ಸ್ಮಾರ್ಟ್ ಫೋನ್ ನಲ್ಲಿ ಈ ಕೆಲಸ ಹೆಚ್ಚು ಮಾಡುತ್ತಿದ್ದೀರಾ? ಹಾಗಾದ್ರೆ ಎಚ್ಚರ!

  • by

ಒಂದೇ ಫ್ರೇಮ್‌ನಲ್ಲಿ ನಿಂತು ಲಕ್ಷಣವಾಗಿ ಬಟ್ಟೆ ತೊಟ್ಟು ಫೋಟೋ ಕ್ಲಿಕ್‌ ಮಾಡ್ತಿನಿ ಎನ್ನುವ ಕಾಲ ಒಂದಿತ್ತು. ಆದರೆ ಇಂದು ಮೊಬೈಲ್ ಎಂಬ ಮಾಯೆಯಲ್ಲಿ ಎಲ್ಲವೂ ತಕ್ಷಣದಲ್ಲಿಯೇ ಕ್ಲಿಕ್ ಮಾಡಬಹುದು. ಎಲ್ಲೆಂದರಲ್ಲಿ ಫೋಟೋ ತೆಗೆಯುವುದು, ಸೆಲ್ಫಿ ಕ್ಲಿಕ್ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಆದರೆ, ಸ್ಮಾರ್ಟ್ ಫೋನ್ ಹೆಚ್ಚಾಗಿ ಬಳಕೆ ಮಾಡಿದರೆ ಆತಂಕಕ್ಕೆ ಕೊಂಡೊಯ್ಯುತ್ತದೆ ಎಂದು ನಿಮಗೆ ತಿಳಿದಿದೆಯಾ..? ಯೆಸ್, ಸ್ಮಾರ್ಟ್ ಪೋನ್ ಬಳಕೆ ಬಗ್ಗೆ ಈಗಾಗ್ಲೇ ಸಾಕಷ್ಟು ಅಧ್ಯಯನ ನಡೆದಿವೆ. ಆದ್ರೆ ಸ್ಮಾರ್ಟ್ ಫೋನ್ ನಲ್ಲಿ ಹೆಚ್ಚಾಗಿ ಈ ಕೆಲಸ ಮಾಡುವುದರಿಂದ ಆತಂಕದಂತಹ ಕಾಯಿಲೆ ನಿಮಗೆ ಕಾಡಬಹುದು. ವಾಸ್ತವವಾಗಿ ಫೋನ್ ನಲ್ಲಿ ಹೆಚ್ಚಾಗಿ ವಿಡಿಯೋ ಗೇಮ್ ಆಡುವುದಕ್ಕಿಂತಲೂ ಸೋಷಿಯಲ್ ಮೀಡಿಯಾ ಬಳಕೆ, ಇದು ನಿಮ್ಮನ್ನು ಹೆಚ್ಚು ಆತಂಕಕ್ಕೆ ದೂಡಬಹುದು ಎಂದು ತಿಳಿದು ಬಂದಿದೆ. 

anxiety, social media use effect, 
ಸ್ಮಾರ್ಟ್ ಫೋನ್ . ಆತಂಕ, ಅನಾರೋಗ್ಯ

ಸ್ಮಾರ್ಟ್ ಫೋನ್ ಬಳಕೆ ಕಡಿಮೆ ಅಥವಾ ಹೆಚ್ಚು ಮಾಡುವುದು ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ಆದ್ರೆ ನಿಮಗೂ ಆತಂಕ ಸಮಸ್ಯೆ ಇದ್ದರೆ ಅದು ಸ್ಮಾರ್ಟ್ ಫೋನ್ ಗಳಲ್ಲಿ ಸಾಮಾಜಿಕ ಮಾಧ್ಯಮವನ್ನು ಹೆಚ್ಚು ಬಳಸುವುದರಿಂದ ಆಗಿರಬಹುದು. ಸೋಶಿಯಲ್ ಮೀಡಿಯಾವನ್ನು ಅತಿಯಾಗಿ ಬಳಸುವುದರಿಂದ ಜನರಲ್ಲಿ ಆತಂಕ ಹಾಗೂ ಮಾನಸಿಕ ಒತ್ತಡ ಹೆಚ್ಚಾಗಬಹುದು ಎಂದು ತಿಳಿದು ಬಂದಿದೆ.

ವಿಡಿಯೋ ಗೇಮ್ ಗಿಂತಲೂ ಸೋಷಿಯಲ್ ಮೀಡಿಯಾ ಅಪಾಯಕಾರಿ..!

ವಿಡಿಯೋ ಗೇಮ್ ಗಳಿಗಿಂತಲೂ ಸಾಮಾಜಿಕ ಮಾಧ್ಯಮ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತದೆ. ನಿಗದಿತ ಸಮಯಕ್ಕಿಂತ ಹೆಚ್ಚಾಗಿ ಸಾಮಾಜಿಕ ಮಾಧ್ಯಮ ಬಳಸುವುದರಿಂದ ಅನಾರೋಗ್ಯ ಸಮಸ್ಯೆ ಕಾಡಬಹುದು. 

anxiety, social media use effect, 
ಸ್ಮಾರ್ಟ್ ಫೋನ್ . ಆತಂಕ, ಅನಾರೋಗ್ಯ

ಆತಂಕ ಕಡಿಮೆ ಮಾಡುವುದು ಹೇಗೆ..?

ಆತಂಕ ನಿವಾರಣೆ ಮಾಡುವ ಮಾರ್ಗವೆಂದರೆ ಮೊದಲು ಸಾಮಾಜಿಕ ಮಾಧ್ಯಮದ ಬಳಕೆಯನ್ನು ಕಡಿಮೆ ಮಾಡುವುದು. ಹದಿಹರೆಯದ ಮಕ್ಕಳ ಮೇಲೆ ಮೊಬೈಲ್ ಹೆಚ್ಚು ಪರಿಣಾಮ ಬೀರುವುದರಿಂದ ಈ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಒಂದು ಅಥವಾ ಎರಡು ದಿನಗಳವೆರೆಗೆ ಸೋಷಿಯಲ್ ಮೀಡಿಯಾವನ್ನು ಹೆಚ್ಚು ಬಳಸಿದರೆ, ಚಂಚಲತೆ ಸಮಸ್ಯೆ ಹೆಚ್ಚು ಕಂಡು ಬರುತ್ತದೆ. ಬಹಳ ಸಮಯದವರೆಗೆ ಮೊಬೈಲ್ ಬಳಕೆ ಮಾಡುವುದರಿಂದ ಈ ಸಮಸ್ಯೆ ದೀರ್ಘಕಾಲದವರೆಗೂ ಕಾಡಬಹುದು.ಇನ್ನು ಟಿವಿ, ಹಾಗೂ ಕಂಪ್ಯೂಟರ್ ಬಳಕೆ ಕೂಡಾ ಕಡಿಮೆ ಮಾಡುವುದರಿಂದ ಆತಂಕದಂತಹ ಕಾಯಿಲೆಗಳಿಂದ ನಿಮ್ಮನ್ನು ದೂರವಿಡುವಲ್ಲಿ ನೆರವಾಗುತ್ತದೆ.

ಇನ್ನು ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಗಳಲ್ಲಿ ಮಕ್ಕಳಿಗೆ ಪೋಷಕರು ಕೊಡುತ್ತಾರೆ. ಇದ್ರಿಂದ ಅವರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಮಕ್ಕಳು ಇಂದಿನ ದಿನಗಳಲ್ಲಿ ಮೊಬೈಲ್ ಫೋನ್ ಗಳಂತ್ತ ಹೆಚ್ಚು ಆಕರ್ಷಣೆಗೊಳ್ಳುತ್ತಿದ್ದಾರೆ. ಮೊಬೈಲ್ ಗಳಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಹದಿಹರೆಯದ ಮಕ್ಕಳ ಯೋಚನಾ ಶಕ್ತಿಯನ್ನು ಕುಗ್ಗಿಸುತ್ತಿದೆ. ರಂಗು ರಂಗುನ ಫೋನ್ ಸ್ಕ್ರೀನ್, ಗೇಮ್ಸ್, ಮ್ಯೂಸಿಕ್ ಹಾಗೂ ವಿಡಿಯೋಗಳು , ಹಾಡುಗಳು ಸುಂದರವಾದ ಚಿತ್ರಗಳಿಂದ ಮೊಬೈಲ್ ಗಳತ್ತ ಆಕರ್ಷಣೆಗೊಳ್ಳುತ್ತಿದ್ದಾರೆ. 

anxiety, social media use effect, 
ಸ್ಮಾರ್ಟ್ ಫೋನ್ . ಆತಂಕ, ಅನಾರೋಗ್ಯ

ಪೋಷಕರು ಏನು ಮಾಡಬೇಕು..?

1ನಿಮ್ಮ ಮಕ್ಕಳಿಗೆ ಮೊಬೈಲ್ ಕೊಡಿಸುವ ಮುನ್ನ ಪೋಷಕರು ಯೋಚಿಸಬೇಕು.

2. ಮಕ್ಕಳನ್ನು ಹವ್ಯಾಸದಲ್ಲಿ ತೊಡಗಿಸಬೇಕು. ಮಕ್ಕಳಿಗೆ ಸ್ಮಾರ್ಟ್ ಫೋನ್ ನೀಡಿದರೆ ಇದಕ್ಕೆ ಅಡಿಕ್ಟ್ ಆಗುವ ಸಂಭವ ಹೆಚ್ಚು. ಸ್ಮಾರ್ಟ್ ಫೋನ್ ಬದಲಿಗೆ ಬೇರೆ ಹವ್ಯಾಸಗಳಲ್ಲಿ ಮಕ್ಕಳು ತೊಡಗುವಂತೆ ಪ್ರೇರೆಪಿಸಿ.ಉದಾಹರಣೆ- ಡ್ರಾಯಿಂಗ್ , ಓಡುವುದು, ಸಂಗೀತ, ಕರಾಟೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ. 

3. ಸ್ಟಾರ್ಟ್ ಫೋನ್, ಮೊಬೈಲ್ ತುಂಬಾ ಜನ ಪೋಷಕರು ಪಾಸ್ ವರ್ಡ್ ಇಡಲ್ಲ. ಹೀಗಾಗಿ ಮಕ್ಕಳು ಇದನ್ನು ಕೈಯಲ್ಲಿ ಹಿಡಿದು ಪದೇ ಪದೇ ಬಳಕೆ ಮಾಡುವ ಸಾಧ್ಯತೆ ಹೆಚ್ಚು. ಹಾಗಾಗಿ ನಿಮ್ಮ ಮೊಬೈಲ್ ಫೋನ್ ಗಳಿಗೆ ಪಾಸ್ ವರ್ಡ್ ಇಡಿ. ಪಾಸ್ ವರ್ಡ್ ನಿಮ್ಮ ಮಕ್ಕಳಿಗೆ ತಿಳಿಸಬೇಡಿ. 

4. ಪೋಷಕರು ಮಕ್ಕಳಿಗೆ ಮಾದರಿಯಾಗಿರಬೇಕು..ಪಾಲಕರು ಏನೇ ಮಾಡಿದರೂ ಅದರಿಂದ ನೋಡಿ ಕಲಿಯುತ್ತಾರೆ. ಪಾಲಕರನ್ನೇ ಅನುಸರಿಸುತ್ತಾರೆ. ಪಾಲಕರು ಹೆಚ್ಚಾಗಿ ಸ್ಮಾರ್ಟ್ ಫೋನ್ ಗಳಲ್ಲಿ ಕಾಲ ಕಳೆಯುತ್ತಿರುತ್ತಾರೆ. ಇದನ್ನು ನೋಡಿದ ಮಕ್ಕಳ ಮನಸ್ಸು ಕೂಡಾ ಸ್ಮಾರ್ಟ್ ಫೋನ್ ಕಡೆಗೆ ಗಮನ ಕೇಂದ್ರಿಕರಿಸುತ್ತಾರೆ. ಹಾಗಾಗಿ ಸ್ಮಾರ್ಟ್ ಫೋನ್ ಗಳಲ್ಲಿ ಪೋಷಕರು ಹೆಚ್ಚು ಕಾಲ ಕಳೆಯಬಾರದು.

5.ಯಾವ ಸಂದರ್ಭದಲ್ಲಿ ಮೊಬೈಲ್ ಬಳಸಬೇಕು ಎಂಬ ಅರಿವು ಮಾಡಿಸುವುದು. ಶಾಲೆ ಬಿಟ್ಟ ಮೇಲೆ ಒಬ್ಬನೇ ಬೇರೆ ಕಡೆಗೆ ಹೋಗುವ ಸಂದರ್ಭದಲ್ಲಿ ಮಾತ್ರ ಮೊಬೈಲ್ ಫೋನ್ ಉಪಯೋಗಿಸುವಂತೆ ಹೇಳಬೇಕು.

6. ಮಕ್ಕಳಿಗೆ ಮೊಬೈಲ್ ಫೋನ್, ಸೈಬರ್ ಅಪರಾಧಗಳ ಬಗ್ಗೆ ಶಾಲೆಗಳಲ್ಲಿ ಸೆಮಿನಾರ್ ಮೂಲಕ ಅರಿವು ಮೂಡಿಸುವ ಪ್ರಯತ್ನ ಮಾಡಬೇಕು.

7. ವರ್ಕ್ ಶಾಪ್ ಸೆಮಿನಾರ್ ಗಳಲ್ಲಿ ಪೋಷಕರು ಪಾಲ್ಗೊಂಡು ಮೊಬೈಲ್ 

ಕುರಿತಾದ ಸುರಕ್ಷಿತ ಜೀವನದ ಬಗ್ಗೆ ಸರಿಯಾದ ದಾರಿ ತೋರುವಲ್ಲಿ ಸಹಾಯಕ ವಾಗಬಹುದಾದ ಬಗ್ಗೆ ಚರ್ಚಿಸಬೇಕು. 

8. ಮೊಬೈಲ್ ಫೋನ್ ಉಪಯೋಗವೆಷ್ಟು ನಷ್ಟವೆಷ್ಟು ಎಂಬುದನ್ನು ತಿಳಿಸಬೇಕು. ಅನಿವಾರ್ಯತೆ ಎದುರಾದಾಗ ಸುರಕ್ಷಿತ ದೃಷ್ಟಿಯಿಂದಇಟ್ಟಿಕೊಳ್ಳುವುದು ತಪ್ಪಲ್ಲ. ಮಕ್ಕಳು ಮನರಂಜನೆಗಾಗಿ ಮೊಬೈಲ್ ಬಳಸುವುದು ತಪ್ಪು. ಅತಿಯಾದ ಮೊಬೈಲ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಬೇಕು. 

ಮೊದಲೆಲ್ಲಾ ನಾವು ಶ್ರೀಮಂತರ ಅಥವಾ ಅನುಕೂಲವಂತರ ಕೈಯಲ್ಲಿ ಮಾತ್ರ ನೋಡಬಹುದಾಗಿದ್ದ ಈ ಮೊಬೈಲ್ ಈಗ ಜನಸಾಮಾನ್ಯರಿಗೂ ಕೈಗೆಟುಕುವ ಬೆಲೆಯಲ್ಲಿ ಸಿಗುವಂತಾಗಿದೆ. ಕಾಲ ಬದಲಾದಂತೆ ತಂತ್ರಜ್ಞಾನದಲ್ಲಿಯೂ ಅಭೂತಪೂರ್ವ ಬೆಳವಣಿಗೆಗಳಾಗಿವೆ. ಬೆರಳ ತುದಿಯಲ್ಲಿ ಜಗತ್ತು ಎಂಬಂತೆ ನಾವು ಕುಳಿತಲ್ಲಿಯೇ ಜಗತ್ತಿನ ಆಗುಹೋಗುಗಳನ್ನು ತಿಳಿಯುವಂತಾಗಿದೆ. ಈ ಮೊದಲು ಸಮಯ ಕಳೆಯಲು ದೂರದರ್ಶನ, ರೇಡಿಯೋ, ಕತೆ ಕಾದಂಬರಿಗಳಿಗೆ ಮೊರೆ ಹೋಗುತ್ತಿದ್ದ ಯುವಪೀಳಿಗೆ ಈಗ ಊಟ ತಿಂಡಿಯನ್ನು ಬೇಕಾದರೂ ಬಿಡಬಲ್ಲರು ಆದರೆ ಮೊಬೈಲ್ ಇಲ್ಲದೇ 10 ನಿಮಿಷ ಕೂಡಾ ಇರಲಾರದ ಪರಿಸ್ಥಿತಿ ಇದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ