ನಿಮ್ಮ ಶ್ವಾಸಕೋಶ ಆರೋಗ್ಯವಾಗಿಡಲು ಇಲ್ಲಿದೆ ಟಿಪ್ಸ್

  • by

ಇತ್ತೀಚೆಗೆ ಉಸಿರಾಟದ ಕಾಯಿಲೆಗಳ ಪ್ರಮಾಣ ಹೆಚ್ಚಿದೆ. ವ್ಯಾಪಕ ಮಾಲಿನ್ಯ ಜನರ ಆರೋಗ್ಯ ಹಾಗೂ ಶ್ವಾಸಕೋಶದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ವಾಯು ಮಾಲಿನ್ಯ ಆರೋಗ್ಯದ ಮೇಲೆ ಅಪಾಯ ವನ್ನುಂಟು ಮಾಡಿ ಉಸಿರಾಟದ ಪ್ರಕ್ರಿಯೆ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಮಾಯುಮಾಲಿನ್ಯದ ಹಾವಿಕಾರಕ ಪರಿಣಾಮಮಗಳನ್ನು ನಿವಾರಿಸಲು ಹಲವು ಪರಿಹಾರಗಳಿವೆ. ಅದರಲ್ಲೂ ಆಯುರ್ವೇದ ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಮಾಲಿನ್ಯದಿಂದ ಉಸಿರಾಟದ ಮೇಲೆ ಆಗುವ ಪರಿಣಾಮಗಳ ಬಗ್ಗೆ ನಿವಾರಿಸುವುದು ಹೇಗೆ.. ಸರಳ ಉಪಾಯಗಳು ಇಲ್ಲಿವೆ. 

Ayurvedic tips, lungs healthy, air pollution, ಶ್ವಾಸಕೋಶದ ಸಮಸ್ಯೆಗೆ ಪರಿಹಾರ , ಆಯುರ್ವೇದ ಚಿಕಿತ್ಸೆ. ವಾಯುಮಾಲಿನ್ಯ

ಆಯುರ್ವೇದ ತನ್ನ ಗುಣಮಟ್ಟವನ್ನು ಹಿಂದಿನ ಕಾಲದಿಂದಲೂ ವ್ಯವಸ್ಥಿತವಾಗಿ ನಿರ್ವಹಿಸುತ್ತಲೇ ಬಂದಿದೆ. ಯೋಗಕ್ಷೇಮವನ್ನು ದೈಹಿಕ. ಮಾನಸಿಕ ಮಟ್ಟದಲ್ಲಿ ಕಾಯ್ದು ಕೊಳ್ಳುವುದು ಆರ್ಯುವೇದದ ಮುಖ್ಯ ಉದ್ದೇಶ. ಯೋಗಕ್ಷೇಮವು ಎಲ್ಲಾ ಶಕ್ತಿಗಳ ಒಪ್ಪಂದದೊಂದಿಗೆ ದೇಹವನ್ನು ಅನುಸರಿಸಿ ದೈಹಿಕ, ಮಾನಸಿಕ, ಮತ್ತು ಆತ್ಮದ ಮಟ್ಟದಲ್ಲಿ ಚಿಕಿತ್ಸೆ ನಿರ್ವಹಿಸುವುದಾಗಿದೆ. ಪಾಶ್ಚಿಮಾತ್ಯ ಪದ್ಧತಿ ಪ್ರಕಾರ, ವೈದ್ಯಕೀಯ ಚಿಕಿತ್ಸೆ ಮತ್ತು ಔಷಧದ ಮೂಲಕ ರೋಗವನ್ನು ಚಿಕಿತ್ಸೆ ನೀಡಲಾಗುತ್ತದೆ. ಆದ್ರೆ ಆಯುರ್ವೇದ ವಿಚಾರದಲ್ಲಿ ಹಾಗಲ್ಲ. 

ಶ್ವಾಸಕೋಶದ ಸಮಸ್ಯೆಗೆ ಮಕ್ಕಳು ಹಾಗೂ ವೃದ್ಧರು ಹೆಚ್ಚಾಗಿ ತುತ್ತಾಗುತ್ತಾರೆ. ಶ್ವಾಸಕೋಶದ ಕಾಯಿಲೆಗಳಾದ ಅಸ್ತಾಮಾ, ಎಂಫಸೆಮಾ ಮತ್ತು ಸಿಒಪಿಡಿ ವಾಯುಮಾಲಿನ್ಯದಿಂದಾಗಿ ಹೆಚ್ಚು ಬಳಲುತ್ತಿದ್ದಾರೆ. 

ಮಾಯುಮಾಲಿನ್ಯದಿಂದ ಯಾರು ಸಮಸ್ಯೆ ಎದುರಿಸುತ್ತಿದ್ದಾರೆ?

Ayurvedic tips, lungs healthy, air pollution, ಶ್ವಾಸಕೋಶದ ಸಮಸ್ಯೆಗೆ ಪರಿಹಾರ , ಆಯುರ್ವೇದ ಚಿಕಿತ್ಸೆ. ವಾಯುಮಾಲಿನ್ಯ

ವಾಯು  ಮಾಲಿನ್ಯದಿಂದ ಉಂಟಾಗುವ ಉಸಿರಾಟದ ಸಮಸ್ಯೆಗಳಿಗೆ ಈ ಅಪಾಯಕಾರಿ ಅಂಶಗಳು ಕಾರಣವಾಗಿರಬಹುದು. ತಂಬಾಕು ಸೇವನೆ, ಧೂಮಪಾನ , ಹೆಚ್ಚಿನ ತಾಪಮಾನ ಮತ್ತು ತೇವಾಂಶ. ಇನ್ನು ಅಲರ್ಜಿ , ಹೃದ್ರೋಗ, ಶ್ವಾಸಕೋಶದ ಕಾಯಿಲೆ ಇರುವವರು ಹೆಚ್ಚಾಗಿ ಅಪಾಯಕ್ಕೆ ತುತ್ತಾಗುತ್ತಿದ್ದಾರೆ. ಹೊರಗಡೆ ಆಟ ವಾಡಲು ಹೆಚ್ಚು ಸಮಯ ಕಳೆಯುವ ಮಕ್ಕಳು, ಕ್ರೀಡಾಪಟುಗಳು ಅಪಾಯ ಎದುರಿಸುತ್ತಿದ್ದಾರೆ. 

ಸಾಮಾನ್ಯ ಕಾಯಿಲೆಗಳು ಯಾವವು?

ಹೆಚ್ಚುತ್ತಿರುವ ಮಾಲಿನ್ಯದಿಂದ ಶ್ವಾಸಕೋಶದ ಸಮಸ್ಯೆಗಳು ಹೆಚ್ಚುತ್ತಿವೆ. ದೀರ್ಘಕಾಲದ ಶ್ವಾಸಕೋಶದ ಕಾಯಿಲೆಗಳಾದ ಸಿಒಪಿಡಿ ಉಂಟಾಗಬಹುದು. ಮೆಟ್ರೋ ನಗರಗಳಲ್ಲಿ ಮಕ್ಕಳು ಮತ್ತು ವೃದ್ಧರು ಉಸಿರಾಟದ ಕಾಯಿಲೆಯಿಂದ ಬಳಲುತ್ತಿರುವುದು ವಾಯುಮಾಲಿನ್ಯವೇ ಪ್ರಾಥಮಿಕ ಕಾರಣ ಎಂದು ಹೇಳಲಾಗುತ್ತಿದೆ. 

ಶ್ವಾಸಕೋಷದ ಕ್ಯಾನ್ಸರ್ 

ಶ್ವಾಸಕೋಶದ ಕ್ಯಾನ್ಸರ್ ಸಾಮಾನ್ಯವಾಗಿ ಧೂಮಪಾನ ಮಾಡುವವರಿಗೆ ಸಂಬಂಧ ಹೊಂದಿದೆ ಎಂದು ಹೇಳಲಾಗುತ್ತದೆ, ಎನ್‌ ಸಿಬಿಐ ಪ್ರಕಾರ, ಕೆಲವು ಬಾರಿ ಶ್ವಾಸಕೋಶದ ಕ್ಯಾನ್ಸರ್ ಗೆ ಮನೆಯ ಪೀಠೋಪಕರಣ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಸ್ವಚ್ಛ ಗೊಳಿಸಲು ಉಪಯೋಗಿಸುವ  ಫಾರ್ಮಾಲ್ಡಿಹೈಡ್ ವಿಷವನ್ನುಂಟು ಮಾಡಬಹುದು. 

ಹೃದಯ ರಕ್ತನಾಳದ ತೊಂದರೆಗಳು

ಕಲುಷಿತ ಗಾಳಿಯಲ್ಲಿ ದೀರ್ಘಕಾಲದವರೆಗೆ ಉಸಿರಾಡುವುದರಿಂದ ಹೃದ್ರೋಗಗಳ ಸಮಸ್ಯೆ ಹೆಚ್ಚಾಗುತ್ತದೆ. ಹಾನಿಕಾರಕ ವಾಯು ಮಾಲಿನ್ಯ ಕಾರ್ಬನ್ ಮಾನಾಕ್ಸೈಡ್ , ನೈಟ್ರೋಜನ್ ಡೈಯೋಕ್ಸೈಡ್ ಗಾಳಿಯ ಮೂಲಕ ದೇಹದಲ್ಲಿ ಬೆರೆತು. ಹೃದಯ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಬಹುದು. ಗರ್ಭಿಣಿಯರ ಮೇಲೂ ವಾಯುಮಾಲಿನ್ಯ ಪರಿಣಾಮ ಬೀರುತ್ತದೆ. ಅಕಾಲಿಕ ಜನನ ಮತ್ತು ಮಕ್ಕಳು ಜೀವನ ಪರ್ಯಂತ ಹೃದಯ ಸಂಬಂಧಿ ಸಮಸ್ಯೆ ಮತ್ತು ಉಸಿರಾಟದ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ವಾಯು ಮಾಲಿನ್ಯವು ರಕ್ತನಾಳದ ಕಾಯಿಲೆಗಳಿಗೂ ಕಾರಣವಾಗಬಹುದು. 

ಆಯುರ್ವೇದದ ಪಾತ್ರವೇನು.?

  1. ನಾಸ್ಯ ಕರ್ಮ, ನಾಸ್ಯ ಕರ್ಮ ಎಂದರೆ ಅಂಗಾಗಳ ಚಟುವಟಿಕೆ ಹೆಚ್ಚಿಸಲು ಮತ್ತು ತಲೆಯ ಭಾಗದಲ್ಲಿ ಉಂಟಾಗುವ ವಿವಿಧ ರೋಗಗಳನ್ನು ತಡೆಯುವುದಾಗಿದೆ. ನಾಸ್ಯ  ಕರ್ಮದ ಮೂಲಕ ಕಣ್ಣು , ಕಿವಿ, ಮತ್ತು ಮೂಗಿನ ಸಮಸ್ಯೆಯನ್ನು ನಿವಾರಿಸಬಹುದು. ಈ ಚಿಕಿತ್ಸೆ ಮಾಯುಮಾಲಿನ್ಯದಿಂದ ಉಂಟಾಗುವ ಅಲರ್ಜಿಯನ್ನು ತಡೆಗ್ಟಟುತ್ತದೆ. ಮೂಗಿನ ಮೂಲಕ ಡ್ರಾಪ್ಸ್ ಹನಿಗಳನ್ನು ಹಾಕಲಾಗುತ್ತದೆ.

2. ಅಭಯಾಂಗ ಎಂದರೆ ಎಣ್ಣೆಯ ಮಜ್ಜನ, ಅಥವಾ ಗಿಡ ಮೂಲಿಕೆಯ ಎಣ್ಣೆಯಿಂದ ಇಡೀ ದೇಹವನ್ನು ಮಸಾಜ್ ಮಾಡುವ ಪ್ರಕ್ರಿಯೆ ಯಾಗಿದೆ. ಗಿಡ ಮೂಲಿಕೆಗಳು. ತುಪ್ಪ, ಎಣ್ಣೆ, ಇತ್ಯಾದಿಗಳನ್ನು ಬಳಸಿ ಕುತ್ತಿಗೆಯ ಭಾಗದಿಂದ ತೋಳುಗಳ ಮೇಲೆ ಮಸಾಜ್ ಮಾಡಲಾಗುತ್ತದೆ. ಈ ಚಿಕಿತ್ಸಾ ವಿಧಾನದಿಂದ ಸೈನಸ್, ಮೈಗ್ರೇನ್, ಶೀತ ಮತ್ತು ನೆಗಡಿಯನ್ನು ತಡೆಯಬಹುದು. ಅಲ್ಲದೇ, ಈ ಚಿಕಿತ್ಸೆ ರಕ್ತ ಪರಿಚಲನೆ ಸುಧಾರಿಸುವುದಲ್ಲೇದೇ, ವ್ಯಕ್ತಿಯನ್ನು ಹೆಚ್ಚು ಶಕ್ತಿಯುತನಾಗಿ ಈ ಚಿಕಿತ್ಸೆ ಮಾಡುತ್ತದೆ. 

3 ಸ್ವೇಧನಂ ಚಿಕಿತ್ಸೆ,  ಆರ್ಯುವೇದದಲ್ಲಿ ಇದು ಒಂದು ದೊಡ್ಡ ಚಿಕಿತ್ಸೆಯಾಗಿದೆ. ಔಷಧೀಕೃತ ಹಬೆಯ ಮೂಲಕ ಚಿಕಿತ್ಸೆಯನ್ನು ನಿರ್ವಹಿಸಲಾಗುತ್ತದೆ. ಅಮೂಲ್ಯ ಗಿಡಮೂಲಿಕೆಗಳ ಎಲೆಗಳು ಮತ್ತು ಗಿಡಮೂಲಿಕೆಗಳನ್ನು ನೀರಿನಲ್ಲಿ ಬೇಯಿಸಿ ಆ ಮೂಲಕ ಉತ್ಪತ್ತಿಯಾಗುವ ಔಷಧೀಕೃತ ಆವಿಯನ್ನು ಸಣ್ಣ ಕೊಠಡಿ ಆಕಾರದ ಗೂಡಿನಲ್ಲಿ ಬಿಡಲಾಗುತ್ತದೆ. 

ಧಾವಾನಾ ಚಿಕಿತ್ಸೆ 

ಚರ್ಮವನ್ನು ತೊಳೆಯುವುದು ಈ ಚಿಕಿತ್ಸೆಯ ಕ್ರಮವಾಗಿದೆ. ಚರ್ಮದಲ್ಲಿರುವ ಮಾಲಿನ್ಯಕಾರಕಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ