ಗಂಟಲಿನ ಕಿರಿಕಿರಿಗೆ ಮನೆ ಮದ್ದುಗಳು..! (home remedy throat infection)

  • by

ಚಳಿಗಾಲ ಅಷ್ಟೇ ಅಲ್ಲದೇ, ಬೇಸಿಗೆಯ ಕಾಲದಲ್ಲೂ ಶೀತ, ಕೆಮ್ಮು, ನೋಯುತ್ತಿರುವ ಗಂಟಲು ಕೆಲಮೊಮ್ಮೆ ಕಿರಿ ಕಿರಿಯನ್ನುಂಟು ಮಾಡುತ್ತದೆ. ಕೆಲವು ದೈಹಿಕ ಸಮಸ್ಯೆಗಳಿಂದ ಅನೇಕ ಜನರು ತೊಂದರೆ ತೊಂದರೆಕ್ಕೀಡಾಗುತ್ತಾರೆ. ಈ ಸಮಸ್ಯೆ ಬ್ಯಾಕ್ಟೇರಿಯಾಕ್ಕೆ ಒಡ್ಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ಇದರ ಅಡಿಯಲ್ಲಿ ಗಂಟಲಿನಲ್ಲಿ ವಿಚಿತ್ರ ಒರಟುತನ ಕಂಡು ಬರುತ್ತದೆ. ಸಮಸ್ಯೆ ಮುಂದುವರೆದಂತೆ ಗಂಟಲು ನೋವು ಪ್ರಾರಂಭವಾಗುತ್ತದೆ. ಈ ಸಮಸ್ಯೆಗೆ ನೀವೇ ಚಿಕಿತ್ಸೆ ಪಡೆದುಕೊಳ್ಳಬಹುದು. ನೋಯುವ ಗಂಟಲಿನ ಸಮಸ್ಯೆಗೆ ಕಾರಣಗಳು, ಲಕ್ಷಣಗಳು ಹಾಗೂ ಮನೆಮದ್ದುಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ನೋಯುತ್ತಿರುವ ಗಂಟಲಿನ ಲಕ್ಷಣಗಳು

ಮೂಗು ಕಟ್ಟುವಿಕೆ
ಸ್ರವಿಸುವ ಮೂಗು
ಶೀನು, ಕೆಮ್ಮು , ಜ್ವರ ಹಾಗೂ ಶೀತ
ದೇಹದ ನೋವು
ತೆಲನೋವು, ಆಹಾರವನ್ನು ಸೇವಿಸಲು ತೊಂದರೆ
ಹಸಿವಿನ ಕೊರತೆ

ನೋಯುತ್ತಿರುವ ಗಂಟಲು ಸಮಸ್ಯೆಗೆ ಮನೆಮದ್ದುಗಳು

ಸ್ಟಿಮ್

ಸ್ಟಿಮ್ ತೆಗೆದುಕೊಳ್ಳುವುದರಿಂದ ನೋಯುತ್ತಿರುವ ಗಂಟಲಿಗೆ ರಿಲೀಫ್ ದೊರೆಯುತ್ತದೆ. ತಲೆಯ ಮೇಲೆ ಟವೆಲ್ ಇಟ್ಟು ಬೆಚ್ಚಗಿನ ನೀರಿನಿಂದ ಬಿಸಿನೀರಿನ ಉಗಿಯನ್ನು ಪಡೆದುಕೊಳ್ಳಿ. ಕಣ್ಣು ಮುಚ್ಚಿ ಆಳವಾದ ಉಸಿರನ್ನು ತೆಗೆದುಕೊಳ್ಳಿ. ಈ ಪ್ರಕ್ರಿಯೆಯನ್ನು ದಿನಕ್ಕೆ ಎರಡು ಬಾರಿ ಮಾಡಬಹುದು. ನೋಯುತ್ತಿರುವ ಗಂಟಲು ಸಮಸ್ಯೆ ಸ್ಟಿಮ್ ಉತ್ತಮ ಮನೆಮದ್ದು ಎಂದು ಹೇಳಬಹುದು. ಇದು ಗಂಟಲಿನ ಸಮಸ್ಯೆಯನ್ನು ಶಮನಗೊಳಿಸಲು ನೆರವಾಗುತ್ತದೆ.

ಆಪಲ್ ವಿನೆಗರ್

1 ಚಮಚ ಆಪಲ್ ವಿನೆಗರ್, ಸ್ವಲ್ಪ ಉಪ್ಪು ಹಾಗೂ 1 ಲೋಟ ಬಿಸಿ ನೀರನ್ನು ತೆಗೆದುಕೊಂಡು ಗ್ಲಾರ್ಗ್ ಮಾಡಿ. ವಿನೆಗರ್ ನಲ್ಲಿ ಆಂಟಿ ಫಂಗಲ್ ಹಾಗೂ ಆಂಟಿ ಬ್ಯಾಕ್ಟೇರಿಯಲ್ ಉರಿಯೂತ ನಿವಾರಿಸುವ ಗುಣವಿದೆ. ಗಂಟಲು ಹಾಗೂ ಬಾಯಿಯ ಬ್ಯಾಕ್ಟೇರಿಯಾವನ್ನು ನಿವಾರಿಸುತ್ತದೆ. ಗಂಟಲಿನ ಸೋಂಕನ್ನು ಕಡಿಮೆ ಮಾಡುವುದಲ್ಲದೇ ಗಂಟಲಿನ ಉರಿಯೂತವನ್ನು ನಿವಾರಿಸುತ್ತದೆ.

ಏಲಕ್ಕಿ

ಶೀತ ಆಗಿದ್ದಾಗ ಏಲಕ್ಕಿ ಟೀಯನ್ನು ಸೇವಿಸಿದರೆ ಪರಿಹಾರ ದೊರೆಯುತ್ತದೆ. ಇದು ಕಟ್ಟಿಕೊಂಡಿರುವ ಮೂಗನ್ನು ಗುಣ ಮಾಡಿ ಉಸಿರಾಟ ಸರಾಗವಾಗಿ ಆಗುವಂತೆ ಮಾಡುತ್ತದೆ. ಇನ್ನು 1 ಗ್ಲಾಸ್ ನೀರಿನಲ್ಲಿ ಏಲಕ್ಕಿ ನೆನೆಸಿಡಬೇಕು. ಮರುದಿನ ಬೆಳಿಗ್ಗೆ ಬಾಯಿ ಮುಕ್ಕಳಿಸಿದರೆ, ಗಂಟಲು ಕೆರೆತ, ನೋವು ಕಡಿಮೆಯಾಗುತ್ತದೆ.

ಮೆಂತ್ಯ ಬೀಜಗಳು

1 ಚಮಚ ಮೆಂತ್ಯಾ ಹಾಗೂ 2 ಲೋಟ ನೀರು ತೆಗೆದುಕೊಳ್ಳಿ. ಮೊದಲಿಗೆ ಮೆಂತ್ಯಾವನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಈ ನೀರಿನಿಂದ ಬಾಯಿ ಮುಕ್ಕಳಿಸಿ. ಈ ಪ್ರಕ್ರಿಯೆಯನ್ನು ದಿನಕ್ಕೆ 4-5 ಬಾರಿ ಮಾಡಿ. ಮೆಂತ್ಯಾ ಬೀಜಗಳು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ದೇಹದ ಸೋಂಕಿಗೆ ಕಾರಣವಾಗುವ ಬ್ಯಾಕ್ಟೇರಿಯಾವನ್ನು ನಿವಾರಿಸಲು ಸಹಾಯ ಮಾಡುತ್ತವೆ.

ಬೆಳ್ಳುಳ್ಳಿ ಲವಂಗ

ಬೆಳ್ಳುಳ್ಳಿಯನ್ನು ಎರಡು ಭಾಗಗಳಾಗಿ ಕತ್ತರಿಸಿ, ಈಗ ಬೆಳ್ಳುಳ್ಳಿಯನ್ನು ಬಾಯಿಗೆ ಹಾಕಿಕೊಂಡು ಬೆಳ್ಳುಳ್ಳಿ ರಸವನ್ನು ನಿಧಾನವಾಗಿ ಹೀರಿಕೊಳ್ಳಿ. ಇದು ನೋಯುತ್ತಿರುವ ಗಂಟಲು ಗುಣಪಡಿಸಲು ಮನೆ ಮದ್ದು ಎಂದು ಹೇಳಬಹುದು. ಗಂಟಲು ಹಾಗೂ ಬಾಯಿಯ ಸೋಂಕನ್ನು ನಿವಾರಿಸಲು ಇದು ನೆರವಾಗುತ್ತದೆ.

ಶುಂಠಿ ಬಳಕೆ

ಅರ್ಧ ಟೀ ಚಮಚ ಶುಂಠಿಯನ್ನು ನುಣ್ಣಗೆ ಕತ್ತರಿಸಿ, ಸಕ್ಕರೆ ಹಾಗೂ ಚಹಾ ಎಲೆಗಳು, ನೀರು ತೆಗೆದುಕೊಳ್ಳಿ. ಬಿಸಿ ಮಾಡುವುದಕ್ಕೆ 1 ಕಪ್ ನೀರನ್ನು ಒಲೆ ಮೇಲೆ ಇರಿಸಿ, ಕುದಿಯುವ ನೀರಿಗೆ ಶುಂಠಿ, ಸಕ್ಕರೆ ಹಾಗೂ ಚಹಾ ಎಲೆಗಳನ್ನು ಸೇರಿಸಿ. ನಂತರ 5 ನಿಮಿಷಗಳ ಕಾಲ ಕುದಿಸಿ. ಒಂದು ಕಪ್ ನಲ್ಲಿ ಇದನ್ನು ತೆಗೆದು, ಕುಡಿಯಿರಿ. ಹೀಗೆ ಮಾಡುವುದರಿಂದ ಗಂಟಲು ನೋವಿಗೆ ಪರಿಣಾಮಕಾರಿ ಚಿಕಿತ್ಸೆ ಎಂದು ಹೇಳಬಹುದು. ನೀವು ದಿನಕ್ಕೆ ಮೂರು ಬಾರಿ ಶುಂಠಿ ಚಹಾ ಸೇವಿಸಬಹುದು. ಗಂಟಲು ಹಾಗೂ ಬಾಯಿಯ ಸೋಂಕನ್ನು ನಿವಾರಿಸಲು ಇದು ನೆರವಾಗುತ್ತದೆ.

ಕಲ್ಲು ಸಕ್ಕರೆ

ಗಂಟಲು ನೋವು ಅಥವಾ ಗಂಟಲು ಕೆರೆತದ ಸಮಯದಲ್ಲಿ ಕಲ್ಲು ಸಕ್ಕರೆಯನ್ನು ನಿಯಮಿತವಾಗಿ ಚೀಪುವುದರಿದಂ ಸಮಸ್ಯೆ ನಿವಾರಣೆಯಾಗುತ್ತದೆ. ಇದು ಸಣ್ಣ ಮಕ್ಕಳಲ್ಲಿ ಕಾಡುವ ಗಂಟಲು ನೋವಿಗೆ ಅತ್ಯುತ್ತಮ ಮದ್ದು ಎಂದು ಹೇಳಬಹುದು.

ಜೇನುತುಪ್ಪ ಹಾಗೂ ಮೋಸಂಬಿ

ಮಾರುಕಟ್ಟೆಯಲ್ಲಿ ಸಿಗುವ ಮೋಸಂಬಿಯಿಂದ ಗಂಟಲು ನೋವನ್ನು ನಿವಾರಿಸಿಕೊಳ್ಳಬಹುದು. ಮೋಸಂಬಿ ರಸಕ್ಕೆ ಜೇನುತುಪ್ಪ ಸೇರಿಸಿ ಕುಡಿದರೆ ನೋವು ಕಡಿಮೆಯಾಗುತ್ತದೆ. ಹಾಗೆಯೇ ಗಂಟಲು ಕೆರೆತ ಸಹ ನಿವಾರಣೆಯಾಗುತ್ತದೆ.

ಬೆಳ್ಳುಳ್ಳಿ ಹಾಗೂ ಜೇನುತುಪ್ಪ

ಶೀತದಿಂದ ಆಗುವ ಗಂಟಲು ಸಮಸ್ಯೆಗೆ ಜೇನುತುಪ್ಪ ಹಾಗೂ ಬೆಳ್ಳುಳ್ಳಿ ಮಿಶ್ರಣ ಮನೆ ಮದ್ದು ಎಂದು ಹೇಳಬಹುದು. ಬೆಳ್ಳುಳ್ಳಿಯ ಎಸಳುಗಳನ್ನು ಚಚ್ಚಿ ಇದನ್ನು ಜೇನುತುಪ್ಪದ ಜತೆ ಬೆರೆಸಿ ಸಿರಪ್ ರೂಪದಲ್ಲಿ ಸೇವಿಸಬಹುದು. ಇದನ್ನು ದಿನವು ಕೂಡಿಯುವುದರಿಂದ ಶೀರ್ಘದಲ್ಲೇ ಪರಿಹಾರ ದೊರೆಯುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ