ಆಯುರ್ವೇದ ಪ್ರಕಾರ, ನಿಮ್ಮ ಆಹಾರ ಕ್ರಮ ಹೇಗಿರಬೇಕು? ಇಲ್ಲಿದೆ ಟಿಪ್ಸ್..!

  • by

ಶುದ್ಧ ಆಹಾರದ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಆರೋಗ್ಯಕರ ಜೀವನದ ಮೊದಲ ಹೆಜ್ಜೆ. ಆಯುರ್ವೇದದ ಪ್ರಕಾರ, ಹೊಟ್ಟೆ ತುಂಬಲು ಹಾಗೂ ದೇಹವನ್ನು ಪೋಷಿಸಲು ನಾವು ಆಹಾರ ಸೇವಿಸಬಾರದು. ಆಹಾರ ಸೇವನೆಯಿಂದ ಯೋಗಕ್ಷೇಮಕ್ಕೆ ಉತ್ತಮ ಫಲಿತಾಂಶಗಳನ್ನು ಕಂಡು ಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರು ಅವಸರದಲ್ಲಿ ಊಟ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಆದ್ರೆ ಇದು ಉತ್ತಮ ಅಭ್ಯಾಸವಲ್ಲ. ಆರೋಗ್ಯಕರ ಜೀವನಕ್ಕಾಗಿ ಅನೇಕ ಅಭ್ಯಾಸಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ.


Ayurvedic Diet Principles,  Health benefits, ಆರೋಗ್ಯ ಟಿಪ್ಸ್, ಆಯುರ್ವೇದ, ಡೆಯೆಟ್ ಆಹಾರ

ನಿಂತುಕೊಂಡು ನೀರನ್ನು ಕುಡಿಯಬೇಡಿ.!.

ಆರ್ಯುವೇದದ ಪ್ರಕಾರ, ನಿಂತುಕೊಂಡು ನೀರು ಕುಡಿಯಬಾರದು. ನಿಂತು ಕೊಂಡು ನೀರು ಕುಡಿಯುವುದು ಕೆಟ್ಟ ಅಭ್ಯಾಸ ವಾಗಿದೆ. ವಾಸ್ತವವಾಗಿ, ನಿಮ್ಮ ಹೊಟ್ಟೆಗೆ ಹಾಗೂ ಜೀರ್ಣಕ್ರಿಯೆಗೆ ಈ ಅಭ್ಯಾಸ ಒಳ್ಳೆಯದಲ್ಲ. ಇನ್ನು ನಿಂತುಕೊಂಡು ಸಹ ಊಟ ಮಾಡಬಾರದು. ನಿಂತಿರುವ ಭಂಗಿಯಲ್ಲಿ ನೀರು ಕುಡಿಯುವುದರಿಂದ ದೇಹದ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗದೇ ಇರಬಹುದ. ದೇಹದಲ್ಲಿ ವಿಷ ಹೆಚ್ಚಾಗಬಹುದು. ಅಲ್ಲದೇ, ಈ ಅಭ್ಯಾಸ ದೀರ್ಘಕಾಲದವರೆಗೆ ಮುಂದುವರೆದರೆ ಸಂಧಿವಾತಕ್ಕೆ ಕಾರಣವಾಗಬಹುದು.

ಎಚ್ಚರವಾದಾಗ, ಒಂದು ಲೋಟ ಬೆಚ್ಚಿಗಿನ ನೀರನ್ನು ಸೇವಿಸಿ..!

ಇದು ಪ್ರಾಚೀನ ಆಯುರ್ವೇದ ಪದ್ಧತಿಯಾಗಿದ್ದು, ಇದನ್ನು ಪಾಶ್ಚಿಮಾತ್ಯ ಸಂಸ್ಕೃತಿಗಳು ನಿಧಾನವಾಗಿ ಅಳವಡಿಸಿಕೊಳ್ಳುತ್ತಿವೆ. ಬೆಚ್ಚಗಿನ ನೀರಿನಿಂದ ನಿಮ್ಮ ದಿನವನ್ನು ಪ್ರಾರಂಭಿಸಬೇಕು. ಇದು ಚಯಾಪಚಯ ಪ್ರಕ್ರಿಯೆಯನ್ನು ಉತ್ತಮ ಗೊಳಿಸುತ್ತದೆ. ಮತ್ತು ಅಜೀರ್ಣ ಸಮಸ್ಯೆ ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಅಭ್ಯಾಸವು ವಿಶೇಷವಾಗಿ ತರೂಕ ನಷ್ಟಕ್ಕೆ ಹೆಚ್ಚು ಒಳ್ಳೆಯದು. ಆಹಾರವನ್ನು ಜೀರ್ಣಿಸಿಕೊಳ್ಳಲು ದೇಹದ ಭಂಗಿ ಪ್ರಮುಖ ಪಾತ್ರ ವಹಿಸುತ್ತದೆ. ಕುಳಿತುಕೊಂಡು ಊಟ ಮಾಡುವುದರಿಂದ ಹೊಟ್ಟೆಯ ಆರೋಗ್ಯಕ್ಕೆ ಸೂಕ್ತವಾದದ್ದು. ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ನಿವಾರಿಸುವಲ್ಲಿ ಇದು ಸಹಾಯ ಮಾಡುತ್ತದೆ.


Ayurvedic Diet Principles,  Health benefits, ಆರೋಗ್ಯ ಟಿಪ್ಸ್, ಆಯುರ್ವೇದ, ಡೆಯೆಟ್ ಆಹಾರ

ಖುತುವಿನ ಪ್ರಕಾರ ಆಹಾರ ಸೇವಿಸಿ!

ಆರೋಗ್ಯಕರ ಮನಸ್ಸು ಹಾಗೂ ಉತ್ತಮ ದೇಹಕ್ಕಾಗಿ ಸಮತೋಲನ ಕಾಪಾಡಿಕೊಳ್ಳುವುದು ಬಹಳ ಮುಖ್ಯ ತರಕಾರಿ, ಹಾಗೂ ಹಣ್ಣುಗಳ ಸೇವೆನೆಗೆ ಎಷ್ಟೇ ಪ್ರಾಮುಖ್ಯತೆ ನೀಡಿದರೂ, ಬೆಚ್ಚಗಿನ ಆಹಾರವನ್ನು ಚಳಿಗಾಲದಲ್ಲಿ ಸೇವಿಸಬೇಕು. ಹಾಗೂ ತಂಪಾಗಿರುವ ಆಹಾರಗಳನ್ನು ಬೇಸಿಗೆಯಲ್ಲಿ ಸೇವಿಸಬೇಕು.

ಅತಿಯಾಗಿ ತಿನ್ನುವುದನ್ನು ತಡೆಯಿರಿ..!

ನಿಮ್ಮ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಆಹಾರವನ್ನು ಎಂದಿಗೂ ಸೇವಿಸಬೇಡಿ. ನಿಮಗೆ ಹಸಿವಾದಗಲೆಲ್ಲಾ, 1 ಲೋಟ ನೀರು ಕುಡಿಯಿರಿ. ಹಸಿವನ್ನು ಬಾಯಾರಿಕೆಯಿಂದ ನೀಗಿಸಬಹುದು. ಅಲ್ಲದೇ, ನಿಮಗೆ ತುಂಬಾ ಹಸಿವಾದಾಗ, ಹೆಚ್ಚು ಆಹಾರವನ್ನು ಸೇವಿಸಬಾರದು, ಹಸಿವಿನ ಅರ್ಧದಷ್ಟು ಆಹಾರವನ್ನು ಸೇವಿಸಬೇಕು. ದೇಹವು ಸುಲಭವಾಗಿ ಜೀರ್ಣಿಸಿಕೊಳ್ಳಬಹುದಾದ ಆಹಾರಗಳನ್ನು ರಾತ್ರಿ ವೇಳೆ ಸೇವಿಸಬೇಕು. ಮಸಾಲೆ ಪದಾರ್ಥವಿರುವ ಆಹಾರಗಳನ್ನ ಲಘು ವಾಗಿ ಸೇವಿಸುವುದು ಉತ್ತಮ.


Ayurvedic Diet Principles,  Health benefits, ಆರೋಗ್ಯ ಟಿಪ್ಸ್, ಆಯುರ್ವೇದ, ಡೆಯೆಟ್ ಆಹಾರ

ಊಟದ ಕಡೆ ಗಮನವಿರಲಿ!

ನೀವು ಊಟ ಮಾಡುವಾಗ ಗಮನ ಊಟದ ಮೇಲೆ ಇರಬೇಕು. ಊಟ ಮಾಡುವಾಗ ಯಾವುದೇ ಕೆಲಸದಲ್ಲಿ ಅಥವಾ ಮೊಬೈಲ್ ನಲ್ಲಿ ಮಗ್ನರಾಗಬಾರು. ಕೆಲವು ಜನರು ಊಟ ಮಾಡುವಾಗ ಮೊಬೈಲ್ ಬಳಸುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಇಲ್ಲವೇ, ಟಿವಿ ವೀಕ್ಷಿಸುತ್ತಾರೆ. ನ್ಯೂಸ್ ಪೇಪರ್ ಓದುತ್ತಾರೆ. ಅಥವಾ ಮೊಬೈಲ್ ನಲ್ಲಿ ವಿಡಿಯೋ ನೋಡುತ್ತಾರೆ. ಹಾಗಾಗಿ ಊಟ ಮಾಡುವಾಗ ಬೇರೆ ಕಡೆ ವಿಚಲಿತರಾಗಕೂಡದು.

ನಿಧಾನವಾಗಿ ತಿನ್ನಿರಿ..!

ನಿಮ್ಮ ಆಹಾರವನ್ನು ಅನೇಕ ಬಾರಿ ಅಗಿಯುವುದು ತುಂಬಾ ಮುಖ್ಯ. ಅಲ್ಲದೇ ಆಹಾರವನ್ನು ನಿಧಾನವಾಗಿ ತಿನ್ನಬೇಕು. ನೀವು ನಿಧಾನವಾಗಿ ತಿನ್ನುವಾಗ, ಜೀರ್ಣಕಾರಿ ಕಿಣ್ವಗಳು ಸಕ್ರಿಯಗೊಳ್ಳುತ್ತವೆ. ಮತ್ತು ಆಹಾರ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಅಲ್ಲದೇ ಹೊಟ್ಟೆಯ ಅನೇಕ ಸಮಸ್ಯೆಗಳನ್ನು ಇದು ತಡೆಗಟ್ಟುತ್ತದೆ.


Ayurvedic Diet Principles,  Health benefits, ಆರೋಗ್ಯ ಟಿಪ್ಸ್, ಆಯುರ್ವೇದ, ಡೆಯೆಟ್ ಆಹಾರ

ಸಮತೋಲಿತ ಆಹಾರದ ಬಗ್ಗೆ ಇರಲಿ ಪ್ಲ್ಯಾನ್..!

ಇತ್ತೀಚಿನ ದಿನಗಳಲ್ಲಿ ಬೊಜ್ಜು ಅತಿ ದೊಡ್ಡ ಸಮಸ್ಯೆಗಳಲ್ಲಿ ಒಂದು. ಇದು ಅತಿಯಾಗಿ ತಿನ್ನುವುದರಿಂದ ಉಂಟಾಗುತ್ತದೆ. ಆರೋಗ್ಯವಾಗಿರಲು ಹಾಗೂ ಬೊಜ್ಜು ನಿಯಂತ್ರಣದಲ್ಲಿಡಲು, ಆಹಾರ ಸೇವನೆ ಬಗ್ಗೆ ಪ್ಲ್ಯಾನ್ ಮಾಡಬೇಕು, ಆಯುರ್ವೇದದ ಪ್ರಕಾರ, ನಿಮ್ಮ ಆಹಾರದಲ್ಲಿ ಕೇವಲ ಮಸಾಲೆಯುಕ್ತ ಆಹಾರದ ಬದಲು, ಸಿಹಿ, ಉಪ್ಪು, ಹುಳಿ ಆಹಾರಗಳು ಇರಬೇಕು.

ತರಕಾರಿ, ಹಣ್ಣುಗಳನ್ನು ಸೇವಿಸಿ!

ಎಲ್ಲಾ ರೀತಿಯ ಪೋಷಕಾಂಶಗಳು ತರಕಾರಿ ಹಾಗೂ ಹಣ್ಣುಗಳಲ್ಲಿ ಇರುತ್ತದೆ. ಇವು ದೇಹಕ್ಕೆ ತುಂಬಾ ಮುಖ್ಯವಾದದ್ದು, ಟೊಮ್ಯಾಟೋ, ಸೇಬುಸ , ಪೇರಲೆ ಹಣ್ಣು, ಸ್ಟ್ರಾಬೆರಿ, ಕಲ್ಲಂಗಡಿ, ಮತ್ತು ಸೌತೆಕಾಯಿಯನ್ನು ಸೇವಿಸಿ. ಇದರಲ್ಲಿರುವ ಜೀವಸತ್ವಗಳು ನಿಮ್ಮನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ. ಕಣ್ಣು , ಮೂಳೆ ಹಾಗೂ ಹಲ್ಲುಗಳಿಗೂ ಇದು ಪ್ರಯೋಜನಾಕಾರಿ ಎಂದು ಹೇಳಬಹುದು.


Ayurvedic Diet Principles,  Health benefits, ಆರೋಗ್ಯ ಟಿಪ್ಸ್, ಆಯುರ್ವೇದ, ಡೆಯೆಟ್ ಆಹಾರ

ಕಚ್ಚಾ ತರಕಾರಿಗಳ ಸೇವನೆ

ಕೆಲವು ತರಕಾರಿಗಳಲ್ಲಿರುವ ಪೋಷಕಾಂಶಗಳು ಅಡುಗೆಯಿಂದ ನಾಶವಾಗಬಹುದು. ಆಯುರ್ವೇದ ಪ್ರಕಾರ, ಕಚ್ಚಾ ಅಥವಾ ಹಸಿ ತರಕಾರಿಗಳನ್ನು ಸೇವಿಸುವುದರಿಂದ ಹೊಟ್ಟೆ ಚೆನ್ನಾಗಿರುತ್ತದೆ. ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ಮಧ್ಯಾಹ್ನ ಊಟದ ಸಮಯದಲ್ಲಿ ಸಲಾಡ್ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ