ಆರೋಗ್ಯವೃದ್ಧಿಗೆ ಅಂಜೂರ ಹಣ್ಣು ಸೇವಿಸಿ

  • by

ಅಂಜೂರ ಹಣ್ಣು ಒಂದು ಪ್ರಸಿದ್ದವಾದ ಹಣ್ಣು, ಅಂಜೂರನ್ನು ಫ್ರೆಶ್ ಆಗಿ ಹಾಗೂ ಒಣ ಹಣ್ಣಿನ ರೂಪದಲ್ಲಿ ಸೇವನೆ ಮಾಡಬಹುದು.  ಪೌಷ್ಟಿಕ ಭರಿತವಾದ ಈ ಹಣ್ಣಿನಲ್ಲಿ ಇದರಲ್ಲಿ ಎ, ಬಿ, ಸಿ ಹಾಗೂ ಡಿ ಅಂಶಗಳಿವೆ. ಆಹಾರದಲ್ಲಿ ಅಂಜೂರು ಹಣ್ಣು ಸೇವಿಸುವಂತೆ ವೈದ್ಯರು ಸಾಮಾನ್ಯವಾಗಿ ಸಲಹೆ ನೀಡುತ್ತಾರೆ. ಅಂಜೂರವನ್ನು ಹಾಲಿನಲ್ಲಿ ನೆನೆಸಿ ಹಲವು ವಿಧದಲ್ಲಿ ಸೇವನೆ ಮಾಡಬಹುದು. ಇನ್ನು ಬರ್ಫಿ, ಪೇಡಾ ತಯಾರಿಸಲು ಇದನ್ನು ಹೆಚ್ಚು ಉಪಯೋಗಿಸಲಾಗುತ್ತದೆ. 

100 ಗ್ರಾಂ ಅಂಜೂರ ಹಣ್ಣಿನಲ್ಲಿ ಪೋಷಕಾಂಶಗಳೆಷ್ಚು..?

ಶರ್ಕರ ಪಿಷ್ಟ 19.18 ಗ್ರಾಂ.

ಸಕ್ಕರೆ- 16.26 ಗ್ರಾಂ 

ಆಹಾರ ನಾರು – 2.9 ಗ್ರಾಂ 

ಕೊಬ್ಬು – 0.30 ಗ್ರಾಂ 

ಪ್ರೋಟೀನ್ – 0.75 ಗ್ರಾಂ

ವಿಟಮಿನ್ ಕೆ – 4.7 ಮಿ.ಗ್ರಾಂ 

ಮೆಗ್ನೇಶಿಯಂ – 17 ಮಿ.ಗ್ರಾಂ 

ರಂಜಕ- 14 ಮಿ.ಗ್ರಾಂ 

ಪೋಟ್ಯಾಷಿಯಂ- 242 ಮಿ.ಗ್ರಾಂ 

ಅಂಜೂರ ಹಣ್ಣಿನಲ್ಲಿರುವ ಔಷಧೀಯ ಗುಣಗಳೇನು..?

ಅಂಜೂರ ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಹಣ್ಣು ಮೂತ್ರ ಸ್ರಾವಕ್ಕೆ ಉತ್ತೇಜನಕಾರಿಯ ರಕ್ತಹೀನತೆಯನ್ನು ತಪ್ಪಿಸುತ್ತದೆ. ಅಂಜೂರ ಹಣ್ಣಿನಲ್ಲಿ ನಾರಿನ ಪದಾರ್ಥ ಹೆಚ್ಚಾಗಿದ್ದು, ಜೀರ್ಣ ಕ್ರಿಯೆ ವ್ಯವಸ್ಥೆ ಶುದ್ಧಿಯಾಗುತ್ತದೆ. 

ಚಿಕ್ಕ ಮಕ್ಕಳಲ್ಲಿ ಹಾಗೂ ತುಂಬಾ ಜನರಿಗೆ ಮಲಬದ್ಧತೆ ಸಮಸ್ಯೆ ಇರುತ್ತದೆ. ಆದ್ದರಿಂದ ಅಂಜೂರ ಹಣ್ಣಿಗಳನ್ನು ಎರಡೊತ್ತು ಎನಿಸಿದರೆ ಆ ಸಮಸ್ಯೆ ಹೋಗುತ್ತದೆ. ಅಲ್ಲದೇ ಅಂಜೂರು ಹಣ್ಣಿನಲ್ಲಿ ಮೆಗ್ನೇಷಿಯಂ , ಮ್ಯಾಂಗ ನೀಸ್ , ಜಿಂಕ್ ಖನಿಜಗಳು ಸಂತಾನ ಸಾಫಲ್ಯತೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.ಚಿಕ್ಕ ಮಕ್ಕಳಿಗೆ , ವಯಸ್ಕರಿಗೆ ಅಂಜೂರದ ಹಣ್ಣು ತಿಂದರೆ ಮಕ್ಕಳಿಗೆ ಆರೋಗ್ಯಕರವಾದ ಶಾರೀರಿಕ ಬೆಳವಣಿಗೆಯಾಗುತ್ತದೆ.  ಕೊಲೆಸ್ಟ್ರಾಲ್ ಈ ಹಣ್ಣಿನಲ್ಲಿ ಕಡಿಮೆ ಇರುವುದರಿಂದ , ತೂಕ ಇಳಿಸಿಕೊಳ್ಳುವವರಿಗೆ ಇದು ಹೆಚ್ಚು ಪ್ರಯೋಜನಕಾರಿ.

ಮಧುಮೇಹದ ವಿರುದ್ಧ ಹೋರಾಡುತ್ತದೆ. ಅಂಜೂರ ರಕ್ತದಲ್ಲಿರುವ Triglyceride ಅಂಶವನ್ನು ಕಡಿಮೆ ಮಾಡುತ್ತದೆ. ಈ ಅಂಶ ಹೆಚ್ಚಾದರೆ ಒಬಿಸಿಟಿ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.

ಇನ್ನು ಒಣ ಹಣ್ಣು ತಿನ್ನುವುದರಿಂದ ಹಲವು ಲಾಭಗಳನ್ನು ಕಾಣಬಹುದು. ಪ್ರತಿ ದಿನ ಸ್ವಲ್ಪ ಡ್ರೈ ಫ್ರೂಟ್ಸ್ ತಿನ್ನುವವರಿಗೆ ಪೋಷಕಾಂಶದ ಕೊರತೆ ಉಂಟಾಗುವುದಿಲ್ಲ. ಆದ್ದರಿಂದ ಬೆಳೆಯುವ ಮಕ್ಕಳಿಗೆ ಡ್ರೈಫ್ರೂಟ್ಸ್ ಕೊಡುವುದರಿಂದ ಅಗತ್ಯದ ಪೋಷಕಾಂಶಗಳು ದೊರೆಯುತ್ತವೆ. 

ಗರ್ಭಿಣಿಯರಿಗೆ ಹೆಚ್ಚಿನ ಪೋಷಕಾಂಶದ ಅವಶ್ಯಕತೆ ಹೆಚ್ಚಾಗಿರುತ್ತದೆ. ಪ್ರತಿ ದಿನ ಡ್ರೈ ಫ್ರೂಟ್ಸ್ ತಿಂದರೆ ತಾಯಿ ಮಗುವಿನ ಆರೋಗ್ಯಕ್ಕೆ ಒಳ್ಳೆಯದು. ಡ್ರೈ ಫ್ರೂಟ್ಸ್ ನ ತಾಜಾ ಹಣ್ಣಿನಲ್ಲಿರುವುದಕ್ಕಿಂತ ಕೆಲವು ವಿಶೇಷ ಗುಣಗಳಿರುತ್ತದೆ. 

ಅಂಜುರ ಹಣ್ಣಿನಲ್ಲಿ ಸುಣ್ಣದಂಶ,  ಕಬ್ಬಿಣ, ರಂಜಕ ಎ ಜೀವಸತ್ವ ಹಾಗೂ ಸಿ ಜೀವಸತ್ವ ಅಲ್ಪ ಪ್ರಮಾಣದ ಬಿ ಜೀವಸತ್ವವನ್ನು ಹೊಂದಿದೆ.. ಒಣ ಅಂಜುರವು ಅತಿ ಹೆಚ್ಚಿನ ಪೋಷಕಾಂಳಗಳನ್ನು ಒಳಗೊಂಡಿದೆ. ಹೀಗಾಗಿ ಅಂಜುರ ಹಣ್ಣನ್ನು ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ