ಟಾಪ್ 5 – ಲಿಪ್ ಸ್ಟಿಕ್ ಬ್ರಾಂಡ್ಸ್..!

  • by

ತುಟಿಯ ಅಂದ ಹೆಚ್ಚಿಸುವ ಟಾಪ್ ಲಿಪ್‌ಸ್ಟಿಕ್ ಬ್ರ್ಯಾಂಡ್‌ಗಳು
ಲಿಪ್ಸ್ ಸ್ಟಿಕ್ ಹಾಕುವುದು ಮುಖದ ಮೇಕಪ್ ನ ಒಂದು ಭಾಗವಾಗಿದೆ, ತುಟಿಗೆ ಹೊಳೆಯುವ ಅಂದವಾಗಿ
ಹಚ್ಚಿದ ಮೇಕಪ್ ಮುಖದ ಅಂದದ ಜೊತೆ ವ್ಯಕ್ತಿತ್ವಕ್ಕೂ ಒಂದು ಮೆರಗನ್ನು ನೀಡುತ್ತದೆ. ಆದ್ದರಿಂದ ತುಟಿಗೆ
ಮೇಕಪ್ ಮಾಡುವಾಗ ಈ ಕೆಳಗಿನಂತೆ ಮಾಡಿದರೆ ತುಟಿಯ ಅಂದ ಹೆಚ್ಚುವುದು.
ಒಣ ತುಟಿಯ ಮೇಲೆ ಲಿಪ್ ಸ್ಟಿಕ್ ಹಾಕಿದರೆ ಅದು ಒಣಗಿದಂತೆ , ಬಿರುಕಾಗಿ ಕಾಣಿಸುವುದರಿಂದ ಅಷ್ಟು
ಚೆಂದ ಕಾಣುವುದಿಲ್ಲ. ಆದ್ದರಿಂದ ಲಿಪ್ ಸ್ಟಿಕ್ ಹಚ್ಚುವ ಮೊದಲು ಜೊಜೊಬಾ ಎಣ್ಣೆ ಅಥವಾ ಬಾಮ್ ಅನ್ನು
ಹಚ್ಚಿ 5 ನಿಮಿಷ ಬಿಡಬೇಕು. ಇನ್ನು ನೀವು ಬಳಸುವ ಲಿಪ್‌ಸ್ಟಿಕ್ ಬ್ರ್ಯಾಂಡ್ ಬಗ್ಗೆ ಕೂಡ ಹೆಚ್ಚಿನ
ಮುತುವರ್ಜಿಯನ್ನು ವಹಿಸಬೇಕು. ಇಂದಿನ ಲೇಖನದಲ್ಲಿ ಕೆಲವೊಂದು ಲಿಪ್‌ಸ್ಟಿಕ್ ಬ್ರ್ಯಾಂಡ್ ಬಗ್ಗೆ
ತಿಳಿಸಿದ್ದು ಇವುಗಳು ನಿಮ್ಮ ತುಟಿಯ ಅಂದವನ್ನು ಹೆಚ್ಚಿಸುವುದು ಖಂಡಿತ.

ಲೋರಿಯಲ್ ಪ್ಯಾರೀಸ್ ಮೇಕಪ್
ಇದು ಶ್ರೀಮಂತ ಬಣ್ಣವನ್ನು ಹೊಂದಿದ್ದು ಹೈಡ್ರೇಶನ್ ಅಂಶವನ್ನು ಹೊಂದಿದೆ. ಲಾಸ್ಟಿಂಗ್ ಈ
ಲಿಪ್‌ಸ್ಟಿಕ್‌ನ ಅಂಶವಾಗಿದ್ದು ಯಾವುದೇ ಸಮಾರಂಭಕ್ಕೆ ಇದರ ಬಣ್ಣ ಹೇಳಿಮಾಡಿಸಿರುವಂಥದ್ದು. ನರಿಶ್
ಮಾಡುವ ಒಮೆಗಾ 3 ಇದರಲ್ಲಿದೆ. ವಿಟಮಿನ್ ಇ, ಆರ್ಗನ್ ಅಯಿಲ್ ಈ ಲಿಪ್‌ಸ್ಟಿಕ್‌ನಲ್ಲಿ ಹಾಸುಹೊಕ್ಕಿದೆ.

ನಾರ್ಸ್ ವೆಲ್ವೇಟ್ ಮೇಟ್ ಲಿಪ್ ಪೆನ್ಸಿಲ್
ನಾನ್ ಡ್ರೈಯಿಂಗ್ ಆಗಿದ್ದು ಫೇಡ್, ಕ್ರ್ಯಾಕ್ ಅಥವಾ ಬ್ಲೀಡ್ ಎಂದೆನಿಸುವುದಿಲ್ಲ. ದೀರ್ಘ ಸಮಯದವರೆಗೆ
ತುಟಿಯ ಬಣ್ಣ ಹಾಗೆಯೇ ಇರುತ್ತದೆ. ಬೇರೆ ಬೇರೆ ಬಣ್ಣದಲ್ಲಿ ಈ ಲಿಪ್ ಪೆನ್ಸಿಲ್ ಲಭ್ಯವಿದ್ದು ಹಚ್ಚಲು ಬಹು
ಸುಲಭವಾಗಿದೆ. ನಿಮ್ಮ ತುಟಿಯನ್ನು ಇದು ಒಣಗಿಸುವುದಿಲ್ಲ

ಸ್ಟಿಲ್ಲಾ ಸ್ಟೆ ಆಲ್ ಡೇ ಲಿಕ್ವಿಡ್ ಲಿಪ್‌ಸ್ಟಿಕ್

ಮೃದುವಾಗಿ ಹಚ್ಚಬಹುದು ಲಿಪ್ ಗ್ಲೊಸ್ ಅಪ್ಲಿಕೇಟರ್‌ನೊಂದಿಗೆ ಇದು ಚೆನ್ನಾಗಿ ಹೊಂದಿಕೊಳ್ಳುತ್ತದೆ ಹೆಚ್ಚು
ಗಾಢ ಎಂದೆನಿಸದೆ ಮೇಟ್ ಒಣಗುತ್ತದೆ. ಈ ಕ್ರೀಮಿ ಫುಲ್ ಕವರೇಜ್ ಲಿಪ್ ಬಣ್ಣವು ಯಾವುದೇ
ಸಮಾರಂಭಕ್ಕೂ ಹೇಳಿ ಮಾಡಿಸಿರುವಂಥದ್ದು ಇದು ಬೇಗನೇ ಒಣಗುತ್ತದೆ ಇದರಿಂದ ನಿಮ್ಮ ತುಟಿ
ಅಂಟಾದಂತೆ ಕಾಣುವುದಿಲ್ಲ.

ಚಾರ್ಲೊಟ್ ಟಿಲ್‌ಬರಿ ಮೇಟ್ ರೆವೊಲ್ಯೂಶನ್ ಲಿಪ್‌ಸ್ಟಿಕ್
ತುಟಿಗಳನ್ನು ಮೃದುವಾಗಿಸಿ ಹೈಡ್ರೇಟ್ ಮಾಡುತ್ತದೆ ಸುಂದರ ಶ್ರೀಮಂತ ಬಣ್ಣ ಹೆಚ್ಚು ದೀರ್ಘ ಸಮಯ
ಹಾಗೆಯೇ ಇರುತ್ತದೆ. ಈ ಲಿಪ್‌ಸ್ಟಿಕ್ ನಿಮಗೆ ಅತ್ಯಂತ ಹೆಚ್ಚಿನ ಮೋಹಕ ನೋಟವನ್ನು ನೀಡುತ್ತದೆ. ಇದು
ಬೇಗನೇ ತುಟಿಯನ್ನು ಒಣಗಿಸಿ ಬಿರುಕು ಬಿಟ್ಟಂತೆ ಮಾಡುವುದಿಲ್ಲ. ಹೆಚ್ಚು ಸಮಯ ಇದರ ಹೊಳಪು
ಹಾಗೆಯೇ ಇರುತ್ತದೆ.

ಎನ್‌ವೈಎಕ್ಸ್ ಸಾಫ್ಟ್ ಮೇಟ್ ಲಿಪ್ ಕ್ರೀಮ್
ಇದು ಬಜೆಟ್ ಬೆಲೆಯಲ್ಲಿ ಲಭ್ಯ. ಇದರ ಸುಗಂಧ ಆಹ್ಲಾದಕರವಾಗಿದೆ. ಬಣ್ಣಗಳಲ್ಲಿ ಲಭ್ಯ. ಇದು ಬಜೆಟ್
ಬೆಲೆಯಲ್ಲಿ ಬರುತ್ತಿದ್ದು ದೀರ್ಘ ಸಮಯದವರೆಗೆ ಇದರ ಬಣ್ಣ ಇರುತ್ತದೆ. 34 ಬಣ್ಣಗಳಲ್ಲಿ ಈ ಲಿಪ್ ಕ್ರೀಮ್
ಲಭ್ಯವಿದೆ.

ಲಿಪ್‌ಸ್ಟಿಕ್ ಹಚ್ಚುವಾಗ ಕೆಲವೊಂದು ಅಂಶಗಳನ್ನು ನೀವು ಗಮನದಲ್ಲಿರಿಸಿಕೊಳ್ಳಬೇಕು. ಲಿಪ್ ಲೈನರ್
ಬಳಸದೆ ಲಿಪ್‌ಸ್ಟಿಕ್ ಬಳಸಿದರೆ ತುಟಿಗೆ ಅಂದದ ಶೇಪ್ ಕೊಡಲು ಸಾದ್ಯವಿಲ್ಲ. ಲಿಪ್‌ಸ್ಟಿಕ್ ಹಚ್ಚುವ
ಮುನ್ನ ಲೈನರ್‌ನಿಂದ ತುಟಿಯ ಸುತ್ತ ಗೆರೆ ಎಳೆಯುವುದರಿಂದ ತುಟಿಯ ಆಕಾರ ಸುಂದರವಾಗಿ
ಕಾಣುತ್ತದೆ.

ಲಿಪ್ ಕಲರ್ ಶೇಡ್ಸ್ ತುಟಿಗೆ ಬಣ್ಣ ಹಚ್ಚುವಾಗ ಲಿಪ್ ಲೈನರ್ ಬಣ್ಣ ಲಿಪ್‌ಸ್ಟಿಕ್‌ನ ಬಣ್ಣಕ್ಕೆ
ಹೊಂದಿಕೊಳ್ಳುವಂತೆ ನೋಡಬೇಕು. ಹಾಗೆಯೇ ಯಾವತ್ತೂ ಬಣ್ಣಕ್ಕಿಂತ ಲಿಪ್ ಸ್ಟಿಕ್ ಬಣ್ಣ
ಗಾಢವಾಗಿರಬಾರದು.

ಲಿಪ್‌ಸ್ಟಿಕ್ ಹಚ್ಚುವಾಗ ತುಟಿಯನ್ನು ಒ ಆಕಾರದಲ್ಲಿ ಮಾಡಿ ಹಚ್ಚಬೇಕು. ಇನ್ನು ಲಿಪ್‌ಸ್ಟಿಕ್ ಹಚ್ಚುವಾಗ
ಅದನ್ನು 2 ಕೋಟ್‌ನಲ್ಲಿ ಹಚ್ಚಿಕೊಳ್ಳಲು ಮರೆಯದಿರಿ. ಇನ್ನು ಸಕ್ಕರೆಯಿಂದ ಮಾಡಿದ ಸ್ಕ್ರಬ್
ತುಟಿಯಲ್ಲಿರುವ ಕೋಶಗಳನ್ನು ನಿರ್ಮೂಲನೆ ಮಾಡಲು ಸಹಕಾರಿಯಾಗಿದೆ. ಇದರಿಂದ ಆರೋಗ್ಯಕಾರಿ
ತುಟಿಯನ್ನು ನೀವು ಪಡೆದುಕೊಳ್ಳಬಹುದು. ಒಂದು ಚಮಚ ಸಕ್ಕರೆಗೆ ಒಂದು ಚಮಚ ಆಲೀವ್ ಎಣ್ಣೆಯನ್ನು
ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ. ಈ ಮಿಶ್ರಣವನ್ನು ನಿಮ್ಮ ತುಟಿಗಳ ಮೇಲೆ ಹಚ್ಚಿ. ನಂತರ ಟೂತ್‌ಪೇಸ್ಟ್
ಸಹಾಯದಿಂದ ಇದನ್ನು ಸ್ಕ್ರಬ್ ಮಾಡಿ. ಕೋಮಲವಾದ ತುಟಿ ನಿಮ್ಮದಾಗುವುದು ಖಂಡಿತ. ಇನ್ನು ನಿಮ್ಮ
ತುಟಿ ಬಿರುಕು ಬಿಟ್ಟಿದೆ ಎಂದಾದಲ್ಲಿ ಮನೆಯಲ್ಲೇ ತುಟಿಗಳ ಆರೈಕೆಯನ್ನು ಮಾಡಬಹುದಾಗಿದೆ
ಲಿಂಬೆ ಮಸಾಜ್
ಲಿಂಬೆಯನ್ನು 2 ಹೋಳುಗಳನ್ನಾಗಿ ಮಾಡಿಕೊಂಡು ಕೊಂಚ ಪುಡಿ ಸಕ್ಕರೆ ಉದುರಿಸಿ. ಇದನ್ನು ತುಟಿಗಳ
ಮೇಲೆ ಸವರಿ ನಿಧಾನವಾಗಿ ಮಸಾಜ್ ಮಾಡಿ. ಉತ್ತಮ ಬ್ಲೀಚಿಂಗ್ ಏಜೆಂಟ್ ತರಹ ಇದು ಕೆಲಸ
ಮಾಡುತ್ತದೆ ಸಕ್ಕರೆಯು ಡೆಡ್ ಸ್ಕಿನ್ ನಿವಾರಿಸುತ್ತದೆ. ಇದರಿಂದ ಆಕರ್ಷಕ ತುಟಿ ನಿಮ್ಮದಾಗುತ್ತದೆ.

ಹಾಲಿನೊಂದಿಗೆ ಅರಶಿಣ
ಅರಶಿಣವನ್ನು ಹಾಲಿನೊಂದಿಗೆ ಮಿಶ್ರ ಮಾಡಿ ತುಟಿಗೆ ಹಚ್ಚಿ. ಈ ರೀತಿ ಪ್ರತಿದಿನ ಹದಿನೈದು ದಿನಗಳವರೆಗೆ
ಮಾಡಿದರೆ ತುಟಿಯ ಬಣ್ಣ ತಿಳಿಯಾಗುವುದಲ್ಲದೆ ಆಕರ್ಷಕವಾಗಿ ಕಾಣುತ್ತದೆ.

ಅಲೊವೇರಾ ಜೇನುತುಪ್ಪ

ಅಲೊವೇರಾವನ್ನು ಜೇನುತುಪ್ಪದೊಂದಿಗೆ ಬೆರೆಸಿ ಮಿಶ್ರ ಮಾಡಿ ತುಟಿಗಳಿಗೆ ಹಚ್ಚುತ್ತಾ ಬಂದಲ್ಲಿ ತುಟಿಗಳು
ಬಿರುಕು ಬಿಡುವುದಿಲ್ಲ.

ತುಪ್ಪ ಹಾಲಿನ ಕೆನೆ ಮತ್ತು ಜೇನು ತುಪ್ಪ
ಈ ಮೂರನ್ನೂ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಮಸಾಜ್
ಮಾಡಿ. ಅರ್ಧ ಗಂಟೆ ಬಿಟ್ಟು ತುಟಿಯನ್ನು ಸ್ವಚ್ಛಗೊಳಿಸಿದರೆ ಮೃದು ತುಟಿ ನಿಮ್ಮದಾಗುತ್ತದೆ. ದಿನಕ್ಕೆ
ಎರಡು ಬಾರಿ ಈ ರೀತಿ ಮಾಡಿದರೆ ಸಾಫ್ಟ್ ತುಟಿ ನಿಮ್ಮದಾಗುತ್ತದೆ. ಇನ್ನು ತುಟಿಯ ಆರೋಗ್ಯವನ್ನು
ಕಾಪಾಡಲು ನೀವು ಕೆಲವೊಂದು ಗಮನಾರ್ಹ ಟಿಪ್ಸ್‌ಗಳನ್ನು ಪಾಲಿಸಬೇಕು.ತುಟಿಯನ್ನು ಆಗಾಗ್ಗೆ
ಕಚ್ಚುವುದರಿಂದ ತುಟಿ ಊದಿಕೊಂಡು ಅಸಹ್ಯವಾಗಿ ಕಾಣುತ್ತದೆ.
ಲಿಪ್‌ಬಾಮ್ ಬಳಕೆಯನ್ನು ಚಳಿಗಾಲ ಬೇಸಿಗೆ ಕಾಲ ಹೀಗೆ ಪ್ರತಿದಿನವೂ ಬಳಸಿ. ಇದರಿಂದ ತುಟಿಗಳ
ಆರೈಕೆ ಚೆನ್ನಾಗಿ ಆಗುತ್ತದೆ.
ಮಲಗುವ ಮುನ್ನ ತಿಳಿಕೆನೆ ಇಲ್ಲವೇ ತುಪ್ಪವನ್ನು ತುಟಿಗೆ ಸವರಿ.
ಆಗಾಗ್ಗೆ ನೀರು ಕುಡಿಯುವುದರಿಂದ ಕೂಡ ತುಟಿಯನ್ನು ಕೋಮಲವಾಗಿ ಇರಿಸಬಹುದು.
ಆಗಾಗ ನಾಲಗೆಯಿಂದ ತುಟಿಯನ್ನು ಸವರಿಕೊಳ್ಳುತ್ತಿರಬೇಕು. ಇಲ್ಲವೇ ಲಿಪ್ ಬಾಮ್ ನಿಮ್ಮ ಜೊತೆಗಿರಲಿ.
ಆಗಾಗ್ಗೆ ಇದನ್ನು ಲೇಪಿಸುತ್ತಿರಿ. ಲಿಪ್‌ಸ್ಟಿಕ್ ಆಯ್ಕೆಮಾಡುವಾಗ ಗುಣಮಟ್ಟದ ಲಿಪ್‌ಸ್ಟಿಕ್ ಆಯ್ಕೆಯನ್ನು
ಮಾಡಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ