ಮಧ್ಯಾಹ್ನ ಹೊತ್ತು ನಿದ್ರೆ ಮಾಡ್ತಿದ್ದೀರಾ? ಇದು ಉತ್ತಮ ಅಭ್ಯಾಸವೇ!

  • by

ನಿಮಗೆ ಮಧ್ಯಾಹ್ನದ ಸಮಯದಲ್ಲಿ ಆಗಾಗ ನಿದ್ದೆ ಬರುತ್ತದೆಯೇ.. ಮಧ್ಯಾಹ್ನ ಮಲಗಿದ್ರೆ ತೂಕ ಹೆಚ್ಚಳವಾಗಬಹುದು ಎಂದು ಚಿಂತೆ ಮಾಡುತ್ತಿದ್ದೀರಾ.. ಹಾಗಾದ್ರೆ ಈ ಚಿಂತೆ ಬಿಟ್ಟುಬಿಡಿ.  ಮಧ್ಯಾಹ್ನದ ನಿದ್ರೆ, ಹಗಲಿನ ಸಮಯದಲ್ಲಿ ಕಿರು ನಿದ್ರೆಗೆ ಜಾರುವುದು ತುಂಬಾ ಪ್ರಯೋಜನಕಾರಿಯಂತೆ.  ಮಧ್ಯಾಹ್ನ ಮಲಗುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ. ಇಲ್ಲಿದೆ ಮಾಹಿತಿ. 

Afternoon Sleep Habit , Health benefits, 
ಮಧ್ಯಾಹ್ನ ನಿದ್ರೆ , ಆರೋಗ್ಯ ಪ್ರಯೋಜನಗಳು

ರಕ್ತದೋತ್ತಡ ಕಡಿಮೆ 

ಮಧ್ಯಾಹ್ನದ ಹೊತ್ತು ಮಲಗುವುದರಿಂದ ರಕ್ತದೋತ್ತಡವನ್ನು ಕಡಿಮೆ ಮಾಡಬಹುದು.  ಮಧ್ಯಾಹ್ನದ ಹೊತ್ತು ನಿದ್ರೆ ಮಾಡುವುದರಿಂದ ಶೇ 33 ರಷ್ಟು ಹೃದಯಾಘಾತ ವಾಗುವ ಪ್ರಮಾಣ ಕಡಿಮೆ ಮಾಡಬಹುು. 60 ವರ್ಷ ಮೇಲ್ಪಟ್ಟವರು ಮಧ್ಯಾಹ್ನ ಹೊತ್ತು ನಿದ್ರೆ ಮಾಡಿದ್ರೆ ತುಂಬಾ ಆಕ್ಟಿವ್ ಆಗಿರುತ್ತಾರೆ. ಪ್ರತಿದಿನ 30 ನಿಮಿಷಗಳ ಕಾಲ ನಿದ್ರೆ ಮಾಡುವುದರಿಂದ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ.

ವಿಲ್ ಪವರ್ ಹೆಚ್ಚುತ್ತದೆ!

ನೀವು ದಣಿದಿದ್ದಾಗ ನಿದ್ರೆ ಮಾಡುವುದು ಹೆಚ್ಚು ಉಪಯುಕ್ತವಾಗಬಲ್ಲದ್ದು. ನೀವು ನಿದ್ರೆ ಮಾಡದಿದ್ದಾಗ. ಗೊಂದಲ ಹೆಚ್ಚುತ್ತದೆ. ಮಧ್ಯಾಹ್ನ ಹೊತ್ತು ನಿದ್ರೆ ಮಾಡಿದರೆ ವಿಲ್ ಪವರ್ ಹೆಚ್ಚುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ. 

Afternoon Sleep Habit , Health benefits, 
ಮಧ್ಯಾಹ್ನ ನಿದ್ರೆ , ಆರೋಗ್ಯ ಪ್ರಯೋಜನಗಳು

ಕಾಫಿಗಿಂತ ಉತ್ತಮವಾದದ್ದು!

ಮಧ್ಯಾಹ್ನ ಹೊತ್ತು ಕಿರು ನಿದ್ರೆಗೆ ಜಾರುವುದರಿಂದ ಹಲವು ಪ್ರಯೋಜನಗಳಿವೆ . ಕಾಫಿಗಿಂತ ನಿದ್ರೆ ಉತ್ತಮವಾದದ್ದು ಎಂದು ಹೇಳಲಾಗುತ್ತದೆ. ಕಲಿಕೆಯ ಕೊರತೆ, ಗ್ರಹಿಕಿ ಕೌಶಲ್ಯಗಳನ್ನು ಹೆಚ್ಚಿಸುವಲ್ಲಿ ಮಧ್ಯಾಹ್ನದ ನಿದ್ರೆ ನೆರವಾಗುತ್ತದೆ. ಅಲ್ಲದೇ ಇದು ಕಾರ್ಯಕ್ಷಮತೆ ಹೆಚ್ಚಿಸುತ್ತದೆ.  

ಜ್ಞಾಪಕ ಶಕ್ತಿ ವೃದ್ಧಿಸಲು ಸಹಕಾರಿ..!

ಮಧ್ಯಾಹ್ನ ಪ್ರತಿದಿನ 1 ಅಥವ 2 ಗಂಟೆಗಳ ಕಾಲ ಮಲಗುವುರದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ. 10 ನಿಮಿಷ ನಿದ್ದೆ ಮಾಡಿ ಎದ್ದವರಲ್ಲಿ  ಅರಿವಿನ ಕೌಶಲ್ಯತೆ ಹೆಚ್ಚಾಗುತ್ತದೆ. ಅಲ್ಲದೇ, ಜ್ಞಾಪಕ ಶಕ್ತಿ ಜತೆಗೆ ಮಿದುಳು ಚುರುಕಾಗುತ್ತದೆ. ನರಗಳಿಗೆ ಆರಾಮ ಸೀಗುತ್ತದೆ. ಮಧ್ಯಾಹ್ನ 90 ನಿಮಿಷದವರೆಗೂ ಮಲಗಿದರೆ ನಿಮ್ಮ ದೇಹಕ್ಕೆ ರಿಲ್ಯಾಕ್ಸ್ ಸೀಗುವುದಲ್ಲದೇ, ಆರಾಮವು ದೊರೆಯುತ್ತದೆ. ನರಗಳು ಸಡಿಲಗೊಳ್ಳಲು ಇದು ನೆರವಾಗುತ್ತದೆ ಎಂದು ತಿಳಿದು ಬಂದಿದೆ. 

ಸೃಜನಶೀಲತೆ ಮತ್ತು ಇಚ್ಛಾಶಕ್ತಿ!

ಗ್ರಹಣ ಶಕ್ತಿಯನ್ನ ಹೆಚ್ಚಿಸುವುದಲ್ಲದೇ, ಇದು ಸೃಜನಶೀಲತೆಯನ್ನು ಕೂಡಾ ಹೆಚ್ಚಿಸುತ್ತದೆ. ಇನ್ನು ನಿದ್ರೆಯ ಕೊರತೆ ಎದುರಿಸುತ್ತಿರುವವರು ನಿಮ್ಮ ಮೆದುಳಿಗೆ ಅಡಚಣೆ ಯಾಗುವುದಲ್ಲದೇ, ನೀವು ಚಿತ್ತಕ್ಕೆ ಅಡೆತಡೆಯಾಗಬಹುದು. ಹೀಗಾಗಿ ಮಧ್ಯಾಹ್ನದ ಹೊತ್ತು ಮಲಗಿದರೆ, ಮೆದುಳಿನ ಅಡಚಣೆ ನಿವಾರಣೆಯಾಗುತ್ತದೆ. ಇಚ್ಛಾಶಕ್ತಿಯನ್ನು ಹೆಚ್ಚಿಸುತ್ತದೆ. 

Afternoon Sleep Habit , Health benefits, 
ಮಧ್ಯಾಹ್ನ ನಿದ್ರೆ , ಆರೋಗ್ಯ ಪ್ರಯೋಜನಗಳು

ರಕ್ತದೋತ್ತಡ ನಿಯಂತ್ರಣ!

ರಕ್ತದೋತ್ತಡವನ್ನು ಕಡಿಮೆ ಮಾಡುವಲ್ಲಿ ಮಧ್ಯಾಹ್ನದ ನಿದ್ರೆ ಬಹಳ ಪರಿಣಾಮಕಾರಿಯಾದದ್ದು. ಹೃದಯರಕ್ತನಾಳದ ಒತ್ತಡವು ಹಲವು ಸಮಸ್ಯೆ ಗಳಿಗೆ ಎಡೆ ಮಾಡಿಕೊಡುತ್ತದೆ. ಆದ್ರೆ ಮಧ್ಯಾಹ್ನ ದ ಹೊತ್ತು ನಿದ್ರೆ ಮಾಡಿದರೆ, ರಕ್ತದೋತ್ತಡವನ್ನು ನಿಯಂತ್ರಣಕ್ಕೆ ತರಬಹುದು. ನೀವು ನಿರಂತರವಾಗಿ ಕಾರ್ ಅಥವಾ ರಾಕೆಟ್ ಡ್ರೈವ್ ಮಾಡುತ್ತಿದ್ದರೆ 20 ನಿಮಿಷಗಳ ಕಾಲ ನಿದ್ರೆ ಮಾಡಿ. ಇದ್ರಿಂದ ರಿಫ್ರೆಶ್ ಆಗಬಹುದು. ಆದ್ದರಿಂದ ಪ್ರತಿದಿ ಮಧ್ಯಾಹ್ನ ಅರ್ಧ ಗಂಟೆಗಳ ಕಾಲ ನಿದ್ರೆ ಮಾಡುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಮಧ್ಯಾಹ್ನದ ಸಮಯದ ನಿದ್ರೆಯಲ್ಲಿ ಮೂರು ಬಗೆಗೆಳನ್ನು ಕಾಣಬಹುದು..!

ಯೋಜನೆಯ ನಿದ್ರೆ 

ಈ ರೀತಿಯ ನಿದ್ರೆ ನಿಮ್ಮನ್ನು ಜಾಗೃತಗೊಳಿಸುತ್ತದೆ. ನಿಮ್ಮ ಯೋಜನೆಗಳಿಗೆ ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡಲು ಸಹಯಾ ಮಾಡುತ್ತದೆ.  

ತುರ್ತು ನಿದ್ರೆ

ತೀವ್ರ ದಣಿವು ಅಥವಾ ಆಯಾಸವಾದಾಗ ಈ ನಿದ್ರೆಯನ್ನು ಆಯ್ಕೆ ಮಾಡುವರಿದ್ದಾರೆ. ಆರೋಗ್ಯ ಸರಿಯಿಲ್ಲದೇ ಇದ್ದಾಗ ಮಧ್ಯಾಹ್ನದ ಹೊತ್ತು ವಿಶ್ರಾಂತಿ ತೆಗೆದುಕೊಳ್ಳುವುದು, 

ಅಭ್ಯಾಸದ ನಿದ್ರೆ

ಜನರು ನಿಯಮಿತವಾಗಿ ಮಲಗುತ್ತಾರೆ. ಮಧ್ಯಾಹ್ನದ ಹೊತ್ತು  ಊಟದ ನಂತಪ ಕಿರು ನಿದ್ರೆ ಮಾಡುತ್ತಾರೆ. ಈ ಪ್ರತಿ ದಿನ ಹೀಗೆ ಮಾಡುವುದರಿಂದ ಇದನ್ನು ಅಭ್ಯಾಸದ ನಿದ್ರೆ ಎಂದು ಹೇಳಬಹುದು. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ