ಉದ್ದ ಕೂದಲು ಬೆಳೆಸಲು -5 ಎಣ್ಣೆಗಳು

  • by

ಕೂದಲು ಉದ್ದಬೆಳೆಯಲು ಟಾಪ್ 5 ಹರ್ಬಲ್ ಎಣ್ಣೆಗಳು
ಈಗಿನ ಕಲದ ಹುಡುಗಿಯರು ಎಷ್ಟೇ ಆಧುನಿಕವಾಗಿದ್ದರೂ ಉದ್ದ ಕೂದಲು ಬೇಕೆಂಬ ಆಸೆಯುಳ್ಳವರು. ಇನ್ನು ಕೆಲವರಿಗೆ ಉದ್ದ
ಕೂದಲು ದೈವದತ್ತವಾಗಿದ್ದು ಆರೈಕೆ ಮಾಡದೇ ಇದ್ದರೂ ಸುಂದರವಾಗಿರುತ್ತದೆ. ಇನ್ನು ಕೆಲವರಿಗೆ ಕೂದಲಿನ ಆರೈಕೆ ಮತ್ತು
ಕಾಳಜಿಯನ್ನು ಗಮನವಿಟ್ಟು ಮಾಡಬೇಕಾಗುತ್ತದೆ. ಇದಕ್ಕಾಗಿ ನೀವು ಮನೆಮದ್ದುಗಳನ್ನು ಅನುಸರಿಸುವುದರ ಜೊತೆಗೆ ಕೂದಲಿಗೆ
ಅಗತ್ಯವಿರುವ ಉತ್ತಮ ಗುಣಮಟ್ಟದ ಎಣ್ಣೆಯನ್ನು ಬಳಸಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಇಂದು ಹೆಚ್ಚಿನ ಎಣ್ಣೆಗಳು
ಲಭ್ಯವಿದ್ದು ಅದು ನಿಮ್ಮ ಕೂದಲು ಉದ್ದಬೆಳೆಯಲು ಸಹಕಾರಿಯಾಗಿದೆ. ಹಾಗಿದ್ದರೆ ಆ ಎಣ್ಣೆಗಳು ಯಾವುವು ಮತ್ತು ಜೊತೆಗೆ ಉದ್ದ
ಮತ್ತು ಸುಂದರ ಕೂದಲು ಬೆಳೆಯಲು ಅನುಸರಿಸಬೇಕಾದ ಅಂಶಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಬಯೋಟೆಕ್ ಭೃಂಗರಾಜ್ ಹೇರ್ ಆಯಿಲ್
ಆಯುರ್ವೇದದ ಜೊತೆಗೆ ಆಧುನಿಕ ವಿಜ್ಞಾನ ಸಮ್ಮಿಳಿತಗೊಂಡರೆ ಅದೊಂದು ಉತ್ತಮ ಪ್ರಾಡಕ್ಟ್ ಆಗಿ ಹೊರಹೊಮ್ಮುತ್ತೆ ಎಂಬುದಕ್ಕೆ
ಭೃಂಗರಾಜ್ ಉತ್ತಮ ಉದಾಹರಣೆಯಾಗಿದೆ. ಇದರಲ್ಲಿ ಭೃಂಗರಾಜ್, ಆಮ್ಲ, ಮುಲೇತಿ, ತೆಂಗಿನೆಣ್ಣೆ, ಅಡಿನ ಹಾಲಿದೆ. ಇದು
ಪ್ರೊಟೀನ್ ಅಂಶಗಳನ್ನು ಒಳಗೊಂಡಿದ್ದು ಇದು ನಿಮ್ಮ ಕೂದಲಿಗೆ ಸ್ವಚ್ಛ, ಹೊಳೆಯುವ ಮತ್ತು ನೀಳತೆಯನ್ನು ಒದಗಿಸುತ್ತದೆ. ನಿಮ್ಮ
ತಲೆಬುರುಡೆಯನ್ನು ಇದು ಉತ್ತಮಗೊಳಿಸುತ್ತದೆ ಮತ್ತು ಕೂದಲಿನ ಬುಡವನ್ನು ದೃಢಪಡಿಸಿ ಕೂದಲನ್ನು ಗಟ್ಟಿಗೊಳಿಸುತ್ತದೆ.

ಕೇಶ್ ಕಿಂಗ್ ಆಯುರ್ವೇದಿಕ್ ಆಯಿಲ್
ಇದೊಂದು ಔಷಧೀಯ ತೈಲವಾಗಿದ್ದು ಆಂಟನಿ ಪಿಯರ್ಸ್ ತ್ರಿಕಾಲಜಿಯಿಂದ ಮಾನ್ಯತೆ ಪಡೆದುಕೊಂಡಿದೆ. ಇದು 21 ಆಯುರ್ವೇದಿಕ್
ಸಸ್ಯಗಳ ಸಾರವನ್ನು ಹೊಂದಿದ್ದು ಕೂದಲು ಉದುರುವುದು ತಡೆಗಟ್ಟಿ ಕೂದಲಿನ ಪೋಷಣೆಯನ್ನು ಮಾಡುತ್ತದೆ. ಇದು
ತಲೆಹೊಟ್ಟನ್ನು ನಿವಾರಿಸುತ್ತದೆ ಮತ್ತು ಹೊಸ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ನಿವಿರ್ ಇಂಟೆನ್ಸೀವ್ ಹೇರ್ ಗ್ರೋತ್ ಆಯಿಲ್
ಇದು ಕೂದಲಿನ ಹಾನಿಯನ್ನು ತಡೆಗಟ್ಟಿ ಕೂದಲು ತುಂಡಾಗುವುದು, ತಲೆಬುರುಡೆ ಒಣಗುವುದು ಮತ್ತು ಕೂದಲಿಗೆ ಸಂಬಂಧಿಸಿದ
ಹಲವಾರು ಸಮಸ್ಯೆಯನ್ನು ನಿವಾರಿಸುತ್ತದೆ. ಕಲುಷಿತ ವಾತಾವರಣ, ಡಿಜಿಟಲ್ ಎಕ್ಸ್‌ಪೋಶರ್, ಜೀವನ ಶೈಲಿಯಿಂದ ಉಂಟಾಗುವ
ತೊಂದರೆಗಳು, ಸರಿಯಾದ ಆಹಾರ ಸೇವಿಸದೇ ಇರುವುದು, ಹೀಗೆ ಕೂದಲುದುರುವ ಹಲವಾರು ಸಮಸ್ಯೆಗಳನ್ನು ನಿವಾರಿಸುತ್ತದೆ. ಇದು
ಆರು ಗಿಡಮೂಲಿಕೆಗಳ ಸಾರವನ್ನು ಎಣ್ಣೆಯಲ್ಲಿ ಹೊಂದಿದ್ದು ಕೋಶಗಳ ಹಾನಿಯನ್ನು ತಡೆಗಟ್ಟಿ ನಿಮ್ಮ ತಲೆಬುರುಡೆಯನ್ನು
ಆರೋಗ್ಯಕಾರಿಯಾಗಿಸಿ ಕೂದಲಿನ ಬೆಳವಣಿಗೆಗೆ ಸಹಾಯವನ್ನುಂಟು ಮಾಡುತ್ತದೆ.

ಖಾದಿ ನೈಸರ್ಗಿಕ ಹೆನ್ನಾ ಮತ್ತು ರೋಸ್‌ಮೆರಿ ಹರ್ಬಲ್ ಹೇರ್ ಆಯಿಲ್
ಈ ಎಣ್ಣೆ ನೈಸರ್ಗಿಕವಾಗಿ ದಪ್ಪ ಮತ್ತು ಕಪ್ಪಾದ ಆರೋಗ್ಯಯುತ ಕೂದಲನ್ನು ನಿಮಗೆ ನೀಡುತ್ತದೆ. ಇದು ರೋಸ್‌ಮೇರಿ ಮತ್ತು
ಹೆನ್ನಾ ಅಂಶವನ್ನು ತನ್ನಲ್ಲಿ ಹೊಂದಿದ್ದು ಇದು ಇನ್‌ಫ್ಲಾಮೇಶನ್ ಅನ್ನು ತಡೆಯುತ್ತದೆ ಮತ್ತು ತಲೆಬುಡವನ್ನು
ಆರೋಗ್ಯವಂತವನ್ನಾಗಿಸುತ್ತದೆ. ಮಂಕಾದ ಕೂದಲಿಗೆ ಹೊಳಪನ್ನು ಒದಗಿಸಿ ಕೂದಲಿನ ಆರೋಗ್ಯವನ್ನು ಇದು ಕಾಪಾಡುತ್ತದೆ.
ಸನ್‌ಫ್ಲವರ್ ಕೋಲ್ಡ್‌ಪ್ರೆಸ್ಡ್ ಆಲೀವ್ ಕ್ಯಾರಿಯರ್ ಆಯಿಲ್
ಇದೊಂದು ಪರಿಣಾಮಕಾರಿ ಮತ್ತು ಶಕ್ತಿಶಾಲಿ ಎಣ್ಣೆಯಾಗಿದ್ದು ಇದು ಒಣ ಮತ್ತು ನಿಸ್ತೇಜ ಕೂದಲನ್ನು ಕಾಂತಿಯುತ ಮತ್ತು
ಆರೋಗ್ಯವಂತವನ್ನಾಗಿಸುತ್ತದೆ. ಇದು ಅಂಟಾಗಿ ಇಲ್ಲದಿರುವುದು ನಿಮ್ಮ ಕೂದಲನ್ನು ತೊಳೆಯಲು ಸಹಕಾರಿಯಾಗಿದೆ. ಇದು

ವಿಟಮಿನ್ ಇ, ಕೆ, ಮತ್ತು ಡಿ3 ಅನ್ನು ಒಳಗೊಂಡಿದ್ದು ಯಾವುದೇ ಅಡ್ಡಪರಿಣಾಮವನ್ನು ಹೊಂದಿಲ್ಲ. ಆಲೀವ್ ಎಣ್ಣೆಯಲ್ಲಿರುವ
ನೈಸರ್ಗಿಕ ಪೋಷಕ ಅಂಶಗಳು ನಿಮ್ಮ ಕೂದಲ ಬುಡವನ್ನು ಗಟ್ಟಿಮಾಡುತ್ತದೆ ಮತ್ತು ಯಾವುದೇ ಹಾನಿಯಿಂದ ರಕ್ಷಣೆಯನ್ನು
ಒದಗಿಸುತ್ತದೆ.

ಪ್ಯಾರಚೂಟ್ ಆಯುರ್ವೇದಿಕ್ ಡೀಪ್ ಕಂಡೀಷನಿಂಗ್ ಹಾಟ್ ಆಯಿಲ್
ಚಳಿಗಾಲದಲ್ಲಿ ಕೂದಲು ಒಣಗುವುದರಿಂದ ತಡೆಗಟ್ಟಲು, ಪ್ಯಾರಚೂಟ್ ಆಯುರ್ವೇದಿಕ್ ಡೀಪ್ ಕಂಡೀಷನಿಂಗ್ ಹೇರ್ ಆಯಿಲ್
ಕೂದಲು ಒಣಗುವುದನ್ನು ತಡೆಯುತ್ತದೆ ಮತ್ತು ಹಾನಿಯಾದ ತಲೆಗೂದಲಿಗೆ ನವ ಚೈತನ್ಯವನ್ನು ಒದಗಿಸುತ್ತದೆ. ಇದು ಕೂದನ್ನು
ಆಳವಾಗಿ ಕಂಡೀಷನ್ ಮಾಡುವ ಗಿಡ ಮೂಲಿಕೆಗಳಾದ ದಾಸವಾಳ, ಕಪ್ಪು ಕಾಳುಮೆಣಸು ಮೊದಲಾದ ಅಂಶಗಳನ್ನು ಒಳಗೊಂಡಿದೆ.
ವಿಟಮಿನ್ ಶ್ರೀಮಂತ ಎಣ್ಣೆ ಇದಾಗಿದ್ದು ಡ್ಯಾಂಡ್ರಫ್‌ನಿಂದ ಸಂರಕ್ಷಣೆಯನ್ನು ಕೂದಲಿಗೆ ಒದಗಿಸುತ್ತದೆ.

ಇನ್ನು ಮನೆಯಲ್ಲೇ ಆದಷ್ಟು ಕೂದಲಿನ ಕಾಳಜಿಯನ್ನು ವಾರಕ್ಕೊಮ್ಮೆಯಾದರೂ ಮಾಡುತ್ತಿರಿ. ಮಾರುಕಟ್ಟೆಯಲ್ಲಿ ಸಿಗುವ ಡೈ
ಬಳಸುವ ಬದಲಿಗೆ ನೈಸರ್ಗಿಕ ಮೆಹಂದಿಯನ್ನು ಕೂದಲಿಗೆ ಹಚ್ಚಿ. ಇದು ನೈಸರ್ಗಿಕ ಹೇರ್ ಕಂಡೀಷನರ್ ಆಗಿ ಕೂಡ ಕೆಲಸ ಮಾಡುತ್ತದೆ.

ಚಿಂತೆ ಮಾಡುವುದರಿಂದ ಕೂದಲು ಉದುರುತ್ತದೆ ಎಂಬುದು ಸೌಂದರ್ಯ ತಜ್ಞರ ಅಭಿಪ್ರಾಯವಾಗಿದೆ. ಹಾಗಾಗಿ ಚಿಂತೆ ಮಾಡದೆ
ಹಾಯಾಗಿರಿ.

ಪ್ರತಿ ರಾತ್ರಿ ಮಲಗುವ ಮುನ್ನ ಕೂದಲನ್ನು ಬಾಚಿ

ಕೂದಲಿನ ತುದಿ ಸೀಳಿದ್ದರೆ ಅದರ ತುದಿಯನ್ನು ಟ್ರಿಮ್ ಮಾಡುತ್ತಿರಿ. 5-6 ವಾರಗಳ ಕಾಲ ಟ್ರಿಮ್ ಮಾಡುತ್ತಿರಿ. ಇನ್ನು ಹೊರಗೆ
ಓಡಾಡುವ ಆದಷ್ಟು ತಲೆಗೆ ಸ್ಕಾರ್ಫ್ ಕಟ್ಟಿಕೊಳ್ಳಿ ಇದರಿಂದ ಕೂದಲು ಸಂರಕ್ಷಿತಗೊಳ್ಳುತ್ತದೆ. ಹೇರ್ ಡ್ರೈಯರ್ ಬಳಕೆಯನ್ನು
ಆದಷ್ಟು ಕಡಿಮೆ ಮಾಡಿ. ಸಾಧ್ಯವಾದಷ್ಟು ಬಿಸಿಲಿನಲ್ಲೇ ಕೂದಲನ್ನು ಒಣಗಿಸಿ.

ಸ್ನಾನಕ್ಕೆ ಅತಿಯಾದ ಬಿಸಿ ನೀರನ್ನು ಬಳಸದಿರಿ. ಉಗುರು ಬೆಚ್ಚನೆಯ ನೀರನ್ನು ಬಳಸಿಕೊಂಡು ಕೂದಲು ತೊಳೆದುಕೊಳ್ಳಿ. ಕೂದಲ
ಬೆಳವಣಿಗೆಗೆ ಆಹಾರ ಕ್ರಮ ಕೂಡ ಅಗತ್ಯವಾಗಿದೆ. ನೀವು ಸೇವಿಸುವ ಆಹಾರದಲ್ಲಿ ವಿಟಮಿನ್, ಪ್ರೊಟೀನ್ ಅಂಶಗಳು ಇರಲಿ.

ಪರಂಗಿ ಹಣ್ಣು, ಕ್ಯಾರೆಟ್, ಕಲ್ಲಂಗಡಿ, ಸೇಬು, ಸೋರೆಕಾಯಿಗಳಲ್ಲಿ ಕೂದಲನ್ನು ಆರೋಗ್ಯಕರವಾಗಿ ಇರಿಸಬಲ್ಲ ಅಂಶಗಳಿದ್ದು
ಇಂತಹವುಗಳನ್ನು ಮರೆಯದೆ ಸೇವಿಸಿ

ಚಾಕಲೇಟ್, ಸಿಹಿತಿನಿಸು, ಕೇಕ್ ಮತ್ತು ಕುಕೀಗಳಿಂದ ಆದಷ್ಟು ದೂರವಿರಿ. ಇದು ನಿಮ್ಮ ತ್ವಚೆ ಮತ್ತು ಕೂದಲಿನ ಮೇಲೆ ಪರಿಣಾಮ
ಬೀರುತ್ತದೆ. ಜಿಡ್ಡಿನ ಆಹಾರಗಳಿಂದ ಆದಷ್ಟು ದೂರವಿರಿ. ಇದು ನಿಮ್ಮ ತ್ವಚೆ ಮತ್ತು ಕೂದಲಿನ ಮೇಲೆ ಪರಿಣಾಮ ಬೀರುತ್ತದೆ.
ಕ್ಯಾಲ್ಶಿಯಂ ಅಂಶ ಒಳಗೊಂಡಿರುವ ಹಾಲು ಸೇವಿಸಿ. ತಲೆಹೊಟ್ಟಿನ ಸಮಸ್ಯೆ ಇದ್ದರೆ ರಾತ್ರಿ ಮಲಗುವ ಮುನ್ನ ವಿನೇಗರ್ ಮತ್ತು ನೀರಿನ
ಮಿಶ್ರಣವನ್ನು ತಲೆಕೂದಲಿನ ಬುಡಕ್ಕೆ ಹಚ್ಚಿ ಬೆಳಗ್ಗೆ ನೀರಿನಿಂದ ಕೂದಲನ್ನು ತೊಳೆಯಿರಿ

ಕೂದಲಿಗೆ ಎಣ್ಣೆಯ ಮಸಾಜ್ ಅನ್ನು ತಪ್ಪದೆ ಮಾಡಿ. ಹರ್ಬಲ್ ಎಣ್ಣೆ ಹಚ್ಚಿ ಕೂದಲಿನ ಮಸಾಜ್ ಮಾಡಿ. ಇದರಿಂದ ಹೊಟ್ಟಿನ
ಸಮಸ್ಯೆ ಕೂಡ ದೂರವಾಗುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ