ಊಟ ಮಾಡಿದ ನಂತರ ಈ ಕೆಲಸಗಳನ್ನು ಮಾಡಬೇಡಿ..!- (Things You Should Never Do After Eating)ಕೇವಲ ಆಹಾರವನ್ನು ಸೇವಿಸುವುದರಿಂದ ನಿಮ್ಮ ದೇಹ ಸರಿಯಾದ ಪೋಷಣೆ ಪಡೆಯುತ್ತದೆ ಎಂದು ನೀವು ಭಾವಿಸಿದ್ದೀರಾ.. ಆದ್ರೆ ಇದು ತಪ್ಪು, ಆಹಾರ ಸೇವಿಸುವುದು ಪೌಷ್ಠಿಕಾಂಶದ ಒಂದು ಸ್ಟೆಪ್ ಮಾತ್ರ. ಈ ಲೇಖನದಲ್ಲಿ ಆಹಾರ ಸೇವಿಸಿದ ನಂತರ ಈ ಕೆಲಸಗಳನ್ನು ಮಾಡಕೂಡದು ಎಂದು ಹೇಳಲಾಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ಇಂದಿನಿಂದ ಈ ಕೆಲಸಗಳನ್ನು ಮಾಡುವುದನ್ನು ನಿಲ್ಲಿಸಿ. ಆಹಾರವನ್ನು ಸೇವಿಸಿದ ನಂತರ ಏನು ಮಾಡಬಾರದು ಎಂದು ತಿಳಿಯೋಣ.

avoid bad habites, after lunch,ಇವುಗಳನ್ನು ಮಾಡಬೇಡಿ, ಊಟ

ಆಹಾರ ಸೇವಿಸುವುದರ ಜತೆಗೆ ಇದಕ್ಕೆ ಸಂಬಂಧಿಸಿದ ನಿಯಮಗಳನ್ನು ಪಾಲಿಸುವುದು ಅಷ್ಟೇ ಮುಖ್ಯ. ಉತ್ತಮ ಹಾಗೂ ದೀರ್ಘಾವಧಿಯ ಆರೋಗ್ಯ ವೃದ್ಧಿಗೆ ಆಹಾರ ಅಗತ್ಯ ವಾದದ್ದು. ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸುವುದು ಉತ್ತಮ ಎಂದು ಹೇಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕರು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಇದು ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ.

ಹಣ್ಣು ಹಾಗೂ ತರಕಾರಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ನಮಗೆ ಸರಿಯಾದ ಪ್ರಮಾಣದ ಪೋಷಕಾಂಶ ದೊರೆಯುತ್ತವೆ ಎಂದು ಹೇಳುವುದನ್ನು ಕೇಳಿದ್ದೇವೆ. ಆದರೆ ಪ್ರತಿಯೊಬ್ಬ ವ್ಯಕ್ತಿಯೂ ವಿಟಮಿನ್ , ಮಿನರಲ್ಸ್ ಹಾಗೂ ಐರನ್ ಮತ್ತು ಕ್ಯಾಲ್ಸಿಯಂ ಕೊರತೆಯನ್ನು ಎದುರಿಸುತ್ತಿದ್ದಾರೆ.

ಕಬ್ಬಿಣದ ಕೊರತೆ ಯಿಂದಾಗಿ ದೇಹದಲ್ಲಿ ರಕ್ತದ ಕೊರತೆಯೂ ಹೆಚ್ಚಿದೆ. ಜತೆಗೆ ದೇಹದ ಮೂಳೆಗಳು ದುರ್ಬಲಗೊಳ್ಳುತ್ತವೆ. ಹೀಗಾಗಿ ಆಹಾರ ಸೇವಿಸಿದ ತಕ್ಷಣ ಈ ಅಭ್ಯಾಸಗಳನ್ನು ನಾವು ಪದೇ ಪದೇ ಮಾಡುತ್ತೇವೆ. ಇದರಿಂದ ಸೇವಿಸಿದ ಆಹಾರ ಜೀರ್ಣವಾಗುವುದಿಲ್ಲ. ನಮ್ಮ ದೇಹಕ್ಕೆ ಸರಿಯಾದ ಆಹಾರ ಅಗತ್ಯವಾಗಿ ಬೇಕಿರುತ್ತದೆ.ಹಾಗಾಗಿ ಆಹಾರಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಪಾಲಿಸಿದರೆ ನಾವು ಭವಿಷ್ಯದಲ್ಲಿ ಈ ಕಾಯಿಲೆಗಳನ್ನು ಗುಣಪಡಿಸಲು ಸಾಧ್ಯವಾಗುತ್ತದೆ. ರೋಗಗಳಿಂದ ಹಾಗೂ ಔಷಧಿಗಳಿಂದ ದೂರವಿರಬಹುದು.

ಬೊಜ್ಜು, ಆ್ಯಸಿಡಿಟಿ ಹಾಗೂ ಥೈರಾಯ್ಡ್ ಸಮಸ್ಯೆ , ಸಂಧಿವಾತ , ಮೊಣಕಾಲು ನೋವು , ಕಣ್ಣುಗಳಲ್ಲಿ ದೌರ್ಬಲ್ಯ. ಕೂದಲು ಉದರುವುದು ಅಥವಾ ಅಕಾಲಿಕ ಕೂದಲು ಬೆಳ್ಳಗಾಗುವುದು. ಮಧುಮೇಹ , ಹೃದ್ರೋಗ ಹೀಗೆ ಅನೇಕ ಸಮಸ್ಯೆಗಳು ಕಾಡಲಾರಂಭಿಸುತ್ತವೆ.

avoid bad habites, after lunch,ಇವುಗಳನ್ನು ಮಾಡಬೇಡಿ, ಊಟ

ಆಹಾರ ಸೇವಿಸಿದ ತಕ್ಷಣ ಏನು ಮಾಡಬಾರದು?


1.ಊಟವಾದ ತಕ್ಷಣ ಧೂಮಪಾನ ಮಾಡಬೇಡಿ
2.ಆಹಾರ ಸೇವಿಸಿದ ತಕ್ಷಣ ಮಲಗುವುದು
3.ಊಟವಾದ ಮೇಲೆ ಸಿಹಿ ಪದಾರ್ಥ ಸೇವಿಸುವುದು ಉತ್ತಮವಲ್ಲ
4.ಊಟವಾದ ತಕ್ಷಣ ಸ್ನಾನ ಮಾಡುವುದು
5.ಆಹಾರ ಸೇವಿಸಿದ ಕೂಡಲೇ ನೀರು ಕುಡಿಯುವುದು
6.ಊಟವಾದ ಮೇಲೆ ನೀರು ಕುಡಿಯುವುದು
7.ಊಟವಾದ ಮೇಲೆ ಹಣ್ಣು ಅಥವಾ ಸಲಾಡ್ ಸೇವನೆ

ಆಹಾರ ಸೇವಿಸಿದ ತಕ್ಷಣ ಧೂಮಪಾನ

ಊಟವಾದ ಕೂಡಲೇ ಸಿಗರೇಟ್ ಸೇದಬಾರದು. ಕೆಲವರು ಊಟವಾದ ಮೇಲೆ ಧೂಮಪಾನ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಇದು ಅತ್ಯಂತ ಅಪಾಯಕಾರಿ ಎಂದು ಹೇಳಲಾಗುತ್ತದೆ. ಸಿಗರೇಟು ಸೇದುವುದರಿಂದ ಕಾಯಿಲೆಗಳು ಸುಮಾರು 10 ಪಟ್ಟು ಹೆಚ್ಚುವ ಸಾಧ್ಯತೆ ಹೆಚ್ಚು. ಅಲ್ಲದೇ ಇದು ಶ್ವಾಸಕೋಶದ ಕಾಯಿಲೆಗೆ ಕಾರಣವಾಗಬಹುದು.

ಸಿಗರೇಟ್ ಸೇದುವಾಗ ಅದರಿಂದ ಬಿಡುಗಡೆಯಾಗುವ ನಿಕೋಟಿನ್ ದೇಹದ ರಕ್ತದಲ್ಲಿ ಕಂಡು ಬರುತ್ತದೆ. ನಿಕೋಟಿನ್ ನಮ್ಮ ದೇಹದ ರಕ್ತದಿಂದ ಆಮ್ಲಜನಕವನ್ನು ಕಡಿಮೆ ಮಾಡುತ್ತದೆ. ಇದು ಜೀರ್ಣಕಾರಿ ಪ್ರಕ್ರಿಯೆ ಎಂದು ಹೇಳಬಹುದು. ಆದ್ದರಿಂದ ಧೂಮಪಾನವನ್ನು ಊಟವಾದ ನಂತರ ಅಂದರೆ 30 ನಿಮಿಷದ ಬಳಿಕ ಮಾಡಬೇಕು .

avoid bad habites, after lunch,ಇವುಗಳನ್ನು ಮಾಡಬೇಡಿ, ಊಟ

ಆಹಾರ ಸೇವಿಸಿದ ತಕ್ಷಣ ಮಲಗಬಾರದು


ಆಹಾರ ಸೇವಿಸಿದ ತಕ್ಷಣ ಕೆಲವರು ಕೂಡಲೇ ಮಲಗುವ ಅಭ್ಯಾಸ ಹೊಂದಿರುತ್ತಾರೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ದೇಹದಲ್ಲಿ ಅಜೀರ್ಣ ಸಮಸ್ಯೆ ಎದುರಿಸಬೇಕಾಗಿ ಬರಬಹುದು. ಇದರಿಂದ ಕಿರಿಕಿರಿ, ಆ್ಯಸಿಡಿಟಿ ಮತ್ತು ಅಜೀರ್ಣ , ಹುಳಿ ಪಟ್ಟಿ ಗಳು, ಕರುಳಿನಲ್ಲಿರುವ ದೌರ್ಬಲ್ಯ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಹೆಚ್ಚು ಎಂದು ಹೇಳಬಹುದು.

ಊಟವಾದ ನಂತರ ವಾಕ್ ಮಾಡಬಾರದು

ಆಹಾರ ಸೇವಿಸಿದ ಬಳಿಕ ನಡೆಯುವುದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಬಹುದು. ಕೆಲವು ಜನರು ಊಟವಾದ ಮೇಲೆ ವಾಕ್ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಆಹಾರ ಜೀರ್ಣಿಸಿಕೊಳ್ಳಲು ಈ ರೀತಿ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಆದರೆ ರಕ್ತದ ಹರಿವು ಜೀರ್ಣಾಂಗ ವ್ಯವಸ್ಥೆಯಲಿಲ್ಲ. ಆದರೆ ಕೈ ಹಾಗೂ ಕಾಲುಗಳಲಿರುತ್ತದೆ. ಇದರಿದಂ ಜೀರ್ಣಕ್ರಿಯೆ ಪ್ರಕ್ರಿಯೆ ವೇಗವಾಗುವ ಬದಲು ನಿಧಾನವಾಗುತ್ತದೆ. ಊಟವಾದ 30 ನಿಮಿಷದ ನಂತರ ವಾಕ್ ಮಾಡುವುದು ಉತ್ತಮ.

ಊಟವಾದ ಮೇಲೆ ಕಾಫಿ, ಚಹಾ ಸೇವಿಸಬೇಡಿ

ಚಹಾ ಹಾಗೂ ಕಾಫಿಯಲ್ಲಿ ಎರಡರಲ್ಲೂ ಹೆಚ್ಚಿನ ಕೆಫೀನ್ ಇರುತ್ತದೆ. ಊಟವಾದ ತಕ್ಷಣ ಕಾಫಿ, ಅಥವಾ ಟೀ ಸೇವಿಸುವುದರಿಂದ ಆ್ಯಸಿಡ್ ರಿಫ್ಲೆಕ್ಸ್ ಹೈಪರ್ ಆ್ಯಸಿಡಿಟಿ ಮತ್ತು ಚರ್ಮದ ಕಾಯಿಲೆಗಳು ಉಂಟಾಗಬಹುದು. ಆದ್ದರಿಂದ ಊಟವಾದ ಮೇಲೆ ಚಹಾ ಕುಡಿಯಬೇಡಿ.

ಸ್ನಾನ ಮಾಡಲು ಹೋಗಬೇಡಿ

ಕೆಲವರು ಬೆಳಿಗ್ಗೆ ಎದ್ದು ಉಪಹಾರ ಸೇವಿಸಿ, ತಕ್ಷಣ ಸ್ನಾನಕ್ಕೆ ಹೋಗುತ್ತಾರೆ. ಹೀಗೆ ಮಾಡುವುದರಿಂದ ದೇಹದ ಉಷ್ಣತೆ ವೇಗವಾಗಿ ಇಳಿಯುತ್ತದೆ. ಊಟವಾದ ತಕ್ಷಣ ಎಂದಿಗೂ ಸ್ನಾನಕ್ಕೆ ಹೋಗಬೇಡಿ. ಜೀರ್ಣಾಂಗ ವ್ಯವಸ್ಥೆಯಲ್ಲಿ ರಕ್ತದ ಹರಿವು ದೇಹದ ಇತರ ಭಾಗಗಳ ವೇಗವಾಗಿ ಪ್ರಾರಂಭವಾಗುತ್ತದೆ. ಆದ್ದರಿಂದ ಆಹಾರ ಜೀರ್ಣಿಸಿಕೊಳ್ಳುವ ಪ್ರಕ್ರಿಯೆ ನಿಧಾನಗೊಳ್ಳುತ್ತದೆ. ಹಾಗೇ ಇದು ಹೊಟ್ಟೆಯ ಕಿರಿಕಿರಿ ಎದುರಿಸುವ ಸಾಧ್ಯತೆ ಹೆಚ್ಚು.

ಊಟವಾದ ಮೇಲೆ ನೀರನ್ನು ಕುಡಿಯಬೇಡಿ

ಆಯುರ್ವೇದದಲ್ಲಿ ಆಹಾರವನ್ನು ಸೇವಿಸಿದ ಕೂಡಲೇ ನೀರನ್ನು ಕುಡಿಯುವುದನ್ನು ವಿಷವೆಂದು ಪರಿಗಣಿಸಲಾಗಿದೆ. ಹೀಗಾಗಿ ಆಹಾರವನ್ನು ಸೇವಿಸಿದ ಕೂಡಲೇ ನೀರು ಕುಡಿಯುವುದರಿಂದ ಆಹಾರದ ಜೀರ್ಣಕ್ರಿಯೆ ಪ್ರಕ್ರಿಯೆ ಸಂಪೂರ್ಣವಾಗಿ ನಿಲ್ಲುತ್ತದೆ. ಆಹಾರದಲ್ಲಿರುವ ಸಂಪೂರ್ಣ ಪೋಷಕಾಂಶಗಳು ನಮ್ಮಿಂದ ಪಡೆಯಲು ಸಾಧ್ಯವಾಗುವುದಿಲ್ಲ.

ನೀವು ಊಟವಾದ ಮೇಲೆ ನೀರು ಕುಡಿಯಲು ಬಯಸಿದರೆ, 1 ಲೋಟ ನೀರಿಗಿಂತ ಹೆಚ್ಚು ನೀರು ಕುಡಿಯಬಾರದು. ಇನ್ನು ಮುಖ್ಯವಾದ ವಿಷಯವೆಂದರೆ ಫ್ರೀಡ್ಜ್ ನಲ್ಲಿ ಇಟ್ಟಿರುವ ತಣ್ಣೀರನ್ನು ಎಂದಿಗೂ ಕುಡಿಯಬೇಡಿ. ಏಕೆಂದರೆ ಫ್ರೀಡ್ಜ್ ನಲ್ಲಿಟ್ಟ ತಣ್ಣೀರು ನಾರ್ಮಲ್ ನೀರಿಗಿಂತ 10 ಪಟ್ಟು ಹೆಚ್ಚು ಹಾನಿಯನ್ನುಂಟು ಮಾಡುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ