ಕೋವಿಡ್-19 ಸಮಯದಲ್ಲಿ ಆಯುಷ್ ಸಚಿವಾಲಯ ಹೊರಡಿಸಿರುವ ಸೆಲ್ಫ್ ಕೇರ್ ಟಿಪ್ಸ್..! – (Ayush ministry guidelines immunity boosting selfcare tips during covid-19 )

  • by

ಭಾರತ ಸೇರಿದಂತೆ ಬಹುತೇಕ ಇಡೀ ಪ್ರಪಂಚವು ಪ್ರಸ್ತುತ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದೊಂದಿಗೆ ಹೋರಾಡುತ್ತಿದೆ. ಕೊರೊನಾ ಅಪಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 30ರವರೆಗೂ ಲಾಕ್ ಡೌನ್ ಘೋಷಿಸಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಕೋವಿಡ್ -19 ಸಂಬಂಧಿಸಿದಂತೆ ಅನೇಕ ಸಂಶೋಧನೆಗಳ ಪ್ರಕಾರ, ಒಬ್ಬ ವ್ಯಕ್ತಿ ಉತ್ತಮ ರೋಗ ನಿರೋಧಕ ಶಕ್ತಿ ಹೊಂದಿದ್ದರೆ , ಕೊರೊನಾ ವೈರಸ್ ವಿರುದ್ಧ ಹೋರಾಡುವುದು ಮತ್ತು ಗೆಲ್ಲುವುದು ಆತನಿಗೆ ಸುಲಭವಾಗುತ್ತದೆ. ಇತ್ತೀಚಿಗೆ ಭಾರತ ಸರ್ಕಾರದ ಆಯುಷ್ ಸಚಿವಾಲಯ ಇಂತಹ ಅನೇಕ ಆಯುರ್ವೇದದ ಮನೆಮದ್ದುಗಳ ಬಗ್ಗೆ ಸಲಹೆ ನೀಡಿದೆ. ಇದರಿಂದ ಜನರು ತಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

Ayush ministrys guidelines , immunity boosting ,covid-19 
ಆಯುಷ್ ಸಚಿವಾಲಯ, ಇಮ್ಯೂನಿಟಿ   ಕೋವಿಡ್ -19

ವಾಸ್ತವವಾಗಿ ಆಯುರ್ವೇದದಲ್ಲಿ ಹವಾಮಾನದ ಆಧಾರದ ಮೇಲೆ ನೈಸರ್ಗಿಕ ವಸ್ತುಗಳ ಬಳಕೆಗೆ ಒತ್ತು ನೀಡಲಾಗುತ್ತದೆ. ಕೊರೊನೊ ವೈರಸ್ ತಡೆಗಟ್ಟಲು ಯಾವುದೇ ಮೆಡಿಸಿನ್ ಇಲ್ಲಿಯವರೆಗೆ ಕಂಡು ಹಿಡಿಯಲಾಗಿಲ್ಲ. ಹಾಗಾಗಿ ಉಸಿರಾಟದ ಆರೋಗ್ಯ ಕಾಪಾಡಲು ಆಯುಷ್ ಸಚಿವಾಲಯ ಕೆಲವು ಸಲಹೆಗಳನ್ನು ನೀಡಿದೆ.


1. ಯೋಗಾ ಪ್ರಾಣಾಯಾಮದ ಜತೆ ಪ್ರತಿ ದಿನ 30 ನಿಮಿಷಗಳ ಕಾಲ ಧ್ಯಾನ ಮಾಡಿ. ಇದು ಮನಸ್ಸಿನ ಶಕ್ತಿಯನ್ನು ಮತ್ತು ನಿಮ್ಮ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ಒತ್ತಡವನ್ನು ನಿವಾರಿಸುತ್ತದೆ. ಫ್ರೀಡ್ಜ್ ನಲ್ಲಿ ನೀರು ಅಥವಾ ಸಾಮಾನ್ಯವಾಗಿರುವ ನೀರು ಕುಡಿಯುವುದಕ್ಕಿಂತ ಬೆಚ್ಚಗಿನ ನೀರು ಕುಡಿಯಿರಿ.

2.ಪ್ರತಿ ದಿನ ಬೆಳಿಗ್ಗೆ 1 ಟೀ ಸ್ಪೂನ್ ಅಂದರೆ 10 ಗ್ರಾಂ ಚ್ಯವಾನ್ ಪ್ರಶ್ ತೆಗೆದುಕೊಳ್ಳಿ. ಮಧು ಮೇಹ ರೋಗಿಗಳು ಸಕ್ಕರೆ ಮತ್ತು ಚ್ಯವಾನ್ ಪ್ರಶ್ ತೆಗೆದುಕೊಳ್ಳಬೇಕು.

3.ತುಳಸಿ, ದಾಲ್ಚಿನ್ನಿ, ಕರಿಮೆಣಸು ಮತ್ತು ಒಣ ಶುಂಠಿಯಿಂದ ತಯಾರಿಸಿದ ಕಷಾಯ ಅಥವಾ ಗಿಡಮೂಲಿಕೆ ಚಹಾವನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ತೆಗೆದುಕೊಳ್ಳಿ. ಅಗತ್ಯವಿದ್ದರೆ ನಿಮ್ಮ ರುಚಿಗೆ ಅನುಗುಣವಾಗಿ ಬೆಲ್ಲ ಅಥವಾ ತಾಜಾ ನಿಂಬೆ ರಸವನ್ನು ಕೂಡಾ ಸೇರಿಸಬಹುದು.
ಗೋಲ್ಡನ್ ಹಾಲು ಸೇವಿಸಬೇಕು. 150 ಮಿಲಿ ಬೆಚ್ಚಗಿನ ಹಾಲಿನಲ್ಲಿ ಅರ್ಧ ಟೀ ಚಮಚ ಅರಶಿಣ ಪುಡಿಯನ್ನು ಬೆರೆಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಬಹುದು.

4.ಬೆಳಿಗ್ಗೆ ಮತ್ತು ಸಂಜೆ ಎರಡೂ ಮೂಗಿನ ಹೊಳ್ಳೆಗಳಿಗೆ ಎಳ್ಳು ಅಥವಾ ತೆಂಗಿನ ಎಣ್ಣೆ ಹಚ್ಚುವುದು ಆಯುರ್ವೇದ ಪರಿಹಾರಗಳಲ್ಲಿ ಒಂದಾಗಿದೆ.

5.ತೈಲ ಚಿಕಿತ್ಸೆ ಅಂದರೆ ಇದಕ್ಕಾಗಿ 1 ಟೀ ಸ್ಪೂನ್ ಎಳ್ಳು ಅಥವಾ ತೆಂಗಿನ ಎಣ್ಣೆ ಯನ್ನು ಬಾಯಿಯಲ್ಲಿ ಹಾಕಿಕೊಂಡು, ಇದನ್ನು ಕುಡಿಯಬೇಡಿ. 2 ರಿಂದ 3 ನಿಮಿಷಗಳ ಕಾಲ ಬಾಯಿಯಲ್ಲಿ ಹಿಡಿದು ನಂತರ ಉಗುಳುವುದು. ನಂತರ ಬೆಚ್ಚಗಿನ ನೀರಿನಿಂದ ಬಾಯಿಯನ್ನು ತೊಳೆಯಿರಿ. ಇದನನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಮಾಡಬಹುದು.


Ayush ministrys guidelines , immunity boosting ,covid-19 
ಆಯುಷ್ ಸಚಿವಾಲಯ, ಇಮ್ಯೂನಿಟಿ   ಕೋವಿಡ್ -19

6.ಒಣ ಕೆಮ್ಮು ಮತ್ತು ನೋಯುತ್ತಿರುವ ಗಂಟಲು ಇದ್ದರೆ, ದಿನಕ್ಕೆ ಒಮ್ಮೆ ತಾಜಾ ಪುದೀನಾ ಎಲೆಗಳೊಂದಿಗೆ ಸೇವಿಸಬಹುದು.
ಜೇನುತುಪ್ಪದೊಂದಿಗೆ ಬೆರೆಸಿದ ಲವಂಗ ಪುಡಿಯನ್ನು ಸೇರಿಸಿ ಸೇವಿಸಬಹುದು. ಕೆಮ್ಮು ಅಥವಾ ಗಂಟಲಿನಲ್ಲಿ ಉರಿಯುವ ಅನುಭವ ವಾಗುತ್ತಿದ್ದರೆ, ಇದನ್ನು 2-3 ಬಾರಿ ತೆಗೆದುಕೊಳ್ಳಬಹುದು. ಒಣ ಕೆಮ್ಮು ಹಾಗೂ ನೋಯುತ್ತಿರುವ ಗಂಟಲು ದೀರ್ಘಕಾಲದ ವರೆಗೆ ಮುಂದುವರೆದರೆ, ವೈದ್ಯರನ್ನು ಸಂಪರ್ಕಿಸಿ.

7.ಈ ಕ್ರಮಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಬಹುದು ಎಂದು ಆಯುಷ್ ಸಚಿವಾಲಯ ಹೇಳಿದೆ. ಸೋಂಕಿನ ವಿರುದ್ಧ ಹೋರಾಡಲು ದೇಹದ ಪ್ರತಿರಕ್ಷಣೆಯನ್ನು ಹೆಚ್ಚಿಸಲು ಅನೇಕ ತಜ್ಞರು ಈ ಕ್ರಮಗಳನ್ನು ಶಿಪಾರಸು ಮಾಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ