’20 ನಿಮಿಷ ಧ್ಯಾನ ಮಾಡಿ, 24 ಗಂಟೆಯ ಒತ್ತಡ ನಿವಾರಿಸಿರಿಕೊಳ್ಳಿ’ – ಶ್ರೀ. ರವಿಶಂಕರ್ ಗುರೂಜಿ (A 20 minute meditation, for 24 hour stress relief -sri sri ravishankar)

  • by

ಒತ್ತಡ..ಒತ್ತಡ..ಒತ್ತಡ ಇದು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಕಂಡು ಬರುವ ಸಮಸ್ಯೆಯಾಗಿದೆ. ಒತ್ತಡ ಸಮಸ್ಯೆ ಹೇಗೆ ನಿವಾರಿಸಬಹುದು..? ಎಲ್ಲರಲ್ಲೂ ಚಿಂತೆ ಕಾಡುತ್ತಿರುತ್ತದೆ. ಯೆಸ್ , ನೀವು ಒತ್ತಡಕ್ಕಾಗಿ ಚಿಂತೆ ಮಾಡಬೇಕಿಲ್ಲ. ನೀವು ಮಾಡಬೇಕಾಗಿರುವುದು ಇಷ್ಟೇ. ಪ್ರತಿ ದಿನ 20 ನಿಮಿಷಗಳ ಕಾಲ ನೀವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಿಶ್ಚಿತಯಿಂದ ಇರಿ. 20 ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ 24 ಗಂಟೆಗಳ ಒತ್ತಡ ನಿವಾವಾರಿಸಿಕೊಳ್ಳಿ. ನಿಯಮಿತ ಧ್ಯಾನನೊಂದಿಗೆ, ನಿಮ್ಮ ಆಂತರಿಕ ಚೈತನ್ಯ ಹೆಚ್ಚುತ್ತದೆ.


sri sri ravishankar,  meditation, ಶ್ರೀ.ಶ್ರೀ ರವಿಶಂಕರ್ ಗುರೂಜಿ

ಒತ್ತಡ ನಿವಾರಣೆಗೆ ನಿರ್ಣಾಯಕ ಹೆಜ್ಜೆ ಇಡೋದು ಹೇಗೆ…?

ಸಡಿಲವಾದ ಬಿಗಿಯಾಗಿರದ ಬಟ್ಟೆಗಳನ್ನು ಧರಿಸಿ
ಶಾಂತ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ
ನಿಮ್ಮ ಮೊಬೈಲ್ ಫೋನ್ ಆಫ್ ಮಾಡಿ. ಇಲ್ಲ ಸೈಲೆಂಟ್ ಮೋಡ್ ನಲ್ಲಿ ಇರಿಸಿ. ನೀವು ಇದರಿಂದ ವಿಚಲಿತರಾಗಬಾರದು.
ಧ್ಯಾನ ಮಾಡಲು ಚಾಪೆ ಹಾಕಿಕೊಂಡು ಕುಳಿತುಕೊಳ್ಳುವುದು
ಬೆನ್ನು ಮೂಳೆಗೆ ಬೆಂಬಲವಾಗಿ ನೇರವಾಗಿ ಇರಬೇಕು.
ಅಗತ್ಯಬಿದ್ದರೆ ಬ್ಯಾಕ್ ರೆಸ್ಟ್ ಬಳಸಿ. ನಂತರ ಕಣ್ಣು ಮುಚ್ಚಿ, ಆಳವಾಗಿ ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು ಬಿಡಿ.

ಒತ್ತಡ ನಿವಾರಣೆಗೆ ಧ್ಯಾನ ಎಷ್ಟು ಸಹಕಾರಿ..?

ನಿಯಮಿತ ಧ್ಯಾನವು ಒತ್ತಡ ಮುಕ್ತ ಜೀವನಕ್ಕೆ ಸಹಕಾರಿಯಾಗಿದೆ. ಧ್ಯಾನದಿಂದ ಎಲ್ಲರಿಗೂ ಒಳ್ಳೆಯದಾಗಿದೆ. ಇದು ತಾತ್ಕಾಲಿಕ ರಿಲೀಫ್ ನೀಡುವುದಿಲ್ಲ. ನೀವು ಶಾಂತವಾದ ಹಾಗೂ ಸಮತೋಲಿತ ಜೀವನ ನಡೆಸುತ್ತೀರಿ. ಧ್ಯಾನವು ಆಳವಾದ ವಿಶ್ರಾಂತಿ ಪಡೆಯಲು ಮತ್ತು ಅದೇ ಸಮಯದಲ್ಲಿ ಜಾಗರೂಕರಾಗಿರಿ. ಮತ್ತು ಜಾಗೃತವಾಗಿರಲು ಒಂದು ಮಾರ್ಗವಾಗಿದೆ. ಮನಸ್ಸನ್ನು ಶಾಂತಗೊಳಿಸುವ ಮತ್ತು ಆಂತರಿಕ ಸಂತೋಷದೊಂದಿಗೆ ಸಂಪರ್ಕ ಸಾಧಿಸುವ ಕೌಶಲ್ಯ ಎಂದು ಶ್ರೀ.ಶ್ರೀ ರವಿಶಂಕರ್ ಗುರೂಜಿ ಹೇಳುತ್ತಾರೆ.

1.ಧ್ಯಾನವು ಮಾನಸಿಕ ನೈರ್ಮಲ್ಯ ಹೆಚ್ಚಿಸುತ್ತೆ
2.ಧ್ಯಾನವು ರಕ್ತದೋತ್ತಡವನ್ನು ನಿವಾರಿಸುತ್ತದೆ.
3.ಹೃದಯ ಮತ್ತು ರೋಗನಿರೋಧಕ ಆರೋಗ್ಯಕ್ಕೆ ಪ್ರಯೋಜನ ಒದಗಿಸುತ್ತದೆ.
4.ಮುಟ್ಟಿನ ಮತ್ತು ಮುಟ್ಟು ನಿಲ್ಲುವ ಸಮಸ್ಯೆಗಳನ್ನು ನಿವಾರಿಸುತ್ತದೆ
5.ತಲೆನೋವು ಮತ್ತು ಮೈಗ್ರೇನ್ ಗುಣಪಡಿಸುತ್ತದೆ.
6.ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಹೃದಯದ ಬಡಿತವನ್ನು ನಿಧಾನಗೊಳಿಸುತ್ತದೆ.
7.ಅಂತಃಸ್ರಾವಕ ವ್ಯವಸ್ಥೆಗೆ ಸಹಾಯ ಮಾಡುತ್ತದೆ
8.ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ
9.ಗಮನ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
10.ಬುದ್ಧಿವಂತಿಕೆ, ಅಂತಃಪ್ರಜ್ಞೆ ಮತ್ತು ನಾವೀನ್ಯತೆಯ ಮನೋಭಾವವನ್ನು ಹೆಚ್ಚಿಸುತ್ತದೆ
11.ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ. ಸೃಜನಶೀಲತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ
12.ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯವನ್ನು ಅಭಿವೃದ್ಧಿಪಡಿಸುತ್ತದೆ
13.ಸ್ವಾಭಿಮಾನ ಮತ್ತು ಸ್ವಯಂ ಸ್ವೀಕಾರವನ್ನು ನಿರ್ಮಿಸುತ್ತದೆ
14.ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.
15.ಆಶಾವಾದ ದೃಷ್ಟಿಕೋನವನ್ನು ಬೆಂಬಲಿಸುತ್ತದೆ
16.ಅಭಿವೃದ್ಧಿಯ ಶಕ್ತಿ ಹೆಚ್ಚುತ್ತದೆ.
17.ಸಮತೋಲಿತ ಸಂಬಂಧಗಳಿಗೆ ಕಾರಣವಾಗುತ್ತದೆ
19.ನಿಮ್ಮನ್ನು ಸಂತೋಷಪಡಿಸುತ್ತದೆ, ನಿಮ್ಮನ್ನು ಶಾಂತವಾಗಿರಿಸುತ್ತದೆ
20.ದೇಹ, ಮನಸ್ಸು ಮತ್ತು ಆತ್ಮವು ಸಾಮರಸ್ಯ ಹೊಂದಲು ಸಹಕಾರಿಯಾಗಿದೆ.

ಆಳವಾದ ಧ್ಯಾನದಲ್ಲಿ ತೊಡಗಿಕೊಳ್ಳುವುದು ಹೇಗೆ..?

ಬೇರೆಯವರ ಮುಖದಲ್ಲಿ ನಗು ತನ್ನಿ. ಬೇರೆಯವರಿಗೆ ಸಹಾಯ ಮಾಡಿದಾಗ ನಿಮಗೆ ಹೇಗೆ ಅನ್ನಿಸುತ್ತದೆ… ತೃಪ್ತಿಯಾಗುತ್ತೆದೆ ಅಲ್ವಾ… ಹೀಗೆ ಏಕೆ ಆಗುತ್ತದೆ ಎಂದು ನಿಮಗೆ ಗೊತ್ತಾ. ಇನ್ನೊಬ್ಬರ ಮುಖದಲ್ಲಿ ನಗು ತರಲು ಯತ್ನಿಸಿದಾಗ ನಮ್ಮ ಸುತ್ತ ಮುತ್ತಲು ಒಳ್ಳೆಯ ವಾತಾವರಣ ನಿರ್ಮಾಣವಾಗುತ್ತದೆ. ಸೇವೆಯ ಒಳಿತನ್ನು ತರುವುದು ಧ್ಯಾನದ ಆಳದ ಅನುಭವನನ್ನು ನೀಡುತ್ತದೆ. ಮೌನವು ಧ್ಯಾನಕ್ಕೆ ಪೂರಕ ಎಂದು ಹೇಳಬಹುದು. ನೀವು ಮೌನವಾಗಿದ್ದಾಗ ನಿಮ್ಮ ಮನಸ್ಥಿತಿ ಗತಿ ನಿಧಾನವಾಗುತ್ತದೆ. ಹಾಗೂ ಸುಲಭವಾಗಿ ಧ್ಯಾನಕ್ಕೆ ಇಳಿಯಬಹುದು.

ನೀವು ಸೇವಿಸುವ ಆಹಾರದ ಬಗ್ಗೆ ಇರಲಿ ಎಚ್ಚರ

ಕರಿದ ಪದಾರ್ಥ, ಮಾಂಸಾಹಾರವನ್ನು ಸೇವಿಸಿದ ನಂತರ ಧ್ಯಾನದಲ್ಲಿ ತೊಡಗಬೇಡಿ. ಆರೋಗ್ಯಕರ ಆಹಾರ ಸೇವಿಸಿದ ಬಳಿಕ ಧ್ಯಾನದಲ್ಲಿ ತೊಡಗಬೇಕು. ಧ್ಯಾನ ಮಾಡುವವರಿಗೆ ಹಸಿರು ತರಾಕಾರಿ, ತಾಜಾ ಹಣ್ಣುಗಳು ಇತ್ಯಾದಿ ಲಘು ಹಾಗೂ ಪಚನಕ್ಕೆ ಸುಲಭವಾದ ಆಹಾರಗಳನ್ನು ಸೇವಿಸುವುದು ಉತ್ತಮ. ಹಾಗೇ ಜೀವನದಲ್ಲಿ ಸಮಯ ನಿಗದಿ ಮಾಡಿಕೊಳ್ಳಿ. ಶಿಸ್ತನ್ನು ಪಾಲಿಸುವುದು ಧ್ಯಾನದಲ್ಲಿ ಆಳಕ್ಕಿಳಿಯಲು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿ ದಿನ ಧ್ಯಾನ ಮಾಡಬೇಕಾದ ಸಮಯವನ್ನು ನಿಗದಿ ಮಾಡಿಕೊಳ್ಳಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ