ಕಮಲ ಹೂ ಯಾಕೆ ಪವಿತ್ರ ಗೊತ್ತಾ..! ಒತ್ತಡ ನಿವಾರಿಸುವಲ್ಲಿ ಇದರ ಮಹತ್ವನೇನು?

  • by

ದೇವತೆಗಳ ಮೆಚ್ಚಿನ ಪುಷ್ಪ ಕಮಲ.. ಕಮಲ ಸಾಮಾನ್ಯವಾಗಿ ಕೆಸರಿನಲ್ಲಿ ಬೆಳೆಯುತ್ತೆ. ಮನುಷ್ಯ ಜ್ಞಾನೋದಯ ಜಾಗೃತಿಯಲ್ಲಿ ವಿಕಸನ ಗೊಳುತ್ತೆ. ಕಮಲ ಕೆಸರಿನಲ್ಲಿ ಬೆಳೆದರೂ ಅಂತಹ ವಾತಾವರಣದಲ್ಲಿದ್ದರೂ ಅದು ಸುಂದರ ಹಾಗೂ ನಿರ್ಲಿಪ್ತತೆ ಹೊಂದಿರುತ್ತದೆ. ಇದು ಮನುಷ್ಯನ ಜೀವನ ಯಾವುದೇ ವಿಷಮ (ಕೆಟ್ಟ) ಪರಿಸ್ಥಿತಿಯಲ್ಲಿ ಇದ್ದರೂ ಕೂಡಾ. ಪ್ರಶಾಂತ ಚಿತತ್ತೆಯಿಂದ ಇರಬೇಕು ಹಾಗೂ ಅಂತಃಸೌಂದರ್ಯವನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ಸೂಚಿಸುತ್ತದೆ. 

ಕಮಲವು ಸೃಷ್ಟಿಕರ್ತ ಹಾಗೂ ಸೃಷ್ಟಿಗೆ ಆಧಾರವಾಗಿರುವ ಪಾರಪಾರ್ಥಿಕ ತತ್ವ. ಇವೆರಡನ್ನು ಜೋಡಿಸುವ ಸೇತುವೆಯಾಗಿ ಗುರುತಿಸಲ್ಪಡುತ್ತದೆ.  ತಾವರೆ ಹೂ ಬ್ರಹ್ಮನ ವಾಸಸ್ಥಾನವನ್ನು ಸೂಚಿಸುತ್ತದೆ. ಹೀಗಾಗಿ ಕಮಲದ ಹೂವಿಗೆ ತುಂಬಾ ಪ್ರಾಮುಖ್ಯತೆ ನೀಡಲಾಗುತ್ತದೆ. ಕಮಲದ ಹೂವಿನ ಪರಿಕಲ್ಪನೆಯ ಮೂಲ ನೆಲೆ ಭಾರತ ಎಂದು ಗುರುತಿಸಲಾಗುತ್ತೆ.. ಕಮಲದ ಅಸ್ತಿತ್ವವನ್ನು ರೈತರಿಗೆ ತುಂಬಾ ಶ್ರೇಷ್ಠಳಾದ ದೇವತೆ ಲಕ್ಷ್ಮೀ. ಶ್ರೇಷ್ಠವಂತಿಕೆ ಅಷ್ಟೇ ಅಲ್ಲ. ಸಗಣಿಯ ಅಧಿವೇವತೆ. ವಿಷ್ಣುವಿನ ಹೆಂಡತಿಯಾದ ಇವಳನ್ನು ಶ್ರೀ, ಸಿರಿ ಪದ್ಮ, ಲಕ್ಷ್ಮೀ ಎಂದು ಕರೆಯಲಾಗಿದೆ. 

Lotus Flower. Health benefits,  
ತಾವರೆ ಹೂ, ಆರೋಗ್ಯ ಪ್ರಯೋಜನಗಳು

ಕಮಲದ ಬಗ್ಗೆ ಭಾರತೀಯರಲ್ಲಿ ಹಲವು ನಂಬಿಕೆಗಳಿವೆ… ಗ್ರಾಮೀಣ ಬುಡಕಟ್ಟುಗಳಲ್ಲಿ ಕೆಟ್ಟ ನಕಾರಾತ್ಮಕ ಶಕ್ತಿಗಳಿಂದ ಉಂಟಾಗುವ ದುರಾದೃಶಷ್ಟವನ್ನು ಕಮಲದ ಹೂ ನಿವಾರಿಸುತ್ತದೆ. ಕಮಲದ ಹೂವಿನ ಪ್ರತಿ ಭಾಗಗಳನ್ನು ಔಷಧಿಯ ರೂಪದಲ್ಲಿ ಬಳಸಬಹುದಾಗಿದೆ. 

ಶುಭ ನುಡಿಯುವಾಗ ಬೇರೆಯವರಿಗೆ ಹರೆಸುವಾಗ ಕಮಲದ ಹೂ ಕೊಡುವುದು ವಾಡಿಕೆ . ಕಮಲದ ಹೂ ಮುಡಿದ್ರೆ ಶುಭ, ತಿಂದರೆ ಆರೋಗ್ಯಕರ ಎಂದು ಹೇಳಲಾಗುತ್ತದೆ. ಕನಸ್ಸಿನಲ್ಲಿ ಕಮಲದ ಹೂ ಕಂಡ್ರೆ ಸಂತಾನ ಪ್ರಾಪ್ತಿಯಾಗುತ್ತೆ ಎನ್ನಲಾಗಿದೆ.  ವಿಷ್ಣು ತನ್ನ ನಾಲ್ಕು ಕೈಗಳ ಪೈಕಿ ಒಂದು ಕೈಯಲ್ಲಿ ಹಿಡಿದಿರುತ್ತಾನೆ. ವಿಷ್ಣು ತನ್ನ ನಾಲ್ಕು ಕೈಗಳ ಪೈಕಿ, ಶುಭ ಶಕುನದ ಅದು ಆರನೇ ಬೌದ್ಧ ಚಿಹ್ನೆಗಳಲ್ಲಿ ಕಮಲವು ಒಂದು. ಕಮಲದೊಂದಿಗೆ ಹೆಣೆದುಕೊಂಡ ಲಿಂಗವನ್ನು ಶಿವ ತನ್ನ ದೇವತೆಯಾದ ಶಕ್ತಿಗೆ  ಕೋಡು್ತತಾನೆ. ಹಾಗಾಗಿ ಕಾಳಿ ನಿರಂತರ ಪೀಳಿಗೆಯ ಸಂಕೇತವಾದ ಒಂದು ಕೈಯಲ್ಲಿ ಕಮಲವನ್ನು ಒಂದು ಕೈಯಲ್ಲಿ ಹಿಡಿದಿದ್ದಾನೆ. ಬುದ್ಧನು ಹುಟ್ಟಿದಾಗ ಅದನ್ನು ಜಗತ್ತಿಗೆ ಸಾರಲು ಕಮಲ ಹೂ ಹುಟ್ಟಿತೆಂಬ ಪ್ರತೀತಿ ಇದೆ. 

Lotus Flower , health benefits, kannada tIPS

ಕಮಲ ಎಂದರೆ ಸಾಮಾನ್ಯವಾದುದ್ದಲ್ಲ… ಅದು ಯೋಗ ನಿದ್ರೆಯಲ್ಲಿರುವ ವಿಷ್ಣುವಿನ ನಾಭಿಯಿಂದ ಹೊಮ್ಮಿದ ಪುಷ್ಪ.. ಆದ್ದರಿಂದಲೇ ವಿಷ್ಮುವಿಗೆ ಕಮಲವಾದ , ಪದ್ಮನಾಭ ಎಂಬ ಹೆಸರುಗಳು ಇವೆ. ಬ್ರಹ್ಮ ಈ ಕಮಲದ ಕುರ್ಚಿಯ ಮೇಲೆ ಕುಳಿತುಕೊಡು ಸೃಷ್ಠಿ ಕಾರ್ಯ ನಡೆಸುವುದರಿಂದ ಬ್ರಹ್ಮನ ವರ್ಕ್ ಸ್ಟೇಷನ್ ಎನ್ನಬಹುದು. ಸಂಪತ್ತಿನ ಒಡತಿ ಲಕ್ಷ್ಮೀ ವಜ್ರ. ಚಿನ್ನದ ಮೇಲೆ ನಿಲ್ಲಬಹುದಿತ್ತು. ಆದ್ರೆ ಆಕೆ ಮಾತ್ರ ಕಮಲದ ಮೇಲೆ ನಿಂತಿದ್ದಾಳೆ. ಲಕ್ಷ್ಮೀ ಹಾಗೂ ಸರಸ್ವತಿ ಒಟ್ಟಿಗೆ ಇರಲ್ಲ ಎಂಬ ಮಾತಿದೆ. ಆದ್ರೆ ಇವರಿಬ್ಬರಿಗೂ ಕಮಲದ ಹೂ ಇಷ್ಟವಂತೆ. 

ಹಿಂದೂ ಧರ್ಮಕ್ಕೆ ಮಾತ್ರವಲ್ಲ, ಬೌದ್ಧ ಜೈನ ಧರ್ಮಕ್ಕೂ ಪ್ರಿಯವಾದದ್ದು..ಕಮಲದ ಹೂ ಹಿಂದೂ ಧರ್ಮಕ್ಕೆ ಮಾತ್ರವಲ್ಲ, ಜೈನ, ಬೌದ್ಧ ಹಾಗೂ ಸಿಖ್ ಧರ್ಮಕ್ಕೂ ಹೆಚ್ಚು ಪ್ರಿಯವಾದದ್ದು ಎಂದು ಹೇಳಲಾಗುತ್ತದೆ. 

ಕಮಲಗಳಿಗೆ ಇರುವ ಹೆಸರುಗಳೇನು?

ಕಮಲ ಕೊಳದಲ್ಲಿ ಬೆಳೆಯುವುದರಿಂದ ಅದಕ್ಕೆ ಅಂಬುಜ, ಸರೋಜ, ನೀರಜ, ಜಲಜ, ವಾರಿಜ ಎನ್ನುವ ಹೆಸರುಗಳಿವೆ. ಕೆಸರಿನಲ್ಲಿ ಕಮಲ ಜನಿಸಿದರೂ, ಯಾರು ಅದಕ್ಕೆ ಗಲೀಜು ಎಂದು ಹೇಳುವುದಿಲ್ಲ. ಕಮಲದ ಹೂ ಅರಳಬೇಕಾದರೆ ಅದರ ಮೇಲೆ ಸೂರ್ಯ ರಶ್ಮಿ ಬೀಳಬೇಕು. 

ಕಮಲದ ಹೆಸರಿನ ಊರುಗಳಿವು..!

ನಿಮ್ಗೆ ಆಶ್ಚರ್ಯ ವಾಗಬಹುದು… ಕಮಲದ ಹೆಸರಿನಲ್ಲಿ ಅನೇಕ ಊರುಗಳನ್ನು ಕಾಣಬಹುದು. ಉದಾಹರಣೆ ಎಂದರೆ ಕಮಲಾಪುರ, ತಾವರೆಕೆರೆ, ಪದ್ಮನೂರು ಇತ್ಯಾದಿ. ಇನ್ನು ನದಿಗಳ ಹೆಸರು ಕೂಡಾ ಕಮಲದಿಂದ ಕೂಡಿದೆ. ಬಿಹಾರ ಮತ್ತು ನೇಪಾಳದಲ್ಲಿ ಕಮಲಾ ಎಂಬ ನದಿ ಹರಿಯುತ್ತದೆ. ಭಾರತದಂತೆ ವಿಯೆಟ್ನಾಮ್ ದೇಶದ ರಾಷ್ಟ್ರೀಯ ಹೂ ಕಮಲ. 

Lotus Flower. Health benefits,  
ತಾವರೆ ಹೂ, ಆರೋಗ್ಯ ಪ್ರಯೋಜನಗಳು

ಬಿಜೆಪಿಗೆ ಕಮಲ ಚಿಹ್ನೆ ದೊರೆತಿದ್ದು ಹೇಗೆ? 

ನೆಹರೂ ಹಾಗೂ ಕಮಲ ಎಂಬುವರಿಗೆ ಹುಟ್ಟಿದ ಮಗಳೇ ಇಂದಿರಾ . ಆದ್ರೆ ಇಂದಿರಾ ಕಾಂಗ್ರೆಸ್ ಪಕ್ಷವನ್ನು ಒಡೆದಾಗ, ಚುನಾವಣೆ ಆಯೋಗವು ಆ ಪಕ್ಷಕ್ಕೆ ಕಮಲದ ಚಿಹ್ನೆಯನ್ನು ಕೊಡಬಹುದಿತ್ತು. ಆದ್ರೆ ಆ ಚಿಹ್ನೆ ಬಿಜೆಪಿಗೆ ದೊರಕಿತ್ತು. ಹಾಗಾಗಿ ಲೋಕಸಭೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಪಕ್ಷ ಎಂದು ಯಾವಾಗಲೂ ಸುದ್ದಿಯಲ್ಲಿರುತ್ತದೆ. 

ಕಮಲ ತುಂಬಾ ಉಪಯುಕ್ತವಾದ ಸಸ್ಯ!

ಕಮಲ ಹೂ ಮಾತ್ರವಲ್ಲದೇ, ಅದರ ದಂಟು, ಎಲೆ , ಬೀಜ ಹೆಚ್ಚು ಉಪಯೋಗ ಪಡೆದುಕೊಂಡಿದೆ. ದಕ್ಷಿಣ ಏಷ್ಯಾ, ಆಸ್ರ್ಟೇಲಿಯಾ ದೇಶಗಳಲ್ಲೂ ಕಮಲವನ್ನು ಹೆಚ್ಚಾಗಿ ಬಳಸಲಾಗುತ್ತದೆ.  ಜಪಾನ್ ದೇಶದಲ್ಲಿ ತಾವರೆಯ ಗಡ್ಡೆ ಹೆಚ್ಚು ಜನಪ್ರಿಯ. ಇದರಿಂದ ಆಹಾರವನ್ನು ತಯಾರಿಸಲಾಗುತ್ತದೆ. ಮುಂತಾದ ಕಡೆ ಇದ್ರಿಂದ ಚಹಾ ಮಾಡುತ್ತಾರೆ. ಸೌಂದರ್ಯ ವರ್ಧಕದಲ್ಲೂ ಇದರ ಬಳಕೆಯುಂಟು. 

ಆರೋಗ್ಯ ಪ್ರಯೋಜನಗಳು

ತಾವರೆ ಹೂವಿನ ಬೇರಿನಲ್ಲಿ ಒತ್ತಡವನ್ನು ಕಡಿಮೆ ಅಂಶವಿದೆ. ಇದು ರಕ್ತದ ಒತ್ತಡವನ್ನು ಕಡಿಮೆಗೊಳಿಸಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.  ಇದರಲ್ಲಿ ಹೆಚ್ಚು ಫೈಬರ್ ಅಂಶ ಅಧಿಕವಾಗಿರುವುದರಿಂದ , ಪಚನ ಕ್ರಿಯೆಗೆ ಉತ್ತಮವಾದದ್ದು. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಪ್ರತಿ ದಿನ ತಾವರೆ ಬೇರುಗಳನ್ನು ಸೇವಿಸುವುದರಿಂದ ನೀರಿನ ಅಂಶ ಹೆಚ್ಚಳವಾಗುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ