ಆತಂಕ ತೊಡೆದುಹಾಕೋದು ಹೇಗೆ..?- ಶ್ರೀ.ರವಿಶಂಕರ್ ಗುರೂಜಿ ( ways to beat anxiety – Guided By Sri Sri Ravi Shankar)

  • by

ಎಲ್ಲರ ಜೀವನದಲ್ಲಿ ಆತಂಕಕಾರಿ ಕ್ಷಣಗಳು ಬರಬಹುದು. ಕೆಲವರಿಗೆ ಪದೇ ಪದೇ ಆತಂಕ ಕಾಡಲು ಶುರುವಾಗುತ್ತದೆ. ಕೆಲವರ ಹೆಚ್ಚು ತೀವ್ರವಾಗಿ ಅನುಭವಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಆತಂಕದಂತಹ ಸಮಸ್ಯೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅತಿಯಾಗಿ ಆಹಾರ ಸೇವಿಸುವುದು, ಪಾರ್ಶ್ವ ವಾಯು ಮುಂತಾದ ಅನೇಕ ಸಮಸ್ಯೆಗಳು ಕಾಡಬಹುದು. ನಿಮ್ಮ ಜೀವನದಲ್ಲಿ ಆತಂಕ ನಿವಾರಿಸಲು ಕೆಲವು ಮಾರ್ಗಗಳನ್ನು ಅನುಸರಿಸೇಕು ಎಂದು ಆರ್ಟ್ ಆಫ್ ಲೀವಿಂಗ್ ನ ಶ್ರೀ.ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ.

ಆತಂಕವನ್ನು ತೊಡೆದುಹಾಕುವುದು ಹೇಗೆ..?

ಧ್ಯಾನ ಮಾಡಿ
ಸೃಜನಶೀಲತೆ ಹಾಗೂ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಿ
ಆಯುರ್ವೇದ ಮಾರ್ಗಗಳನ್ನು ಅನುಸರಿಸಿ
ನಿಮ್ಮ ದೃಷ್ಟಿಕೋನವನ್ನು ಬದಲಾಯಿಸಿ

‘ಆತಂಕ, ಒತ್ತಡ ನಿವಾರಣೆಗೆ ಧ್ಯಾನ’

ನೀವು ಧ್ಯಾನ ಮಾಡುವಾಗ , ನಿಮ್ಮ ಪ್ರಕ್ಷುಬ್ಧ ಮನಸ್ಥಿತಿಗೆ ಆಳವಾದ ವಿಶ್ರಾಂತಿ ನೀಡುತ್ತಿರಿ. ಒತ್ತಡವು ನಿಮ್ಮ ಹಾರ್ಮೋನುಗಳನ್ನು ಸಕ್ರೀಯಗೊಳಿಸಿದಾಗ, ಒತ್ತಡ ಹೆಚ್ಚಾಗಿ ಕಂಡು ಬರುತ್ತದೆ. ನಿಯಮಿತ ಧ್ಯಾನದಿಂದ ಒತ್ತಡ ಹಾರ್ಮೋನುಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಮತ್ತು ನಿರಾಳತೆಯ ಭಾವ ನಿಮ್ಮದಾಗುತ್ತದೆ. ಧ್ಯಾನದ ನಂತರ ನೀವು ಕಳೆದುಕೊಳ್ಳುವ ಏಕೈಕ ವಿಷಯವೆಂದರೆ ಚಿಂತೆ.
ನಿಯಮಿತ ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಧ್ಯಾನ ಪ್ರತಿ ದಿನ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಿಮಗೆ ನಿಜವಾದ ಆಂತರಿಕ ಸ್ವಾತಂತ್ರ್ಯವನ್ನು ನೀಡುತ್ತದೆ. ಆದ್ದರಿಂದ ಆತಂಕ ನಿವಾರಣೆಗೆ ಧ್ಯಾನ ಮಾಡುವುದು ಉತ್ತಮ ಮಾರ್ಗವಾಗಿದೆ.

ಮನಸ್ಸಿನ ಧ್ಯಾನ ಆತಂಕವನ್ನು ತೊಡೆದುಹಾಕಲು ನೆರವಾಗುತ್ತದೆ. ಮೈಂಡ್ ಫುಲನೆಸ್ ಧ್ಯಾನ ಪರಿಣಾಮಕಾರಿಯಾದ ಮಾರ್ಗಗಳಲ್ಲಿ ಒಂದು.
ನಿಮ್ಮ ಆಲೋಚನೆಗಳಿಗೆ ಹಾಗೂ ಭಾವನೆಗಳಿಗೆ ಜಾಗೃತಿ ಮೂಡಿಸಲು ಸಹಾಯ ಮಾಡುವ ಮಾರ್ಗದರ್ಶಿ ವಿಧಾನವಾದ ಧ್ಯಾನವನ್ನು ಪ್ರಯತ್ನಿಸಿ.
ಆತಂಕ ನಿವಾರಿಸಲು ಉತ್ಸಾಹ ಮತ್ತು ಸೃಜನಶೀಲತೆ ಸಹ ಮುಖ್ಯವಾಗುತ್ತದೆ. ಉತ್ಸಾಹ ಹಾಗೂ ಸೃಜನಶೀಲತೆಯಿಂದ ನಿಮ್ಮ ಭಯವು ನಿವಾರಣೆಯಾಗುತ್ತದೆ. ಉತ್ಸಾಹವು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಸರಳವಾಗಿ ಹೇಳುವುದಾದರೆ, ನೀವು ಒಂದೇ ಚಿಕ್ಕ ಚಿಕ್ಕ ವಿಷಯಗಳ ಬಗ್ಗೆ ಸೆಲಬ್ರೇಷನ್ ಮಾಡಲು ಕಾಯಬೇಕಾಗಿಲ್ಲ. ಯಾರಿಗಾದರೂ ಸಹಾಯ ಮಾಡುವ ಮೂಲಕ ಆತಂಕದಂತಹ ಭಾವನೆಗಳನ್ನು ನಿವಾರಿಸಬಹುದು. ಅಲ್ಲದೇ , ಇಂತಹ ಚಟುವಟಿಕೆಗಳಲ್ಲಿ ಧ್ಯಾನವು ಆಳವಾದ ಮತ್ತು ಹೆಚ್ಚು ಲಾಭದಾಯಕ ಅನುಭವವಾಗಿದೆ.

‘ಆಯುರ್ವೇದ ಮಾರ್ಗವನ್ನು ಅನುಸರಿಸಿ’

ಸಾಂಪ್ರದಾಯಿಕ ಆತಂಕ ವಿರೋಧಿ ಔಷಧಿಗಳು ಸಾಕಷ್ಟು ಅಡ್ಡಪರಿಣಾಮ ಬೀರಬಹುದು. ಹಾಗಾಗಿ ದೀರ್ಘಕಾಲದವೆರೆಗೆ ಮಾತ್ರೆಗಳ ಮೇಲೆ ಅವಲಂಬಿಸಿರುವುದರಿಂದ ಅಪಾಯವನ್ನುಂಟು ಮಾಡಬಹುದು. ಆದ್ದರಿಂದ ಇದಕ್ಕೆ ಆಯುರ್ವೇದ ಪರ್ಯಾಯ ಮಾರ್ಗವಾಗಿದೆ. ಆಯುರ್ವೇದವು ರೋಗಕ್ಕೆ ಸಮಗ್ರ ಚಿಕತ್ಸೆಯನ್ನು ಒದಗಿಸುತ್ತದೆ. ಆತಂಕ ಸಂದರ್ಭದಲ್ಲಿ ಆಯುರ್ವೇದ ಹೆಚ್ಚು ನೆರವಾಗಬಲ್ಲದ್ದು, ವಾತಾ ದೋಷವು ಅಸಮೋತಲನವೆಂದು ಸೂಚಿಸುತ್ತದೆ.

‘ನಿಮ್ಮ ದೃಷ್ಟಿಕೋನ ಬದಲಾಯಿಸಿ’

ಆತಂಕವನ್ನು ನಿಯಂತ್ರಿಸುವ ಮತ್ತೊಂದು ಮಾರ್ಗವೆಂದರೆ , ನಿಮ್ಮ ಆತಂಕವನ್ನುಂಟು ಮಾಡುವ ಆಲೋಚನೆಗಳ ಬಗ್ಗೆ ನಿಮ್ಮ ಮನೋಭಾವವನ್ನು ಬದಲಾಯಿಸುವುದು. ಆತಂಕ ಹೆಚ್ಚಿಸುವ ಆಲೋಚನೆಗಳು ಹೆಚ್ಚಾದಾಗಲೆಲ್ಲಾ , ಎಲ್ಲವೂ ಬದಲಾಗುತ್ತಿದೆ ಎಂದು ನೀವೇ ಬದಲಾಯಿಸಿಕೊಳ್ಳಿ. ಉದಾಹರಣೆಗೆ ನನಗೆ ಎಂದಿಗೂ ಉದ್ಯೋಗ ದೊರೆಯುವುದಿಲ್ಲ ಎಂದು ನಿಮಗೆ ಅನ್ನಿಸಿದಾಗಲೆಲ್ಲಾ, ಈ ಬಗ್ಗೆ ನೀವೇ ಪ್ರಶ್ನಿಸಿಕೊಳ್ಳಿ. ಎಲ್ಲವು ಬದಲಾಗುತ್ತಿದೆ ಎಂದು ನೆನಪಿಸಿಕೊಳ್ಳಿ. ಇಂದಿನ ನಿರುದ್ಯೋಗವು ನಾಳೆ ಉದ್ಯೋಗ ನೀಡುವ ಅವಕಾಶಗಳನ್ನು ನೀಡಲಿದೆ ಎಂಬ ಭಾವನೆ ಮೂಡಬೇಕು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ