರಾಮದಾಯಕವೆನ್ನಿಸುತ್ತದೆ. ಆದ್ರೆ ವಸುಡುಗಳಿಗ ನೋವನ್ನು ಹೆಚ್ಚು ಮಾಡುವಂತಹ ಅತ್ಯಂತ ಶೀತವಾದ, ಫ್ರೀಜರ್ ನಲ್ಲಿ ಇಟ್ಟಿರುವ ಆಹಾರಗಳನ್ನು ಕೊಡಬೇಡಿ.

4.ಆಲಿವ್ ಎಣ್ಣೆಯಿಂದ ಮಸಾಜ್ 

ಆಲಿವ್ ಎಣ್ಣೆಯಿಂದ ಮಕ್ಕಳಿಗೆ ಮಸಾಜ್ ಮಾಡಿದರೆ, ನೋವಿನಿಂದ ಪರಿಹಾರ ದೊರಕುತ್ತದೆ. ಮೇಲೆ ಬರುತ್ತಿರುವ ಹಲ್ಲುಗಳಿಗೆ ಕ್ಯಾರೆಟ್ ಅನ್ನು ಕಚ್ಚಿಸುವುದು ಉತ್ತಮ.

5.ಬಾಳೆಹಣ್ಣು ಮಗುವಿಗೆ ತಿನ್ನಿಸುವುದರಿಂದ ಹಲ್ಲು ಹುಟ್ಟುವಾಗ ಬರುವ ನೋವು ಮತ್ತು ನವೆಗಳನ್ನು ನಿವಾರಿಸಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ