2020 ರ ಅತ್ಯುತ್ತಮ ರಾಶಿಚಕ್ರ ಚಿಹ್ನೆ ಯಾವುದು

  • by

ನಮ್ಮ ಜೀವನ ನೆಮ್ಮದಿಯಾಗಿರಲಿ ಮತ್ತು ಸಂತೋಷವಾಗಿರಲಿ ಎಂದು ನಾವೆಲ್ಲರೂ ಬಯಸುತ್ತೇವೆ.

ವ್ಯಕ್ತಿಯ ಜೀವನದಲ್ಲಿ ನೋವು-ನಲಿವು ನೋಡುವುದು ಜೀವನದ ಪಾಠವನ್ನು ಕಲಿಸುತ್ತದೆ.

ನಿಮ್ಮದು ಬದುಕಿನ ಭರವಸೆಯನ್ನು ಮೂಡಿಸುತ್ತದೆ.ಸುಖ-ದುಃಖ ವೆನ್ನುವುದು ಮನುಷ್ಯನಿಗೆ ಸಮಪ್ರಮಾಣದಲ್ಲಿ ಇದ್ದರೆ ಬದುಕು ಆರಾಮದಾಯಕವಾಗಿರುತ್ತದೆ.

ಒಬ್ಬ ವ್ಯಕ್ತಿಯು ನೆಮ್ಮದಿಯಿಂದ ಬಾಳಲು ಸುಖದಿಂದ ಇರಲು ಅವನ ಗ್ರಹಗತಿಗಳು ಮುಖ್ಯ ಕಾರಣವಾಗುತ್ತದೆ. 

      ಪ್ರತಿವರ್ಷವೂ ಗ್ರಹಗಳು ತಮ್ಮ ಬದಲಾವಣೆಗಳು ಕಂಡು ಬರುತ್ತದೆ.

2020 ರಲ್ಲಿ  ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುವುದರಿಂದ ಅಥವಾ ಸಂಚಾರದಿಂದ ಹಲವು ನಕ್ಷತ್ರಗಳಿಗೆ ನೆಮ್ಮದಿಯ ಜೀವನವನ್ನು ಸುಖವನ್ನು ನೀಡುತ್ತದೆ ಎಂದು ಹೇಳಲಾಗಿದೆ.

ಹಾಗಾದರೆ ರಾಶಿ ಚಕ್ರಗಳ ಬಗ್ಗೆ ತಿಳಿದುಕೊಳ್ಳೋಣ.

2020 ರಲ್ಲಿ ಅದೃಷ್ಟವನ್ನು ಹೊಂದುವ ಗ್ರಹಗಳು:

ವೃಷಭ ರಾಶಿ :

ಈ ವರ್ಷ ನಿಮ್ಮ ಬಹಳಷ್ಟು ಬದಲಾವಣೆಯನ್ನು ಕಾಣುವಂತ ವರ್ಷ 2020 ರ ವರ್ಷ.

ಹಿಂದೆ ನೀವು ಅನುಭವಿಸಿದಂತಹ ಹಾಗೂ ಊಹಿಸದಂತಹ ಅದೃಷ್ಟ ಹಾಗೂ ಸಂತಸ ಈ ವರ್ಷ ದೊರೆಯುತ್ತದೆ.

ಹೆಚ್ಚು ಆತ್ಮವಿಶ್ವಾಸದಿಂದ ಇರಿ ಹಾಗೂ  ಹೆಚ್ಚು ಧೈರ್ಯಶಾಲಿಯಾಗಿರಿ. ಈ ವರ್ಷ ನೀವು ನೆಮ್ಮದಿಯ ಬದುಕನ್ನು ಕಾಣುತ್ತೀರಿ.


ಸಿಂಹ ರಾಶಿ :

ಈ ವರ್ಷ ನೀವು ಸಕಾರಾತ್ಮಕ ಬದಲಾವಣೆಯನ್ನು ಕಾಣುತ್ತೀರಿ ವಿಶೇಷವಾಗಿ ಉದ್ಯಮದವರು ಹಾಗೂ ಉದ್ಯೋಗದಲ್ಲಿರುವವರು ಹೆಚ್ಚಿನ ಪ್ರಗತಿಯನ್ನು ಕಾಣುತ್ತೀರಿ.

ನೆಮ್ಮದಿಯ ಜೀವನವನ್ನು ಕಾಣುತ್ತೀರಿ ಹಾಗೂ ಉತ್ತಮ ಫಲಗಳನ್ನು ಹೊಂದುತ್ತಿರಿ.

ಕನ್ಯಾ ರಾಶಿ :

ಕನ್ಯಾ ರಾಶಿಯವರು ಕೂಡ 2020 ರಲ್ಲಿ ಕನ್ಯಾ ರಾಶಿಯವರು ದೊಡ್ಡ ಬದಲಾವಣೆಯನ್ನು ಕಾಣುತ್ತೀರಿ.

ಸಾಮಾನ್ಯವಾಗಿ ಇವರು ನಾಚಿಕೆಯ ಸ್ವಭಾವದವರಾಗಿದ್ದ ರಿಂದ ಹಲವಾರು ಕೆಲಸಗಳು ಆಗುತ್ತಿರುವುದಿಲ್ಲ,

ಮಾತನಾಡಲು ಹಂಚಿಕೊಳ್ಳುತ್ತೀರಿ ಹಾಗೂ ಹಿಂಜರಿಕೆಯ ಸ್ವಭಾವ ವಾಗಿರುತ್ತದೆ.

ಇಂತಹ ಸ್ವಭಾವವು ಈ ವರ್ಷ ನಿಮ್ಮಿಂದ ದೂರವಾಗುತ್ತದೆ ನಿಮ್ಮಲ್ಲಿ ಅನೇಕ ಬದಲಾವಣೆಗಳನ್ನು ಕಂಡುಕೊಳ್ಳುತ್ತೀರಿ.

ಅಂತಿಮವಾಗಿ ನೀವು ಭಯ ಮತ್ತು ಅಂಜಿಕೆಯನ್ನು ಬಿಟ್ಟು ನಿಮ್ಮ ಜೀವನದಲ್ಲಿ ಹಿಡಿತವನ್ನು ಸಾಧಿಸುತ್ತೀರಿ.

ಸ್ವಂತ ಹಾದಿಯಲ್ಲಿ ಹೋಗುವುದರಿಂದ ನೀವು ಹೆಚ್ಚು ಜಯವನ್ನು ಸಾಧಿಸುತ್ತೀರಿ.

ನೀವು ಕನಸು ಕಾಣುತ್ತಿರುವ ವೃತ್ತಿಯನ್ನು ನೀವು ಆರಂಭಿಸುತ್ತೀರಿ ಈ ವರ್ಷ ನೀವು ನೆಮ್ಮದಿಯ ಜೀವನವನ್ನು ಕಾಣುತ್ತೀರ

ಮೀನ ರಾಶಿ :

ಈ ವರ್ಷ ನಿಮ್ಮ ಬದಲಾವಣೆಯ ವರ್ಷವೆಂದು ನಿಮಗೆ ಈಗಾಗಲೇ ತಿಳಿದಿರುವಂತೆ ಈ ವರ್ಷ ನಿಮಗೆ ಹೊಸ ಅನುಭವಗಳನ್ನು ಕೊಡುತ್ತದೆ ಹಾಗೂ ಸಕಾರಾತ್ಮಕ ಚಿಂತನೆಯನ್ನು ಮೂಡುವಂತೆ ಮಾಡುತ್ತದೆ.

ನಿಮಗೆ ದೊರೆಯುವ ಅವಕಾಶಗಳು ಮತ್ತು  ಸ್ಥಿತಿಗತಿಗಳು ವೈಯುಕ್ತಿಕ ಏಳಿಗೆಗೆ ಕಾರಣವಾಗುತ್ತದೆ. ಜೀವನದಲ್ಲಿ ಹೆಚ್ಚು ಆಶಾವಾದಿಗಳು ಆಗಿರುತ್ತೀರಿ.

ಉಳಿದ ರಾಶಿಗಳ ಭವಿಷ್ಯ:

ಮೇಷ ರಾಶಿ:

ಮೇಷ ರಾಶಿಯವರು ಕಷ್ಟಗಳನ್ನು ಬರುತ್ತಲೇ ಬಂದಿದ್ದಾರೆ ಈ ವರ್ಷವೂ ಅವರು ತುಂಬಾ ಎಚ್ಚರಿಕೆಯಿಂದ ವ್ಯವಹರಿಸಬೇಕಾದರೆ ಭೂಮಿಯಲ್ಲಿ ಎಚ್ಚರಿಕೆಯಿಂದ ಇರಬೇಕು.

ಮಿಥುನ ರಾಶಿ:

ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿಕೊಳ್ಳುತ್ತಿರುವ ಶಾಂತಿಯುತವಾದ ನೆಮ್ಮದಿಯಿಂದ ಜೀವನವನ್ನು ನಡೆಸುತ್ತೀರ.ನೀರಿನಿಂದ ತೊಂದರೆಯೂ ಬರುತ್ತದೆ ಆದ್ದರಿಂದ ಶಿವನನ್ನು ಪ್ರಾರ್ಥನೆ ಮಾಡಿದರೆ ಉತ್ತಮ ಫಲವನ್ನು ಪಡೆಯುತ್ತೀರಿ.


ಕರ್ಕಾಟಕ ರಾಶಿ:

ಈ ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರಬೇಕು ಮಾಡದಿರುವ ತಪ್ಪುಗಳು ಇವರ ಮೇಲೆ ಬರುವ ಸಾಧ್ಯತೆ ಇರುತ್ತದೆ.ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದ ಮನೆಯಲ್ಲಿ ನೆಮ್ಮದಿಯ ದೂರವಾಗುತ್ತದೆ.ಅರ್ಧ ವರ್ಷ ಕಳೆದ ನಂತರ ಜೀವನದಲ್ಲಿ ಹೊಸ ಬೆಳಕನ್ನು ಕಾಣುತ್ತೀರಿ ಹೊಸ ಭರವಸೆಯ ಹುಟ್ಟಿಕೊಳ್ಳುತ್ತದೆ.

ತುಲಾ ರಾಶಿ:

ತುಲಾ ರಾಶಿಯವರಿಗೆ ಈ ವರ್ಷ ಅದೃಷ್ಟವನ್ನು ತರುತ್ತದೆ ಯಶಸ್ಸು ನಿಮ್ಮದಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಬೇಕು.

ವೃಶ್ಚಿಕ ರಾಶಿ:

ಇವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ ಆಧ್ಯಾತ್ಮಿಕ ಸಾಧನೆಯಿಂದ ಪುಣ್ಯ ಕ್ಷೇತ್ರ ದರ್ಶನದಿಂದ ಶುಭಫಲವನ್ನು ಪಡೆಯಬಹುದು.


ಧನುರ್ ರಾಶಿ:

ಕಳೆದ ವರ್ಷ ಇವರು ತುಂಬಾ ಕಷ್ಟವನ್ನು ಅನುಭವಿಸಿರುತ್ತಾರೆ ಈ ವರ್ಷದಲ್ಲಿ ಆರು ತಿಂಗಳ ನಂತರ ಉತ್ತಮ ಫಲವನ್ನು ಹೊಂದುತ್ತಾರೆ ಆರೋಗ್ಯದ ಬಗ್ಗೆ ಹಣಕಾಸಿನ ವ್ಯವಹಾರದ ಬಗ್ಗೆ ಎಚ್ಚರಿಕೆ ಇರಬೇಕು


ಮಕರ ರಾಶಿ :

ಇವರಿಗೆ ಗುರು ಮತ್ತು ಚಂದ್ರ ಉತ್ತಮ ಸ್ಥಾನದಲ್ಲಿದ್ದು ಕೆಲಸಗಳನ್ನು ಸಾಧಿಸಿಕೊಳ್ಳುವ ಸಫಲರಾಗುತ್ತಾರೆ.

ಕುಂಭ ರಾಶಿ:

ಗುರುವಿನ ಅನುಗ್ರಹ ಚನ್ನಾಗಿದ್ದು ಒಳ್ಳೆಯ ಫಲಗಳನ್ನು ಹೊಂದುತ್ತಾರೆ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಬೇಕು.

ಹೊಸ ವರ್ಷದೊಂದಿಗೆ ಹೊಸ ಭರವಸೆಗಳು ಮತ್ತು ಯೋಜನೆಗಳು ಸಹ ಹೊರಹೊಮ್ಮಲು ಪ್ರಾರಂಭವಾಗುತ್ತವೆ.

ಬಾಕಿ ಇರುವ ಕಾರ್ಯಗಳನ್ನು ಪೂರ್ಣಗೊಳಿಸುವ ಒತ್ತಡಗಳು, ವಾರ್ಷಿಕ ಗುರಿಗಳನ್ನು ಸಾಧಿಸುವ ಪ್ರಯತ್ನಗಳು ವೇಗಗೊಳ್ಳಲು ಪ್ರಾರಂಭವಾಗುತ್ತದೆ.

ಹೊಸ ವರ್ಷದ ಆಗಮನದ ಉತ್ಸಾಹದ ಜೊತೆಗೆ, ಭವಿಷ್ಯದ ಯೋಜನೆಗಳು, ಯಶಸ್ಸು, ಸಂಬಂಧಗಳು, ಆರೋಗ್ಯ ಮತ್ತು ವೃತ್ತಿ ಜೀವನದ ಪ್ರಶ್ನೆಗಳು ನಿಮ್ಮ ಮನಸ್ಸನ್ನು ಕಾಡಲು ಪ್ರಾರಂಭಿಸುತ್ತವೆ.

ಈ ವರ್ಷ ಯಾವುದೇ ಅಪೂರ್ಣ ಕಾರ್ಯಗಳು ಈಡೇರುವುದು, ದುರ್ಬಲವಾದ ಸಂಬಂಧಗಳು ಶಾಶ್ವತವಾಗುವುದು, ನಿಮ್ಮ ವೃತ್ತಿಜೀವನದಲ್ಲಿ ಹೊಸ ಸ್ಥಾನವನ್ನು ಪಡೆಯುವುದು.

ಅಥವಾ ನಿಮ್ಮ ಹಣಕಾಸಿನ ವಿಷಯದಲ್ಲಿ ಪರಿಸ್ಥಿತಿ ಹೇಗೆ ಇರುತ್ತದೆ ಮತ್ತು ಇನ್ನೂ ಅನೇಕ ಪ್ರಶ್ನೆಗಳು ಖಂಡಿತವಾಗಿಯೂ ನಿಮಗೆ ತಲ್ಲಣವನ್ನು ನೀಡುತ್ತವೆ.

ಈ ಎಲ್ಲ ಪ್ರಶ್ನೆಗಳನ್ನು ಸರಿಯಾದ ಜ್ಯೋತಿಷಿಯ ಮೂಲಕ ಬಗೆಹರಿಸಿಕೊಂಡು ಬದುಕಿನಲ್ಲಿ ಹೊಸ ಬೆಳಕನ್ನು ಕಾಣಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ