ಈ 5 ಮಂತ್ರಗಳು ನಿಮ್ಮ ಜೀವನವನ್ನು ಬದಲಾಯಿಸಬಹುದು..!

  • by
chakras

ಕೆಲಮೊಮ್ಮೆ ಜೀವನದಲ್ಲಿ ಎಲ್ಲರೂ ಕಷ್ಟದಲ್ಲಿ ಸಿಲುಕಿಕೊಳ್ಳುವುದು ಸಾಮಾನ್ಯ. ಕಷ್ಟಗಳು ಬೆನ್ನು ಬೀಡದೆ ನಿಮ್ಮನ್ನು ಕಾಡಬಹುದು. ಆಗ ತುಂಬಾ ಜನರು ಆತಂತ, ಒತ್ತಡಕ್ಕೆ ಒಳಗಾಗುತ್ತಾರೆ. ಆದರೆ ನೀವು ಚಿಂತಿಸವ ಅಗತ್ಯವಿಲ್ಲ. ಈ ಕೆಳಗಿರುವ ಮಂತ್ರಗಳನ್ನು ಪಠಣ ಮಾಡುವುದರಿಂದ ನಿಮ್ಮನ್ನು ಉತ್ಸಾಹವನ್ನು ಮೇಲೆಕ್ಕೆತ್ತಲು ಸಹಾಯ ಮಾಡಬಹುದು. ನಿಮ್ಮ ಕಷ್ಟಗಳಿಂದ ಮುಕ್ತಿ ಪಡೆಯಲು ಆಧ್ಯಾತ್ಮಿಕವಾಗಿ ನೆರವಾಗಬಲ್ಲವು. ನಿಮ್ಮ ಇಡೀ ದೇಹ ಈ ಪದಗಳನ್ನು ದೃಶ್ಯೀಕರಿಸಬೇಕು. ಪದಗಳು ಬಹುತೇಕ ನಿಮ್ಮ ಭಾಗವೆಂದು ನೀವು ಭಾವಿಸಬೇಕು. ಆಗ ಆಳವಾಗಿ ನಿಮ್ಮನ್ನು ನೀವು ಕೇಂದ್ರಿಕರಿಸಿ.

5 Mantras , Change Your Life, ಆದು ಮಂತ್ರಗಳು, ಜೀವನ ಬದಲಾಯಿಸುವ, ಆಧ್ಯಾತ್ಮ

‘ಓಂ’

ಇದರ ಅರ್ಥ?

ಓಂ ಎಂದರೆ ಬ್ರಹ್ಮಾಂಡದ ಧ್ವನಿ ಅಥವಾ ಕಂಪನ. ಪೂರ್ವದಲ್ಲಿರುವ ಏಕೈಕ ಪ್ರಮುಖ ಮಂತ್ರ ಮತ್ತು ಅರ್ಥವನ್ನು ಉಲ್ಲೇಖಿಸುವುದು. ಆರಂಭ ಅಥವಾ ಅಂತ್ಯವನ್ನು ಮೀರಿ ವಿಷ್ಣು , ಬ್ರಹ್ಮ, ಮತ್ತು ಶಿವನ ತ್ರಿಮೂರ್ತಿಗಳನ್ನು ಸಂಕೇತಿಸುತ್ತದೆ.

ಓಂ ಹೇಳಿದ್ರೆ ಏನಾಗುತ್ತೆ?

ಓಂ ಜಪಿಸುವುದರಿಂದ ನಮ್ಮನ್ನು ಶಾಂತ ಮತ್ತು ಸಮತೋಲಿತ ಸ್ಥಿತಿಗೆ ತರುತ್ತದೆ. ಮನಸ್ಸನ್ನು ಪ್ರಕ್ಷುಬ್ಧ ಆಲೋಚನೆಗಳನ್ನು ಬಿಡುಗಡೆ ಮಾಡಿ, ಈ ಸಮಯದಲ್ಲಿ ಕೇಂದ್ರಿಕರಿಸಲು ಸಹಾಯ ಮಾಡುತ್ತದೆ.

‘ಓಂ ಮಣಿ ಪದ್ಮೆ ಹಮ್’

ಅರ್ಥ..? ಓಂ ಮಣಿ ಪದ್ಮೆ ಹಮ್ ಎಂಬುದು ಬೌದ್ಧ ಧರ್ಮದ ಪ್ರಮುಖ ಮಂತ್ರವಾಗಿದೆ. ಇದರ ಅರ್ಥ ಕಮಲದಲ್ಲಿರುವ ರತ್ನ. ನಾವೆಲ್ಲರೂ ಸ್ವಯಂ ಮಿತಿಯ ಕಾಯುತ್ತಿರುವ ಆಭರಣಗಳು ಎಂಬುದು ಇದರ ಅರ್ಥ.

ಈ ಪಠಣವು ಒಳಗೆ ಅಡಗಿರುವ ಸಹಾನೂಭೂತಿಯನ್ನು ಅನ್ ಲಾಕ್ ಮಾಡಲು ನೆರವಾಗುತ್ತದೆ. ಇದನ್ನು ನಿಯಮಿತವಾಗಿ ಮತ್ತು ಒಳ್ಳೆಯ ಉದ್ಧೇಶದಿಂದ ಜಪಿಸುವುದರಿಂದ ಮನಸ್ಸು ಶುದ್ಧೀಕರಣವಾಗಿ, ಶಕ್ತಿ ಹೆಚ್ಚುತ್ತದೆ.


5 Mantras , Change Your Life, ಆದು ಮಂತ್ರಗಳು, ಜೀವನ ಬದಲಾಯಿಸುವ, ಆಧ್ಯಾತ್ಮ

‘ಓಂ ನಮಃ ಶಿವಾಯ’

ಈ ಪಠಣ ಮಾಡಿದ್ರೆ ಏನಾಗುತ್ತದೆ? ಓಂ ನಮಃ ಶಿವಾಯ ಎಂದರೆ ನಾನು ಆಗುತ್ತಿರುವ ಘಟನೆಗಳಿಗೆ ತಲೆ ಬಾಗುತ್ತೇನೆ. ಈ ಪಠಣ ಶಿವನು ಆಂತರಿಕ ವಾಸ್ತವತೆಯನ್ನು ಪ್ರತಿನಿಧಿಸುತ್ತಾನೆ. ನಮ್ಮಲ್ಲಿನ ನಿಜವಾದ ಸ್ವರೂಪ ಎಂದು ಹೇಳಬಹುದು.

ಇದು ನಾವೆಲ್ಲರೂ ನಮ್ಮೊಳಿಗಿರುವ ಸಹಜ ಬುದ್ಧಿವಂತಿಕೆಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಇದು ಮೂಲತಃ ಕೆಟ್ಟ ಅಭ್ಯಾಸಗಳು ಮತ್ತು ಅಜ್ಞಾನದ ಮೇಲೆ ಯುದ್ಧ ಎಂದು ಘೋಷಿಸುವ ಮಾರ್ಗವಾಗಿದೆ. ಇದನ್ನು ಹೇಳುವುದರಿಂದ ಆತ್ಮವು ಬೆಳಗುತ್ತದೆ. ನಿಜವಾದ ಸಂತೋಷವನ್ನು ಪಡೆಯಲು ಸಾಧ್ಯವಾಗಬಹುದು.

5 Mantras , Change Your Life, ಆದು ಮಂತ್ರಗಳು, ಜೀವನ ಬದಲಾಯಿಸುವ, ಆಧ್ಯಾತ್ಮ

‘ಲೋಕ ಸಮಸ್ತಾ ಸುಖಿನೋ ಭವಂತು’

ಲೋಕ ಸಮಸ್ತಾ ಸುಖಿನೋ ಭವಂತೂ ಎಂದರೆ ಎಲ್ಲಾ ಜೀವಿಗಳು ಸಂತೋಷದಿಂದ , ದೈವಿಕ ಒಕ್ಕೂಟದಲ್ಲಿ ಬದುಕಲಿ ಎಂದು ಸೂಚಿಸುತ್ತದೆ. ಈ ಪಠಣ ವನ್ನು ಸಾಮಾನ್ಯವಾಗಿ ಧ್ಯಾನ ಅಥವಾ ಯೋಗಾಭ್ಯಾಸದ ಕೊನೆಯಲ್ಲಿ ಮಾಡಲಾಗುತ್ತದೆ. ಬಹುತೇಕ ಪ್ರಾರ್ಥನೆಯಂತೆ.

ಇದು ಕೋಪ ಹಾಗೂ ದ್ವೇಷವನ್ನು ಬಿಡಲು ನೆರವಾಗುತ್ತದೆ. ಇದು ಅತ್ಯಂತ ಪ್ರಾಬಲ್ಯ ಮಂತ್ರವಾಗಿದೆ. ಎಲ್ಲಾ ಜೀವಿಗಳ ಬಯಕೆಗೆ ಅರ್ಹರು ಎಂದು ಹೆಚ್ಚು ಧೃಡಪಡಿಸುತ್ತದೆ. ಸಂತೋಷದಿಂದ, ಸೂಕ್ಷ್ಮತೆ ಹಾಗೂ ಹೆಚ್ಚು ಶಾಂತಿಯುತವಾಗಿ ಬದುಕಲು ನೆರವಾಗುತ್ತದೆ.

5 Mantras , Change Your Life, ಆದು ಮಂತ್ರಗಳು, ಜೀವನ ಬದಲಾಯಿಸುವ, ಆಧ್ಯಾತ್ಮ

‘ಓಂ ಗಂ ಗಣಪತಾಯೇ ನಮಃ ‘

ಅರ್ಥವೇನು..? ಓಂ ಗಂ ಗಣಪತಾಯೇ ನಮಃ ಎಂದರೆ, ನಾನು ಅಡೆತಡೆಗಳನ್ನು ಹೋಗಲಾಡಿಸುವ ಗಣೇಶನಿಗೆ ನಮಸ್ಕರಿಸುತ್ತೇನೆ. ರಕ್ಷಣೆ ಮತ್ತು ಆಶೀರ್ವಾದಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಇದರ ಅರ್ಥವಾಗಿದೆ. ಗಣೇಶ ನಮ್ಮೊಳಗಿನ ಗುಣಮಟ್ಟವನ್ನು ಸಂಕೇತಿಸುತ್ತಾವೆ. ಅದು ಆಂತರಿಕ ಹಾಗೂ ಇತರ ನಕಾರಾತ್ಮಕ ಆಲೋಚನೆಗಳನ್ನು ನಿವಾರಿಸುತ್ತದೆ. ಅಲ್ಲದೇ ಸವಾಲಿನ ತೊಂದರೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ