ಆಯುರ್ವೇದದ ಬ್ಯೂಟಿ ಮಂತ್ರಗಳು..!

  • by

ಆಯುರ್ವೇದ ಭಾರತದ ಪ್ರಾಚೀನ ವಿಜ್ಞಾನವಾಗಿದೆ. ಇದರಲ್ಲಿ ಬಳಸುವ ಚಿಕಿತ್ಸೆ ವಸ್ತುಗಳು ನಿಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ದೊರೆಯುತ್ತವೆ. ಉದಾಹರಣೆಗೆ ಕರಿಬೇವಿನ ಎಲೆ, ಮೊಸರು ಮುಂತಾದ ಪದಾರ್ಥಗಳನ್ನು ಬಳಸಿ ಹೇರ್ ಮಾಸ್ಕ್ ತಯಾರಿಸಬಹುದು. ಆಯುರ್ವೇದ ಸೌಂದರ್ಯ ಚಿಕಿತ್ಸೆಯಲ್ಲಿ ಬಳಸುವ ಗಿಡಮೂಲಿಕೆಗಳಲ್ಲಿ ಅರಶಿಣ, ತ್ರಿಫಲ, ಆಮ್ಲಾ, ಮುಂತಾದ ಪದಾರ್ಥಗಳು ಸೇರಿವೆ. ಪ್ರತಿಯೊಂದು ಪದಾರ್ಥ ತಮ್ಮದೇ ಆದ ಗುಣಗಳನ್ನು ಹೊಂದಿವೆ. ಇವುಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವುದು ಮುಲ್ತಾನಿ ಮಿಟ್ಟಿ. ಚರ್ಮದ ಹೊಳಪಿಗೆ ವಿಭಿನ್ನ ಕಷಾಯಗಳನ್ನು ಸೇವಿಸಲಾಗುತ್ತದೆ. ಆಯುರ್ವೇದದ ಪ್ರಕಾರ, ಒಬ್ಬ ವ್ಯಕ್ತಿಯನ್ನು ಆಕೆಯ ಅಥವಾ ಆತನ ಸಮಸ್ಯೆಗಳಿಗನುಗುಣವಾಗಿ ವರ್ಗಿಕರಿಸಲಾಗುತ್ತದೆ. ಅಂದರೆ ವಾತಾ, ಪಿತ್ತ, ಹಾಗೂ ಕಫ ಇವುಗಳ ಆಧಾರದ ಮೇಲೆ ಚಿಕಿತ್ಸೆಯನ್ನು ನೀಡಬಹುದಾಗಿದೆ. ವಾತಾ ಸಮಸ್ಯೆ ಇರುವ ವ್ಯಕ್ತಿ ಒಣ ಚರ್ಮಕ್ಕೆ ಗುರಿಯಾಗುತ್ತಾರೆ. ಪಿತ್ತ ಸಮಸ್ಯೆ ಇರುವಂತಹ ವ್ಯಕ್ತಿ ಮೊಡವೆ ಹಾಗೂ ದದ್ದುಗಳ ಸಮಸ್ಯೆಗಳಿಗೆ ಗುರಿಯಾಗುತ್ತಾನೆ. ಕಫಾ ಇದು ಚರ್ಮದ ಕೊಬ್ಬಿನಂಶವನ್ನು ಸೂಚಿಸುತ್ತದೆ.

ayurveda-beauty-mantraswomen-beauty, ಸೌಂದರ್ಯ ಮಂತ್ರಗಳು, ಆಯುರ್ವೇದ ಮಂತ್ರಗಳು, ಮಹಿಳೆ

ಮಸೂರ ಅಥವಾ ಮೂಂಗ್ ದಾಲ್

ಮೂಂಗ್ ದಾಲ್ ಪ್ರಾಚೀನ್ ಕಾಲದಿಂದಲೂ ಪರಿಹಾರವಾಗಿದೆ. ಇದು ಮಂದ ಚರ್ಮವನ್ನು ಪುನರುಜ್ಜೀವನಗೊಳಿಸುತ್ತದೆ. ಅದನ್ನು ಮೂಂಗ್ ದಾಲ್ ಸ್ಕ್ರಬ್ ಅನ್ನು ಮುಖದ ಮೇಲಿನ ಕೂದಲು ನಿವಾರಣೆಗೆ ಬಳಸಲಾಗುತ್ತದೆ.

ತಯಾರಿಸುವ ವಿಧಾನ.. !

ಮೂಂಗ್ ದಾಲ್ ಪುಡಿ, ಚಂದನ್ ಪುಡಿ ಅಥವಾ ಶ್ರೀಗಂಧದ ಪುಜಿ ಮತ್ತು ಕಿತ್ತಳೆ ಸಿಪ್ಪೆಯ ಪುಡಿಗೆ ನಿಂಬೆ ರಸ , ರೋಸ್ ವಾಟರ್, ಮತ್ತು ಕರಿಬೇವಿನ ಎಲೆ ಸೇರಿಸ, ದಾಲ್ ನ್ನು ರಾತ್ರಿಯಿಡೀ ನೆನೆಸಿ. ಅದಕ್ಕೆ ಜೇನುತುಪ್ಪ ಸೇರಿಸಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಬಹುದು.

ಹಸಿರು ಮೂಂಗ್ ದಾಲ್ !

ಚರ್ಮವನ್ನು ಶುದ್ಧೀಕರಿಸುವ ಮೂಲಕ ಮಾಲಿನ್ಯದ ಹಾನಿಕಾರಕ ಪರಿಣಾಮಗಳನ್ನು ತಡೆಗಟ್ಟಬಹುದು. ಮಾಲಿನ್ಯದಿಂದಾಗಿ ಮುಖದ ಕಾಂತಿ ಕಳೆದುಕೊಳ್ಳಬಹುದು. ಚರ್ಮದ ಮೇಲಿನ ಧೂಳ, ಇತರ ಸಮಸ್ಯೆಗಳನ್ನು ತೆಗೆದುಹಾಕಲು ಹಾಗೂ ಕಡಿಮೆ ಮಾಡಲು ಇದು ನೆರವಾಗುತ್ತದೆ.

ತಯಾರಿಸುವ ವಿಧಾನ..!

1 ಬಟ್ಟಲಿನಲ್ಲಿ ಪಪ್ಪಾಯಿಯನ್ನು ಮ್ಯಾಶ್ ಮಾಡಿ ಅದಕ್ಕೆ ಜೇನುತುಪ್ಪ , ನಿಂಬೆ ರಸ ಹಾಗೂ ಶ್ರೀಗಂಧದ ಪುಡಿ ಹಾಗೂ ಫುಲ್ಲರ್ ಅರ್ತ್ ಪೌಡಕ್ ಸೇರಿಸಿ. ಮುಖಕ್ಕೆ ಹಚ್ಚಿಕೊಳ್ಳಬಹುದು,


ayurveda-beauty-mantraswomen-beauty, ಸೌಂದರ್ಯ ಮಂತ್ರಗಳು, ಆಯುರ್ವೇದ ಮಂತ್ರಗಳು, ಮಹಿಳೆ

ಆಯುರ್ ಉಬ್ತಾನ್

ಇದು ಆಯುರ್ವೇದದ ಹಳೆಯ ಪರಿಹಾರಗಳಲ್ಲಿ ಒಂದು. ಸಾಂಪ್ರದಾಯಿಕವಾಗಿ ವಧು ವರರು ತಮ್ಮ ಚರ್ಮ ಹೊಳೆಯಲು ಇದನ್ನು ಹೆಚ್ಚಾಗಿ ಬಳಸುತ್ತಾರೆ.
ಹೇಗೆ ತಯಾರಿಸುವುದು .
ಅರಶಿಣ, ಕಡ್ಲೆ ಹಿಟ್ಟು ಹಾಗೂ ಶ್ರೀಗಂಧದ ಪೌಂಡರ್ , ರೋಸ್ ವಾಟರ್ ಹಾಗೂ ಹಾಲು ಇವೆಲ್ಲವನ್ನು ಸೇರಿಸಿ, ಮುಖಕ್ಕೆ ಹಚ್ಚಿಕೊಳ್ಳಬಹುದು.

ಆಯುರ್ -ಹುಣಸೆಹಣ್ಣು

ಹುಣಸೆಹಣ್ಣು ಅಥವಾ ಇಮ್ಲಿಯಲ್ಲಿ ಆಂಟಿ ಆಕ್ಸಿಡೆಂಟ್ ಗಳ ಶಕ್ತಿ ಕೇಂದ್ರ. ಇದು ಮುಖದ ಆಕರ್ಷಣೆ ಹೆಚ್ಚಿಸುವುದಲ್ಲದೇ, ಚರ್ಮವನ್ನು ಸ್ವತಂತ್ರ ರಾಡಿಕಲ್ ಗಳಿಂದ ರಕ್ಷಿಸುತ್ತದೆ. ಇದು ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ.

ತಯಾರಿಸುವ ವಿಧಾನ

1 ಚಮಚ ಹುಣಸೆಹಣ್ಣು ಮತ್ತು ಉಪ್ಪನ್ನು ಬೆರೆಸಿ, ಇದಕ್ಕೆ ತಣ್ಣನೇಯ ಮೊಸರು ಸೇರಿಸಿ ಮಿಕ್ಸ್ ಮಾಡಿ. ನಂತರ ಮುಖಕ್ಕೆ ಹಚ್ಚಿಕೊಳ್ಳಿ. ಬಳಿಕ ಮುಖ ತೊಳೆಯಿರಿ.


ಬೇವಿನ ಮಾಸ್ಕ್..!

ಬೇವಿನ ಶುದ್ಧೀಕರಣವು ಮೊಡವೆಗಳು ಮತ್ತು ಚರ್ಮದ ಮೇಲೆ ಸೂಕ್ಷ್ಮ ಬ್ಯಾಕ್ಟೇರಿಯಾದ ರಚನೆಗೆ ಉತ್ತಮ ಪರಿಹಾರವಾಗಿದೆ. ಇದು ಶಕ್ತಿಯುತ ಟೋನರ್ ಗೆ ಉಪಯುಕ್ತವಾದದ್ದು.

ತಯಾರಿಸುವ ವಿಧಾನ..!

ಕೆಲವು ಬೇವಿನ ಎಲೆಗಳನ್ನು ತೆಗೆದುಕೊಂಡು ಮಿಕ್ಸರ್ ಗೆ ಹಾಕಿ ಪೇಸ್ಚ್ ತಯಾರಿಸಿಕೊಳ್ಳಿ. ನಿಂಬೆ ರಸವನ್ನು ಇದರ ಜತೆಗೆ ನೀರು ಮಿಶ್ರಣ ಮಾಡಿ. ನಂತರ ಮುಖಕ್ಕೆ ಹಚ್ಚಿಕೊಳ್ಳಿ. ನಂತರ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಅಲ್ಲದೇ, ನೀವು ಇದಕ್ಕೆ ಶ್ರೀಗಂಧ ಪುಡಿ ಬೆರಸಬಹುದು.

ಅರಶಿಣ – ಚಂದನ್

ಚರ್ಮಕ್ಕಾಗಿ ಅತ್ಯುತ್ತಮವಾದ ನೈಸರ್ಗಿಕ ಪದಾರ್ಥಗಳಲ್ಲಿ ಅರಶಿಣ ಹಾಗೂ ಚಂದನ್ ಕೂಡಾ ಒಂದು. ಇದು ಚರ್ಮವನ್ನು ಹೊಳಪಾಗಿಸಲು ಸಹಾಯ ಮಾಡುತ್ತದೆ. ಶ್ರೀಗಂಧ ಬಳಸುವುದರಿಂದ ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಗಟ್ಟಬಹುದು,

ತಯಾರಿಸುವ ವಿಧಾನ…

ಚರ್ಮದ ಮೊಡವೆಗಳನ್ನು ಕಡಿಮೆ ಮಾಡಲು ಅರಶಿಣ ಪುಡಿ ಹಾಗೂ ಶ್ರೀಗಂಧದ ಪುಡಿಯನ್ನು ಬೆರೆಸಿ, ಅದಕ್ಕೆ 1 ಚಮಚ ನಿಂಬೆ ರಸವನ್ನು ಬೆರೆಸಿ, ನಂತರ ಮುಖಕ್ಕೆ ಹಚ್ಚಿಕೊಳ್ಳಿ. 10 ನಿಮಿಷ ಬಿಟ್ಟು ತೊಳೆಯಿರಿ. ಕಂದು ಬಣ್ಣದ ಪರಿಣಾಮಗಳನ್ನು ಕಡಿಮೆ ಮಾಡಲು ಇದಕ್ಕೆ ಜೇನುತುಪ್ಪ ಮತ್ತು ಹಾಲಿನ ಪುಡಿಯನ್ನು ಸೇರಿಸಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ