ಈ ಆಹಾರಗಳು ಹೃದಯದ ಬಡಿತ ಹೆಚ್ಚಿಸಬಹದು.. ಎಚ್ಚರ!

  • by

ಹೃದಯ ಬಡಿತ ಹೆಚ್ಚಾಗುವುದು ಅಪಾಯದ ಸಂಕೇತವಲ್ಲ. ಕೆಲವು ಸಾಮಾನ್ಯ ಕಾರಣಗಳಿಂದಾಗಿ ಹೃದಯ ಬಡಿತ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ನೀವು ತುಂಬಾ ಆತಂಕ್ಕಕೊಳಗಾದಾಗ ನಿಮ್ಮ ಹೃದಯ ಬಡಿತ ವೇಗ ಹೆಚ್ಚಾಗುತ್ತದೆ. ದೇಹದಲ್ಲಿ ರಕ್ತದ ಕೊರತೆ ಇದ್ದಾಗ, ಅಥವಾ ಕೆಲವು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಹೃದಯದ ಬಡಿತ ಹೆಚ್ಚಾಗಬಹುದು. ಇದಲ್ಲದೇ, ಕೆಲವು ಅನಾರೋಗ್ಯಕರ ಆಹಾರ ಸೇವನೆ ಮಾಡುವುದು, ಹಾಗೂ ಕುಡಿಯುವುದರಿಂದಲೂ ಹೃದಯ ಬಡಿತವು ಹೆಚ್ಚಾಗಬಹುದು. ಹಾಗಾಗಿ ಈ ಬಗ್ಗೆ ನೀವು ಗಮನ ಹರಿಸಬೇಕಾಗುತ್ತದೆ.

Avoid foods, healthier heart, ಆಹಾರಗಳು ತ್ಯಜಿಸಿ, ಆರೋಗ್ಯಕರ ಹೃದಯ

ಹೃದಯ ಬಡಿತ ಹಠಾತ್ ಹೆಚ್ಚಳಕ್ಕೆ ಕಾರಣವಾಗುವ ಕೆಲ ಆಹಾರಗಳು ಇವೆ. ಇವು ದೀರ್ಘಕಾಲ ನಿಮಗೆ ಅಪಾಯ ಉಂಟು ಮಾಡುತ್ತವೆ. ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಭವಿಷ್ಯದಲ್ಲಿ ಹೃದ್ರೋಗ ಸಮಸ್ಯೆ ಸಾಧ್ಯತೆ ಹೆಚ್ಚು. ಹಾಗಾಗಿ ಸೀಮಿತ ಪ್ರಮಾಣದಲ್ಲಿ ಆಹಾರಗಳನ್ನು ಸೇವಿಸಬೇಕಾಗುತ್ತದೆ.

ಕಾಫಿ ಮತ್ತು ಚಹಾ

ಚಹಾ ಮತ್ತು ಕಾಫಿ ಎರಡನ್ನೂ ಅತಿಯಾಗಿ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದಕ್ಕೆ ಕಾರಣ ಕೆಫೀನ್, ನೀವು ಹೆಚ್ಚು ಕೆಫೀನ್ ಸೇವಿಸಿದರೆ, ನಿಮ್ಮ ಹೃದಯದ ಬಡಿತ ಹೆಚ್ಚಾಗುತ್ತದೆ. ಪ್ರತಿ ದಿನ ಚಹಾ ಸೇವಿಸುತ್ತಿದ್ದರೆ ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಿ. ಇದು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು. ದಿನಕ್ಕೆ 3 ಕಪ್ ಚಹಾ ಅದಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.


Avoid foods, healthier heart, ಆಹಾರಗಳು ತ್ಯಜಿಸಿ, ಆರೋಗ್ಯಕರ ಹೃದಯ

ತಂಪು ಪಾನೀಯ, ಚಾಕಲೇಟ್

ತಂಪು ಪಾನೀಯ ಹಾಗೂ ಚಾಕಲೇಟ್ ಗಳನ್ನು ಸೇವಿಸುವುದರಿಂದ ನಿಮ್ಮ ಹೃದಯದ ಬಡಿತವು ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಅನೇಕ ಬಾರಿ ನಿಮಗೆ ಇದರ ಬಗ್ಗೆ ತಿಳಿದಿಲ್ಲ. ಆದರೆ ಹೃದಯ ಬಡಿತವನ್ನು ಅಳೆಯುವ ಫಿಟ್ನೆಸ್ ಟ್ರ್ಯಾಕರ್ ನಿಮ್ಮಲ್ಲಿದ್ದರೆ, ನೀವು ಇದನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು. ತಂಪು ಪಾನೀಯ ಹಾಗೂ ಚಾಕಲೇಟ್ ಗಳು ಎರಡೂ ಕೆಫೀನ್ ನ್ನು ಹೊಂದಿರುತ್ತದೆ. ಇದು ಹೃದಯಕ್ಕೆ ತುಂಬಾ ಹಾನಿಕಾರಕ ಎಂದು ಹೇಳಲಾಗುತ್ತದೆ.

ಮದ್ಯಪಾನ

ಅಲ್ಕೋಹಾಲ್ ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಅಲ್ಕೋಹಾಲ್ ಕುಡಿದಾಗ ಇದ್ದಕ್ಕಿದಂತೆ ಹೃದಯ ಬಡಿತ ಹೆಚ್ಚಾಗಬಹುದು. ಮದ್ಯಪಾನ ಸೇವಿಸುವ ಜನರು ದುರ್ಬಲವಾದ ಹೃದವನ್ನು ಹೊಂದಿರುತ್ತಾರೆ. ಮದ್ಯಪಾನ ಸೇವಿಸುವುದರಿಂದ ಹೃದಯ ಸ್ತಂಭನ ಹಾಗೂ ಹೃದಯಾಘಾತದಂತಹ ಸಮಸ್ಯೆಗಳಿಗೆ ಒಳಗಾಗಬಹುದು. ಆದ್ದರಿಂದ ಅಲ್ಕೋಹಾಲ್ ಅನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.

ಚೈನೀಸ್ ಆಹಾರಗಳು

ಭಾರತದ ಅನೇಕ ರೆಸ್ಟೋರೆಂಟ್ ಗಳಲ್ಲಿ ಮಾರಾಟವಾಗುವ ಜನಪ್ರಿಯ ಚೀನೀ ಆಹಾರಗಳಾದ ನೂಡಲ್ಸ್, ಮಂಚೂರಿಯನ್ , ಮೊಮೊಸ್ ಇತ್ಯಾದಿ ಆಹಾರಗಳಲ್ಲಿ ಮೊನೊಸೋಡಿಯಂ ಗ್ಲುಟಾಮೇಟ್ ಅನ್ನು ಬಳಸಲಾಗುತ್ತದೆ. ಈ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಹೃದಯ ಬಡಿತವು ಹೆಚ್ಚಾಗುತ್ತದೆ. ಮತ್ತು ಆಹಾರಗಳು ಸೇವನೆಯಿಂದ ಅಪಾಯಕಾರಿ ಎಂದು ತಿಳಿದು ಬಂದಿದೆ.


Avoid foods, healthier heart, ಆಹಾರಗಳು ತ್ಯಜಿಸಿ, ಆರೋಗ್ಯಕರ ಹೃದಯ

ಹೃದಯದ ಆರೋಗ್ಯಕ್ಕೆ ಯಾವ ಆಹಾರಗಳನ್ನು ಸೇವಿಸಬೇಕು..?

ಹೃದಯಕ್ಕೆ ಪೌಷ್ಟಿಕ ಆಹಾರದ ಅಗತ್ಯವಿರುತ್ತದೆ. ದೈಹಿಕ ಸಾಮರ್ಥ್ಯ ಮತ್ತು ಸಮತೋಲಿತ ಆಹಾರದ ಸಹಾಯದಿಂದ ನೀವು ಅನೇಕ ರೋಗಗಳನ್ನು ತಡೆಗಟ್ಟಬಹುದು. ನಿಮ್ಮ ಆಹಾರದ ಪಟ್ಟಿಯಲ್ಲಿ ಈ ಆಹಾರಗಳು ಇರಲಿ.

ಹಣ್ಣು

ಆರೋಗ್ಯಕ್ಕಾಗಿ ತಾಜಾ ಹಾಗೂ ಕಾಲೋಚಿತ ಹಣ್ಣುಗಳನ್ನು ಸೇವಿಸಬೇಕು. ಹೃದಯದ ಆರೋಗ್ಯಕ್ಕಾಗಿ, ದಾಳಿಂಬೆ , ಸೇಬು , ಬಾಳಹಣ್ಣು ಹಾಗೂ ಬೆರ್ರಿ ಹಣ್ಣುಗಳು ಹಾಗೂ ಸಿಟ್ರೆಸ್ ಹಣ್ಣುಗಳನ್ನು ಸೇವಿಸಬೇಕಾಗುತ್ತದೆ.

ತರಕಾರಿಗಳು

ಬೀನ್ಸ್ , ಓಕ್ರಾ ಮತ್ತು ಬಿಳಿ ಬದನೆ (ಬದನೆಕಾಯಿ) ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಫೈಬರ್ ಭರಿತ ಆಹಾರಗಳು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತವೆ. ಮೊಸರು ಸಹ ಆರೋಗ್ಯಕ್ಕೆ ಒಳ್ಳೆಯದು. ಮೊಸರು ಪ್ರೊಬಯಾಟಿಕ್ ಗಳನ್ನು ಹೊಂದಿದ್ದು, ಇದು ದೇಹದಲ್ಲಿ ಬ್ಯಾಕ್ಟೇರಿಯಾವನ್ನು ಅಭಿವೃದ್ಧಿಪಡಿಸುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮೊಸರು ಸೇವಿಸುವುದರಿಂದ ಬೇಸಿಗೆಯಲ್ಲಿ ಮಾತ್ರವಲ್ಲದೇ, ಚಳಿಗಾಲದಲ್ಲೂ ಸೇವಿಸಬಹುದು.


Avoid foods, healthier heart, ಆಹಾರಗಳು ತ್ಯಜಿಸಿ, ಆರೋಗ್ಯಕರ ಹೃದಯ

ಮೀನು ಸಹ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ವಾರಕ್ಕೆ 2 ಬಾರಿಯಾದರೂ ಮೀನನ್ನು ಸೇವಿಸಬೇಕು. ಮೀನಿನಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಹೆಚ್ಚಾಗಿರುತ್ತವೆ. ಡ್ರೈಫ್ರೂಟ್ಸ್ ಸಹ ಆರೋಗ್ಯವನ್ನು ಹೆಚ್ಚಿಸುತ್ತವೆ. ಡ್ರೈಫ್ರೂಟ್ಸ್ ನಲ್ಲಿ ಹೆಚ್ಚಿನ ಪ್ರಮಾಣದ ಜೀವ ಸತ್ವಗಳು ಹಾಗೂ ಖನಿಜಗಳು ಇರುವುದರಿಂದ ನಿಮಗೆ ಹಸಿವು ಎನ್ನಿಸಿದಾಗ, ಪಿಸ್ತಾ, ಬಾದಾಮಿ ತಿನ್ನಲು ಸಲಹೆ ನೀಡಲಾಗುತ್ತದೆ.

ಗ್ರೀನ್ ಟೀ
ಆಂಟಿ ಆಕ್ಸಿಡೆಂಟ್ ಗಳು ಗ್ರೀನ್ ಟೀ ಯಲ್ಲಿ ಸಮೃದ್ಧವಾಗಿರುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ. ದಿನಕ್ಕೆ 1 ಕಪ್ ಗ್ರೀನ್ ಟೀ ಕುಡಿಯುವುದರಿಂದ ಹೃದಯ ಸಂಬಂಧಿತ ಅನೇಕ ಕಾಯಿಲೆಗಳು ನಿವಾರಣೆಯಾಗುತ್ತವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ