ಮುಖದಲ್ಲಿ ನೇರಿಗೆ ಮೂಡಿದೆಯೇ? ಇಲ್ಲಿದೆ ಸರಳ ಉಪಾಯ!

  • by

ಇತ್ತೀಚಿನ ದಿನಗಳಲ್ಲಿ ಮುಖದಲ್ಲಿ ನೆರಿಗೆ ಸಾಮಾನ್ಯವಾಗಿ ಕಂಡು ಬರುತ್ತದೆ. ತ್ವಚೆ ಆದ್ರತೆ ಕಳೆದುಕೊಂಡಾಗ ಈ ಸಮಸ್ಯೆ ಬರುತ್ತದೆ. ಸೂಕ್ತ ಆರೈಕೆ ಮಾಡಿದರೆ ನೇರಿಗೆ ಬರುವುದನ್ನು ತಡೆಗಟ್ಟಬಹುದು. ನೆರಿಗೆಗೆ ವಯಸ್ಸು ಕಾರಣವಾದರೂ, ಅನುವಂಶೀಯತೆ ಗುಣಗಳು ಪ್ರಬಾವ ಬೀರುತ್ತವೆ. ಧೂಳು, ಅತಿಯಾದ ಧೂಮಪಾನ ಮಾಡುವುದು, ನೆರಿಗೆ ಗಟ್ಟಲು ಕಾರಣ. ಅದಕ್ಕಾಗಿ ಇದನ್ನು ತಡೆಗಟ್ಟಲು ಕೆಲವು ಸರಳ ಮಾರ್ಗಗಳು ಇಲ್ಲಿವೆ. 

ಲೋಳೆರಸ 

ಅಲೋವೆರಾ ಮ್ಯಾಲಿಕ್ ಆಮ್ಲ ಚರ್ಮಜ ಸೆಳೆತವನ್ನು ಹೆಚ್ಚಿಸುವ ಗುಣ ಹೊಂದಿದೆ. ಇದರ ತಿರುಳು ತೆಗೆದು ಮುಖಕ್ಕೆ ಹಚ್ಚಿದಾಗ , ೧೫ ನಿಮಿಷದ ಬಳಿಕ ಉದುರು ಬೆಚ್ಚಗಿನ ನೀರಿನಲ್ಲಿ ತೊಳೆದರೆ ಚರ್ಮ ಸುಂಕುಗಟ್ಟುವುದಿಲ್ಲ. 

ಬಾಳೆಹಣ್ಣು 

ಬಾಳೆಹಣ್ಣು ನಿಮ್ಮ ಮುಖದ ಸೌಂದರ್ಯ ಹೆಚ್ಚಿಸುತ್ತದೆ. ಸುಕ್ಕು ಗಟ್ಟಿದ ತ್ವಚೆಯನ್ನು ನಿವಾರಿಸುತ್ತದೆ. ಎರಡು ಹಣ್ಣುಗಳ ತಿರುಳು ತೆಗೆದು ಚೆನ್ನಾಗಿ ಕಿವುಚಿ, ನಯವಾದ ಲೇಪನ ತಯಾರಿಸಿಕೊಂಡು ಮುಖದ ಮೇಲೆ ಹಚ್ಚಿ ಅರ್ಧ ಗಂಟೆ ಹಾಗೇ ಬಿಡಿ. ಅನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ಈಗ ೩ರಿಂದ ೪ ದಿನ ಮಾಡಿ. 

Anti ageing stop tips, ನೇರಿಗೆಗೆ ಮನೆ ಮದ್ದು,

ಲಿಂಬೆರಸ 

ನಿಂಬೆಕಾಯಿಯ ರಸವನ್ನು ಚಿಕ್ಕ ಬೌಲ್ ನಲ್ಲಿ ತೆಗೆದಿಟ್ಟುಕೊಂಡು ೫ ನಿಮಿಷಗಳ ಬಳಿಕ ಅದನ್ನು ನೆರಿಗೆ ಕಟ್ಟಿದ ಜಾಗಕ್ಕೆ ಚೆ್ನನಾಗಿ ಲೇಪಿಸಿಕೊಳ್ಳಿ. ಮುಖದಲ್ಲಿ ಮೊಡವೆ ಅಥವಾ ಗಾಯವಾದ ಸ್ಥಳಕ್ಕೆ ಹಚ್ಚುವುದು ಸೂಕ್ತವಲ್ಲ. ಬದಲಾಗಿ ಮುಖದಲ್ಲಿ ಕಪ್ಪು ಕಲೆ ಮುಂತಾದೆಡೆ ನಯವಾಗಿ ಹಚ್ಚಿ. ೨೦ ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದಾಗ ಮೂರು ದಿನದೊಳಗೆ ಮುಖದ ಕಾಂತಿ ಹೆಚ್ಚುತ್ತದೆ. 

ಎರಡು ದೊಡ್ಡ ಚಮಚ ರಸಕ್ಕೆ 1 ಚಮಚದಷ್ಟು, ಸ್ವಚ್ಛವಾದ ಜೇನುತುಪ್ಪ ಸೇರಿಸಿ ಅದನ್ನು ಕಲಕಿ… ಈ ಮಿಶ್ರಣವನ್ನು  ಮುಖ ಹಾಗೂ ಕುತ್ತಿಗೆಗೆ ಹಚ್ಚಿ. ೧೫ -೨೦ ನಿಮಿಷದ ನಂತರ ಸ್ವಲ್ಪ ಬಿಸಿ ನೀರಿಗೆ ಅಡುಗೆ ಸೋಡಾ ಸೇರಿಸಿ ಹತ್ತಿಯನ್ನು ಈ ದ್ರಾವಣದಲ್ಲಿ ಅದ್ದಿ ಅದರಿಂದ ಮುಖವನ್ನು ಒರೆಸಿಕೊಳ್ಳುವುದರಿಂದ ಮುಖದ ನೆರಿಗೆ ಸಮಸ್ಯೆ ಪರಿಹಾರವಾಗುತ್ತದೆ. 

Anti ageing stop tips, ನೇರಿಗೆಗೆ ಮನೆ ಮದ್ದು,

ಮೊಟ್ಟೆಯ ಬಿಳಿ ಲೊಳೆಯನ್ನು ಹತ್ತಿಯಲ್ಲಿ ಮುಖದ ಮೇಲೆ ನೇರಿಗೆಗೆ ಅಡ್ಡವಾಗಿ ಹಚ್ಚಿಕೊಳ್ಳಬೇಕು. ಬಳಿಕ ೪ ಗಂಟೆ ಬಿಟ್ಟು, ಮುಖ ಬಿಗಿದ ಸ್ಥಿತಿಯಲ್ಲಿರುತ್ತದೆ. ಹಾಗಾಗಿ ನಗುವುದು , ಮಾತನಾಡವುದು ಮಾಡಬಾರದು. ನಂತರ ಮಂಜುಗಡ್ಡೆ ಅಥವಾ ತಣ್ಣನೆಯ ನೀರಿನಲ್ಲಿ ಹತ್ತಿಯನ್ನು ಅದ್ದಿ ಅದರಿಂದ ಮುಖವನ್ನು ಸ್ವಚ್ಛಗೊಳಿಸಿಕೊಳ್ಳಬೇಕು. 

ಹೆಸರುಕಾಳಿನ ಹಿಟ್ಟಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ ಮತ್ತು ಇದು ಚರ್ಮದ ರಂಧ್ರವನ್ನು ಆಳವಾಗಿ ಶುದ್ಧೀಕರಿಸಿ, ತ್ವಚೆಗೆ ಪೋಷಣೆ ನೀಡುವುದು. ಇದರಲ್ಲಿರುವ ವಯಸ್ಸಾಗುವ ಲಕ್ಷಣಗಳನ್ನು ತಡೆಯುವ ಗುಣವೂ ಇದಕ್ಕಿದೆ. ಹಾಗಾಗಿ ಈ ಟಿಪ್ಸ್ ಫಾಲೋ ಮಾಡಿ ನಿಮ್ಮ ಸುಂದರವಾದ ಮುಖದ ಕಾಳಜಿ ವಹಿಸಿ.

ತಾಜಾ ಜೇನುತುಪ್ಪವನ್ನು ನೇರವಾಗಿ ಹಣೆಗೆ ಹಚ್ಚಿಕೊಳ್ಳಬಹುದು ಅಥವಾ ಅಕ್ಕಿ ಹಿಟ್ಟಿನ ಜತೆಗೆ ಸೇರಿಸಿ ಹಚ್ಚಿಕೊಂಡರೆ ಉತ್ತಮ ಫಲಿತಾಂಶ ಸಿಗುವುದು. ಅಕ್ಕಿಹಿಟ್ಟಿನಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಚರ್ಮಕ್ಕೆ ತೇವಾಂಶ ನೀಡುವುದು. ಒಂದು ಚಮಚ ಅಕ್ಕಿಹಿಟ್ಟು ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿಕೊಳ್ಳಿ. ಇದನ್ನು ಹಣೆಗೆ ಹಚ್ಚಿಕೊಂಡು ಒಣಗಲು ಬಿಡಿ ಮತ್ತು ಬಳಿಕ ತೊಳೆಯಿರಿ. ವಾರದಲ್ಲಿ ಎರಡು ಸಲ ಹೀಗೆ ಮಾಡಿ.

ಕೈಗಳಲ್ಲಿ ನೆರಿಗೆ ಮೂಡಿದೆಯೇ. ಚಿಂತಿಸಬೇಡಿ!

ಮೊಟ್ಟೆಯ ಬಿಳಿ ಭಾಗದ ಸಹಾಯದಿಂದಾಗಿ ಚರ್ಮದ ಸ್ಥಿತಿಸ್ಥಾಪಕತ್ವವು ಹೆಚ್ಚುತ್ತದೆ ಯಾಕೆಂದರೆ ಇದರಲ್ಲಿ ಪ್ರೋಟೀನ್ ಅಂಶವಿದೆ. ಅಷ್ಟೇ ಅಲ್ಲ, ಇದು ಚರ್ಮದ ಸತ್ತ ಜೀವಕೋಶಗಳ ನಿವಾರಣೆಗೂ ಕೂಡ ಇದು ನೆರವಾಗುತ್ತದೆ.

ಮೊಟ್ಟೆಯ ಬಿಳಿಭಾಗವನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಜೇನುತುಪ್ಪವನ್ನು ಸೇರಿಸಿಈ ಮಾಸ್ಕನ್ನು ನಿಮ್ಮ ಕೈಗಳಿಗೆ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಹಾಗೆಯೇ ಬಿಡಿ. ನಂತರ ಇದನ್ನು ತಣ್ಣನೆಯ ನೀರಿನಿಂದ ತೊಳೆಯಿರಿ. ತಿಂಗಳಿಗೆ ಮೂರು ಬಾರಿ ಈ ಮಾಸ್ಕ್ ನ್ನು ಕೈಗಳಿಗೆ ಬಳಕೆ ಮಾಡುವುದು ಒಳ್ಳೆಯದು. ಆ ಮೂಲಕ ಚರ್ಮದ ಸ್ಥಿತಿಸ್ಥಾಪಕತ್ವ ಗುಣವು ಹೆಚ್ಚಾಗಲಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ