ಉತ್ತಮ ಆರೋಗ್ಯಕ್ಕೆ ಜಂಕ್ ಫುಡ್ ತ್ಯಜಿಸಿ, ಬಾದಾಮಿ ಸೇವನೆ ಮಾಡಿ!

  • by

ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್ ತಿನ್ನುವವರ ಸಂಖ್ಯೆ ಹೆಚ್ಚಿದೆ. ಇದ್ರಿಂದ ಆರೋಗ್ಯ ಹಾಳಾಗುವುದಲ್ಲದೇ, ಅನಾವಶ್ಯಕ ಬೊಜ್ಜು, ತೂಕ ಹೆಚ್ಚಳ ಸಮಸ್ಯೆ ಕಾಡುತ್ತದೆ. ಆದ್ರೆ ಪ್ರತಿ ದಿನ ನೀವು ಜಂಕ್ ಫುಡ್  ಬದಲು,  ಬಾದಾಮಿ ಸೇವಿಸಿದ್ರೆ ಆರೋಗ್ಯ ಉತ್ತಮವಾಗಿರುವುದಲ್ಲದೇ, ಅನಾರೋಗ್ಯ ದಿಂದ ದೂರವಿರಬಹುದು. ಬಾದಾಮಿ ಹೆಚ್ಚು ಪೌಷ್ಟಿಕಾಂಶವುಳ್ಳದ್ದು. ಬಾದಾಮಿಯನ್ನು ರಾತ್ರಿಯಿಡಿ ನೆನೆಹಾಕಿ ಸೇವಿಸುವುದರಿಂದ ಅದರಲ್ಲಿರುವ ವಿಷಕಾರಿ ಅಂಶಗಳು ಹೋಗುತ್ತವೆ. ಫೈಟಿಕ್ ಆಮ್ಲ ಬಿಡುಗಡೆ ಮಾಡುವುದು ಮತ್ತು ಗ್ಲುಟೇನ್ ಅಂಶವನ್ನು ವಿಭಜಿಸುವುದು. ಇದರಿಂದ ಬಾದಾಮಿಯಲ್ಲಿರುವ ಪೋಷಕಾಂಶಗಳು ನಿಮಗೆ ಲಭ್ಯವಾಗುತ್ತವೆ. ಬಾದಾಮಿಯನ್ನು ಹಲವು ವಿಧಗಳಲ್ಲಿ ಬಳಕೆ ಮಾಡಬಹುದು. ಸದ್ಯ ಬಾದಾಮಿ ಡ್ರೈ ಫ್ರೂಟ್ ಸೇವನೆ ಮಾಡೋದ್ರಿಂದ ಆರೋಗ್ಯ ಲಾಭಗಳ ಬಗ್ಗೆ ಇಲ್ಲಿದೆ ಡಿಟೇಲ್ಸ್.’

ಮಧುಮೇಹ,. ಬಾದಾಮಿ, ಅರೋಗ್ಯ ಪ್ರಯೋಜನಗಳು, 
almonds, diabetes, health benefits,

ಬಾದಾಮಿ ಸೇವನೆ ಹೇಗೆ ಮಾಡಬೇಕು?

ಬಾದಾಮಿಯನ್ನು ಹುರಿದು ಕೂಡಾ ಸೇವಿಸಬಹುದು. ಹೆಚ್ಚಿನವರಲ್ಲಿ ಬಾದಾಮಿ ಸೇವಿಸಿದರೆ ಪೌಷ್ಟಿಕಾಂಶ ಕಡಿಮೆಯಾಗುತ್ತದೆ. ಎಂಬ ನಂಬಿಕೆಯಿದೆ. ಆದರೆ ಹುರಿದರೆ ನೀರಿನಾಂಶ ಕಡಿಮೆಯಾಗುವುದರ ಜತೆಗೆ ಪ್ರೋಟೀನ್ ಅಂಶ ಕಡಿಮೆಯಾಗುತ್ತದೆ. ನೀರಿನಲ್ಲಿ ನೆನೆಸಿಟ್ಟ ಬಾದಾಮಿ ಸೇವನೆ ಮಾಡಬಹುದು.. ಇದರಿಂದ ಪೌಷ್ಟಿಕಾಂಶಪ್ರಮಾಣ ಹೆಚ್ಚಾಗುತ್ತದೆ. ಇದು ಕೂದಲು ಮತ್ತು ಚರ್ಮದ ಸಮಸ್ಯೆಗೂ ಹೆಚ್ಚು ಉಪಯುಕ್ತಕಾರಿ. ದಿನ ನಿತ್ಯ ಬಾದಾಮಿ ಸೇವನೆ ಮಾಡುವುದರಿಂದ ಕೂದಲಿನ ಮತ್ತು ಚರ್ಮದ ಕಾಂತಿ ಹೆಚ್ಚಾಗುತ್ತದೆ.

ಮಧುಮೇಹ,. ಬಾದಾಮಿ, ಅರೋಗ್ಯ ಪ್ರಯೋಜನಗಳು, 
almonds, diabetes, health benefits,

1 ಕಪ್ ಬಾದಾಮಿಯಲ್ಲಿ ಪ್ರೋಟೀನ್ ಎಷ್ಟಿರುತ್ತದೆ?

ಶಕ್ತಿ 6.31 ಗ್ರಾಂ

ಪ್ರೋಟೀನ್ 30.24 ಗ್ರಾಂ

ಕೊಬ್ಬು- 71.40 ಗ್ರಾಂ

ಫೈಬರ್ 17.9 ್ಗರಾಂ

 ಕಬ್ಬಿಣಾಂಶ 5.31 ಮಿಲಿ ಗ್ರಾಂ 

ಕ್ಯಾಲ್ಸಿಯಂ 385 ಮಿ.ಗ್ರಾಂ

ಮಧುಮೇಹ,. ಬಾದಾಮಿ, ಅರೋಗ್ಯ ಪ್ರಯೋಜನಗಳು, 
almonds, diabetes, health benefits,

ಬಾದಾಮಿಯನ್ನು ಹಲವು ರೂಪಗಳಲ್ಲಿ ಸೇವನೆ ಮಾಡಬಹುದು. ಬಾದಾಮಿ ತಿನ್ನುವಾಗ ಅದರ ಸಿಪ್ಪೆಯೊಡನೆ ತಿನ್ನುವುದು ಹೆತ್ತು ಸೂಕ್ತ.ಇನ್ನು ಬುದ್ಧಿಶಕ್ತಿ ವೃದ್ಧಿಗೆ ಬಾದಾಮಿ ಗೋಡಂಬಿ ಪುಡಿ ಮಾಡಿದ ಮಿಶ್ರಣ ಕಲ್ಲುಸಕ್ಕರೆ ತುಪ್ಪ ಇವುಗಳನ್ನು ಮಿಶ್ರಣ ಮಾಡಿ, ಪ್ರತಿ ದಿನ 1 ಗ್ಲಾಸ್ ಸೇವನೆ ಮಾಡಿದರೆ ಖಂಡಿತ ಜ್ಞಾಪಕ ಶಕ್ತಿ ವೃದ್ಧಿಗೆ ಸಹಕಾರಿಯಾಗುತ್ತದೆ.

ಮಧುಮೇಹ ನಿಯಂತ್ರಣ ಹೇಗೆ ಆಗುತ್ತದೆ?

ಮಧುಮೇಹ ಕಾಯಿಲೆ ಹಾಗೂ ರಕ್ತದೋತ್ತಡವನ್ನು ಬದಾಮಿ ನಿಯಂತ್ರಿಸುತ್ತದೆ. ಬಾದಾಮಿ ಸೇವಿಸಿದರೆ ಅವು ನಿಮ್ಮ ರಕ್ತದಲ್ಲಿನ ಸಕ್ಕರೆಯ ಅಂಶ, ಇನ್ಸೂಲಿನ ಅಂಶ ಹಾಗೂ  ಸೋಡಿಯಂನ ಮಟ್ಟವನ್ನು ತಗ್ಗಿಸುತ್ತವೆ. ಮಧುಮೇಹ ಹಾಗೂ ಅಧಿಕ ರಕ್ತದೋತ್ತಡ ಸಂಭಾವ್ಯವನ್ನು ನಿಯಂತ್ರಿಸುತ್ತದೆ. ಮೆಗ್ನೆಷಿಯಂನ ಮಟ್ಟವನ್ನು ಶರೀರದಲ್ಲಿ ಹೆಚ್ಚಿಸುತ್ತದೆ.

ಇನ್ನು ಬಾದಾಮಿ ಸೇವನೆಯಿಂದ ಸೊಂಟದ ಸುತ್ತಳತೆ, ಸೊಂಚದಿಂದ ಎತ್ತರದ ಪ್ರಮಾಣ,ಕೊಲೆಸ್ಟ್ರಾಲ್, ಸಿರಿಯಾಕ್ಟಿವ್ ದೀರ್ಘಕಾಲೀನ ಬ್ಲಡ್ ಶುಗರ್ ನಿಯಂತ್ರಣ ಮಾಡುತ್ತದೆ. ಟೈಪ್ -2 ಡಯಾಬಿಟಿಸ್ ಹೊಂದಿರುವ ಜನರ ಆಹಾರಕ್ರಮದಲ್ಲಿ ಬಾದಾಮಿಯನ್ನು ಸೇರಿಸುವುದರಿಂದ ಸಾಕಷ್ಟು ಲಾಭಗಳಿವೆ. 

ಬಾದಾಮಿ ಉಪಯೋಗಗಳು..

1. ಚರ್ಮಕ್ಕೆ ವಯಸ್ಸಾಗುವಿಕೆಯನ್ನು ಬದಾಮಿ ತಡೆಗಟ್ಟುತ್ತದೆ. ಮಾರುಕಟ್ಟೆಯಲ್ಲಿ ಸಿಗುವಂತಹ ಉತ್ಪನ್ನಗಳಿಂದ ತ್ವಚೆ ಹಾಳಾಗಬಹುದು. ಹಾಗಾಗಿ ಬಾದಾಮಿಯಲ್ಲಿ ನೈಸರ್ಗಿಕ ಅಂಶಗಳು ನೆರಿಗೆ ನಿವಾರಿಸುವುದು. ಪ್ರತಿ ದಿನ ಬೆಳಿಗ್ಗೆ ನೆನೆಸಿಟ್ಟ ಬಾದಾಮಿ ಸೇವನೆ ಮಾಡಿದರೆ ಇದರಿಂದ ಚರ್ಮದಲ್ಲಿನ ನೆರಿಗೆ ಸೇರಿದಂತೆ  ವಯಸ್ಸಾಗುವ ವೇಳೆ ಆಗಬಹುದಾದಂತಹ ಲಕ್ಷಣಗಳನ್ನು ತಡೆಗಟ್ಟುತ್ತದೆ. 

2. ಪ್ರತಿರೋಧ ಶಕ್ತಿ ಬಲಪಡಿಸಲು ಬಾದಾಮಿ ಸಹಕಾರಿಯಾಗಿದೆ. ಪ್ರಿಬಯಾಟಿಕ್ ಅಂತವು ದೇಹದಲ್ಲಿ  ಪ್ರತಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರಿಬಯಾಟಿಕ್ ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೇರಿಯಾವನ್ನು ಉತ್ಪಾದಿಸುವುದು ಮತ್ತು ಇದರ ಫಲವಾಗಿ ಹೊಟ್ಟೆಗೆ ಪರಿಣಾಮ ಬೀರುವಂತಹ ರೋಗಗಳನ್ನು ತಡೆಗಟ್ಟುತ್ತದೆ. 

3. ತೂಕ ಕಳೆದುಕೊಳ್ಳಲು ಪ್ರಯೋಜನಕಾರಿಯಾಗಿದೆ. ಹೊಟ್ಟೆಯ ಸುತ್ತಲು ಇರುವಂತಹ ಕೊಬ್ಬನ್ನು ಕರಗಿಸಲು ಇದು ನೆರವಾಗುತ್ತದೆ. ಬಾದಾಮಿ ಹೊರಗಿನ ಸಿಪ್ಪೆ ತೆಗೆಯಲ್ಪಡುವ ಕಾರಣದಿಂದಾಗಿ ಏಕಪರ್ಯಾಪ್ತ ಕೊಬ್ಬಿರುವುದು. ಇದು ಹಸಿವು ಕಡಿಮೆ ಮಾಡಿ, ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. 

ಮಧುಮೇಹ,. ಬಾದಾಮಿ, ಅರೋಗ್ಯ ಪ್ರಯೋಜನಗಳು, 
almonds, diabetes, health benefits,

4. ಇನ್ನೂ ಹೃದಯದ ಆರೋಗ್ಯಕ್ಕೆ ಬಾದಾಮಿ ಒಳ್ಳೆಯದು ಪ್ರೋಟೀನ್ , ಪೊಟ್ಯಾಶಿಯಂ ಮತ್ತು ಮೆಗ್ನೆಶಿಯಂನ್ನು ಒದಗಿಸುವುದು. ಇದು ಹೃದಯದ ಆರೋಗ್ಯಕ್ಕೆ ಅತಿ ಅಗತ್ಯ. ಇದರಲ್ಲಿ ಇರುವಂತಹ ಆ್ಯಂಟಿ ಆಕ್ಸಿಡೆಂಟ್ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನದಲ್ಲಿಟ್ಟು, ದೊಡ್ಡ ಮಟ್ಟದ ಹೃದಯದ ಕಾಯಿಲೆ ತಡೆಗಟ್ಟುತ್ತದೆ. 

ಇಲ್ಲದೇ, ಮೆದುಳಿಗೂ ಬಾದಾಮಿ ಉತ್ತಮವಾದದ್ದು, ಪ್ರತಿ ದಿನ ೪ ರಿಂದ ೬ ನೆನೆಸಿಟ್ಟ ಬಾದಾಮಿ ಸೇವನೆ ಮಾಡಿದರೆ ಅದರಿಂದ ಮೆದುಳಿಗೆ ಶಕ್ತಿ ಸೀಗುತ್ತದೆ. ಮೆದುಳಿನ ನರವ್ಯವಸ್ಥೆಯ ಸರಿಯಾಗಿ ಕಾರ್ಯ ನಿರ್ವಹಿಸಲು ಅದು ಸಹಕಾರಿ. ಬೆಳಿಗ್ಗೆ ನೆನೆಸಿಟ್ಟ ಬಾದಾಮಿ ತಿಂದಪೆ ಅದರಿಂದ ಜ್ಞಾಪಕಶಕ್ತಿ ಹೆಚ್ಚುತದೆ. 

5. ನೀವು ಗರ್ಭಿಣಿಯಾಗಿದ್ದರೆ ನೆನೆಸಿಟ್ಟ ಬಾದಾಮಿ ಸೇವಿಸಿ. ನಿಮ್ಮ ಆಹಾರ ಕ್ರಮದಲ್ಲಿ ಬಾದಾಮಿ ಇರಲಿ. ಇದು ನಿಮ್ಮ ಮಗುವಿನ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ನೆನೆಸಿಟ್ಟ ಬಾದಾಮಿಯು ತಾಯಿ ಹಾಗೂ ಗರ್ಭದಲ್ಲಿರುವ ಮಗುವಿಗೆ ಪೋಷಕಾಂಶ ಹಾಗೂ ಶಕ್ತಿ ನೀಡುತ್ತದೆ. ಜೀರ್ಣಕ್ರಿಯೆಗೆ ಸುಧಾರಣೆ ನೆನೆಸಿಟ್ಟ ಬಾದಾಮಿ ತಿನ್ನುವುದರಿಂದ ಆಹಾರ ಕರಗಲು ಸಹಾಯ ಮಾಡುತ್ತದೆ. ನೀರಿನಲ್ಲಿ ನೆನೆಸಲು ಹಾಕಿದರೆ ಹೊರಗಿನ ಸಿಪ್ಪೆಯು ಹೋಗುತ್ತದೆ. ಇದರಿಂದ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತವೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ