ಆರೋಗ್ಯಕ್ಕೆ 5 ಆಯುರ್ವೇದದ ಪಾನೀಯಗಳು.. – ( 5 Ayurvedic drinks for better health..!)

  • by

ನಿಧಾನವಾಗಿ ಸಾಂಕ್ರಾಮಿಕ ರೋಗಗಳು ಯಾವಾಗ ನಮ್ಮ ದೇಹವನನ್ನು ಪ್ರವೇಶಿಸುತ್ತವೆಯೋ ಗೊತ್ತಾಗುವುದಿಲ್ಲ. ಆದ್ದರಿಂದ ನಾವು ಉತ್ತಮ ಆಹಾರ ಕ್ರಮದಿಂದ, ನಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳುವುದು ಕಡ್ಡಾಯವಾಗಿದೆ. ಮತ್ತು ಆಯುರ್ವೇದ ಪಾನೀಯಗಳು ನಿಮಗೆ ಸಹಾಯ ಮಾಡಬಲ್ಲವು.ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೆಚ್ಚು ಮಹತ್ವದ್ದಾಗಿದೆ. ನೀವು ಆರೋಗ್ಯಕರವಾಗಿರಲು ಬಯಸಿದರೆ, ಆಯುರ್ವೇದ ಗಿಡಮೂಲಿಕೆಗಳ ಪಾನೀಯವನ್ನು ನಿಮ್ಮ ಡಯೆಟ್ ನಲ್ಲಿ ಅಳವಡಿಸಿಕೊಳ್ಳುವುದು ಉತ್ತಮ.


ತ್ರಿಫಲ ರಸ
ತ್ರಿಫಲ ರಸವು ಆಯುರ್ವೇದದಲ್ಲಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಇದು ತ್ರಿಫಲ ಬಳಕೆಯಿಂದ ಉರಿಯೂತ ಹಾಗೂ ಸೋಂಕನ್ನು ನಿವಾರಿಸಬಹುದಾಗಿದೆ. ದೇಹದ ಉತ್ಕರ್ಷಣ ನಿರೋಧಕವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕೂದಲು ಉದರುವಿಕೆಯನ್ನು ತಡೆಗಟ್ಟಲು , ಹೊಟ್ಟೆಯ ಭಾಗದ ಕೊಬ್ಬಿನಾಂಶದ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ.

ಶುಂಠಿ ರಸ ಅಥವಾ ಚಹಾ

ಆಯುರ್ವೇದದಲ್ಲಿ ಜೀರ್ಣ ಕ್ರಿಯೆಯನ್ನು ಹೆಚ್ಚಿಸಲು ಶುಂಠಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಶುಂಠಿಯನ್ನು ಕಾಣಬಹುದು. ಅದರ ಪರಿಮಳವು ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಂಡಿದೆ. ಇದರಲ್ಲಿ ಔಷಧೀಯ ಗುಣಗಳು ಹೆಚ್ಚಾಗಿವೆ. 1 ಕಪ್ ಶುಂಠಿ ಚಹಾವನ್ನು ವ್ಯಾಯಾಮದ ನಂತರ ಸೇವಿಸುವುದರಿಂದ ಅನೇಕ ಲಾಭಗಳನ್ನು ಕಾಣಬಹುದು.
ಒಣಗಿದ ಶುಂಠಿಯನ್ನು ಚಹಾದಲ್ಲಿ ಬಳಕೆ ಮಾಡಲಾಗುತ್ತದೆ.


ತುಳಸಿ ಚಹಾ

ತುಳಸಿ ಭಾರತದ ಗಿಡಮೂಲಿಕೆಗಳ ಔಷಧಿಗಳಲ್ಲಿ ಒಂದಾಗಿದೆ. ಆರೋಗ್ಯವನ್ನು ಕಾಪಾಡಲು ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇವುಗಳಲ್ಲಿ ಉತ್ಕರ್ಷಣಾ ನಿರೋಧಕ , ಉರಿಯೂತ ಮತ್ತು ಸಂಧಿವಾತ ಸಮಸ್ಯೆಯನ್ನು ನಿವಾರಿಸುತ್ತದೆ. ಉರಿಯೂತ ಮತ್ತು ಜಂಟಿ ಕ್ಷೀಣತೆಯನ್ನು ಕಡಿಮೆ ಮಾಡುತ್ತದೆ ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ. ಗಿಡಮೂಲಿಕೆ ಚಹಾ ರೂಪದಲ್ಲಿ ತುಳಸಿ,

ಮೆಂತ್ಯಾ ನೀರು

ನಮ್ಮಲ್ಲಿ ಹೆಚ್ಚಿನವರು ಮೆಂತ್ಯಾ ಪ್ರಯೋಜನಗಳ ಬಗ್ಗೆ ಅರಿತಿದ್ದಾರೆ. ಮುಖ್ಯವಾಗಿ ಮೆಂತ್ಯಾ ಬೀಜಗಳು ಔಷಧೀಯ ಗುಣಗಳನ್ನು ಹೊಂದಿದೆ. ನಿಯಮಿತವಾಗಿ ಮೆಂತ್ಯಾ ನೀರನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಜೀರ್ಣಕ್ರಿಯೆಯನ್ನು ನಿಯಂತ್ರಿಸುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.ನೀವು ಮೆಂತ್ಯಾ ಬೀಜಗಳನ್ನು ರಾತ್ರಿ ಇಡೀ ಬಿಸಿ ನೀರಿನಲ್ಲಿ ನೆನೆಹಾಕಿ , ಬೆಳಿಗ್ಗೆ ಎದ್ದು ಈ ನೀರನ್ನು ಸೇವಿಸಬಹುದಾಗಿದೆ.

ಕೊತ್ತಂಬರಿ ನೀರು

ಕೊತ್ತಂಬರಿ ಅಥವಾ ದನಿಯಾ ಭಾರತದಲ್ಲಿ ಹೇರಳವಾಗಿ ಸೀಗುವ ಪದಾರ್ಥ. ವ್ಯಾಪಕವಾಗಿ ಬಳಸುವ ಮಸಾಲೆ ಗಿಡಮೂಲಿಕೆಯಲ್ಲಿ ಇದು ಪ್ರಾಮುಖ್ಯತೆ ಯನ್ನು ಪಡೆದುಕೊಂಡಿದೆ. ಇದರಲ್ಲಿ ಉತ್ಕರ್ಷಣಾ ನಿರೋಧಕ ಸಮೃದ್ಧವಾಗಿದ್ದು, ವಿವಿಧ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ